ವಿಷಯಕ್ಕೆ ಹೋಗು

ಉಡ್ಡಯನ (ಪ್ರಾಣಿಗಳಲ್ಲಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಡ್ಡಯನ (ಪ್ರಾಣಿಗಳಲ್ಲಿ): ಗಾಳಿಯಲ್ಲಿ ಹಾರುವುದು. ಹಾರುವ ಪ್ರಾಣಿಗಳ ಜೀವನಕ್ರಮವನ್ನು ಗಮನಿಸಿದರೆ ಎರಡು ರೀತಿಯನ್ನು ನೋಡಬಹುದು.

ಗಾಳಿಯಲ್ಲಿ ತೇಲಿ ಜಾರುವ ಪ್ರಾಣಿಗಳು

[ಬದಲಾಯಿಸಿ]

ಇವು ಪಕ್ಷಿಗಳಂತೆ ನಿರಂತರವಾಗಿ ಚಲಿಸಲಾರವು. ಎತ್ತರ ಪ್ರದೇಶದಿಂದ ತಗ್ಗು ಪ್ರದೇಶಕ್ಕೆ ಚಲಿಸುವಾಗ ಗಾಳಿಯಲ್ಲಿ ಧುಮುಕಿ, ತೇಲಿ, ತಮ್ಮ ದೇಹದ ಮಾರ್ಪಾಡುಗಳ ಸಹಾಯದಿಂದ ಜಾರಿಕೊಂಡು, ಯಾವ ಅಪಾಯವೂ ಇಲ್ಲದೆ ಗುರಿ ತಲುಪುತ್ತವೆ. ಈ ಚಲನೆ ಪ್ಯಾರಾಶೂಟ್ ಸಹಾಯದಿಂದ ಧುಮುಕುವವರ ಇಳಿತದಂತಿದೆ. ಇಂಥವನ್ನು ಒಂದು ವಿಧದಲ್ಲಿ ಹಾರುವ ಪ್ರಾಣಿಗಳು ಎನ್ನಬಹುದು. ಉದಾಹರಣೆಗೆ ಹಾರುಮೀನು, ಹಾರುಗಪ್ಪೆ, ಹಾರುಹಲ್ಲಿ, ಹಾರುಬೆಕ್ಕು, ಹಾರುಅಳಿಲು ಇತ್ಯಾದಿ. ಇವುಗಳ ದೇಹಗಳು ಹಾರುವುದಕ್ಕೆ ಪುರಕವಾಗಿ ರಚಿತವಾಗಿವೆ. ಹಾರುಮೀನುಗಳು: ಇವು ಎಕ್ಸೋಸಿಟಿಸ್ ಜಾತಿಗೆ ಸೇರಿದವು. ಇವುಗಳಲ್ಲಿ ಭುಜದ ಈಜುರಕ್ಕೆಗಳು ಅಗಲವಾಗಿ ಬೆಳೆದಿವೆ; ಹರಡಿದಾಗ ಸುಮಾರು 14|| ಅಗಲವಿರುತ್ತವೆ. ನೀರಿನ ಮೇಲಂಚಿನಲ್ಲಿ ವೇಗದಿಂದ ಈಜಿ ಕೊಂಡು ಬಂದು ಬಾಲದ ಸಹಾಯ ದಿಂದ ನೀರನ್ನು ತಳ್ಳಿ ಗಾಳಿಗೆ ಜಿಗಿಯು ತ್ತವೆ. ಉಯ್ಯಾಲೆ ಆಡುವವರು ಕಾಲಿ ನಿಂದ ನೆಲವನ್ನು ಮೀಟಿ ತೂಗಿಕೊಳ್ಳಲು ವೇಗವನ್ನು ಪಡೆಯುವಂತೆ ಇವು ಬಾಲದ ನೆರವಿನಿಂದ ಜಿಗಿಯುತ್ತವೆ. ಗಾಳಿಗೆ ಜಿಗಿದ ಅನಂತರ ತಮ್ಮ ಭುಜದ ಈಜುರೆಕ್ಕೆಗಳನ್ನು ಹರಡಿಕೊಂಡು ಗಾಳಿಯಲ್ಲಿ ಜಾರಿಕೊಂಡು ಪುನಃ ನೀರಿಗೆ ಇಳಿಯುತ್ತವೆ. ಪುನಃ ಬಾಲದ ಸಹಾಯದಿಂದ ಗಾಳಿಗೆ ಜಿಗಿಯಬಹುದು. ಹೀಗೆ ಇವು ನೂರಾರು ಗಜಗಳ ದೂರ ಗಾಳಿಯಲ್ಲಿ ಚಲಿಸಬಲ್ಲವು.[]

ಹಾರುಗಪ್ಪೆ

[ಬದಲಾಯಿಸಿ]

ರೆಕೋಫೋರಸ್ ರೈನ್ಹಾರಿಡಿ ಹೆಸರಿನ ಮರಕಪ್ಪೆ, ಬೋರ್ನಿಯೋ ದ್ವೀಪವಾಸಿ. ಕಾಲುಬೆರಳುಗಳ ನಡುವೆ ಇರುವ ಜಾಲಪಾದದ ನೆರವಿನಿಂದ ಗಾಳಿಯಲ್ಲಿ ಜಿಗಿದು ಚಲಿಸುತ್ತದೆ. ಬೆರಳುಗಳಲ್ಲಿರುವ ಅಂಟುಮೆತ್ತೆಗಳ ಸಹಾಯದಿಂದ ಮರ ಹತ್ತಬಲ್ಲದು.[]

ಹಾರುಹಲ್ಲಿ: (ಡ್ರಾಕೋ ವೊಲಾನ್ಸ)

[ಬದಲಾಯಿಸಿ]

ಮಲಯ ದ್ವೀಪದ ಕಾಡುಗಳಲ್ಲಿ ವಾಸ. ಚಿಟ್ಟೆಗಳಂತೆ ವರ್ಣರಂಜಿತ ದೇಹ, ಸಾಮಾನ್ಯವಾಗಿ ಇದು ಹೂಗಳ ಹತ್ತಿರದಲ್ಲಿ ಜೀವಿಸುವುದರಿಂದ ಚಿಟ್ಟೆಗಳಂತೆಯೇ ಕಾಣಿಸುತ್ತದೆ. ಇದರ ಎದೆಯ ಪಕ್ಕೆಲುಬುಗಳು ನೇರವಾಗಿ ಪಕ್ಕಕ್ಕೆ ಬೆಳೆದಿವೆ. ಇವುಗಳ ನಡುವೆ ಚರ್ಮದ ಪದರ ಬೆಳೆದು ಒಂದು ರೀತಿಯ ರೆಕ್ಕೆಯಂತಿರುವ ರಚನೆ ಉಂಟಾಗಿದೆ. ಇದಕ್ಕೆ ಪೆಟೆಜಿಯಂ ಎಂದು ಹೆಸರು. ಇದನ್ನು ಹರಡಿಕೊಂಡು ಎತ್ತರದಿಂದ ತಗ್ಗಿಗೆ ಗಾಳಿಯಲ್ಲಿ ಜಾರಿ ಇಳಿಯುತ್ತದೆ. ಆಗ ರೆಕ್ಕೆ ಪ್ಯಾರಶೂಟಿನಂತೆ ಸಹಾಯ ಮಾಡುತ್ತದೆ. ವಿಶ್ರಾಂತಿಸ್ಥಿತಿಯಲ್ಲಿ ರೆಕ್ಕೆ ಮಡಿಸಿಕೊಂಡಿರುತ್ತರೆ.[]

ಹಾರುಬೆಕ್ಕು: (ಡರ್ಮಾಪ್ಟೆರ)

[ಬದಲಾಯಿಸಿ]

ಮಡಗಾಸ್ಕರ್ ದ್ವೀಪವಾಸಿ ಸ್ತನಿ. ಅಲ್ಲಿಯ ಜನರ ಭಾಷೆಯಲ್ಲಿ ಇದರ ಹೆಸರು ಕೊಬೆಗಾಸ್ ಕಗುಆನ. ಗಾತ್ರ ಮನೆ ಬೆಕ್ಕಿನಷ್ಟೇ. ನಿಶಾಚರಿ. ಚರ್ಮದಿಂದ ರಚಿತವಾದ ಪೆಟಿಜಿಯಂ ರೆಕ್ಕೆ ಇದೆ. ಇದು ಕುತ್ತಿಗೆಗೂ ಮುಂಗಾಲುಗಳಿಗೂ ನಡುವೆ, ಮುಂಗಾಲು ಹಿಂಗಾಲುಗಳ ನಡುವೆ, ಹಿಂಗಾಲುಗಳಿಗೂ ಬಾಲಕ್ಕೂ ನಡುವೆ ಹರಡಿದೆ. ಇದರ ಸಹಾಯದಿಂದ ಹಾರುಬೆಕ್ಕು ಎತ್ತರದಿಂದ ತಗ್ಗಿಗೆ ಜಾರಬಲ್ಲದು.

ಹಾರುಅಳಿಲು

[ಬದಲಾಯಿಸಿ]

ಸೈಯುರಾಪ್ಟೆರಸ್, ಟಿರಾಮಿಸ್, ಯುಪೆಟಾರಸ್ ಮತ್ತು ಅನುಮಾಲುರಿಡೆ ಜಾತಿಗೆ ಸೇರಿದೆ, ಭಾರತ, ಮಲೇಷಿಯ, ಆಫ್ಘಾನಿಸ್ತಾನ, ಯುರೋಪ್, ಉತ್ತರ ಅಮೆರಿಕಗಳಲ್ಲಿ ಕಾಣಬಹುದು. ಹಾರುಬೆಕ್ಕಿನಂತೆ ಇದರಲ್ಲಿಯೂ ಪೆಟೆಜಿಯಂ ಬೆಳೆದಿದೆ. ಆದರೆ ಅದರಷ್ಟು ರೂಪಗೊಂಡಿಲ್ಲ. ಅರಣ್ಯವಾಸಿ, ನಿಶಾಚರಿ, ಹಾರುವಾಗ ರೆಕ್ಕೆಯ ಉಪಯೋಗವಿದೆ.[]

ನೈಜವಾಗಿ ಹಾರುವ ಪ್ರಾಣಿ ಗಳು

[ಬದಲಾಯಿಸಿ]

ಕೇವಲ ನಾಲ್ಕು ರೀತಿಯ ಪ್ರಾಣಿಗಳಿಗೆ ಈ ಗುಣವಿದೆ ಪಕ್ಷಿಗಳು, ಬಾವಲಿಗಳು, ಕೀಟಗಳು, ಮತ್ತು ಟೀರೋಡ್ಯಾಕ್ಟೈಲಗಳು (ಪಕ್ಷಾಂಗುಲಿ ಗಳು). ಇವುಗಳಲ್ಲಿ ಮೊದಲಿನ ಮೂರು ಇಂದಿಗೂ ಬದುಕಿವೆ; ಕೊನೆ ಯದು ಬದುಕಿಲ್ಲ. ಇವು ಗಾಳಿಯಲ್ಲಿ ಸ್ವಶಕ್ತಿಯಿಂದ ಚಲಿಸುತ್ತವೆ. ಎಂದರೆ ಹಾರುತ್ತವೆ. ಈ ಪ್ರಾಣಿಗಳಲ್ಲಿ ಹಾರಲು ನೆರವಾಗುವಂತೆ ರೆಕ್ಕೆಗಳು ಅಥವಾ ರೆಕ್ಕೆಗಳಂತಿರುವ ರಚನೆಗಳು ಬೆಳೆದಿವೆ. ಟೀರೋಡ್ಯಾಕ್ಟೈಲದಲ್ಲಿ ನಾಲ್ಕನೆಯ ಕೈಬೆರಳು ದೊಡ್ಡದು. ಇದು ಚರ್ಮದ ರೆಕ್ಕೆಗೆ ಆಧಾರ. ಬಾವಲಿಗಳಲ್ಲಿ ಕೈಬೆರಳು ಗಳ ನಡುವೆ, ಕೈಕಾಲುಗಳ ನಡುವೆ ಮತ್ತು ಬಾಲಕ್ಕೂ ಕಾಲುಗಳಿಗೂ ನಡುವೆ ಚರ್ಮದ ಪಟಲವೊಂದು ಹರಡಿ ರೆಕ್ಕೆಯ ರಚನೆ ಉಂಟಾಗಿದೆ. ಕೀಟಗಳಲ್ಲಿ ಕ್ಯೂಟಿಕಲ್ ರೆಕ್ಕೆಯಾಗಿ ರೂಪಿತವಾಗಿದೆ. ಪ್ರಾಣಿಗಳಲ್ಲಿ ಹಾರು ವಿಕೆಯ ವಿಕಾಸ ಬೇರೆ ಬೇರೆ ಕಾಲಗ ಳಲ್ಲಿ ಬೇರೆ ಬೇರೆ ರೀತಿಯಲ್ಲಿ ಕಾಣಿಸಿ ಕೊಂಡಿದೆ. ಈ ಗುಣ ಕಾಣಿಸಿಕೊಳ್ಳಲು ಕಾರಣಗಳು ಬೇರೆ ಬೇರೆಯಾದರೂ ಎಲ್ಲೆಂದರಲ್ಲಿಯೂ ಹಾರಲು ಪ್ರೇರಕ ವಾದ ಕಾರಣ, ಅದರ ಗುರಿ, ದೇಹದ ಮಾರ್ಪಾಡುಗಳು ಮುಂತಾದವುಗಳಲ್ಲಿ ಒಂದಕ್ಕೊಂದು ಹೋಲಿಕೆ ಕಾಣಬರು ತ್ತದೆ.

ಟೀರೋಡ್ಯಾಕ್ಪೈಲ

[ಬದಲಾಯಿಸಿ]

ಇವು ಮಿಸೋಜೋಯಿಕ್ ಕಲ್ಪದಲ್ಲಿ ಎಂದರೆ ಸರೀಸೃಪಗಳ ಸುವರ್ಣಯುಗದಲ್ಲಿ ಬಾಳಿ, ಆಳಿ, ಅಳಿದ ಪ್ರಾಣಿಗಳು. ಇಂದಿನ ಗುಬ್ಬಚ್ಚಿಗಳ ಗಾತ್ರದಷ್ಟು ಚಿಕ್ಕವೂ ಸಾಮಾನ್ಯ ವಿಮಾನಗಳಷ್ಟು ಗಾತ್ರದ ಪ್ರಾಣಿಗಳೂ ಅಂದು ಬದುಕಿ ದ್ದುವು. ಇವುಗಳ ಕೈಯ ನಾಲ್ಕನೆಯ ಬೆರಳು ಉದ್ದವಾಗಿ ಬೆಳೆದು ಹರಡಿದ ಚರ್ಮದ ಪಟಲಕ್ಕೆ ಆಧಾರವಾದ ರೆಕ್ಕೆಗಳು ರೂಪಿತವಾಗಿದ್ದವು. ಇವುಗಳ ಅವಶೇಷಗಳು ಬವೇರಿಯ, ಕನ್ಸಾಸ್ ದೇಶಗಳ ಸುಣ್ಣಶಿಲಾ ಪದರಗಳೊಂದಿಗೆ ದೊರಕಿವೆ. ಯೇಲ್ ನಗರದ ವಸ್ತು ಸಂಗ್ರಹಾಲಯದಲ್ಲಿ ಇವನ್ನು ಜೋಡಿಸಿಟ್ಟಿದ್ದಾರೆ.

ಬಾವಲಿ

[ಬದಲಾಯಿಸಿ]

ಇವುಗಳ ಕೈಬೆರಳುಗಳು ಉದ್ದವಾಗಿ ಬೆಳೆದಿವೆ; ಈ ನಡುವೆ ಚರ್ಮದ ಪದರ ಹರಡಿದೆ. ಪದರ ಕೈಕಾಲುಗಳ ನಡುವೆ ಹಾಗೂ ಹಿಂಗಾಲುಗಳೆರಡರ ನಡುವೆಯೂ ಉಂಟು. ಇದರಲ್ಲಿ ಬಾಲ ಸೇರಿರಬಹುದು ಸೇರದೆಯೂ ಇರಬಹುದು. ಈ ರಚನೆಯೇ ಬಾವಲಿಯ ರೆಕ್ಕೆ. ರೆಕ್ಕೆಗಳ ಬಡಿತದಿಂದ ಬಾವಲಿ ಗಾಳಿಯಲ್ಲಿ ಹಾರುತ್ತದೆ.[]

ಕೀಟಗಳು

[ಬದಲಾಯಿಸಿ]

ಇವುಗಳ ಹೊರ ಚರ್ಮವೇ ರೆಕ್ಕೆಗಳಾಗಿ ಬೆಳೆದಿವೆ. ಇವುಗಳಲ್ಲಿ ಜಿರಲೆ, ಮುಂತಾದುವುಗಳಲ್ಲಿರುವಂತೆ ಎರಡು ಜೊತೆ ರೆಕ್ಕೆಗಳಿರಬಹುದು ಅಥವಾ ನೊಣ ಮುಂತಾದುವುಗಳಲ್ಲಿರುವಂತೆ ಒಂದೇ ಜೊತೆ ಇರಬಹುದು.

ಪಕ್ಷಿಗಳು

[ಬದಲಾಯಿಸಿ]

ಇವುಗಳಲ್ಲಿ ಮುಂಗಾಲುಗಳು ರೆಕ್ಕೆಗಳಾಗಿ ಮಾರ್ಪಟ್ಟು ಕೈ ಬೆರಳುಗಳ ಸಂಖ್ಯೆ ಕ್ಷೀಣವಾಗಿ ಹೋಗಿವೆ. ರೆಕ್ಕೆಗಳ ಮೇಲೆ ಗರಿಗಳು ಹರಡಿವೆ. ಚರ್ಮದ ಹೊರ ಪದರದಿಂದ ಇವುಗಳ ಬೆಳೆವಣಿಗೆ. ಗರಿಗಳು ಹಗುರವಾಗಿದ್ದು ಹಕ್ಕಿಗೆ ಗಾಳಿಯಲ್ಲಿ ತೇಲಲು ಅನುಕೂಲ. ಮೇಲಾಗಿ ದೇಹದ ಶಾಖವನ್ನು ಕಾಯ್ದಿಡಲು ಇವು ಸಹಕಾರಿಗಳು. ದೇಹ ದೋಣಿಯಾಕಾರದಲ್ಲಿದೆ. ಗರಿಗಳು ಹಿಂದಕ್ಕೆ ಬಾಗಿವೆ. ರೆಕ್ಕೆಗಳ ಬಡಿತಕ್ಕೆ ಸಹಕಾರಿಯಾಗಲು ಬಲಯುತವಾದ ಮಾಂಸಖಂಡಗಳು ಬೆಳೆದಿವೆ. ದೇಹದ ಮೂಳೆಗಳಲ್ಲಿ ಗಾಳಿ ತುಂಬಿಕೊಂಡು ಹಗುರವಾಗಿದೆ. ಶ್ವಾಸನಾಳಗಳು ಶ್ವಾಸಕೋಶಗಳಿಂದ ಮುಂದಕ್ಕೆ ಗಾಳಿಯ ಚೀಲಗಳಾಗಿ ಮಾರ್ಪಾಟಾಗಿ ದೇಹದ ಅಂಗಾಂಗಗಳ ನಡುವೆ ಹರಡಿವೆ. ಉಸಿರಾಡಲು ಬಂದ ಗಾಳಿ ಇವುಗಳಲ್ಲಿ ಸದಾ ತುಂಬಿರುತ್ತದೆ. ಮುಂಗಾಲುಗಳು ರೆಕ್ಕೆಗಳಾಗಿ ಮಾರ್ಪಟ್ಟ ಕಾರಣದಿಂದ ಆಹಾರಾನ್ವೇಷಣೆಯಲ್ಲಿ ನೆರವಾಗಲು ಕೊಕ್ಕುಗಳು ಬೆಳೆದಿವೆ. ಆಹಾರದ ಗುಣವನ್ನು ಅನುಸರಿಸಿ ಕಾಳು ಬಿಡಿಸಲು, ಕಡಿಯಲು, ಮಾಂಸ ಸಿಗಿಯಲು, ಹುಳು ಹುಪ್ಪಟೆ ಹಿಡಿಯಲು ಇವುಗಳ ಕೊಕ್ಕು ಮಾರ್ಪಟ್ಟಿದೆ. ಮುಂಗಾಲುಗಳು ಹಾರಲು ರೆಕ್ಕೆಗಳಾಗಿ ಪರಿವರ್ತನೆಗೊಂಡಿರುವುದ ರಿಂದ ಹಿಂಗಾಲುಗಳು ಉಳಿದ ಕ್ರಿಯೆಗೆ ಹೊಂದಿಕೊಂಡಿವೆ. ಆಯಾ ಹಕ್ಕಿಯ ಜೀವನದ ಕ್ರಮ ಅನುಸರಿಸಿ ಮರಗಿಡಗಳ ಕೊಂಬೆಗಳನ್ನು ಹತ್ತಲು ಹಿಡಿಯಲು, ನೆಲದ ಮೇಲೆ ಓಡಲು, ಕುಪ್ಪಳಿಸಲು, ನೀರಿನಲ್ಲಿ ಈಜಲು ಇತ್ಯಾದಿಯಾಗಿ ಇವುಗಳ ರಚನೆ ಇದೆ. ಹಾರಲು ಮುಖ್ಯ ಅಂಗಗಳಾದ ರೆಕ್ಕೆಗಳ ರಚನೆಯಲ್ಲಿ ನಿಜವಾದ ಎಂಜಿನಿಯರಿಂಗ್ ಕುಶಲತೆಯನ್ನು ತೋರಿಸುತ್ತವೆ.[] ಇದು ಮೇಲ್ಬಾಗಕ್ಕೆ ಉಬ್ಬಿಕೊಂಡಿದೆ. ರೆಕ್ಕೆಯನ್ನು ಮೇಲೆತ್ತುವಾಗ ಗಾಳಿಯ ಒತ್ತಡ ಯಾವ ಒಂದೆಡೆಯೂ ಕೇಂದ್ರೀಕೃತವಾಗದೆ ಹರಡಲು ಸಹಾಯಕವಾಗಿದೆ. ಇದರ ಜೊತೆಗೆ ಪಕ್ಷಿ ರೆಕ್ಕೆಗಳನ್ನು ಮೇಲೆತ್ತುವಾಗ ಗರಿಗಳೆಲ್ಲವೂ ಸಡಿಲವಾಗಿ ಗಾಳಿ ಇವುಗಳ ಸಂದಿಯಲ್ಲಿ ಹಾದು ಹೋಗುವುದರಿಂದ ಹೆಚ್ಚು ಘರ್ಷಣೆ ಇಲ್ಲದೆ ಸುಲಭವಾಗಿ ಮೇಲೆ ಹೋಗುತ್ತದೆ. ಆದರೆ ರೆಕ್ಕೆಗಳನ್ನು ಕೆಳಕ್ಕೆ ಬಡಿಯುವಾಗ ಗರಿಗಳೆಲ್ಲವೂ ಒತ್ತಾಗಿ ಜೋಡಿಸಿ ಕೊಂಡು ಗಾಳಿಯನ್ನು ಹಿಂದಕ್ಕೂ ಕೆಳಕ್ಕೂ ಅದುಮುತ್ತವೆ. ಅಲ್ಲದೆ ಇವು ರೆಕ್ಕೆಗಳನ್ನು ಮೇಲೆ ಕೆಳಕ್ಕೆ ಬಡಿಯುವುದಿಲ್ಲ. ಮೇಲೆ ಮುಂಭಾಗದಿಂದ, ಕೆಳಗೆ ಹಿಂಭಾಗಕ್ಕೆ ಬಡಿಯುತ್ತದೆ. ಇದರಿಂದ ಅವು ಗಾಳಿಯಲ್ಲಿ ಮುಂದೆ ಚಲಿಸುವುದು. ಗಾಳಿಯನ್ನು ತಳ್ಳಲು ಅನುಕೂಲವಾಗು ವಂತೆ ರೆಕ್ಕೆಯ ತಳಭಾಗ ನಿಮ್ನವಾಗಿದೆ. ಬಾಲದ ಮೇಲೆ ಬೀಸಣಿಗೆಯಂತೆ ಹರಡಿರುವ ಗರಿಗಳಿವೆ. ದಿಕ್ಕನ್ನು ಬದಲಿಸಲು ಮತ್ತು ವೇಗವನ್ನು ಕಡಿಮೆ ಮಾಡಲು ಇವುಗಳು ಸಹಾಯಕ. ಹಕ್ಕಿ ಇಳಿಯುವಾಗ ಬಾಲದ ಗರಿಗಳನ್ನು ಬೀಸಣಿಗೆಯಂತೆ ಹರಡಿ ಕೆಳಗಡೆಗೆ ಬಾಗಿಸುತ್ತದೆ. ಇದನ್ನು ವೇಗವಾಗಿ ಧಾವಿಸುವ ವಾಹನಕ್ಕೆ ಬ್ರೇಕ್ ಹಾಕುವುದಕ್ಕೆ ಹೋಲಿಸ ಬಹುದು. ಗರಿಗಳಿಗೆ ಒಂದು ಬಗೆಯ ತೈಲ ಲೇಪಿತವಾಗಿರುವುದರಿಂದ ಅವು ಮಳೆ ನೀರಿನಲ್ಲಿ ನೆನೆದು ಮುದ್ದೆಯಾಗುವುದಿಲ್ಲ. ಬಾಲದ ಕೆಳಗೆ ತೈಲಗ್ರಂಥಿಗಳಿವೆ. ಹಾರುವಾಗ ಆಹಾರವನ್ನು ಹುಡುಕಲು, ಶತ್ರು ಮಿತ್ರರನ್ನು ಗುರುತಿಸಲು ಸಹಾಯಕವಾಗಿ ಬಲು ಸೂಕ್ಷ್ಮ ಕಣ್ಣುಗಳಿವೆ. ಹೊರ ಕಿವಿಗಳಿಲ್ಲದಿದ್ದರೂ ಶ್ರವಣಶಕ್ತಿ ಚುರುಕಾಗಿದೆ. ಹೀಗೆ ಹಾರುವ ಪರಿಸರವನ್ನು ಹೊಂದಿದಂತೆ ಹಕ್ಕಿಯ ದೇಹರಚನೆಯಿದೆ.[]


ಉಲ್ಲೇಖಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]