ಇಲ್ಯಾ ಪ್ರಿಗೋಜಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಲ್ಯಾ ಪ್ರಿಗೋಜಿನ್
ಇಲ್ಯಾ ಪ್ರಿಗೋಜಿನ್
Born
ಇಲ್ಯಾ ಪ್ರಿಗೋಜಿನ್

1917 ಜನವರಿ 22
ರಷಿಯಾ
Nationalityರಷಿಯಾ

ರಷಿಯಾದಲ್ಲಿ ಹುಟ್ಟಿದ ಬೆಲ್ಜಿಯಾದ ಸೈದ್ಧಾಂತಿಕ ರಸಾಯನವಿಜ್ಞಾನಿಯಾಗಿದ್ದ ಇಲ್ಯಾ ಪ್ರಿಗೋಜಿನ್ರವರು 1917ರ ಜನವರಿ 22ರಂದು ಮಾಸ್ಕೋವಿನಲ್ಲಿ ಜನಿಸಿದರು. ಉಷ್ಣಬಲವಿಜ್ಞಾನದ (thermodynamics) ತತ್ವಗಳನ್ನು ಹೊಸ ಕ್ಷೇತ್ರಗಳಿಗೆ ಮುಖ್ಯವಾಗಿ ಪರಿಸರವಿಜ್ಞಾನ (ecology) ಮತ್ತು ಸಾಮಾಜಿಕ ಕ್ಷೇತ್ರಗಳಿಗೆ (sociological studies) ಅನ್ವಯಿಸುವಂತೆ ಮಾಡುವ ಉದ್ದೇಶದ ಹಿನ್ನೆಲೆಯಲ್ಲಿ ಪ್ರಿಗೋಜಿನ್ರವರು ತಮ್ಮ ಸಿದ್ಧಾಂತಗಳನ್ನು ಮಂಡಿಸಿದರು. ಉಷ್ಣಬಲವಿಜ್ಞಾನದಲ್ಲಿ ನಡೆಯುವ ವಿಪರ್ಯಾಸದ ಪರಿಣಾಮಗಳು ಮತ್ತು ಅದರಿಂದ ಪರಿಸರದಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ ಅವರು ಗಣಿತಶಾಸ್ತ್ರೀಯ ಮಾದರಿಗಳನ್ನು (mathematical models) ರೂಪಿಸಿದರು. ಉದಾಹರಣೆಗೆ ವಿದ್ಯುತ್ಶಕ್ತಿಯಲ್ಲಿ ಸಾಮಾನ್ಯವಾಗಿ ಅನಪೇಕ್ಷಣೀಯವಾಗಿ ನಷ್ಟ ಅಥವಾ ಇಳಿತಾಯವಾಗುತ್ತದೆ. ಹೀಗೆ ನಷ್ಟವಾದ ಶಕ್ತಿ ಉಷ್ಣವಾಗಿ ಪರಿವರ್ತಿತವಾಗುತ್ತದೆ. ಅದರಿಂದ ಪರಿಸರದ ಮೇಲೆ ಮತ್ತು ಸಾಮಾಜಿಕ ಜೀವನದ ಮೇಲೆಯೂ ಪರಿಣಾಮ ಬೀರುತ್ತದೆ.[೧] ಇಂತಹ ಬದಲಾವಣೆಗಳಿಗೆ ಕಹ್ರಾಸ ವ್ಯವಸ್ಥೆಕಿ (dissipative system) ಎನ್ನಲಾಗುತ್ತದೆ. ಉನ್ನತ ಆವೃತ್ತಿ ಮಂಡಲಗಳಲ್ಲಿ (high frequency circuits) ರೋಧ (resistance), ವಿಕಿರಣ (radiation) ಮತ್ತು ಪರಾವೈದ್ಯುತ (dielectric) ನಷ್ಟಗಳು ಹ್ರಾಸಕ್ಕೆ ಕಾರಣವಾಗುತ್ತವೆ. ಹೀಗೆ ಉಂಟಾಗುವ ಉಷ್ಣವನ್ನು ಉಷ್ಣಹೀರುಗ (heat sink) , ವಾಯು ಇಲ್ಲವೇ ತಂಪುಕಾರಿಗಳ ಮೂಲಕ ತಕ್ಷಣವೇ ನಿವಾರಿಸದಿದ್ದಲ್ಲಿ ಮಂಡಲದ ಭಾಗಗಳಿಗೆ ಹಾನಿ ಉಂಟಾಗಬಹುದು ಅಲ್ಲದೆ ಆ ಉಷ್ಣ ಪರಿಸರದ ಮೇಲೆ ಮತ್ತು ಸಾಮಾಜಿಕ ಜೀವನದ ಮೇಲೆಯೂ ಪರಿಣಾಮಬೀರಬಹುದು. ನಮ್ಮ ಭೂಮಿಯಲ್ಲಿ ಜೀವಿಗಳ ಹುಟ್ಟಿದ್ದು ಹೇಗೆ ಎಂಬ ವಿಷಯದಿಂದ ಹಿಡಿದು ಪರಿಸರವ್ಯವಸ್ಥೆಯಲ್ಲಿ ಬಲವಿಜ್ಞಾನದ ಸಮತೋಲನ ಅಲ್ಲದೆ ನಮ್ಮ ವಿಶ್ವದ ಮೂಲ ಸಂಪತ್ತನ್ನು (ಅಂದರೆ ಪೆಟ್ರೋಲ್ ಇತ್ಯಾದಿ) ಕಾಪಾಡುವುದರಿಂದ ಹಿಡಿದು ವಾಹನದಟ್ಟನೆಯ ಪರಿಣಾಮಗಳ ನಿವಾರಣೆಯವರೆಗೂ ಪ್ರಿಗೋಜಿನ್ರವರ ಸಿದ್ಧಾಂತಗಳನ್ನು ಬಳಸಿಕೊಳ್ಳಬಹುದಾಗಿದೆ. ಪ್ರಿಗೋಜಿನ್ರವರ ಸಿದ್ಧಾಂತಗಳಿಗೆ ಪೂರಕವಾಗಿ ಅವರಿಗೆ 1977ರ ರಸಾಯನವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.[೨] ಪ್ರಿಗೋಜಿನ್ರವರು 2003ರ ಮೇ 28ರಂದು ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]