ವಿಷಯಕ್ಕೆ ಹೋಗು

ಇಷ್ಟಲಿಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಇಷ್ಟಲಿಂಗವೆಂದರೇನು? ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮುಕುಟ ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ ಕೂಡಲಸಂಗಮದೇವಯ್ಯ ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ. ಲಿಂಗಾಯತ ಧರ್ಮದ ಮುಖ್ಯ ಲಾಂಛನ ಇಷ್ಟಲಿಂಗ ಗುರುವಿನಿಂದ ದೀಕ್ಷೆಯ ಮೂಲಕವಾಗಿ ಪಡೆದುಕೊಂಡು ದೇಹದ ಮೇಲೆ ಸದಾಕಾಲವೂ ಧರಿಸಿಕೊಂಡು ಪೂಜಿಸಲ್ಪಡುವ ಗೋಲಾಕಾರದ ಕಪ್ಪು ವರ್ಣದ ಲಾಂಛನವಿದು. ಅತ್ಯಂತ ಹೊಳಪಿನ ಕಪ್ಪು ಹೊರ ಮೈ ಇರುವ ಗೋಲಾಕಾರದ ಈ ಕುರುಹಿಗೆ ಇಷ್ಟಲಿಂಗವೆಂಬ ಹೆಸರು ಏಕೆ ಕೊಡಲ್ಪಟ್ಟಿರಬಹುದು? ಭಾರತೀಯ ಪರಂಪರೆಯಲ್ಲಿ ಅತಿ ಮುಖ್ಯ ವಾಹಿನಿಯಾಗಿರುವ ಹಿಂದೂ ಸಂಸ್ಕೃತಿಯಲ್ಲಿ ’ಇಷ್ಟ ದೈವ’ ಎಂಬ ಪದವು ಬಳಕೆಯಾಗುವುದುಂಟು ಆ ಇಷ್ಟ ದೈವಗಳು ಬೇರೆ ಬೇರೆಯಾಗಿ ಇರುವುದೇ ಅಲ್ಲದೆ ಅವುಗಳ ಮತ್ತು ಭಕ್ತನ ಸಂಬಂಧ ವೈಯುಕ್ತಿಕವೂ, ಪ್ರತ್ಯೇಕವೂ ಆಗಿರಬಹುದು. ಒಬ್ಬೊಬ್ಬರ ಇಷ್ಟ ದೈವ ಅವರ ವೈಯುಕ್ತಿಕ ಇಷ್ಟಾನಿಷ್ಟಗಳಿಗೆ ಸಂಬಂಧಿಸಿದಂತೆ ಒಂದೊಂದಿದ್ದು ಒಂದೇ ಮನೆಯವರಲ್ಲಿ ಬೇರೆ ಬೇರೆ ಇಷ್ಟ ದೈವಂಗಳಿರಬಹುದಾಗಿದೆ ಕೂಡ. ಹಲವಾರು ಇಷ್ಟದೈವಂಗಳ ಕಷ್ಟ ತಪ್ಪಿಸುವ ಉದ್ದೇಶ ಹೊತ್ತು ಹುಟ್ಟಿದ ಉಪಾಸ್ಯ ವಸ್ತುವಾದ ಈ ಕುರುಹು "ಇಷ್ಟಲಿಂಗ" ಎಂಬ ಅಭಿದಾನ ತಾಳಿರಲಿಕ್ಕೂ ಸಾಕು. ಎರಡನೆಯದಾಗಿ ಇದು ಕಾಟಾಚಾರದ ವಸ್ತುವಾಗದೆ ಇಷ್ಟ ಪಟ್ಟು ಸಾಧಕನು ತನ್ನ ಆತ್ಮ ದರ್ಶನ, ಸ್ವರೂಪ ಸಾಕ್ಷಾತ್ಕಾರಕ್ಕಾಗಿ ಪಡೆದುಕೊಳ್ಳುವ ಕಾರಣ ಇದು ಇಷ್ಟಲಿಂಗವು. "ಇಷ್ಟಿ’ ಎಂದರೆ ಪೂಜೆ, ಉಪಾಸನೆ, ಈ ಪೂಜೆ ಆಥವಾ ಉಪಾಸನೆಗೆ ಅತ್ಯಂತ ಸೂಕ್ತವು, ಶ್ರೇಷ್ಠವೂ ಆದ ಕಾರಣ ಇದು ಇಷ್ಟಲಿಂಗ. ಅನಿಷ್ಟಗಳು ತನ್ನ ಅಂತರಂಗದಲ್ಲೇ ಇರಬಹುದು. ಬಹಿರಂಗದಲ್ಲೇ ಇರಬಹುದು, ಘಟದೊಳಗೆ ಇರಬಹುದು ಮಠದೊಳಗೆ ಇರಬಹುದು; ಸಮಾಜದೊಳಗಿರಬಹುದು. ಅವುಗಳನ್ನು ತೊಡೆದುಹಾಕಿ ಇಷ್ಟವನ್ನು, ಒಳಿತನ್ನು, ಲೇಸನ್ನು ಪ್ರತಿಷ್ಠಾಪಿಸುವ ಮನೋಬಲ, ಬುದ್ದಿ ಬಲ ಆತ್ಮಬಲಗಳನ್ನು ಬೆಳೆಸುವುದು ಯಾವುದೋ ಅದೇ ಇಷ್ಟಲಿಂಗ. ಪಾರಲೌಕಿಕ ಉದ್ದೇಶಹೊಂದಿ ಆತ್ಮಾನುಭೂತಿಯನ್ನೇ ಮುಖ್ಯ ಧ್ಯೇಯವನ್ನಾಗಿ ಇಟ್ಟುಕೊಂಡು ಅರ್ಚಿಸುವ ಭಕ್ತರು ಬಲು ವಿರಳ ಹೆಚ್ಚಿನ ಜನರು ಲೌಕಿಕ ಕಾಮನೆ. ಇಷ್ಟಾರ್ಥಗಳ ಸಿದ್ದಿಗಾಗೆಯೇ ಅರ್ಚಿಸುವುದು. ಆದ್ದರಿಂದ ಬೇಡುವವರ ಇಷ್ಟಾರ್ಥ ಸಿದ್ಧಿಗಳನ್ನು ಪೊರೈಸಲು ಸಮರ್ಥವಾದುದು ಇಷ್ಟಲಿಂಗ. ೧. ಏನ ಬೇಡಿದಡಿವ ನಮ್ಮ ಕೂಡಲಸಂಗಮದೇವ. ೨. ಹಾಡಿದೊಡೆ ಎನ್ನೊಡೆಯನ ಹಾಡುವೆ, ಬೆಡಿದಡೆ ಎನ್ನೊಡೆಯನ ಬೇಡುವೆ. ಎಂದು ಬಸವಣ್ಣನವರು ನುಡಿಯುವುದು ಈ ದೃಷ್ಟಿಯಿಂದಲೇ. ಬಸವಣ್ಣನವರ ವಚನಗಳು ಅಮೂಲ್ಯನು ಅಪ್ರಮಾಣನು ಅಗೋಚರ ಲಿಂಗವು ಆದಿ ಮಧ್ಯಾಂತರವಿಲ್ಲದ ಲಿಂಗವು, ಸ್ವತಂತ್ರ ಲಿಂಗವು ನಿತ್ಯ ನಿರ್ಮಲ ಲಿಂಗವು ಅಯೋನಿ ಸಂಭವನಯ್ಯಾ, ನಮ್ಮ ಕೂಡಲಸಂಗಮದೇವನು. ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ ಸಕಲ ವಿಸ್ತಾರದ ರೂಹು ನೀನೇ ದೇವಾ ’ವಿಶ್ವತೋಚಕ್ಷು ನೀನೇ ದೇವಾ ’ವಿಶ್ವತೋಮುಖ’ ನೀನೇ ದೇವಾ ’ವಿಶ್ವತೋಬಾಹು’ ನೀನೇ ದೇವಾ ’ವಿಶ್ವತ:ಪಾದ ನೀನೇ ದೇವಾ, ಕೂಡಲಸಂಗಮದೇವ ಲಿಂಗಾಯತ ಧರ್ಮದಲ್ಲಿ ಇಷ್ಟಲಿಂಗದ ಸ್ಥಾನ ಲಿಂಗಾಯತ ಧರ್ಮದಲ್ಲಿ ಮುಖ್ಯ ಧಾರ್ಮಿಕ ಲಾಂಛನಗಳೆಂದರೆ ಇಷ್ಟಲಿಂಗ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ ಮತ್ತು ಪ್ರಸಾದ. ಪಾದೋದಕ , ಪ್ರಸಾದ ಗಳು ಒಳಗೆ ಸ್ವೀಕರಿಸುವಂತಹವು, ಮಂತ್ರವು ಅಂತರಂಗದಲ್ಲಿ ಜಪಿಸಲ್ಪಡುವಂತಹದು, ದೇಹದ ಮೇಲೆ ಸ್ಪಷ್ಟವಾಗಿ ಕಾಣುವಂತಹವು ಎಂದರೆ ವಿಭೂತಿ, ರುದ್ರಾಕ್ಷಿ ಮತ್ತು ಇಷ್ಟಲಿಂಗ; ವಿಭೂತಿ ಮತ್ತು ರುದ್ರಾಕ್ಷಿಗಳು ಉಳಿದೆಲ್ಲ ಭಕ್ತರು (ಹಿಂದು, ಹಾಗೂ ಬೇರೆ ಧರ್ಮದವರು) ಧರಿಸಲ್ಪಡುವಂತಹವು ಆದರೆ, ಲಿಂಗಾಯತ ಧರ್ಮದ ಅನುಯಾಯಿಗಳಿಗೆ ವಿಶೇಷವಾದ, ವಿಶಿಷ್ಟವಾದ ಲಾಂಛನ ಇಷ್ಟಲಿಂಗವೊಂದೇ! ಉಳಿದ ಧಾರ್ಮಿಕ ಲಾಂಛನಗಳಾದ ವಿಭೂತಿ, ರುದ್ರಾಕ್ಷಿ ಮುಂತಾದವು ಪೋಷಕವಾದುವು ಮಾತ್ರ. ಹೀಗಾಗಿಯೇ ಈ ಇಷ್ಟಲಿಂಗಧಾರಿಗಳ ಧರ್ಮಕ್ಕೆ ಲಿಂಗಾಯತ ಧರ್ಮ, ಲಿಂಗವಂತ ಧರ್ಮ ಎಂದು ಹೆಸರು. ಬಳಕೆಯಲ್ಲಿರುವ ಬೇರೆ ಕೆಲವು ಸಮಾಜ ವಾಚಕ ಪದಗಳೆಂದರೆ ವೀರಶೈವ ಧರ್ಮ, ಶರಣ ಧರ್ಮ, ಬಸವ ಧರ್ಮ, ವಚನ ಧರ್ಮ ಮುಂತಾದವು. ಈ ಪದಗಳು ಸಮಾಜದಲ್ಲಿ ರೂಢಿಗತವಾಗಿರುವುದರಿಂದ ಬಳಸಲ್ಪಡುವವೇ ವಿನಾ, ಹೆಚ್ಚು ತಾತ್ವಿಕ ಅರ್ಥವನ್ನು ಒಳಗೊಂಡ ಪದಗಳಲ್ಲ.ನೀವು ಹೇಳಿದಂತೆ ಲಿಂಗಾಯತ ಧರ್ಮವಾದರೆ 6ನೇ ಶತಮಾನದ ಶಾಸನ ವೀರಶೈವ ಪದವುಳ್ಳದ್ದಾಗಿದೆ.ಹಾಗಾದರೆ ಅದು ರೂಡಪದವೇ ?ಶಾಸನ ಸಹಿತ ಇದೇ ಸಾಲನ್ನು ಮುಂದುವರೆಸ ಬಯಸುತ್ತೇನೆ.ಸ್ವಲ್ಪ ದಿನಗಳಲ್ಲಿ ನನ್ನ ಮರು ಪ್ರಶ್ನೆಗೆ ಸಿದ್ದರಾಗಿ.

ಇಷ್ಟಲಿಂಗ ಪೂಜೆ ಮೂರ್ತಿಪೂಜೆ ಅಲ್ಲ

[ಬದಲಾಯಿಸಿ]

ಜನರಲ್ಲಿ ಇಷ್ಟಲಿಂಗ ಪೂಜೆ ಅನ್ನೋದು ಒಂದು ಮೂರ್ತಿಪೂಜೆ ಅನ್ನೋ ಕಲ್ಪನೆ ಬೇರೂರಿದೆ, ಇದು ಸುಶಿಕ್ಷಿತರನ್ನು ಬಿಟ್ಟಿಲ್ಲ, ಇದು ತಪ್ಪು ತಿಳುವಳಿಕೆಯಾಗಿದೆ. ಮೂರ್ತಿಪೂಜೆ ಮಾಡಬೇಕೋ ಬಿಡಬೇಕೋ ಅನ್ನೋ ಗೋಜಿಗೆ ಹೋಗದೆ ಇಷ್ಟಲಿಂಗ ಪೂಜೆಯು ಮೂರ್ತಿಪೂಜೆ ಅಲ್ಲ. ಇಷ್ಟಲಿಂಗ ಪೂಜೆ ಮೂರ್ತಿ ಪೂಜೆಗೆ ಹೊರತಾದುದು, ಇದು ಲಿಂಗಾಯತ ಧರ್ಮಿಯರ ಉಪಾಸ್ಯ ವಸ್ತು , ನಿರಾಕಾರ ನಿರಯವನಾದ ಪರಮಾತ್ಮನ ಸಾಕಾರ; ಗೋಲಾಕಾರದ, ವಿಶ್ವದ ಆಕಾರದಲ್ಲಿರುವ ಸಾಕಾರ ರೂಪದ, ಸಾಮಾಜಿಕ ಸಮಾನತೆ ಸ್ಥಾಪನೆಯ ಕುರುಹೇ ಹೊರತು ಯಾವುದೊ ವ್ಯೆದಿಕ ಪರಂಪರೆಯ ಅಥವಾ ಧ್ಯೆವಿಪುರುಶನ ಕುರುಹಲ್ಲ ಇಷ್ಟಲಿಂಗ. ಇಷ್ಟಲಿಂಗಕ್ಕೆ ಸರ್ವಸಮ್ಮತ, ವ್ಯೆಜ್ಞಾನಿಕ, ತಾತ್ವಿಕ ಹಿನ್ನೆಲೆ ಇದೆ, ಇದು ನಿರ್ಗಣೋಪಾಸನೆಗೆ ಸಾದನ, ನಿರ್ಗುಣದ ಸಾಕಾರ, ಆದರೆ ಮೂರ್ತಿ ಪೂಜೆಯು ಸಗುಣದ ಸಾಕಾರ ವಿಷ್ಣು, ಶಿವ, ರಾಮ ಮೊದಲಾದ ವ್ಯಕ್ತಿ ಮೂರ್ತಿಗಳಿಗೆ ನಿರಾಕಾರ ಕಲ್ಪನೆ ಕೊಡಲು ಬರೋದಿಲ್ಲ ಅಂತೆಯೇ ವ್ಯೆಜ್ಞಾನಿಕ ದೃಷ್ಟಿಯಲ್ಲಿ ಯಾವಾ ಬೆಲೆಯೂ ಇಲ್ಲಾ. ಇಷ್ಟಲಿಂಗ ಪೂಜೆ ಸ್ವರೂಪ ಪೂಜೆ ಇದಕ್ಕೆ ಬಸವಲಿಂಗ ಶರಣರ ಪದ್ಯವೇ ಸಾಕ್ಷಿ. ಮುನ್ನನಾದಿಯ ಪರಾತ್ಪರ ನಿರಂಜನ ಶರಣ ತನ್ನ ಹೃತ್ಕಮಲದ ಪರಂಜ್ಯೋತಿ ಲಿಂಗವನು ಭಿನ್ನವಿಲ್ಲದೆ ವಾಮಕರಕಂಜದೊಳು ಪಿಡಿದು ತನ್ನ ತಾನರ್ಚಿಸುತಿಹ ! ಹೀಗೆ ಇಷ್ಟಲಿಂಗ ಪೂಜೆ ಸ್ವರೂಪ ಪೂಜೆ , ಮೂರ್ತಿ ಪೂಜೆ ಪ್ರತಿಕೋಪಾಸನೆ ಅಂದರೆ ವ್ಯಕ್ತಿಯ ಪ್ರತೀಕವಾಗಿ ಮೂರ್ತಿಯನ್ನ ಮಾಡಿ ಪೂಜಿಸುವುದು. ಇದು ಇಷ್ಟಲಿಂಗ ಪೂಜೆಯಂತೆ ಅಂತರಾತ್ಮನ ಪೂಜೆಯಾಗಿರದೆ ಯಾವುದೊ ವ್ಯಕ್ತಿಯ ಮೂರ್ತಿ ಪೂಜೆ ಆಗಿರುತ್ತೆ. ಇಷ್ಟಲಿಂಗ ಪರಮಾತ್ಮನ ಕುರುಹಿನ ಪೂಜೆ, ಎನ್ನ ಕರಸ್ಥಲದ ಮಧ್ಯದಲ್ಲಿ ಪರಮ ನಿರಂಜನದ ಕುರುಹು ತೋರಿದ ಈ ವಚನದಿಂದ ಇಷ್ಟಲಿಂಗವು ಪರಮ ನಿರಂಜನದ ಕುರುಹು ಎಂದೂ, ಇಷ್ಟಲಿಂಗ ಪೂಜೆ ಸ್ವರೂಪ ಪೂಜೆಯ ಸಿದ್ದವಸ್ತುವಾಗಿದೆ, ಪರಶಿವನ (ಸೃಷ್ಟಿಕರ್ತನ) ಇರುಹಿನ ನೆಲೆಯ ತೋರುವ ಕುರುಹಿದು.

ಇಷ್ಟಲಿಂಗವು ಕಲ್ಲಲ್ಲ

[ಬದಲಾಯಿಸಿ]

ಕಲ್ಲಿನಂತೆ ಬಿರುಸಾದ ಕಂಥೆಯಿಂದ ಕೂಡಿದ್ದರೂ ಕಲ್ಲಲ್ಲ. ಅನೇಕ ರಾಸಾಯನಿಕ ವಸ್ತುಗಳ ಮಿಶ್ರಣದಿಂದ ಕೂಡಿದ ಹೊದ್ದಿಕೆ, ಆವರಣ, ತ್ರಾಟಕಯೋಗ ಸಾಧನೆಗೆ ಸಹಕಾರಿಯಾಗುವಂತೆ ಹೊಳಪುಳ್ಳ ಆವರಣವನ್ನು ಸಿದ್ಧಪಡಿಸಲಾಗಿದೆ. ಬಹಳಷ್ಟು ಜನ ಇಷ್ಟಲಿಂಗವು ಕಲ್ಲೆಂದು ತಿಳಿದಿರುವುದು ಅವರ ಅಜ್ಞಾನದಿಂದ ಮಾತ್ರ! ಇಷ್ಟಲಿಂಗವನ್ನು ಅರಗು, ರಾಳ, ಇಂಗಳೀಕ, ಶಿಲಾರಸ, ರುಮಾಮಸ್ತಕಿ, ಅಂಜನಗಳು (ಆಕ್ಸೈಡ್ಸ್), ತುಪ್ಪದ ಕಾಡಿಗೆ, ಗೇರು ಎಣ್ಣೆ ಇವುಗಳಿಂದ ಕಾಂತಿಯನ್ನು ತಯಾರಿಸಿ ಒಳಗೆ ಕಾಂತಶಿಲೆ ಅಂದರೆ ಸೂರ್ಯಕಾಂತ ಶಿಲೆ, ಚಂದ್ರಕಾಂತ ಶಿಲೆ ಇವುಗಳಲ್ಲಿ ಯಾವುದಾದರೊಂದರಿಂದ ಮಾಡಿದ ’ಪಂಚಲಿಂಗ’ವನ್ನು ಕೂಡಿಸಿ ತಯಾರಿಸಲಾಗುತ್ತದೆ.

ಇಷ್ಟಲಿಂಗವು ಜಡವಸ್ತುವಿನ ಕುರುಹು ಅಲ್ಲ

[ಬದಲಾಯಿಸಿ]

ವಿಶ್ವದ ಗೋಲಾಕಾರದಲ್ಲಿ ಪೂಜೆ ಎಂದಾಗ ವಿಶ್ವವು ಜಡ ವಸ್ತು; ಲಿಂಗಾಯತ ಧರ್ಮವು ವಿಶ್ವದ ಪೊಜೆಯನ್ನು ಹೇಳುತ್ತದೆ ಎಂದಾಗ ಪಂಚಭೂತಗಳ ಮುದ್ದೆಯಾದ ಜಗತ್ತನ್ನು ಪೂಜಿಸಲು ಹೇಳುತ್ತದೆಯೆ? ಇಲ್ಲ. ಬಸವಣ್ಣನವರು ಇಷ್ಟಲಿಂಗವನ್ನು ವಿಶ್ವದಾಕಾರದ ಗೋಲಾಕಾರದಲ್ಲಿ ರೂಪಿಸಿದರು. ಆ ಆಕಾರದ ಮೂಲಕ ಅವರು ಪೂಜಿಸ ಹೇಳಿರುವುದು ವಿಶ್ವವನ್ನಲ್ಲ; ವಿಶ್ವದಲ್ಲಿ ಓತಪ್ರೋತವಾಗಿ ತುಂಬಿ ತುಳುಕುವ ವಿಶ್ವಾತ್ಮನನ್ನು. ನಾವು ಒಂದು ಹೂವನ್ನು ಕೈಯಲ್ಲಿ ಹಿಡಿದು ಮೂಸುತ್ತೇವೆ, ಯಾರದರೂ ಏನನ್ನು ಮೂಸುತ್ತಿದ್ದಿರಿ ಎಂದರೆ ಹೂವನ್ನು ಎನ್ನುವುದಿಲ್ಲ, ಹೂವಿನೊಳಗಣ ಪರಿಮಳವನ್ನು ಎನ್ನುತ್ತೇವೆ. ಹೂವಿನ ಮಾಧ್ಯಮದಲ್ಲಿ ಅಥವಾ ಆಶ್ರಯದಲ್ಲಿ ವಾಸನೆ ಇರಬಲ್ಲುದಾದ ಕಾರಣ ಪುಷ್ಪವನ್ನು ಆಘ್ರಾಣಿಸಿಯೇ ಪರಿಮಳವನ್ನು ಪಡೆಯಬೇಕಷ್ಟೇ? ಬಸವಣ್ಣನವರು ಇಷ್ಟಲಿಂಗವನ್ನೇ ದೇವರು ಎನ್ನದೆ, ದೇವರ ಅರಿವನ್ನು ಮಾಡಿಕೊಡುವ ಕುರುಹು ಎನ್ನುತ್ತಾರೆ. ದೇವರು ಎನ್ನುವ ಧ್ಯೇಯ ವಸ್ತುವನ್ನು ತಲುಪಲು ಸಹಾಯಕವಾಗುವ ಕರಸ್ಥಲದ ಜ್ಯೋತಿ ಎನ್ನುತ್ತಾರೆ. ವಿಶ್ವಸಂಸ್ಥೆಯಲ್ಲಿ ಚರ್ಚೆ ನಡೆದಾಗ ’ಭಾರತ’ ಹೀಗೆ ಅಂದಿತು ಎನ್ನುತ್ತಾರೆ. ಭಾರತ ಹೋಗಿರುತ್ತದೆಯೆ? ಭೂಪ್ರದೇಶ ಹೋಗುವುದುಂಟೆ? ಭಾರತದ ಪ್ರತಿನಿಧಿಯಾಗಿ ಒಬ್ಬ ಮಾತಾನಾಡುತ್ತಾನೆ ಅಷ್ಟೆ? ಹಾಗೆ ಇಷ್ಟಲಿಂಗವು ಜಗದಗಲ ಮುಗಿಲಗಲನಾಗಿರುವ ದೇವರ ಅರಿವನ್ನು ಉಂಟುಮಾಡುವ ಪ್ರತಿನಿಧಿ. ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮುಕುಟ ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ ಕೂಡಲಸಂಗಮದೇವಯ್ಯಾ ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ -- ಬಸವಣ್ಣನವರು ಸವಸಂ-೧, ವ. ಸಂಖ್ಯೆ ೭೪೪. ವಿಶ್ವದ ಎಲ್ಲ ಮಾನವರೂ ಸದ್ಗುರುವಿನಿಂದ ಇಷ್ಟಲಿಂಗ ದೀಕ್ಷೆಯನ್ನು ಪಡೆದು ಲಿಂಗಧಾರಿಗಳಾಗಿ ಇಷ್ಟಲಿಂಗ ಪೂಜೆಯನ್ನು ಮಾಡಿಕೊಂಡು ತಮ್ಮನ್ನು ತಾವು ಸಮಾಜಕ್ಕೆ ಅರ್ಪಿಸಿಕೊಳ್ಳಬೇಕೆಂಬುದೇ ಬಸವಾದಿ ಶರಣರ ಆಶಯವಾಗಿದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]