ಇ-ಕಾಮರ್ಸ್ ಪಾವತಿ ವ್ಯವಸ್ಥೆ
ಇ-ಕಾಮರ್ಸ್ ಪಾವತಿ ವ್ಯವಸ್ಥೆ (ಅಥವಾ ಎಲೆಕ್ಟ್ರಾನಿಕ್ ಪಾವತಿ ವ್ಯವಸ್ಥೆ) ಆನ್ಲೈನ್ ವರ್ಗಾವಣೆಗಾಗಿ ಎಲೆಕ್ಟ್ರಾನಿಕ್ ಪಾವತಿಯನ್ನು ಸ್ವೀಕರಿಸಲು ಅನುಕೂಲ ಮಾಡಿಕೊಡುತ್ತದೆ. ಇದನ್ನು ಎಲೆಕ್ಟ್ರಾನಿಕ್ ಡೇಟಾ ಇಂಟರ್ಚೇಂಜ್ (ಇಡಿಐ) ನ ಉಪ ಸಂಯೋಜನೆ ಎಂದೂ ಕರೆಯಲಾಗುತ್ತದೆ. ಅಂತರಜಾಲ ಆಧಾರಿತ ಖರೀದಿ ಮತ್ತು ಬ್ಯಾಂಕಿಂಗ್‌ನ ವ್ಯಾಪಕ ಬಳಕೆಯಿಂದಾಗಿ ಇ-ಕಾಮರ್ಸ್ ಪಾವತಿ ವ್ಯವಸ್ಥೆಗಳು ಹೆಚ್ಚು ಜನಪ್ರಿಯವಾಗಿವೆ.
ಇ-ಕಾಮರ್ಸ್ ವಹಿವಾಟುಗಳು ಹೆಚ್ಛಾಗಿ ಕ್ರೆಡಿಟ್ ಕಾರ್ಡ್‌ಗಳ ಮೂಲಕ ನಡೆಯುತ್ತದೆ. ೨೦೦೮ ರ ಹೊತ್ತಿಗೆ ಉತ್ತರ ಅಮೆರಿಕಾದಲ್ಲಿ ಸುಮಾರು ೯೦% ಆನ್ಲೈನ್ ಚಿಲ್ಲರೆ ವಹಿವಾಟುಗಳನ್ನು ಈ ಪಾವತಿ ಪ್ರಕಾರದೊಂದಿಗೆ ಮಾಡಲಾಯಿತು.[೧] ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ವ್ಯಾಪಕ ಬಳಕೆಯಿಂದಾಗಿ ಆನ್ಲೈನ್ ಚಿಲ್ಲರೆ ವ್ಯಾಪಾರಿಗೆ ಅವುಗಳನ್ನು ಬೆಂಬಲಿಸದೆ ಕಾರ್ಯನಿರ್ವಹಿಸುವುದು ಕಷ್ಟ.[೧] ಕ್ರೆಡಿಟ್ ಮತ್ತು ಡೆಬಿಟ್ ಸೇವೆ ನಡೆಸುವ ದೇಶಗಳಲ್ಲಿ ಬ್ಯಾಂಕ್ ಮತ್ತು ಹಣಕಾಸು ನಿಯಂತ್ರಣಕ್ಕೆ ಅನುಗುಣವಾಗಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ವಿತರಕರು (ಉದಾ. ವೀಸಾ ಮತ್ತು ಮಾಸ್ಟರ್ ಕಾರ್ಡ್) ನಿಗದಿಪಡಿಸಿದ ಕಠಿಣ ನಿಯಮಗಳನ್ನು ಆನ್ ಲೈನ್ ವ್ಯಾಪಾರಿಗಳು ಅನುಸರಿಸಬೇಕು.[೨]
ಇ-ಕಾಮರ್ಸ್ ಪಾವತಿ ವ್ಯವಸ್ಥೆಯು ಹೆಚ್ಚಾಗಿ ಬಿ ೨ ಬಿ ರೀತಿ ಅನ್ನು ಬಳಸುತ್ತದೆ. ಸಾಂಪ್ರದಾಯಿಕ ಬಿ ೨ ಬಿ ಇ-ಕಾಮರ್ಸ್ ಮಾದರಿಯ ಅಡಿಯಲ್ಲಿ ವಹಿವಾಟುಗಳ ಪಾವತಿ ಪ್ರಕ್ರಿಯೆಯಲ್ಲಿ ಗ್ರಾಹಕರ ಮಾಹಿತಿ, ವ್ಯವಹಾರ ಮಾಹಿತಿ ಮತ್ತು ಪಾವತಿ ಮಾಹಿತಿಯ ಸುರಕ್ಷತೆಯ ಬಗ್ಗೆ ಕಾಳಜಿವಹಿಸುತ್ತದೆ.[೩]
ಸಾರ್ವಜನಿಕ ಅಂತರಜಾಲದಲ್ಲಿ ಪ್ರವೇಶಿಸಬಹುದಾದ ಬಹುಪಾಲು ಪಾವತಿ ವ್ಯವಸ್ಥೆಗಳಿಗೆ ದತ್ತಾಂಶ ದೃಢೀಕರಣ (ಸ್ವೀಕರಿಸುವ ತುದಿಯಲ್ಲಿರುವ ಹಣಕಾಸು ಸಂಸ್ಥೆ), ಅಂಕಿ ಸಂಖ್ಯೆ ಸಮಗ್ರತೆ ಮತ್ತು ಸಾರ್ವಜನಿಕ ಜಾಲದಲ್ಲಿ ವಿನಿಮಯವಾದ ಎಲೆಕ್ಟ್ರಾನಿಕ್ ಮಾಹಿತಿಯ ಗೌಪ್ಯತೆಯು ಸಾರ್ವಜನಿಕ ಮೂಲಸೌಕರ್ಯ (ಪಿಕೆಐ) ಒದಗಿಸುವ ಅಧಿಕೃತ ಪ್ರಮಾಣಪತ್ರ ಪ್ರಾಧಿಕಾರದಿಂದ (ಸಿಎ) ಪ್ರಮಾಣಪತ್ರವನ್ನು ಪಡೆಯುವುದನ್ನು ಒಳಗೊಂಡಿರುತ್ತದೆ. ಸಾರ್ವಜನಿಕ ಜಾಲಗಳ ಮೂಲಕ ನಡೆಸುವ ವಹಿವಾಟಿನ ಭಾಗವನ್ನು ರಕ್ಷಿಸಲು ಸಾರಿಗೆ ಪದರ ಭದ್ರತೆ (ಟಿಎಲ್ಎಸ್) ಜಾರಿಯಲ್ಲಿದ್ದರೂ ಸಹ ಗ್ರಾಹಕ-ಮುಖಾಮುಖಿ ಅಂತರಜಾಲ ತಾಣವನ್ನು ಹೆಚ್ಚಿನ ಎಚ್ಚರಿಕೆಯಿಂದ ಸಂಕೇತಗೊಳಿಸಬೇಕು.
ಉತ್ತರ ಅಮೆರಿಕಾದಲ್ಲಿ ಇದರ ವ್ಯಾಪಕ ಬಳಕೆಯ ಹೊರತಾಗಿಯೂ ಚೀನಾ ಮತ್ತು ಭಾರತದಂತಹ ಅನೇಕ ದೇಶಗಳು ಖಾತ್ರಿ ಕಾಗದದ ಭದ್ರತೆಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು.[೪] ಅನೇಕ ಮಧ್ಯವರ್ತಿಗಳು ಗ್ರಾಹಕರಿಗೆ ತ್ವರಿತವಾಗಿ ಖಾತೆಯನ್ನು ಸ್ಥಾಪಿಸಲು ಮತ್ತು ತಮ್ಮ ಆನ್-ಲೈನ್ ಖಾತೆಗಳು ಮತ್ತು ಸಾಂಪ್ರದಾಯಿಕ ಬ್ಯಾಂಕ್ ಖಾತೆಗಳ ನಡುವೆ ಹಣವನ್ನು ವರ್ಗಾಯಿಸಲು ಅನುಮತಿಸುತ್ತವೆ.
ಮಾಹಿತಿ ಸುರಕ್ಷತಾ ಕ್ರಮಗಳನ್ನು ನಿರ್ವಹಿಸುವ ದೊಡ್ಡ ಹಣಕಾಸು ಸಂಸ್ಥೆಗಳ ಅಂತರ್ಗತ ಮಾಹಿತಿ ಅಸಮಾನತೆಯು ಹಣವನ್ನು ದುರುಪಯೋಗಪಡಿಸಿಕೊಂಡಾಗ ಅಂತಿಮ ಬಳಕೆದಾರರಿಗೆ ವ್ಯವಸ್ಥೆಯ ಬಗ್ಗೆ ಕಡಿಮೆ ಒಳನೋಟವನ್ನು ನೀಡುತ್ತದೆ. ಅತೃಪ್ತ ಬಳಕೆದಾರರು ಆಗಾಗ ಮಧ್ಯವರ್ತಿಗಳ ಅಸಡ್ಡೆ ಅಥವಾ ತಪ್ಪು ನಡವಳಿಕೆ ಬಗ್ಗೆ ಆರೋಪಿಸುತ್ತಾರೆ.
ಆನ್ ಲೈನ್ ಪಾವತಿಯ ವಿಧಾನಗಳು
[ಬದಲಾಯಿಸಿ]ಆನ್ಲೈನ್ ಕ್ರೆಡಿಟ್ ಕಾರ್ಡ್‌ಗಳ ವಹಿವಾಟುಗಳು, ಇ-ವ್ಯಾಲೆಟ್ಗಳು, ಇ-ನಗದು ಮತ್ತು ನಿಸ್ತಂತು ಪಾವತಿ ವ್ಯವಸ್ಥೆಯಂತಹ ವಿವಿಧ ರೀತಿಯ ಎಲೆಕ್ಟ್ರಾನಿಕ್ ಪಾವತಿ ವಿಧಾನಗಳಿವೆ.[೫] ಕ್ರೆಡಿಟ್ ಕಾರ್ಡ್‌ಗಳು ಆನ್ ಲೈನ್ ಪಾವತಿಯ ಜನಪ್ರಿಯ ವಿಧಾನವಾಗಿದೆ.
ಬ್ಯಾಂಕ್ ಪಾವತಿಗಳು
[ಬದಲಾಯಿಸಿ]ಇದು ಯಾವುದೇ ರೀತಿಯ ಭೌತಿಕ ಕಾಗದವನ್ನು ಒಳಗೊಂಡಿರದ ವ್ಯವಸ್ಥೆಯಾಗಿದೆ. ಅಂತರಜಾಲ ಬ್ಯಾಂಕಿಂಗ್ ನೊಂದಿಗೆ ಸಕ್ರಿಯಗೊಳಿಸಿದ ಖಾತೆಗಳನ್ನು ಹೊಂದಿರುವ ಗ್ರಾಹಕರು ಇದನ್ನು ಬಳಸುತ್ತಾರೆ. ಕ್ರೆಡಿಟ್ ಕಾರ್ಡ್‌ಗಳ ಸಂಖ್ಯೆಗಳನ್ನು ಬಳಸುವುದಕ್ಕಿಂತ ಇದು ಸಾಮಾನ್ಯವಾಗಿ ಹೆಚ್ಛು ಸುರಕ್ಷಿತವಾಗಿದೆ ಏಕೆಂದರೆ ಕ್ರೆಡಿಟ್ ಕಾರ್ಡ್‌ಗಳ ಸಂಖ್ಯೆಗಳಿಗೆ ಹೋಲಿಸಿದರೆ ಹ್ಯಾಕರ್ ಗಳು ಲಾಗಿನ್ ರುಜುವಾತುಗಳನ್ನು ಪಡೆಯುವುದು ಹೆಚ್ಚು ಕಷ್ಟ.
ಮೊಬೈಲ್ ಮನಿ ವ್ಯಾಲೆಟ್ ಗಳು
[ಬದಲಾಯಿಸಿ]ಕೆಲವು ಅಭಿವೃದ್ಧಿಶೀಲ ದೇಶಗಳಲ್ಲಿ ಅನೇಕ ಜನರಿಗೆ ಬ್ಯಾಂಕಿಂಗ್ ಸೌಲಭ್ಯಗಳು ಲಭ್ಯವಿಲ್ಲ. ಭಾರತದ ಉದಾಹರಣೆಯನ್ನು ತೆಗೆದುಕೊಂಡರೆ ಸಕ್ರಿಯ ಬ್ಯಾಂಕ್ ಖಾತೆಗಳನ್ನು ಹೊಂದಿರುವ ಜನರಿಗಿಂತ ಹೆಚ್ಚಿನ ಮೊಬೈಲ್ ಫೋನ್ ಬಳಕೆದಾರರಿದ್ದಾರೆ. ದೂರಸಂಪರ್ಕ ನಿರ್ವಾಹಕರು ತಮ್ಮ ಸ್ಥಳಗಳಲ್ಲಿ ಮೊಬೈಲ್ ಮನಿ ವ್ಯಾಲೆಟ್‌ಗಳನ್ನು ನೀಡಲು ಪ್ರಾರಂಭಿಸಿದ್ದಾರೆ.[೫]
ಇದನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ Turban, E. King, D. McKay, J. Marshall, P. Lee, J & Vielhand, D. (2008). Electronic Commerce 2008: A Managerial Perspective. London: Pearson Education Ltd. p.550
- ↑ Mastercard: Security Rules and Procedures-Merchant Edition (PDF). 2009. Retrieved: May 12, 2009
- ↑ Zhou, Kai; Zhao, Weibin; Zhou, Huiyan (2022-01-01). "Research on model mechanism of B2B transaction based on delivery means of blockchain". International Journal of Technology, Policy and Management. 22 (1–2): 114–140. doi:10.1504/IJTPM.2022.122560. ISSN 1468-4322.
- ↑ Turban, E. King, D. McKay, J. Marshall, P. Lee, J & Vielhand, D. (2008). Electronic Commerce 2008: A Managerial Perspective. London: Pearson Education Ltd. p.554
- ↑ ೫.೦ ೫.೧ Fatonah, S; Yulandari, A; Wibowo, F W (December 2018). "A Review of E-Payment System in E-Commerce". Journal of Physics: Conference Series. 1140 (1): 012033. Bibcode:2018JPhCS1140a2033F. doi:10.1088/1742-6596/1140/1/012033. ISSN 1742-6588. S2CID 169710429.