ವಿಷಯಕ್ಕೆ ಹೋಗು

ಉತ್ತರಾಧಿಕಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ತರಾಧಿಕಾರವು ಒಬ್ಬ ವ್ಯಕ್ತಿಯ ಮರಣದ ನಂತರ ಆಸ್ತಿ, ಆಸ್ತಿಹಕ್ಕುಗಳು, ಋಣಗಳು, ಹಕ್ಕುಗಳು, ಮತ್ತು ಕರ್ತವ್ಯಗಳನ್ನು ಹಸ್ತಾಂತರಿಸುವ ಅಭ್ಯಾಸ. ಉತ್ತರಾಧಿಕಾರದ ನಿಯಮಗಳು ಸಮಾಜಗಳ ನಡುವೆ ಬದಲಾಗುತ್ತವೆ ಮತ್ತು ಕಾಲ ಕಳೆದಂತೆ ಬದಲಾಗಿವೆ. ಕಾನೂನಿನಲ್ಲಿ, ಉತ್ತರಾಧಿಕಾರಿ/ವಾರಸುದಾರನು ಮೃತನು ನಾಗರಿಕನಾಗಿದ್ದ ಅಥವಾ ಮೃತನು ಮರಣಹೊಂದಿದ ಅಥವಾ ಮರಣದ ಸಮಯದಲ್ಲಿ ಆಸ್ತಿಯನ್ನು ಹೊಂದಿದ ಕಾನೂನುವ್ಯಾಪ್ತಿಯಲ್ಲಿನ ಉತ್ತರಾಧಿಕಾರದ ನಿಯಮಗಳಿಗೆ ಬದ್ಧವಾಗಿ ಮೃತರ ಆಸ್ತಿಯ ಒಂದು ಪಾಲನ್ನು ಪಡೆಯಲು ಅರ್ಹನಾಗಿರುವ ಒಬ್ಬ ವ್ಯಕ್ತಿ.

ಉತ್ತರಾಧಿಕಾರವು ಒಂದು ಉಯಿಲಿನ ನಿಯಮಗಳಡಿಯಲ್ಲಿ ಅಥವಾ ಮೃತನು ಉಯಿಲನ್ನು ಹೊಂದಿರದಿದ್ದರೆ ಉಯಿಲು ನಾಮಕರಣವಿಲ್ಲದೆ ಇರುವ ವಾರಸುದಾರಿಕೆಯ ನಿಯಮಗಳಿಂದ ಆಗಬಹುದು. ಆದರೆ, ಉಯಿಲು ಸೃಷ್ಟಿಯಾದ ಸಮಯದಲ್ಲಿನ ಕಾನೂನುವ್ಯಾಪ್ತಿಯ ಕಾನೂನುಗಳನ್ನು ಅನುಸರಿಸಬೇಕು, ಇಲ್ಲವಾದರೇ ಅದನ್ನು ಅಮಾನ್ಯವೆಂದು ಘೋಷಿಸಲಾಗುವುದು (ಉದಾಹರಣೆಗೆ, ಕೆಲವು ರಾಜ್ಯಗಳು ಸ್ವಲಿಖಿತ ಉಯಿಲುಗಳನ್ನು ಮಾನ್ಯವೆಂದು ಗುರುತಿಸುವುದಿಲ್ಲ, ಅಥವಾ ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಗುರುತಿಸುತ್ತವೆ) ಮತ್ತು ಆಗ ಉಯಿಲು ನಾಮಕರಣವಿಲ್ಲದೆ ಇರುವ ವಾರಸುದಾರಿಕೆಯ ಕಾನೂನುಗಳು ಅನ್ವಯಿಸುವವು.

ಮೃತನ ಮರಣಕ್ಕೆ ಮೊದಲು ಒಬ್ಬ ವ್ಯಕ್ತಿಯು ವಾರಸುದಾರನಾಗುವುದಿಲ್ಲ, ಏಕೆಂದರೆ ವಾರಸುದಾರರಾಗಲು ಅರ್ಹರಾಗುವ ವ್ಯಕ್ತಿಗಳ ನಿಖರ ಗುರುತನ್ನು ಆವಾಗ ಮಾತ್ರ ನಿರ್ಧರಿಸಲಾಗುತ್ತದೆ. ಅವರು ಉತ್ತರಾಧಿಕಾರ ಪಡೆಯಲು ಮೊದಲಿನವರಾಗಿದ್ದರೆ ಮತ್ತು ಇನ್ನೊಬ್ಬ ಹಕ್ಕುದಾರರಿಂದ ವಾರಸುದಾರರಾಗುವುದರಿಂದ ಸ್ಥಳಾಂತರಿಸಲು ಸಾಧ್ಯವಿಲ್ಲದಿದ್ದರೆ ಉತ್ತರಾಧಿಕಾರಿಗಳಾಗಲು ನಿರೀಕ್ಷಿಸಲಾದ ಆಳ್ವಿಕೆ ನಡೆಸುವ ಕುಲೀನ ಅಥವಾ ಅರಸು ಮನೆತನದ ಸದಸ್ಯರನ್ನು ಪ್ರಧಾನ ಉತ್ತರಾಧಿಕಾರಿಗಳು ಎಂದು ಕರೆಯಲಾಗುತ್ತದೆ; ಇಲ್ಲವೆಂದರೆ, ಅವರನ್ನು ಸಂಭಾವ್ಯ ಉತ್ತರಾಧಿಕಾರಿಗಳೆಂದು ಕರೆಯಲಾಗುತ್ತದೆ. ಇನ್ನೂ ಹೆಚ್ಚಾಗಿ, ಎಲ್ಲರೂ ಪರಿತ್ಯಜಿಸಿ ಒಬ್ಬರು ಮಾತ್ರ ಒಪ್ಪಿದರೆ, ಜಂಟಿ ಉತ್ತರಾಧಿಕಾರ ಎಂಬ ಪರಿಕಲ್ಪನೆಯಿದೆ. ಇದನ್ನು ಕೋಪಾರ್ಸೆನಿ ಎಂದು ಕರೆಯಲಾಗುತ್ತದೆ.

ಪೈತೃವಂಶಕ ಉತ್ತರಾಧಿಕಾರದ ರೂಢಿಗಳ ಬಗ್ಗೆ ವಿವರವಾದ ಮಾನವಶಾಸ್ತ್ರ ಸಂಬಂಧಿ ಮತ್ತು ಸಮಾಜಶಾಸ್ತ್ರ ಸಂಬಂಧಿ ಅಧ್ಯಯನಗಳನ್ನು ನಡೆಸಲಾಗಿದೆ. ಇದರಲ್ಲಿ ಗಂಡು ಮಕ್ಕಳು ಮಾತ್ರ ವಾರಸುದಾರರಾಗಬಹುದು. ಕೆಲವು ಸಂಸ್ಕೃತಿಗಳು ಮಾತೃವಂಶಕ ಉತ್ತರಾಧಿಕಾರವನ್ನೂ ಬಳಸುತ್ತವೆ. ಇದರಲ್ಲಿ ಆಸ್ತಿಯು ಹೆಣ್ಣು ಸಂತತಿಯ ಮೂಲಕ ಮಾತ್ರ ಹಸ್ತಾಂತರಗೊಳ್ಳುತ್ತದೆ, ಅತ್ಯಂತ ಸಾಮಾನ್ಯವಾಗಿ ಮೃತನ ಸೋದರಿಯ ಪುತ್ರರಿಗೆ ಹೋಗುತ್ತದೆ; ಆದರೆ, ಕೆಲವು ಸಮಾಜಗಳಲ್ಲಿ, ತಾಯಿಯಿಂದ ಅವಳ ಪುತ್ರಿಯರಿಗೆ ಕೂಡ ಹೋಗುತ್ತದೆ. ಕೆಲವು ಪ್ರಾಚೀನ ಸಮಾಜಗಳು ಮತ್ತು ಬಹುತೇಕ ಆಧುನಿಕ ದೇಶಗಳು ಲಿಂಗ ಮತ್ತು/ಅಥವಾ ಜನನ ಕ್ರಮವನ್ನು ಆಧರಿಸಿ ತಾರತಮ್ಯ ಮಾಡದೆ ಸಮಾನತಾವಾದಿ ಉತ್ತರಾಧಿಕಾರವನ್ನು ಬಳಸುತ್ತವೆ.