ಇನ್ಸಾಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಇನ್ಸಾಟ್-೪ಎ ಇಂದ ಪುನರ್ನಿರ್ದೇಶಿತ)
ಇನ್ಸಾಟ್-೧ಬಿ
ಇನ್ಸಾಟ್-೨ ಇ ಕಳಿಸಿದ ಭೂಮಿಯ ಚಿತ್ರ
ಚಿತ್ರ:Gslv1.jpg
ಜಿಎಸ್‍ಎಲ್‍ವಿ ಉಡ್ಡಯಣ ವಾಹಕ (ರಾಕೆಟ್). ಇನ್ಸಾಟ್ ಉಪಗ್ರಹಗಳನ್ನು ಉಡಾಯಿಸಲು ಉಪಯೋಗಿಸಲ್ಪಟ್ಟ ಪ್ರಮುಖ ನೌಕೆ

ಇನ್ಸಾಟ್ (INSAT - Indian Satellite ಎಂಬುದರ ಸಂಕ್ಷಿಪ್ತ ರೂಪ) ಭಾರತದ ಅಂತರಿಕ್ಷ ಸಂಶೋಧನಾ ಕೇಂದ್ರವಾದ ಇಸ್ರೋದಿಂದ ನಿರ್ಮಿಸಲ್ಪಟ್ಟು ಭೂಮಿಯ ಸುತ್ತ ಕಕ್ಷೆಗೆ ಬಿಡಲಾಗುತ್ತಿರುವ ಕೃತಕ ಉಪಗ್ರಹಗಳ ಸರಣಿ. ಇನ್ಸಾಟ್ ಉಪಗ್ರಹಗಳ ಮುಖ್ಯ ಉದ್ದೇಶ ದೂರಸಂಪರ್ಕ. ೧೯೮೦ರ ದಶಕದಿಂದಲೂ ಇನ್ಸಾಟ್ ಉಪಗ್ರಹಗಳನ್ನು ಉಪಯೋಗಿಸಲಾಗಿದೆ. ಪ್ರತಿ ದಶಕದಲ್ಲಿಯೂ ಇನ್ಸಾಟ್ ಉಪಗ್ರಹಗಳ ಒಂದು ಹೊಸ ಸರಣಿ ನಿರ್ಮಾಣವಾಗುತ್ತದೆ; ಹೀಗೆ ೮೦ರ ದಶಕದಲ್ಲಿ ಇನ್ಸಾಟ್-೧ ಸರಣಿ (ಇನ್ಸಾಟ್-೧ ,ಇನ್ಸಾಟ್-೩,ಇನ್ಸಾಟ್-೪,ಇನ್ಸಾಟ್-೫ ಇತ್ಯಾದಿ), ೯೦ ರ ದಶಕದಲ್ಲಿ ಇನ್ಸಾಟ್-೨ ಸರಣಿ ನಿರ್ಮಾಣವಾದವು. ೨೦೦೦ ದಿ೦ದ ಮುಂದಕ್ಕೆ ಇನ್ಸಾಟ್-೩ ಸರಣಿ, ೨೦೧೦ ರಲ್ಲಿ ಇನ್ಸಾಟ್-೫ ಉಪಯೋಗದಲ್ಲಿದೆ.ಇನ್ಸಾಟ್ ಉಪಗ್ರಹಗಳೆಲ್ಲವೂ ಭಾರತದ ದೂರಸಂಪರ್ಕ ಉಪಗ್ರಹಗಳು. ಇವುಗಳಿಂದ ಡಿ.ಟಿ.ಎಚ್. (ನೇರ ಮನೆಗೆ ದೂರದರ್ಶನ) ಸೇವೆ ಮತ್ತು ದೂರಸಂಪರ್ಕ ಸೇವೆಗಳಿಗೆ ಮತ್ತು ಸಾಮಾನ್ಯ ದೂರದರ್ಶನ ಸೇವೆಗಳನ್ನು ಬಿತ್ತರಿಸಲು ಉಪಯೋಗಿಸಲಾಗಿದೆ. ಇನ್ಸಾಟ್ ಉಪಗ್ರಹಗಳಲ್ಲಿ ವಿವಿಧ ತರಂಗಾಂತರಗಳಲ್ಲಿ ಕಾರ್ಯನಿರ್ವಹಿಸುವ ಟ್ರಾನ್ಸ್ಪಪಾಂಡರ್ ಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ 'ಸಿ' 'ಎಸ್' 'ಕ' ಮತು 'ಕು' ತರಂಗಗಳು ಪ್ರಮುಖವಾದುವು. ಉದಾಹರಣೆಗೆ ಟಾಟಾ, ಏರ್ ಟೆಲ್, ರಿಲಯೆನ್ಸ್ ಬಿಗ್ ಮತ್ತು ವಿಡಿಯೋಕಾನ್ ಸಂಸ್ಥೆಗಳು ಪ್ರಸಾರ ಮಾಡುತ್ತಿರುವ ಡಿ.ಟಿ.ಎಚ್. (ನೇರ ಮನೆಗೆ ದೂರದರ್ಶನ) ಸೇವೆಗಳು ಇನ್ಸಾಟ್ ಉಪಗ್ರಹದಿಂದ ಪ್ರಸಾರ ಮಾಡಲ್ಪಟ್ಟವಾಗಿವೆ. ೯೦ರ ದಶಕದಲ್ಲಿ ಇನ್ಸಾಟ್ ಉಪಗ್ರಹಗಳು ಸಂಗ್ರಹಿಸಿದ ಹವಾಮಾನ ಮಾಹಿತಿಯನ್ನು ಗುಪ್ತಸಂಕೇತಗಳ ಮೂಲಕ ಭಾರತಕ್ಕೆ ತಲುಪಿಸಲಾಗುತ್ತಿತ್ತು. ಇದರಿಂದ ಸುತ್ತಲ ದೇಶಗಳಿಗೆ ಈ ಮಾಹಿತಿ ದೊರೆಯುತ್ತಿರಲಿಲ್ಲ. ೧೯೯೭ ರಲ್ಲಿ ಅಮೆರಿಕದ ಅಂತರಿಕ್ಷ ಸಂಶೋಧನಾ ಕೇಂದ್ರವಾದ ನಾಸಾ ಮತ್ತು ಭಾರತ ಸರ್ಕಾರದ ನಡುವಿನ ಒಪ್ಪಂದದ ಮೇರೆಗೆ ಇತರ ಕೆಲ ದೇಶಗಳಿಗೆ ಇನ್ಸಾಟ್ ಉಪಗ್ರಹಗಳ ಮಾಹಿತಿಯನ್ನು ಒದಗಿಸಲಾಗುತ್ತಿದೆ. ಇನ್ಸಾಟ್ ಉಪಗ್ರಹಗಳ ಮುಖ್ಯ ಉದ್ದೇಶ ದೂರಸ೦ಪರ್ಕವಾದರೂ, ಪ್ರತಿ ಸರಣಿಯ ಒಂದು ಉಪಗ್ರಹಕ್ಕೆ ಭೂಮಿಯ ಸ್ಪಷ್ಟ ಚಿತ್ರ ತೆಗೆಯಬಲ್ಲ ರೇಡಿಯೋ ಉಪಕರಣವನ್ನು (VHRR - Very High Resolution Radiometer) ಅಳವಡಿಸಲಾಗುತ್ತದೆ. ಈ ಉಪಗ್ರಹದಿ೦ದ ಬರುವ ಚಿತ್ರಗಳು ಹವಾಮಾನ ವರದಿಗೆ ಅನುಕೂಲ ಮಾಡಿಕೊಟ್ಟಿವೆ. ೨೦೦೪ರಲ್ಲಿ ಹವಾಮಾನ ವರದಿಗಾಗಿಯೇ ಮೀಸಲಾದ ಮೆಟ್-ಸ್ಯಾಟ್ ಉಪಗ್ರಹವನ್ನು ಹಾರಿಬಿಡಲಾಯಿತು.

ಸೇವೆಯಲ್ಲಿರುವ ಕೃತಕ ಉಪಗ್ರಹಗಳು[ಬದಲಾಯಿಸಿ]

ಇನ್ಸಾಟ್ ೪ ಸರಣಿ[ಬದಲಾಯಿಸಿ]

ಇನ್ಸಾಟ್-೪ಎ[ಬದಲಾಯಿಸಿ]

ಇನ್ಸಾಟ್-೪ಎ ಉಪಗ್ರಹ

ಇನ್ಸಾಟ್-೪ಎ' ಭಾರತದಇಸ್ರೋ ಸಂಸ್ಥೆ ನಿರ್ಮಿಸಿದ ೧೨ ವರ್ಷಗಳ ಕಾಲ ದೂರಸಂಪರ್ಕ ಸಂಬಂಧಿಸಿದ ಸೇವೆ ನೀಡುವ ಉಪಗ್ರಹ. ಭಾರತೀಯ ಕಾಲಮಾನುಸಾರ ೨೨ ಡಿಸೆಂಬರ್ ೨೦೦೫ ಗುರುವಾರ ಬೆಳಗ್ಗೆ ೪.೦೩ ಗಂಟೆಗೆ ಸರಿಯಾಗಿ ಫ್ರೆಂಚ್ ಗಯಾನಾದ ಕೌರು ಉಡಾವಣಾ ಕೇಂದ್ರದಿಂದ ಎರಿಯನ್ ೫ ಪೀಳಿಗೆಯ ರಾಕೆಟ್‌ನಿಂದ ಈ ಉಪಗ್ರಹ ಉಡಾವಣೆಗೊಂಡಿತು. ಸುಮಾರು ೩೦೮೦ ಕೆಜಿ ತೂಕದ ಈ ಉಪಗ್ರಹದಲ್ಲಿ ೧೨ ಕ್ಯೂಬ್ಯಾಂಡ್ ಟ್ರಾನ್ಸ್‌ಪಾಂಡರ್‌ಗಳು ಮತ್ತು ೧೨ ಸಿ ಬ್ಯಾಂಡ್ ಟ್ರಾನ್ಸ್‌ಪಾಂಡರ್‌ಗಳಿವೆ. ಈ ಉಪಗ್ರಹದಿಂದ ಡಿಟಿಎಚ್ ದೂರದರ್ಶನ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯಾಗಲಿದೆ ಎಂದು ವಿಶೇಷಜ್ಞರ ಅಭಿಪ್ರಾಯ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಇನ್ಸಾಟ್ ಉಪಗ್ರಹಗಳು ತೆಗೆದ ಕೆಲ ಚಿತ್ರಗಳು Archived 2004-12-31 ವೇಬ್ಯಾಕ್ ಮೆಷಿನ್ ನಲ್ಲಿ. ಇನ್ಸಾಟ್ ೨-ಇ Archived 1998-01-20 ವೇಬ್ಯಾಕ್ ಮೆಷಿನ್ ನಲ್ಲಿ. ಇನ್ಸಾಟ್ ೩-ಸಿ Archived 2009-05-01 ವೇಬ್ಯಾಕ್ ಮೆಷಿನ್ ನಲ್ಲಿ.