ಉತ್ತರಾಖಂಡ ದಿನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ತರಾಖಂಡ್ ದಿನವನ್ನು ಉತ್ತರಾಖಂಡ್ ದಿವಸ್ ಎಂದೂ ಕರೆಯುತ್ತಾರೆ, ಇದನ್ನು ಭಾರತದ ರಾಜ್ಯ ಉತ್ತರಾಖಂಡದ ರಾಜ್ಯ ಸ್ಥಾಪನಾ ದಿನ ವೆಂದು ಆಚರಿಸಲಾಗುತ್ತದೆ. ಇದನ್ನು ವಾರ್ಷಿಕವಾಗಿ ನವೆಂಬರ್ 9 ರಂದು ಆಚರಿಸಲಾಗುತ್ತದೆ (2000 ದಿಂದ ಪ್ರಾರಂಭವಾಗಿದೆ). [೧] [೨]

ಇತಿಹಾಸ[ಬದಲಾಯಿಸಿ]

ಭಾರತದ ಸ್ವಾತಂತ್ರ್ಯದ ನಂತರ, ಹಿಂದಿನ ಯುನೈಟೆಡ್ ಪ್ರಾಂತ್ಯಗಳ ಹಿಮಾಲಯನ್ ಜಿಲ್ಲೆಗಳು ಪ್ರಾದೇಶಿಕ ಸಾಹಿತ್ಯದಲ್ಲಿ ಗಮನ ಸೆಳೆಯಲು ಪ್ರಾರಂಭಿಸಿದವು. 1949 ರಲ್ಲಿ, ಟೆಹ್ರಿ ಗರ್ವಾಲ್ ಸಂಸ್ಥಾನವು ಭಾರತದ ಒಕ್ಕೂಟಕ್ಕೆ ಸೇರಿಕೊಂಡಿತು. 1950 ರಲ್ಲಿ ಭಾರತದ ಸಂವಿಧಾನವನ್ನು ಅಂಗೀಕರಿಸಿದ ನಂತರ, ಯುನೈಟೆಡ್ ಪ್ರಾಂತ್ಯಗಳನ್ನು ಉತ್ತರ ಪ್ರದೇಶ ಎಂದು ಮರುನಾಮಕರಣ ಮಾಡಲಾಯಿತು ಮತ್ತು ಇದು ಭಾರತದ ಒಂದು ರಾಜ್ಯವಾಯಿತು. ಸ್ವಾತಂತ್ರ್ಯದ ಅನೇಕ ದಶಕಗಳ ನಂತರವೂ ಉತ್ತರ ಪ್ರದೇಶ ಸರ್ಕಾರವು ಹಿಮಾಲಯ ಪರ್ವತ ಪ್ರದೇಶದ ಜನರ ಹಿತಾಸಕ್ತಿಗಳನ್ನು ಪರಿಹರಿಸುವ ನಿರೀಕ್ಷೆಯನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ನಿರುದ್ಯೋಗ, ಬಡತನ, ಸಮರ್ಪಕ ಮೂಲಸೌಕರ್ಯಗಳ ಕೊರತೆ, ಅಭಿವೃದ್ಧಿಯಿಲ್ಲದಿರುವಿಕೆ ಮತ್ತು ಉತ್ತಮ ಅವಕಾಶಗಳ ಹುಡುಕಾಟದಲ್ಲಿ ಬೆಟ್ಟಗಳಿಂದ ಸ್ಥಳೀಯ ಜನರ ವಲಸೆ ಇವುಗಳು ಬೆಟ್ಟಗುಡ್ಡಗಳ ಪ್ರದೇಶದ ಪ್ರತ್ಯೇಕ ರಾಜ್ಯದ ರಚನೆಯ ಬೇಡಿಕೆಗೆ ಕಾರಣವಾದವು. ರಾಜ್ಯವನ್ನು ಸಾಧಿಸುವ ಉದ್ದೇಶದಿಂದ ಉತ್ತರಾಖಂಡ ಕ್ರಾಂತಿ ದಳದ ರಚನೆಯಾದ ನಂತರ, ಪ್ರತಿಭಟನೆಗಳು ವೇಗವನ್ನು ಪಡೆದುಕೊಂಡವು ಮತ್ತು 90 ರ ದಶಕದಲ್ಲಿ ಈ ಪ್ರದೇಶದಾದ್ಯಂತ ಆಂದೋಲನವು ಹರಡಿತು. ಈ ಚಳುವಳಿಯು 2 ಅಕ್ಟೋಬರ್ 1994 ರಂದು ಹಿಂಸಾತ್ಮಕ ತಿರುವು ಪಡೆದುಕೊಂಡಿತು, ಉತ್ತರ ಪ್ರದೇಶ ಪೊಲೀಸರು ಮುಜಫರ್ ನಗರದಲ್ಲಿ ಪ್ರತಿಭಟನಾಕಾರರ ಗುಂಪಿನ ಮೇಲೆ ಗುಂಡು ಹಾರಿಸಿ ಹಲವಾರು ಜನರನ್ನು ಕೊಂದರು.

ಚಳುವಳಿಕಾರರು ಮುಂದಿನ ಹಲವಾರು ವರ್ಷಗಳವರೆಗೆ ತಮ್ಮ ಆಂದೋಲನವನ್ನು ಮುಂದುವರಿಸಿದರು. ಇದರ ಪರಿಣಾಮವಾಗಿ ಉತ್ತರಾಖಂಡ್ ರಾಜ್ಯವು 9 ನವೆಂಬರ್ 2000 ರಂದು ಉತ್ತರಾಂಚಲ ಎಂಬ ಹೆಸರಿನಲ್ಲಿ ರಚನೆಯಾಯಿತು. ಉತ್ತರ ಪ್ರದೇಶ ಪುನರ್ರಚನೆ ಕಾಯಿದೆ, 2000 ಎಂಬ ಮಸೂದೆಯು ಮುಂಚೆಯಿದ್ದ ಉತ್ತರ ಪ್ರದೇಶ ರಾಜ್ಯದ ವಿಭಜನೆಯಿಂದ ಇದನ್ನು ಸಾಧಿಸಿತು. 1 ಜನವರಿ 2007 ರಂದು, ಉತ್ತರಾಂಚಲ್ ಅನ್ನು ಉತ್ತರಾಖಂಡ್ ಎಂದು ಮರುನಾಮಕರಣ ಮಾಡಲಾಯಿತು, ಈ ಮೂಲಕ ಈ ಪ್ರದೇಶವು ಈ ರಾಜ್ಯ ರಚನೆಗೆ ಮೊದಲು ಸುಪರಿಚಿತವಾಗಿ ಹೊಂದಿದ್ದ ಹೆಸರನ್ನು ಪುನಃ ಪಡೆದುಕೊಂಡಿತು. [೩]

ಇವನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Goyal, Shikha (7 November 2019). "Uttarakhand Foundation Day: All you need to know". Jagran Josh. Retrieved 1 June 2020.
  2. "Uttarakhand to celebrate state foundation week from Nov 3". ಟೈಮ್ಸ್ ಆಫ್ ಇಂಡಿಯ. 31 October 2019. Retrieved 1 June 2020.
  3. "Uttarakhand: Festivals". Encyclopedia Britannica.