ಉಗನಿಬಳ್ಳಿ
ಉಗನಿಬಳ್ಳಿ: ಕನ್ವಾಲ್ವುಲೇಸೀ ಕುಟುಂಬಕ್ಕೆ ಸೇರಿದ ಅಡರುಬಳ್ಳಿ.
ಪ್ರಭೇದಗಳು
[ಬದಲಾಯಿಸಿ]ಆರ್ಗೈರಿಯ ಎಲಿಪ್ಟಿಕ, ಮತ್ತು ಆರ್ಗೈರಿಯ ಇಂಬ್ರಿಕೇಟ ಎಂಬ ಎರಡು ಪ್ರಭೇದಗಳಿಗೆ ಈ ಹೆಸರು ಅನ್ವಯವಾಗುತ್ತದೆ.
ಭೌಗೋಳಿಕ
[ಬದಲಾಯಿಸಿ]ಏಷ್ಯಖಂಡದ ಉಷ್ಣ ಪ್ರದೇಶಗಳಲ್ಲಿ ಮತ್ತು ಮಲೇಷ್ಯಗಳಲ್ಲಿ ಬೆಳೆಯುವುದು. ಪಶ್ಚಿಮಘಟ್ಟಗಳು, ಕರ್ನಾಟಕ, ಕೇರಳ ಹಾಗೂ ಪಳನಿ ಬೆಟ್ಟಗಳಲ್ಲಿ ಬಲು ಸಾಮಾನ್ಯ ಬಳ್ಳಿ ಹರಡಿಕೊಂಡು ಬೆಳೆಯುತ್ತದೆ.
ಲಕ್ಷಣಗಳು
[ಬದಲಾಯಿಸಿ]ಎಲೆಗಳ ಜೋಡಣೆ ಪರ್ಯಾಯ, ಆಕಾರ ಅಂಡ ಅಥವಾ ಕೊಂಚ ಉದ್ದುದ್ದ. ಹೂಗಳು ಗೊಂಚಲು ಗೊಂಚಲಾಗಿರುತ್ತದೆ. ಅವುಗಳ ಬಣ್ಣ ಗುಲಾಬಿ ನಸುನೇರಳೆ ಅಥವಾ ಬಿಳಿ. ಕಾಯಿಗಳು ಸಣ್ಣಗೆ ಗುಂಡಗೆ ಇರುತ್ತದೆ. ಬಣ್ಣ ಕಿತ್ತಳೆ ಅಥವಾ ಕೆಂಪು.
ಉಪಯೋಗ
[ಬದಲಾಯಿಸಿ]ಉಗನಿಬಳ್ಳಿಯ ಕಾಂಡ ಉದ್ದವಾಗಿದ್ದು ಬಲು ಗಟ್ಟಿಯಾಗಿರುತ್ತದೆ. ಆದ್ದರಿಂದ ಇದನ್ನು ಹುಲ್ಲಿನ ಕಂತೆಗಳನ್ನು ಕಟ್ಟಲು ಹಗ್ಗದಂತೆ ಉಪಯೋಗಿಸುತ್ತಾರೆ. ಲೆ. ಎಲಿಪ್ಟಿಕದ ಎಲೆಗಳನ್ನು ಮೈಸೂರಿನ ಕೆಲವು ಭಾಗಗಳಲ್ಲಿ ಹಸಿರುಗೊಬ್ಬರವಾಗಿ ಉಪಯೋಗಿಸುವುದುಂಟು.
ಔಷಧವಾಗಿ
[ಬದಲಾಯಿಸಿ]ಲೆ. ಅಗ್ರಿಗೇಟ ಎಂಬುದರ ಎಲೆಗಳನ್ನು ಅರೆದು ತಯಾರಿಸಿದ ಲೇಪವನ್ನು ಕೆಮ್ಮು, ಗಂಟಲಿನ ಉರಿಯೂತಗಳ ಚಿಕಿತ್ಸೆಯಲ್ಲಿ ಗಂಟಲಿನ ಹೊರಭಾಗಕ್ಕೆ ಹಚ್ಚುತ್ತಾರೆ. ಲೆ. ಸಿಟೋಸ ಎಂಬ ಬಗೆಯ ಎಲೆಗಳನ್ನು ತರಕಾರಿಯಾಗಿಯೂ ಉಪಯೋಗಿಸುತ್ತಾರೆ.