ಉತ್ತರಣೆ

ವಿಕಿಪೀಡಿಯ ಇಂದ
Jump to navigation Jump to search

ಉತ್ತರಣೆ[ಬದಲಾಯಿಸಿ]

ಸಂ : ಅಪಮಾರ್ಗ

ಹಿಂ : ಚಿಡಾಚಿಡೀ

ಗು : ಅಘಡೊ

ಮ : ಅಘಡಾ

ತೆ : ಅಪಮಾರ್ಗಮು

ತ : ನಜೂರಿರಾ

ವರ್ಣನೆ[ಬದಲಾಯಿಸಿ]

ಉತ್ತರಾಣಿ ಗಿಡವು, ಪೊದೆಯಾಕಾರದಲ್ಲಿದ್ದು ಕಾಂಡವು ಗಂಟು ಗಂಟಾಗಿರುವುದು. ಅರ್ಧದಿಂದ ಮುಕ್ಕಾಲು ಮೀಟರು ಎತ್ತರ ಬೆಳೆಯುವುದು. ಬಹು ಶಾಖೆಗಳಿರುವುದು. ಎಲೆಗಳು ದುಂಡಾಗಿದ್ದು ಮಕಮಲ್ಲಿನಂತೆ ಮೃದುವಾಗಿರುವುವು. ಮಳೆಗಾಲದಲ್ಲಿ ಎಲ್ಲೆಲ್ಲೂ ಬೆಳೆದಿರುವುದು. ಶಾಖೆಯ ತುದಿಯಲ್ಲಿ, ಉದ್ದವಾದ ಜಡೆಯಂತೆ ಹೂ ಕಾಯಿ ಬಿಡುವುದು. ಇವು ಕೈಗಳಿಗೂ ಮತ್ತು ಬಟ್ಟೆಗಳಿಗೂ ಅಂಟಿಕೊಳ್ಳುವುವು. ಇದರಲ್ಲಿ ಕೆಂಪು ಮತ್ತು ಬಿಳಿ ಜಾತಿಗಳಿವೆ. ಬಿಳಿಯದು, ಶ್ರೇಷ್ಠವಾದುದು. ಕೆಂಪು ಉತ್ತರಾಣಿಯ ಎಲೆ, ಕಡ್ಡಿ ಮತ್ತು ಹೂವು ಕೆಂಪಾಗಿರುವುದು. ಹೂ ಬಿಡುವ ದಂತಿನ ಅರ್ಧಕ್ಕಿಂತ ಹೆಚ್ಚು ಭಾಗದಲ್ಲಿ ಹೂಕಾಯಿ ಇರುವುದು ಮತ್ತು ಹೂವನ್ನು ಹೊತ್ತಿರುವ ದಂಟು ಬಾಗಿರುವುದು. ಹೂಗೊಂಚಲು ಪಿರಮಿಡ್ ಆಕೃತಿಯಲ್ಲಿರುತ್ತದೆ.

ಸರಳ ಚಿಕಿತ್ಸೆಗಳು[ಬದಲಾಯಿಸಿ]

ತಾಯಂದಿರ ಎದೆ ಹಾಲು ಹೆಚ್ಚಲು[ಬದಲಾಯಿಸಿ]

ಬಿಳಿ ಉತ್ತರಾಣಿ ಗಿಡದ ಹಸಿ ಬೇರನ್ನು ತಂದು ಚೆನ್ನಾಗಿ ತೊಳೆದು, ಶುದ್ಧವಾದ ನೀರಿನಲ್ಲಿ ತೇದು ಗಂಧವನ್ನು ಸ್ತನಗಳ ಮೇಲೆ (ಸ್ತನದ ತೊಟ್ಟು ಬಿಟ್ಟು) ಲೇಪಿಸುವುದು.

ಬಂಜೆತನದಲ್ಲಿ[ಬದಲಾಯಿಸಿ]

ಉತ್ತರಾಣಿ ಗಿಡದ ಹೂಗೊಂಚಲುಗಳನ್ನು ತಂದು ಎಮ್ಮೆ ಹಾಲಿನಲ್ಲಿ ನಯವಾಗಿ ಅರೆದು ಬಟ್ಟೆಯಲ್ಲಿ ಶೋಧಿಸುವುದು. ದಿವಸಕ್ಕೆ 10 ಗ್ರಾಂನಷ್ಟು ಹಾಲನ್ನು ಹೊರಗಾಗಿರುವಾಗ ಐದು ದಿವಸ ಸೇವಿಸುವುದು. ಹಾಲು ಅನ್ನ ಪಥ್ಯ, ಶಾಂತಚಿತ್ತರಾಗಿರುವುದು ಭಗವಂತನ ಕೃಪೆಯಿಂದ ಗರ್ಭವತಿಯಾಗುವರು. ಹೀಗೆ ಕ್ರಮವಾಗಿ ಮೂರು ಮುಟ್ಟಿನಲ್ಲಿ ಮಾಡುವುದು.

ಹಲ್ಲುನೋವು, ಒಸಡಿನಿಂದ ರಕ್ತ ಕೀವು ಸುರಿಯವುದು ಮತ್ತು ಬಾಯಿ ದುರ್ಗಂಧ ನಿವಾರಣೆಗೆ[ಬದಲಾಯಿಸಿ]

ನಮ್ಮ ಹಳ್ಳಿಗಾಡಿನ ಜನರು ಹಿಂದಿನ ಕಾಲದಿಂದಲೂ ಉತ್ತರಾಣಿ ಬೇರಿನಿಂದ ಹಲ್ಲುಜ್ಜುವ ಪದ್ದತಿಯನ್ನು ರೂಢಿಸಿಕೊಂಡು ಬಂದಿದ್ದಾರೆ. ಮುಪ್ಪಿನಲ್ಲೂ ಕಡಲೆಕಾಳು ಅಗಿಯುವಷ್ಟು ಗಟ್ಟಿ ದಂತ ಶಕ್ತಿ ಉಳಿಸಿಕೊಂಡಿದ್ದಾರೆ. 10ಗ್ರಾಂ ಬಿಳಿ ಉತ್ತರಾಣಿ ಬೇರು ಮತ್ತು ಕಾಚು 10 ಗ್ರಾಂ ಚೆನ್ನಾಗಿ ಕುಟ್ಟಿ ಶುದ್ಧವಾದ ನೀರಿನಲ್ಲಿ ಅರ್ಧ ದಿವಸ ನೆನೆ ಹಾಕುವುದು. ಅನಂತರ ಚೆನ್ನಾಗಿ ಕಿವುಚಿ ಬಟ್ಟೆಯಲ್ಲಿ ಶೋಧಿಸಿ ಆಗಾಗ ಬಾಯಿ ಮುಕ್ಕಳಿಸುವುದು.

ಸಕಲ ನೇತ್ರ ವಿಕಾರಗಳಲ್ಲಿ[ಬದಲಾಯಿಸಿ]

ಒಂದು ತಾಮ್ರದ ತಟ್ಟೆಯಲ್ಲಿ ಸ್ವಲ್ಪ ಸೈಂಧವ ಲವಣ ಮತ್ತು ಮೊಸರಿನ ಮೇಲಿನ ತಿಳಿನೀರು ಹಾಕಿ ಇದರಲ್ಲಿ ಬಿಳೀ ಉತ್ತರಾಣಿ ಗಿಡದ ಬೇರನ್ನು ತೇದು ಗಂಧವನ್ನು ಕಣ್ಣುಗಳಿಗೆ ಅಂಜನವಿಕ್ಕುವುದು.

ಇಸಬಿಗೆ[ಬದಲಾಯಿಸಿ]

ಕೆಂಪು ಉತ್ತರಾಣಿ ಗಿಡವನ್ನು ಬೇರು ಸಹಿತ ತಂದು, ಸುಟ್ಟು ಬೂದಿ ಮಾಡುವುದು. 20 ಗ್ರಾಂ ಈ ಬೂದಿಗೆ 5 ಗ್ರಾಂ ವೀಳೆದೆಲೆಗೆ ಹಾಕುವ ಸುಣ್ಣ ಮತ್ತು 5 ಗ್ರಾಂ ಅರಿಶಿಣದ ಪುಡಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ, ಶೋಧಿಸಿದ ಗೋಮೂತ್ರದಲ್ಲಿ ಅರೆದು ಹಚ್ಚುವುದು.

ಪೆಟ್ಟು ತಾಗಿ, ರಕ್ತ ಸೋರುತ್ತಿದ್ದರೆ[ಬದಲಾಯಿಸಿ]

ಕೆಂಪು ಉತ್ತರಾಣಿ ಗಿಡದ ಸೊಪ್ಪಿನ ರಸವನ್ನು ಗಾಯದ ಮೇಲೆ ಹಿಂಡುವುದು. ತಕ್ಷಣ ರಕ್ತಸ್ರಾವ ನಿಲ್ಲುವುದು ಮತ್ತು ಗಾಯವು ಕ್ರಮೇಣ ವಾಸಿಯಾಗುವುದು.

ಮೂತ್ರದಲ್ಲಿ , ರಕ್ತ ಬೀಳುತ್ತಿದ್ದರೆ[ಬದಲಾಯಿಸಿ]

ಒಂದು ಟೀ ಚಮಚ ಕೆಂಪು ಉತ್ತರಾಣಿ ಗಿಡದ ರಸಕ್ಕೆ ಒಂದು ಟೀ ಚಮಚ ಮೆಣಸಿನ ಕಾಳಿನ ಪುಡಿ ಸೇರಿಸಿ ನೆಕ್ಕಿಸುವುದು.

ಚೇಳಿನ ವಿಷಕ್ಕೆ[ಬದಲಾಯಿಸಿ]

ಕೆಂಪು ಉತ್ತರಾಣಿ ಗಿಡದ ಎಲೆಗಳ ರಸವನ್ನು ಚೇಳು ಕಚ್ಚಿರುವ ಭಾಗಕ್ಕೆ ಹಚ್ಚುವುದು.

ಸರ್ಪದ ವಿಷಕ್ಕೆ[ಬದಲಾಯಿಸಿ]

ಕೆಂಪು ಉತ್ತರಾಣಿ ಗಿಡದ ಎಲೆಗಳ ರಸವನ್ನು ಕಿವಿ, ಮೂಗು ಕಣ್ಣುಗಳಿಗೆ ಹಾಕುವುದು.

ಕಣ್ಣಿನ ಪೊರೆ ಹರಿಯಲು[ಬದಲಾಯಿಸಿ]

ಉತ್ತರಾಣಿ ಗಿಡದ ಬೇರನ್ನ ಹೊನಗೊನ್ನೆ ಸೊಪ್ಪಿನ ರಸದಲ್ಲಿ ತೇದು ಕಣ್ಣುಗಳಿಗೆ ಹಚ್ಚುವುದು.

ಊದು ಮತ್ತು ಪಾಂಡು ರೋಗದಲ್ಲಿ[ಬದಲಾಯಿಸಿ]

ಒಂದು ಟೀ ಚಮಚ ಉತ್ತರಾಣಿ ಸೊಪ್ಪಿನ ರಸಕ್ಕೆ ಸ್ವಲ್ಪ ಹಳೇ ಬೆಲ್ಲ ಸೇರಿಸಿ ಬೆಳಿಗ್ಗೆ ಕುಡಿಸುವುದು. ದಿವಸಕ್ಕೆ ಒಂದೇ ವೇಳೆ ಸಾಕು. ಆಕಳ ಹಾಲು ಅನ್ನದ ಪಥ್ಯ ಇರಬೇಕು. ಅಲುಗಾಡುವ ಹಲ್ಲು ನೋವು, ಒಸಡಿನಿಂದ ರಕ್ತ ಸೋರುವುದು. ಉತ್ತರಾಣಿ ಬೇರಿನ ತುದಿಗಳನ್ನು ಜಜ್ಜಿ ಹಲ್ಲುಜ್ಜುವುದು. ಸ್ವಲ್ಪ ಕಾಚು ಮತ್ತು ಒಂದು ಇಂಚು ಬೇರನ್ನು ಜಜ್ಜಿ ನೀರಿಗೆ ಹಾಕಿ ಕಷಾಯ ಮಾಡಿ ಬಾಯಿ ಮುಕ್ಕಳಿಸುವುದು.

ಉಲ್ಲೇಖ[ಬದಲಾಯಿಸಿ]

ಪುಸ್ತಕದ ಹೆಸರು: ಬಾಬಾ ಬುಡನ್ ಗಿರಿ ಮತ್ತು ಸಿದ್ದರ ಬೆಟ್ಟದ ಅಪೂವ‍ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು

ಸಂಪಾದಕರು: ವೈದ್ಯ ಎ. ಆರ್. ಎಂ. ಸಾಹೇಬ್

ಪ್ರಕಾಶಕರು: ಮಠಾಧೀಶರು, ಸದ್ಗುರು ದಾದಾ ಹಯಾತ್ ಮೀರ್ ಖಲಂದರ್ ಪೀಠ, ಬಾಬಾಬುಡನ್ ಗಿರಿ, ಚಿಕ್ಕಮಗಳೂರು

"https://kn.wikipedia.org/w/index.php?title=ಉತ್ತರಣೆ&oldid=758809" ಇಂದ ಪಡೆಯಲ್ಪಟ್ಟಿದೆ