ಈನಿಯಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

-ಲ್ಯಾಟಿನ್ ಭಾಷೆಯ ಮಹಾಕಾವ್ಯ. ವರ್ಜಿಲ್ ಕವಿ ಅದರ ಕರ್ತೃ. ಪುರಾತನ ಭಾರತಕ್ಕೆ ರಾಮಾಯಣ ಮಹಾಭಾರತಗಳು, ಗ್ರೀಸಿಗೆ ಹೋಮರನ ಇಲಿಯಡ್ ಮತ್ತು ಒಡೆಸ್ಸಿ, ಮಧ್ಯಯುಗದ ಇಟಲಿಗೆ ಡಾಂಟೆಡಿವೈನ್ ಕಾಮೆಡಿ, ಪ್ಯೂರಿಟನ್ ಯುಗದ ಇಂಗ್ಲೆಂಡಿನ ಮಿಲ್ಟನ್ನನ ಪ್ಯಾರಡೈಸ್‍ಲಾಸ್ಟ್ ಇದ್ದಂತೆ ಪ್ರಾಚೀನ ರೋಮಿನ ಸಾಮ್ರಾಜ್ಯವೈಭವದ ಯುಗಕ್ಕೆ ಈ ಕೃತಿ ಕನ್ನಡಿ.

ಕರ್ತೃ[ಬದಲಾಯಿಸಿ]

ವರ್ಜಿಲನ ಕಾಲ ಕ್ರಿ.ಪೂ. 70-19. ಅಂದಿನ ರೋಮನ್ ಚಕ್ರವರ್ತಿ ಆಗಸ್ಟಸ್ ಸೀಸ್ಸರ್. ಅಗಸ್ಟಸ್ ಮತ್ತು ಅವನ ಹಿರಿಯ ಬಂಧು ಜ್ಯೂಲಿಯಸ್ ಸೀಸರರು ರೋಮಿನ ಸಂಸ್ಥಾಪಕನೆಂದು ಪ್ರತೀತಿಯಿದ್ದ ಈನಿಯಸನ ವಂಶದವರೆಂದು ನಂಬಿಕೆ ವರ್ಜಿಲ್ ಹುಟ್ಟುವುದಕ್ಕೆ ಎಷ್ಟೋ ತಲೆಮಾರುಕಳ ಹಿಂದಿನಿಂದಲೂ ಇತ್ತು. ಈನಿಯಸ್ ಹೋಮರನ ಟ್ರಾಮರನ ಟ್ರ್ರಾಯ್ ನಗರದ ವೀರರಲ್ಲೊಬ್ಬ. ಅವನ ತಂದೆ ಅಂಖ್ಯೆಸೀಸ್; ತಾಯಿ ಗ್ರೀಕರ ಪ್ರಮುಖದೇವತೆಗಳಲ್ಲಿ ಒಬ್ಬಳಾದ ವೀನಸ್. ಈನಿಯಸ್ ಮಗ ಆಸ್ಕೇನಿಯಸ್ ಅಥವಾ ಜ್ಯೋಲಸ್. ಈ ಜ್ಯೂಲಿಯಸ್ ಮತ್ತು ಅಗಸ್ಟರ ಮನೆತನ ಒಗೆದು ಬಂದಿದ್ದುದೆಂಬ ಐತಿಹ್ಯವಿದವಿದವಿದ್ದಿತಾದ್ದರಿಂದ ವರ್ಜಿಲ್ ಆ ಕಥೆಯನ್ನು ನಿರೂಪಿಸಿದ. ಅಗಸ್ಟಸನ ರಾಜ್ಯವನ್ನೂ ರಾಜ್ಯಾಡಳಿತವನ್ನು ಸಮರ್ಥಿಸುವುದೇ ಅವನ ಉದ್ದೇಶವಾಗಿತ್ತು. ತನ್ನನ್ನು ಮತ್ತು ತನ್ನ ಕುಲದವರನ್ನು ಕುರಿತು ಕಾವ್ಯ ಲೇಖನಮಾಡಬೇಕೆಂಬ ಅಗಸ್ಟಸನೇ ವರ್ಜಿಲನಿಗೆ ಸಲಹೆ ಮಾಡಿದನೆಂಬ ನಂಬಿಕೆಯೂ ಉಂಟು. ವರ್ಜಿಲ್ ಗತಿಸಿದಾಗ ಕಾವ್ಯವನ್ನು ಇನ್ನೂ ಪೂರ್ತಿಗೊಳಿಸಿರಲಿಲ್ಲ. ಅದನ್ನು ನಾಶಪಡಿಸಬೇಕೆಂಬ ಅಪೇಷೆಯನ್ನು ತನ್ನ ಮರಣಕಾಲದಲ್ಲಿ ವ್ಯಕ್ತಪಡಿಸಿದ. ಆದರೆ ಅಗಸ್ಟಸ್ ಅದಕ್ಕೆ ಅವಕಾಶಕೊಡದೆ ಅದನ್ನು ಪ್ರಕಟಿಸಿದ. ಅಪೂರ್ಣಕೃತಿಯಾದರೂ ಅದಕ್ಕೆ ಪ್ರೇರಕವಾಗಿದ್ದ ದೇಶಭಕ್ತಿ ರಾಜಭಕ್ತಿಗಳ ಕಾರಣ ಅದಕ್ಕೆ ವಿದ್ಯಾವಂತರಾದ ಸಮಕಾಲೀನ ರೋಮನರಲ್ಲರಿಂದಲೂ ಮೆಚ್ಚಿಗೆ ದೊರೆಯಿತು. ಬಹು ಬೇಗ ಅದು ಪ್ರಖ್ಯಾತ ಕೃತಿಯಾಯಿತು. ಚರಿತ್ರೆಯ ಪುಟಗಳಲ್ಲಿ ಹುದುಗಿಹೋಗಿದ್ದ ರೋಮನ್ ಸಮ್ರಾಜ್ಯದ ವೈಭವವನ್ನು ಎತ್ತಿತೋರಿ, ವರ್ಣಿಸಿ ಜಗತ್ತಿಗೆ ಸಾರಿದ ಈ ಕಲಾಕೃತಿ ರೋಮಿನ ರಾಷ್ಟ್ರಕಾವ್ಯವಾದುದಲ್ಲದೆ ಪ್ರಪಂಚದ ಅತ್ಯಂತ ಪ್ರಸಿದ್ಧವೂ ಪ್ರಭಾವಶಲಿಯೂ ಆದ ರಚನೆಗಳಲ್ಲಿ ಒಂದೆಂದು ಪರಿಗಣಿತವಾಗಿ ಕೀರ್ತಿಪಡೆದಿದೆ.[೧]

ಈನಿಯಡಿನ ಕಥಾವಸ್ತು[ಬದಲಾಯಿಸಿ]

ಈನಿಯಡ್ ಹನ್ನೆರಡು ಕಾಂಡಗಳ ಕಾವ್ಯ. ಮೊದಲನೆಯ ಕಾಂಡದಲ್ಲಿ ಈನಿಯಸ್ ಮತ್ತು ಅವನ ಟ್ರೋಜನ್ (ಟ್ರಾಮ್ ನಗರದ) ಅನುಚರರು ಬಿರುಗಾಳಿಯ ಆಘಾತಕ್ಕೆ ಸಿಕ್ಕು ಆಫಿಕದ ಆರ್ಥೇಜಿನ ರಾಣಿ ಡೀಢೊ ವಿಧವೆ. ಅವಳು ಅವರನ್ನು ಆದರದಿಂದ ಬರಮಾಡಿಕೊಂಡು ಸತ್ಕರಿಸುತ್ತಾಳೆ. ಎರಡನೆಯ ಕಾಂಡದಲ್ಲಿ ಈನಿಯಸ್ ಅವಳಿಗೆ ಟ್ರೋಜನ್ ಯುದ್ದದ ಸಂಗತಿಗಳನ್ನೂ ಅಲ್ಲಿ ನಡೆದ ಮರದ ಕುದುರೆಯ ಪ್ರಸಂಗವನ್ನೂ ಶತ್ರಗಳು ಊರಿಗೆ ಬೆಂಕಿಯಿಟ್ಟು ನಾಶಪಡಿಸಿದ್ದನ್ನೂ ತಾನು ವೃದ್ಧ ತಂದೆ ಅಂಖೈಸೀಸನನ್ನು ಹೊತ್ತುಕೊಂಡು ಮಗನೊಡನೆ ಇತರ ಅನುಚರರನೇಕರೊಡನೆಯೂ ಉರಿಯುತ್ತಿದ್ದ ನಗರದಿಂದ ಹೊರಬಿದ್ದುದನ್ನು ವರ್ಣಿಸುತ್ತಾನೆ. ಅವರು ಬೆಂಕಿಬಿದ್ದಿದ್ದ ಪಟ್ಟಣದಿಂದ ತಪ್ಪಿಸಿಕೊಳ್ಳವ ಹೊಂದಲದಲ್ಲಿ ಅವನ ಹೆಂಡತಿ ಅಗ್ನಿಜ್ವಾಲೆಗೆ ಆಹುತಿಯಾದಳೆಂದು ತಿಳಿದುಬರುತ್ತದೆ. ಮೂರನೆಯ ಕಾಂಡದಲ್ಲಿ ಈನಿಯಸ್ ತಾನು ಮೆಡಿಟರೇನಿಯನ್ ಸಮುದ್ರದ ಮೇಲೆ ಪಶ್ಚಿಮಾಭಿಮುಖಿಯಾಗಿ ನೌಕಾಯಾನ ಮಾಡುತ್ತಿರುವಾಗ ನಡೆದ ಘಟನೆಗಳನ್ನು ಒಂದೊಂದಾಗಿ ವಿವರಿಸುತ್ತಾನೆ. ಅವಿಗಳಲ್ಲಿ ಮುಖ್ಯವಾದುದು ಅವನ ತಂದೆ ಆಂಖೈಸೀಸನ ಮರಣ. ನಾಲ್ಕನೆಯ ಮತ್ತು ಐದನೆಯ ಕಾಂಡದಲ್ಲಿ ಡೀಡೊ ಈನಿಯಸ್ಸಿನಲ್ಲಿ ಅನುರಕ್ತಳಾಗಿ ಅವನನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ಮಾಡುವ ವಫಲಪ್ರಯತ್ನದ ಕರುಣಜನಕವಾದ ಕಥೆ ನರೂಪಿತವಾಗಿದೆ. ದೇವತೆಗಳ ಪ್ರೀತಿಗೂ ಅನುಗ್ರಹಕ್ಕೂ ಪಾತ್ರನಾದ ಈನಿಯಸ್ ಶಾಶ್ವತ ಕೀರ್ತಿಶಾಲಿಯಾಗಬೇಕಾದರೆ ಕಾಥೇಜನ್ನು ಬಿಟ್ಟು ಇಟಲಿಗೆ ಬರಬೇಕು. ಆದಕಾರಣ ಅವರು ಅವನಲ್ಲಿ ಕರ್ತವ್ಯz ಅರಿವನ್ನು ಎಚ್ಚರಿಸಿ ಅವನ್ನು ಅಲ್ಲಿಂದ ಹೊರಡಿಸುತ್ತಾರೆ. ಈನಿಯಸ್ ಕಾರ್ಥೇಜನ್ನು ಬಿಟ್ಟು ಹೊರಡುತ್ತಾನೆ. ಈ ಸಂಗತಿ ತಿಳಿದಾಗ ಡೀಡೊ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಸಮುದ್ರದ ದಂಡೆಯಲ್ಲೇ ನಿರ್ಮಿತವಾದ ಚಿತೆಯ ಮೇಲೆ ಅವಳ ದೇಹ ದಹನವಾಗುತ್ತದೆ. ಸಾಯುವ ಮೊದಲು ಡೀಡೊ ತನ್ನ ದೇಶದವನೊಬ್ಬನ ಮುಂದೆ ರೋಮಿನ ಮೇಲೆ ಸೇಡು ತೀರಿಸಿಕೊಳ್ಳುವುದಾಗಿ ಹೇಳುತ್ತಾಳೆ. ರೋಮಿನ ಚರಿತ್ರೆಯಲ್ಲಿ ಕಾರ್ಥೇಜಿನ ಹ್ಯಾನಿಬಾಲನೊಡನೆ ನಡೆದ ಹೋರಾಟಗಳಿಗೆ ವರ್ಜಿಲ್ ಇಲ್ಲಿ ಚಮತ್ಕಾರವಾಗಿ ತಳಹದಿ ಹಾಕಿದ್ದಾನೆ. ಪೌರಾಣಿದ ಪ್ರಸಂಗಗಳಿಗೂ ಚಾರಿತ್ರಿಕ ಘಟನೆಗಳಿಗೂ ಹೀಗೆ ಸಂಬಂಧÀವನ್ನು ಕಲ್ಪಿಸಿ ತನ್ಮೂಲಕ ಕವಿ ತನ್ನ ಕಾವ್ಯದ ಅರ್ಥವನ್ನೂ ಬೆಲೆಯನ್ನೂ ಹೆಚ್ಚಿಸಿದ್ದಾನೆ. ವರ್ಜಿಲ್ ನಿರೂಪಿಸಿರುವ ಈನಿಯಸ್ ಮತ್ತು ಡೀಡೊರ ಪ್ರಣಯ ಕಥೆ ಯುರೋಪಿನ ರಮ್ಯಸಾಹಿತ್ಯದ ಅತ್ಯಂತ ಪ್ರಸಿದ್ಧ ಕಥೆಗಳಲ್ಲಿ ಒಂದು.

ಕಡಲಯಾನ ಮಾಡುತ್ತಿದ್ದಾಗ ಗತಿಸಿದ ತಂದೆಯ ಚರಮ ಸಂಸ್ಕಾರಗಳನ್ನು ನಡೆಸಲು ಈನಿಯಸ್ ಇಟಲಿಯನ್ನು ಸೇರುವವರಗೂ ಕಾಯಬೇಕಾಗುತ್ತದೆ. ಅಲ್ಲಿ ಅವನು ಅವನ್ನೆಲ್ಲಾ ಮುಗಿಸಿದ ಮೇಲೆ ತಂದೆಯನ್ನು ಕಂಡು ಬರಲು ಅಧೋಲೋಕಕ್ಕೆ ತೆರಳುತ್ತಾನೆ. ಅಲ್ಲಿ ಅವನಿಗೆ ಮುಂದೆ ಬರಲಿರುವ ರೋಮಿನ ವೀರರ ಮುಂಗಾಣ್ಕೆ ಲಭಿಸುತ್ತದೆ. ಅವರು ಸಾಧಿಸಲಿರುವ ಮಹತ್ಕಾರ್ಯಗಳ ಮುನ್ನರಿವೂ ಅವನಿಗುಂಟಾಗುತ್ತದೆ. ಆಂಖೈಸೀಸನ ಬಾಯಿಂದ ಬರುವ ಮಾತುಗಳು ಪ್ರಸಿದ್ಧವಾಗಿದೆ: ರೋಮನರೇ, ಇದನ್ನು ನೆನಪಿನಲ್ಲಿಟ್ಟುಕೊಳ್ಳಿ.. ನೀವು ಇತರ ರಾಷ್ಟ್ರಗಳ ಮೇಲೆ ಅಧಿಕಾರ ನಡೆಸುವಿರಿ. ಶಾಂತಿಸ್ಥಾಪನೆಯೇ ನಿಮಗೆ ವಾಡಿಕೆಯಾಗುವ ಕೆಲಸ. ನೀವು ನಿಮ್ಮನ್ನೆದುರಿಸಲು ಸೋತವರನ್ನು ಕಾಪಾಡುವಿರಿ. ದುರಹಂಕಾರಿಗಳನ್ನು ಬಗ್ಗಿಸಿ ಸದೆಬಡಿವಿರಿ.

ಏಳನೆಯ ಕಾಂಡದಲ್ಲಿ ಲ್ಯಾಟಿನಿ ಪ್ರದೇಶದ ದೊರೆ ಲ್ಯಾಟಿನಸ್ ಈನಿಯಸ್ಸನನ್ನು ಕರೆಸಿಕೊಂಡು ಸತ್ಕರಿಸಿ ಅವನಿಗೆ ತನ್ನ ಮಗಳನ್ನು ಕೊಟ್ಟು ಮದುವೆಮಾಡುವುದಾಗಿ ಹೇಳುತ್ತಾನೆ. ಆದರೆ ಹುಡುಗಿಯ ತಾಯಿ ಅವಳನ್ನು ಟರ್ನಸ್ ಎಂಬುವನಿಗೆ ಕೊಡುವುದಾಗಿ ವಾಗ್ದಾನ ಮಾಡಿದ್ದಾಳೆ. ಟರ್ನಸ್ ದೊಡ್ಡದೊಂದು ಸೇನೆಯನ್ನು ಕಟ್ಟಿ ಈನಿಯಸ್ಸನನ್ನು ವಿರೋಧಿಸುತ್ತಾನೆ. ಇರ್ಕಡೆಯವರೋ ಮಾಡುವ ಸಿದ್ದತೆ ಎಂಟನೆಯ ಕಾಂಡದ ವಸ್ತು. ಸನ್ನಿವೇಶ ಹೀಗಿರುವಾಗ ಈನಿಯಸ್ ಬರುತ್ತಾನೆ. ಈನಿಯಸ್ ಇಲ್ಲದಿರುವ ಸಮಯವನ್ನೇ ಕಾಯುತ್ತಿರುವ ಟರ್ನಸ್ ಟ್ರೋಜನರ ಶಿಬಿರಕ್ಕೆ ದಾಳಿಯಿಟ್ಟು ಬೆಂಕಿ ಹಚ್ಚುತ್ತಾನೆ. ಇದು ನಡೆವುದು ಒಂಬತ್ತನೆಯ ಖಾಂಡದಲ್ಲಿ ಹತ್ತು-ಹನ್ನೊಂದನೆಯ ಕಾಂಡಗಳಲ್ಲಿ ಟರ್ನಸ್ಸನ ಸೇನೆಗೂ ಈನಿಯಸ್ಸನ ಕಡೆಯುವರೆಗೂ ನಡೆಯುವ ಯುದ್ದದ ವರ್ಣನೆ ಬರುತ್ತದೆ. ಹನ್ನೆರಡನೆಯ ಕಾಂಡ ಈನಿಯಸ್ಸಗೂ ಟÀರ್ನಸ್ಸಿಗೂ ನದೆಯುವ ದ್ವಂದ್ವಯುದ್ಧದ ವರ್ಣನೆ. ಆ ಯುದ್ದದಲ್ಲಿ ಟರ್ನಸ್ ಮೃತನಾಗುತ್ತಾನೆ. ರೋಮ್ ರಾಜ್ಯದ ಸ್ಥಪನೆಗೂ ರೋಮಿನ ಹಿರಿತನಕ್ಕೂ ಹಾದಿ ಸುಗುಮವಾಗುತ್ತದೆ.

ಮಹತ್ವ[ಬದಲಾಯಿಸಿ]

ಈನಿಯಡಿನ ಮೊದಲ ಆರು ಕಾಂಡಗಳು ಹೋಮರನ ಒಡಿಸ್ಸಿಯ ಮೊದಲ ಭಾಗದ ಅನುಕರಣೆ. ಅಲ್ಲಿರುವಂತೆಯೇ ಇಲ್ಲೂ ಕಥಾನಾಯಕ ಅನೇಕ ಅಡಚಣೆಗಳನ್ನು ಎದುರಿಸಿ ಗೆದ್ದು ಏಳು ವರ್ಷಗಳ ಅಲೆದಾಟದ ಆನಂತರ ಹತ್ತು ವರ್ಷಗಳಾದ ಮೇಲೆ ಒಡಿಸ್ಸಿಯಸ್ ತನ್ನ ತೌರನಾಡು ಇಥಾಕಕ್ಕೆ ಹಿಂತಿರುಗಿ ಬರುಮಂತೆ — ಇಟಲಿಗೆ ಬರುತ್ತಾನೆ. ಕೊನೆಯ ಆರು ಕಾಂಡಗಳಲ್ಲಿ ಹೋಮರನ ಇಲಿಯಡ್ ಕಾವ್ಯದ ಯುದ್ಧ ಟ್ರೋಜನರನ್ನು ಸೋಲಿಸಿದ್ದಂತೆ ಲೇಷಿಯಂ ಕದನದಲ್ಲಿ ಟೋಜನರು ಇಟಲಿಯವರನ್ನು ಸೋಲಿಸುತ್ತಾರೆ. ಹೀಗೆ ಗ್ರೀಕ್ ಕೃತಿಗಳೆರಡರ ಭಾಗಗಳನ್ನು ತೆಗೆದುಕೊಂಡು ಅವುಗಳ ಮಾದರಿಯ ಮೇಲೆ ಸನ್ನದೇ ಆದ ಐಕ್ಯವಿರುವ ನೂತನ ಕೃತಿಯೂಂದನ್ನು ರಚಿಸುವ ಪದ್ದತಿ ಲ್ಯಾಟಿನ್ ಭಾಷೆಯಲ್ಲಿ ವರ್ಜಿಲನಿಗೆ ಮುನ್ನವೇ ಬೆಳೆದಿತ್ತು. ಆದರೆ ಈನಿಯಡ್ ಕೇವಲ ತೇಪೆಯ ಕಲಸವೇನೂ ಅಲ್ಲ. ಎಲ್ಲೆಲ್ಲೂ ದೂರೆತ ಮನ್ನಣೆಯೇ ಇದಕ್ಕೆ ಸಾಕ್ಷಿ. ರಚಿತವಾದಂದಿನಿಂದಲೂ ಅದು ಎಲ್ಲ ವರ್ಗದ ಜನರ ಗಮನವನ್ನೂಸೆಳೆದು ಎಲ್ಲರ ಮೆಚ್ಷಚಿಕೆಗೂ ಪಾತ್ರವಾಯಿತು. ಇತರ ರೋಮನ್ ಕವಿಗಳಿಗೆ ಮಾತ್ರವಲ್ಲದೆ ಡಾಂಟೆ, ಸ್ಪೆನ್ಸರ್, ಮಿಲ್ಟನ್ ಮೊದಲಾದ ಬೇರೆಯ ದೇಶಗಳ ಕವಿಗಳಿಗೂ ಮಾದರಿಯಾಯಿತು. ಒಂದು ಕೃತಿ ಪಂಡಿತಮಾಮರರೆಲ್ಲರಿಗೂ ಪ್ರಿಯವಾಗಬೇಕಾದರೆ ಅದರಲ್ಲಿ ನಿಜವಾದ ಸತ್ತ್ವವಿರಲೇಬೇಕು. ಈನಿಯಡಿನಲ್ಲಿ ಹಲವು ದೋಷಗಳನ್ನು ಬೆದಕಿತೋರಿಸಲು ಸಾಧ್ಯ. ಆದರೂ ಅದು ಜಗತ್ತಿನ ಅತ್ಯತ್ತಮ ಮಹಾಕಾವ್ಯಗಳಲ್ಲಿ ಒಂದೆಂಬುದು ನಿಸ್ಸಂದೇಹ.

ಮಹಾಕಾವ್ಯಗಳಲ್ಲಿ ಎರಡು ಬಗೆಯುಂಟು. ಆನತೆಯಿಂದ ಮೂಡಿಬಂದ ಕಾವ್ಯ ಒಂದು, ಕವಿಯೊಬ್ಬನು ಸೃಷ್ಟಿಸಿದ ಕಾವ್ಯ ಇನ್ನೊಂದು. ಸಾಮಾನ್ಯವಾಗಿ ಮೊದಲನೆಯ ವರ್ಗದ ಕಾವ್ಯ ಇಂಥದೇ ನಿಷ್ಕ್ರಷ್ಟವಾಗಿ ಹೇಳುವುದು ಕಷ್ಟ. ಎರಡನೆಯ ಜಾತಿಯ ಕಾವ್ಯ ಚಾರಿತ್ರಿಕ ಅವಿಯೊಬ್ಬನಿಂದ ಯಾವುದೋ ಒಂದು ಯುಗದಲ್ಲಿ ಯಾವುದೋ ಒಂದು ಉದ್ದೇಶದಿಂದ ರಚಿತವಾಗಿರುತ್ತz. ಮೊದಲನೆಯ ತರದ ಕಾವ್ಯದಲ್ಲಿರುವಂತೆ ಇದರಲ್ಲಿ ಒಂದು ಯುದ್ಧದ ಮತ್ತು ಆ ಯುದ್ಧದಲ್ಲಿ ಪ್ರಸಿದ್ಧರಾದ ವೀರರ ವರ್ಣನೆಯಷ್ಟೇ ಇರುವುದಿಲ್ಲ. ಅವಿಯ ಮನೋಧರ್ಮ, ಆಲೋಚನೆಗಳು ಇದರಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿರುತ್ತದೆ. ಈನಿಯಡ್ ಈ ಎರಡನೆಯ ವರ್ಗಕ್ಕೆ ಸೇರಿದ ಮಹಾಕಾವ್ಯ. ಇದರ ರಚನೆಯಲ್ಲಿ ಉದ್ದೇಶ ರೋಮಿನ ಹಿರಿಮೆಯನ್ನು ಎತ್ತಿ ಹಿಡಿಯುವುದಾಗಿತ್ತು. ಹಿಂದಿನಿಂದಲೂ ದೇವಾದಿಗಳು ರೋಮಿನ ಔನ್ನತ್ಯ ಸಾಧನೆಯಲ್ಲಿ ಆಸಕ್ತರಾಗಿದ್ದರೆಂಬುದನ್ನೂ ರೋಮನ್ ಸಮ್ರಾಜ್ಯದ ಹೆಮ್ಮರ ಬಹುಕಾಲದ ಬೆಳೆವಣಿಗೆಯ ಫಲವೆಂಬುದನ್ನೂ ತೋರಿಸುವುದಾಗಿತ್ತು. ಅದನ್ನು ಬರೆಯುವಾಗ ಅವನು ಹೋಮರನ ಮಹಾಕಾವ್ಯದ ಸಂಗತಿಗಳನ್ನೂ ಲಕ್ಷಣಗಳನ್ನೂ ಬಲಸಿಕೊಂಡದ್ದಲ್ಲದೆ ಜನರಲ್ಲಿ ಪ್ರಚಾರದಲ್ಲಿದ್ದ ಎಷ್ಟೋ ಕಥೆಗಳನ್ನೂ ಐತಿಹ್ಯಗಳನ್ನೂ ವಾಸ್ತವವಾಗಿ ನಡೆದಿದ್ದ ಚಾರಿತ್ರಿಕ ಘಟನೆಗಳನ್ನೂ ಉಪಯೋಗಿಸಿಕೊಂಡಿದ್ದಾನೆ. ಹಿದೆ ನಡೆದಿದ್ದುದನ್ನೂ ನಡೆದಿದ್ದಿತೆಂದು ಹೇಳಲಾಗುತ್ತಿದ್ದುದನ್ನೂ ವರ್ಣಿಸಿರುವಿದಲ್ಲದೆ ಮುಂದೆ ನಡೆಯಬಹುದಾದುದನ್ನೂ ತನ್ನ ಪಾತ್ರಗಳ ಬಾಯಲ್ಲಿ ಹೇಳಿಸಿದ್ದಾನೆ.ಗ್ರೀಸಿನ ಚರಿತ್ರೆ ಮತ್ತು ಐತಿಹ್ಯಗಳ ಜೊತೆಗೆ ರೋಮಿನ ಜನತೆಯ ಸ್ಮøತಿ ಭಂಡಾರದಲ್ಲಿದ್ದ ಕಥೆಗಳನ್ನೂ ನಂಬಿಕೆಗಳನ್ನೂ ಸೇರಿಸಿ ಹೆಣೆದಿದ್ದಾನೆ. ಶಂಪ್ರದಾಯದ ನಂಬಿಕೆಗಳು ನೂತನ ಆಲೋಚನೆಗಳು; ತಲೆತಲಾಂತರವಾಗಿ ಬಂದಿದ್ದ ಮತಧರ್ಮ. ಹೊಸ ತತ್ತ್ವದೃಷ್ಟಿ, ಪ್ರಾಚೀನತೆ, ನವ್ಯತೆ, ರಾಷ್ಟ್ರಚರಿತೆಯ ವೈಭವದ ವರ್ಣನೆ, ವೈಯಕ್ತಿಕ ರಾಗಭಾವಗಳ ನಿರೂಪಣೆ — ಇವಲ್ಲವೂ ಅವನ ಕಾವ್ಯದಲ್ಲಿ ಹಾಸುಹೊಕ್ಕಾಗಿ ಬೆರೆತಿವೆ. ಇದರ ಪರಿಣಮವಾಗಿ ಅದು ಬಣ್ಣಬಣ್ಣದ ಚಿತ್ರಬಾಹುಳ್ಯದಿಂದ ಶೋಭಿಸುವ ಸುಂದರ ಕೃತಿಯಾಗಿದೆ; ಭಿನ್ನ ಆಸಕ್ತಿಗಳ, ಭಿನ್ನ ದೃಷ್ಟಿಗಳ ಓದುಗರೆಲ್ಲರಿಗೂ ಆಕರ್ಷಕವಾಗಿದೆ. ಅದರ ಕಥನ ಕಲಾವ್ಯಖರಿ, ಚಿತ್ರಣಕೌಶಲ, ವರ್ಣನಾನೈಪುಣ್ಯ, ನಾದಮಾಧುರ್ಯ — ಈ ಆಕರ್ಷಣೆಗೆ ಮುಖ್ಯ ಕಾರಣಗಳು.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಈನಿಯಡ್&oldid=908009" ಇಂದ ಪಡೆಯಲ್ಪಟ್ಟಿದೆ