ಉಟಿಲಾ ಕೋಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಟಿಲಾ ಕೋಟೆ
ಗ್ರಾಮ
Country ಭಾರತ
Stateಮಧ್ಯ ಪ್ರದೇಶ
Languages
ಸಮಯ ವಲಯಯುಟಿಸಿ+5:30 (IST)

ಉಟಿಲಾ ಕೋಟೆಯು ಭಾರತದ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಕಂಡು ಬರುವ ಒಂದು ಕೋಟೆಯಾಗಿದೆ. ಉಟಿಲಾವು ಗ್ವಾಲಿಯರ್ ನಗರದ ಪೂರ್ವ ಭಾಗದ, ಗ್ವಾಲಿಯರ್ - ಹಸ್ತಿನಾಪುರ - ಬೆಹತ್ ರಸ್ತೆಯಿಂದ ೨೦ ಕಿ. ಮೀ ದೂರದಲ್ಲಿದೆ.

ಇತಿಹಾಸ[ಬದಲಾಯಿಸಿ]

ಉಟಿಲಾ ಕೋಟೆಯನ್ನು ೧೭೪೦ ರಲ್ಲಿ ಗೋಹಾಡ್ ರಾಜ್ಯದ ಭೀಮ್ ಸಿಂಗ್ ರಾಣಾ ಅವರು ನಿಮಾ೯ಣ ಮಾಡಿದರು. ಇದನ್ನು ಮುಖ್ಯವಾಗಿ ಗೋಹಾಡ್ ಕೋಟೆಗೆ ರಕ್ಷಣೆಯನ್ನು ನೀಡಲು ನಿರ್ಮಿಸಲಾಗಿದೆ.

ವಾಸ್ತುಶಿಲ್ಪ[ಬದಲಾಯಿಸಿ]

ಉಟಿಲಾ ಕೋಟೆಯು ಬೆಟ್ಟದ ಮೇಲೆ ನೆಲೆಗೊಂಡಿದೆ ಮತ್ತು ಅದರ ಸುತ್ತಲೂ ಆಳವಾದ ಕಂದಕಗಳಿವೆ. ಕೋಟೆಯ ಸುತ್ತಲೂ ನಾಲ್ಕು ಎತ್ತರದ ಗೋಪುರಗಳು ಅಥವಾ ಬುರ್ಜ್‌ಗಳಿವೆ. ಇವುಗಳ ವಾಸ್ತುಶಿಲ್ಪವು ಗೋಹಾದ್ ಜಾಟ್ ಆಡಳಿತಗಾರರ ರಕ್ಷಣಾ ತಂತ್ರ ಮತ್ತು ವಾಸ್ತುಶಿಲ್ಪದ ಕೌಶಲ್ಯಗಳನ್ನು ತೋರಿಸಿಕೊಡುತ್ತದೆ.

ಉಲ್ಲೇಖಗಳು[ಬದಲಾಯಿಸಿ]