ವಿಷಯಕ್ಕೆ ಹೋಗು

ಇರಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಸ್ಟಿರಾಯಿಡ್ಸ್

ಇರಾಸ್ ಕ್ಷುದ್ರ ಗ್ರಹಗಳ (ಆಸ್ಟಿರಾಯಿಡ್ಸ್) ಪೈಕಿ ಒಂದು. ವ್ಯಾಸ 32-48 ಕಿ.ಮೀ. ಬೀರುವ ಕಾಂತಿ (ಸೂರ್ಯಪ್ರಕಾಶದ ಪ್ರತಿಫಲನ) ಬಲು ಚಂಚಲ. ಇದೊಂದು ಕಿರಿಯ ಆಕಾಶಶಿಲೆ; ಸೌರವ್ಯೂಹದ ಮೂಲ ಇಟ್ಟಿಗೆಗಳಲ್ಲೊಂದು. ಇಂಥ ಇಟ್ಟಿಗೆಗಳು ಒಂದುಗೂಡಿ ಗ್ರಹಗಳಾದುವೆಂದೂ ಹಾಗಾಗದೆ ಉಳಿದವು ಕ್ಷುದ್ರಗ್ರಹಗಳೆಂದೂ ಕೆಲವು ವಿಜ್ಞಾನಿಗಳ ಅಭಿಮತ, ಮಂಗಳ, ಗುರು ಗ್ರಹಗಳ ಕಕ್ಷೆಗಳ ನಡುವೆ (ಎಂದರೆ ಸೂರ್ಯನಿಂದ ಸುಮಾರು 1.52 ಮತ್ತು 5.2 ಖಗೋಲ ಮಾನಗಳು 1 ಖ.ಮಾ= 9,30,00,000 ಮೈ.) ಕ್ಷುದ್ರ ಗ್ರಹಗಳಿವೆ.[] ಇವು (ಇದುವರೆಗೆ ಗುರುತಿಸಿರುವಂತೆ) ವಿವಿಧ ಗಾತ್ರ ಆಕಾರಗಳ ಸುಮಾರು 1300 ಬಿಡಿ ತುಂಡುಗಳ ಸಮುದಾಯ; ಇವುಗಳ ಸಾಮೂಹಿಕ ಕಕ್ಷೆಗಳ ವ್ಯಾಪ್ತಿ ಸುಮಾರು 2.17-3.45 ಖ.ಮಾ. ಕೆಲವು ಬಿಡಿ ತುಂಡುಗಳ ಕಕ್ಷೆಗಳು ಆಶ್ಚರ್ಯಕರವೆನಿಸುವಷ್ಟು ಪ್ರತ್ಯೇಕವಾಗಿವೆ. ಇಕಾರಸ್ (ನೋಡಿ- ಇಕಾರಸ್) ಇಂಥ ಒಂದು ಬಿಡಿ ತುಂಡಾದರೆ ಇರಾಸ್ ಇನ್ನೊಂದು. ಭೂಮಿಗೆ ಅತಿಸಮೀಪ ಆಗಮಿಸುವ ಆಕಾಶಕಾಯಗಳಲ್ಲಿ ಚಂದ್ರನ ತರುವಾಯ ಇರಾಸಿಗೆ ಪ್ರಥಮಸ್ಥಾನ. ಇದೇ ಅದರ ವೈಶಿಷ್ಟ್ಯ. ಭೂಮಿ-ಇರಾಸ್ ಅಂತರದ ಕನಿಷ್ಠ ಬೆಲೆ ಸುಮಾರು 1,38,40,000 ಮೈ.[] (ಭೂಮಿ-ಚಂದ್ರ ಅಂತರದ ಸರಾಸರಿ ಬೆಲೆ 2,39,000 ಮೈ.) ಇಂಥ ಅನುಕೂಲ ಸಂದರ್ಭವನ್ನು ಉಪಯೋಗಿಸಿಕೊಂಡು ಸೂರ್ಯ-ಭೂಮಿ ಅಂತರದ ನಿಖರ ಬೆಲೆ ಅಳೆಯುತ್ತಾರೆ. ಇರಾಸಿನ ಕಕ್ಷೆಯ ಉತ್ಕೇಂದ್ರತೆ (ಎಕ್ಸೆಂಟ್ರಿಸಿಟಿ) 0.22; ಅರ್ಧ ದೀರ್ಘಾಕ್ಷ 1.46 ಖ.ಮಾ.; ಕಕ್ಷಾತಲ, ಕ್ರಾಂತಿವೃತ್ತಗಳ ನಡುವಿನ ಕೋನ 10-8ಲಿ. ನಾಕ್ಷತ್ರಿಕ ಅವಧಿ (ಸೂರ್ಯನನ್ನು ಒಂದು ಸಲ ಪರಿಭ್ರಮಿಸಲು ಬೇಕಾಗುವ ಕಾಲ) 1.76 ವರ್ಷಗಳು (1 ವರ್ಷ=365,2422 ದಿವಸಗಳು). ಈ ಕ್ಷುದ್ರಗ್ರಹ ಬಾಹ್ಯಾಕಾಶದಿಂದ ಅನೇಕ ಅಧ್ಯಯನಕ್ಕೆ ಒಳಪಟ್ಟಿದೆ. * (ಪರಿಷ್ಕರಣೆ: ಬಿ.ಎಸ್.ಶೈಲಜಾ)

ಹೊರಸಂಪರ್ಕ

[ಬದಲಾಯಿಸಿ]
  • ೧.Eros(approximately 34.4×11.2×11.2 kilometres (21.4×7.0×7.0 mi. in size, the second-largest near-Earth asteroid;ಸೂರ್ಯನಿಂದ ದೂರ: ಅಪರವಿ 1.783 ಖ.ಮಾ.ಪುರರವಿ 1.133 ಖ.ಮಾ.)
  • http://solarviews.com/eng/eros.htm (Eros is approximately 33x13x13 kilometers (20x8x8 miles) in size and resembles a "fat banana." It is the second largest near-Earth asteroid and spins on its axis once every 5 hours, 16 minutes. Eros exhibits a heavily cratered surface with one side dominated by a huge, scallop-rimmed gouge, and the opposite side by a conspicuous sharp, raised rimmed crater.)
  • ೨.http://nssdc.gsfc.nasa.gov/planetary/text/eros.txt (circling the Sun in 1.76 years at an inclination of 10.8 degrees to the ecliptic. Perihelion distance is 1.13 AU (105 million miles/169 million kilometers); aphelion is 1.78 AU (165 million miles/266 million kilometers). Eros' average distance from the Sun is 1.46 AU (135 million miles/218 million kilometers).
  • ೩.http://www.erosproject.com/erosfact.html?source=ErosProject

ಉಲ್ಲೇಖಗಳು

[ಬದಲಾಯಿಸಿ]
  1. http://ssd.jpl.nasa.gov/?asteroids
  2. "ಆರ್ಕೈವ್ ನಕಲು". Archived from the original on 2010-09-09. Retrieved 2016-05-17.
"https://kn.wikipedia.org/w/index.php?title=ಇರಾಸ್&oldid=1053472" ಇಂದ ಪಡೆಯಲ್ಪಟ್ಟಿದೆ