ವಿಷಯಕ್ಕೆ ಹೋಗು

ಈಥರ್‍ಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈಥರ್‍ನನ್ನು ಗುರುತಿಸುವ ಮೂಲ ರೂಪ

ಆಲ್ಕೋಹಾಲಿನಲ್ಲಿನ ಹೈಡ್ರಾಕ್ಸಿಲ್ ಪುಂಜದ ಹೈಡ್ರೊಜನ್ನನ್ನು ಆಲ್ಕೈಲ್, ಅರೈಲ ಅಥವಾ ಸೈಕ್ಲೋಆಲ್ಕೈಲ್ ಪುಂಜವೊಂದರಿಂದ ಆದೇಶಿಸಿದಾಗ ದೊರೆಯುವುದು ಈಥರ್.

ತಯಾರಿಸುವ ವಿಧಾನ

[ಬದಲಾಯಿಸಿ]

ಇವನ್ನು ತಯಾರಿಸಲು ಆಲ್ಕೋಹಾಲುಗಳೇ ಮೂಲವಸ್ತುಗಳು. ಈಥರುಗಳು ಸ್ವಲ್ಪ ಹೆಚ್ಚು ಕಡಿಮೆ ಆಲ್ಕೇನುಗಳಷ್ಟೇ ಜಡವಸ್ತುಗಳು. ಸಾಮಾನ್ಯವಾಗಿ ಈಥರುಗಳು ಭಾಗವಹಿಸುವ ಎಲ್ಲ ಕ್ರಿಯೆಗಳಲ್ಲೂ ಈಥರ್ ಬಂಧನದ ಛೇದವಾಗುತ್ತದೆ. ತೀವ್ರ ಉತ್ಕರ್ಷಣ ಪರಿಸ್ಥಿತಿಗಳಲ್ಲಿ ಅಣುಛೇದಗೊಂಡು ಈಥರುಗಳು ಆಲ್ಡಿಹೈಡುಗಳನ್ನು ನೀಡುತ್ತವೆ. ಆಕ್ಸಿಜನ್ ಸಂಪರ್ಕದಲ್ಲಿ ಈಥರುಗಳು ಸ್ಪೋಟಕ ಪೆರಾಕ್ಸೈಡುಗಳಾಗಿ ಮಾರ್ಪಡುತ್ತವೆ. ಆದ್ದರಿಂದ ಈಥರುಗಳ ತಯಾರಿಕೆ ಮತ್ತು ಶುದ್ಧೀಕರಣಗಳಲ್ಲಿ ಜಾಗರೂಕತೆ ಆವಶ್ಯಕ. ಸಾಮಾನ್ಯವಾಗಿ ಕೇವಲ ಈಥರ್ ಎಂದೆನಿಸಿಕೊಳ್ಳುವ ಸಂಯುಕ್ತ ಡೈಈಥೈಲ್ ಈಥರ್ (C2H5-O-C2H5). ಎಥಿಲೀನ್ ಅಥವಾ ಎಥನಾಲಿನಿಂದ ಇದನ್ನು ತಯಾರಿಸಬಹುದು. ಇದರ ಮುಖ್ಯ ಉಪಯೋಗಗಳು ವೇದನಾ ಪ್ರತಿಬಂಧಕವಾಗಿ ಮತ್ತು ಸಾರ್ವತ್ರಿಕ ಲೀನಕಾರಿಯಾಗಿ.[]

ಕೆಲವು ಮುಖ್ಯ ಆಲ್ಕೈಲ್ ಈಥರ್‍ಗಳು

[ಬದಲಾಯಿಸಿ]
ಈಥರ್ ರಚನೆ ಕರಗುವ ಬಿಂದು (°C) ಕುದಿಯುವ ಬಿಂದು (°C) ಹೈಡ್ರೋಜನ್‍ನಲ್ಲಿ ಕರಗುವ ಸಾಮರ್ಥ್ಯ2O ಡೈಪೋಲ್ ಮೊಮೆಂಟ್ (D)
Dimethyl ether CH3–O–CH3 −138.5 −23.0 70 g 1.30
Diethyl ether CH3CH2–O–CH2CH3 −116.3 34.4 69 g 1.14
Tetrahydrofuran O(CH2)4 −108.4 66.0 Miscible 1.74
Dioxane O(C2H4)2O 11.8 101.3 Miscible 0.45

 

ಉಲ್ಲೇಖಗಳು

[ಬದಲಾಯಿಸಿ]
  1. https://www.britannica.com/science/ether-chemical-compound