ಇರಾವತಿ ಕರ್ವೆ
ಗೋಚರ
ಇರಾವತಿ ಕರ್ವೆ ಒಬ್ಬ ಪ್ರಸಿದ್ಧ ಶಿಕ್ಷಣ ತಜ್ಞೆ, ಲೇಖಕಿ ಮತ್ತು ಮಾನವಶಾಸ್ತ್ರಜ್ಞೆ. ಭಾರತದಲ್ಲಿ ಆಗಿನ್ನೂ ಮಾನವಶಾಸ್ತ್ರ ಎಂಬ ವಿಷಯವು ಶೈಶವಾವಸ್ಥೆಯಲ್ಲಿದ್ದಾಗ ಈ ವಿಷಯದಲ್ಲಿ ಸಾಧನೆ ಮಾಡಿದ ಪ್ರಥಮ ಭಾರತೀಯ ಮಹಿಳೆ ಇರಾವತಿ ಕರ್ವೆಯವರು.
ಆರಂಭದ ದಿನಗಳು ಮತ್ತು ವಿದ್ಯಾಭ್ಯಾಸ
[ಬದಲಾಯಿಸಿ]- ಇರಾವತಿಯವರು ೧೯೦೫ರಲ್ಲಿ ಈಗಿನ ಮಯನ್ಮಾರ್ ಅಥವಾ ಆಗಿನ ಬರ್ಮ ದೇಶದಲ್ಲಿ ಜನಿಸಿದರು. ಅವರು ಶ್ರೀಮಂತ ಚಿತ್ಪಾವನ್ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಗಣೇಶ ಹರಿ ಕರ್ಮಾರ್ಕರ್ ಅವರು ಬರ್ಮ ಹತ್ತಿ ಕಂಪೆನಿಗೆ ಕೆಲಸ ಮಾಡುತ್ತಿದ್ದರು. ಇರಾವತಿಯವರು ಪುಣೆಯಲ್ಲಿ ವಸತಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿ ನಂತರ ಮತ್ತು ಫರ್ಗುಸನ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಕಲಿತರು.
- ಮುಂಬಯಿ ವಿಶ್ವವಿದ್ಯಾಲಯದಿಂದ ೧೯೨೮ರಲ್ಲಿ ಚಿತ್ಪಾವನ ಬ್ರಾಹ್ಮಣರ ಬಗೆಗಿನ ಸಂಶೋಧನೆಗೆ ಸ್ನಾತಕೋತ್ತರ ಪದವಿ ಪಡೆದರು. ಇರಾವತಿ ಕರ್ವೆಯವರು ದಿನಕರ ಧೋಂಡೋ ಕರ್ವೆಯವರನ್ನು ಮದುವೆಯಾದರು. ದಿನಕರ ಅವರು ಇರಾವತಿಯವರನ್ನು ಉನ್ನತ ವಿದ್ಯಾಭ್ಯಾಸಕ್ಕಾಗಿ ಜರ್ಮನಿಗೆ ಕಳುಹಿಸಿದರು[೧]. ಇರಾವತಿಯವರು ಜರ್ಮನಿಯಲ್ಲಿ ಮಾನವಶಾಸ್ತ್ರದಲ್ಲಿ ಡಾಕ್ಟೊರೇಟ್ ಪದವಿ ಪಡೆದರು.
ಉದ್ಯೋಗ
[ಬದಲಾಯಿಸಿ]- ಇರಾವತಿಯವರು ೧೯೩೧ರಿಂದ ೧೯೩೬ರ ತನಕ ಮುಂಬಯಿಯ ಎಸ್ಎನ್‍ಡಿಟಿ ಮಹಿಳಾ ವಿಶ್ವವಿದ್ಯಾಲಯ Archived 2019-05-16 ವೇಬ್ಯಾಕ್ ಮೆಷಿನ್ ನಲ್ಲಿ.ದಲ್ಲಿ ಆಡಳಿತಾಧಿಕಾರಿಯಾಗಿ ಕೆಲಸ ಮಾಡಿದರು. ಜೊತೆಗೇ ಅವರು ಬೋಧನೆ ಮತ್ತು ಸಂಶೋಧನೆಗಳನ್ನೂ ಮಾಡಿದರು. ೧೯೩೯ರಲ್ಲಿ ಅವರು ಪುಣೆಯ ಡೆಕ್ಕನ್ ಕಾಲೇಜಿಗೆ ವರ್ಗಾವಣೆ ಮಾಡಿಸಿಕೊಂಡರು. ಅವರು ಕೊನೆ ತನಕ ಅಲ್ಲಿಯೇ ಇದ್ದರು. ಇರಾವತಿ ಕರ್ವೆಯವರು ಭಾರತದ ಮೊತ್ತಮೊದಲ ಮಾನವಶಾಸ್ತ್ರಜ್ಞೆಯಾಗಿದ್ದರು[೨].
- ಅವರ ಆಸಕ್ತಿಯ ಕ್ಷೇತ್ರಗಳು ಹಲವಾರಿದ್ದವು. ಅವುಗಳೆಲ್ಲ ಮಹಿಳಾ ಸಂಬಂಧಿ ವಿಷಯಗಳ ಸುತ್ತಲೇ ಇದ್ದವು. ಅವರಿಗೆ ಜಾನಪದದಲ್ಲೂ ಆಸಕ್ತಿಯಿತ್ತು. ಅವರಿಗೆ ಮಾನವಶಾಸ್ತ್ರ, ಜಾತಿವಾದ, ಇfತಾದಿಗಳು ಮತ್ತು ಅವುಗಳ ಒಂದರೊಡನೊಂದು ಸಂಬಂಧಗಳ ಬಗ್ಗೆ ಸಂಶೋಧನೆಯಲ್ಲಿ ಆಸಕ್ತಿಯಿತ್ತು. ಅವರು ಪುಣೆ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರ ವಿಭಾಗವನ್ನು ಹುಟ್ಟುಹಾಕಿದರು. ಹಲವು ವರ್ಷಗಳ ಕಾಲ ಅದರ ಮುಖ್ಯಸ್ಥೆಯಾಗಿ ಕೆಲಸ ಮಾಡಿದರು. ಅವರು ಮರಾಠಿ ಮತ್ತು ಇಂಗ್ಲೀಷಿನಲ್ಲಿ ಬರೆಯುತ್ತಿದ್ದರು.
ಕೃತಿಗಳು
[ಬದಲಾಯಿಸಿ]- Kinship Organization in India (Deccan College, 1953), ಭಾರತದಲ್ಲಿರುವ ಹಲವು ಸಮಾಜಶಾಸ್ತ್ರ ಸಂಸ್ಥೆಗಳ ಅಧ್ಯಯನ
- Hindu Society — an interpretation (Deccan College, 1961), ಹಿಂದು ಸಮಾಜದ ಅಧ್ಯಯನ.
- Maharashtra — Land and People (1968), ಮಹಾರಾಷ್ಟ್ರದಲ್ಲಿರುವ ಹಲವು ಸಂಸ್ಥೆಗಳು ಮತ್ತು ಧಾರ್ಮಿಕ ಆಚಾರಗಳ ಅಧ್ಯಯನ
- Yuganta (ಯುಗಾಂತ), ಮಹಾಭಾರತದ ಹಲವು ಪಾತ್ರಗಳ ಅಧ್ಯಯನ ಮತ್ತು ವಿಮರ್ಶೆ. ಮರಾಠಿಯಲ್ಲಿರುವ ಈ ಕೃತಿಗೆ ೧೯೬೮ರ ಕೇಂದ್ರ ಸಾಹಿತ್ಯ ಅಕಾದೆಮಿ ಪುರಸ್ಕಾರ ಸಂದಿದೆ[೩]. ಕನ್ನಡದಲ್ಲಿ ಈ ಕೃತಿಯನ್ನು ಮೊದಲ ಬಾರಿಗೆ ಎಚ್. ಎಸ್. ಶಿವಪ್ರಕಾಶರು ಅನುವಾದಿಸಿದ್ದು ನಂತರ ಕೇಂದ್ರ ಸಾಹಿತ್ಯ ಅಕಾದೆಮಿಯವರು ಅನುವಾದಿಸಿ ಪ್ರಕಟಿಸಿದ್ದರು[೪].
- ಪರಿಪೂರ್ತಿ (ಮರಾಠಿ)
- ಭೋವರ (ಮರಾಠಿ)
- ಅಮಚಿ ಸಂಸ್ಕೃತಿ (ಮರಾಠಿ)
- ಸಂಸ್ಕೃತಿ (ಮರಾಠಿ)
- ಗಂಗಾಜಲ (ಮರಾಠಿ)
ಬಾಹ್ಯ ಸಂಪರ್ಕ
[ಬದಲಾಯಿಸಿ]- ಯುಗಾಂತ ಪುಸ್ತಕದ ಬಗ್ಗೆ ಶ್ರೀಹರ್ಷ ಹೆಗಡೆಯವರ ಬ್ಲಾಗ್
- ಯುಗಾಂತ ಪುಸ್ತಕದ ಬಗ್ಗೆ ಒಂದು ವಿಮರ್ಶೆ
ಉಲ್ಲೇಖ
[ಬದಲಾಯಿಸಿ]- ↑ Sundar, Nandini (2007), "In the cause of anthropology: the life and work of Irawati Karve", in Uberoi, Patricia; Sundar, Nandini; Deshpande, Satish, Anthropology in the East: The founders of Indian Sociology and Anthropology, New Delhi: Permanent Black, ISBN 978-1-90542-277-7
- ↑ Sundar, Nandini (2007), "In the cause of anthropology: the life and work of Irawati Karve", in Uberoi, Patricia; Sundar, Nandini; Deshpande, Satish, Anthropology in the East: The founders of Indian Sociology and Anthropology, New Delhi: Permanent Black, ISBN 978-1-90542-277-7
- ↑ "ಆರ್ಕೈವ್ ನಕಲು". Archived from the original on 2016-03-04. Retrieved 2015-05-19.
- ↑ "ಆರ್ಕೈವ್ ನಕಲು" (PDF). Archived from the original (PDF) on 2015-03-05. Retrieved 2015-05-19.