ಇಜ್ಮಿರ್

ವಿಕಿಪೀಡಿಯ ಇಂದ
Jump to navigation Jump to search

ಟೆಂಪ್ಲೇಟು:SDcatಲುಅ ದೋಷ: bad argument #1 to 'gsub' (string is not UTF-8).

ತುರ್ಕಿಯ ಪ್ರಮುಖ ಪಟ್ಟಣಗಳಲ್ಲಿ ಒಂದು ಹಾಗೂ ರೇವು ಪಟ್ಟಣ. ಈ ಪಟ್ಟಣಕ್ಕೆ ಸ್ಮರ್ನ ಎಂಬ ಹೆಸರೂ ಸಹ ಇದೆ. ಇದು 15 ಮೈಲಿ ಉದ್ದವಿರುವ ಇಜ್ಮಿರ್ ಖಾರಿಯ ಕೊನೆಯಲ್ಲಿ, ಈಜಿಯನ್ ಸಮುದ್ರ ತೀರದ ಪಶ್ಚಿಮ ಭಾಗದ ಮಧ್ಯದಲ್ಲಿ ಇದೆ. ಈ ಖಾರಿ ಹಾಗೂ ಪಟ್ಟಣ ದೊಡ್ಡ ದೊಡ್ಡ ಬೆಟ್ಟಗಳ ಸಾಲುಗಳಿಂದ ಆವೃತವಾಗಿವೆ. ಪೂರ್ವದಿಂದ ಹರಿದು ಬರುವ ಮೂರು ಪ್ರವಾಹಗಳು ಈ ಖಾರಿಗೆ ಬೀಳುತ್ತವೆ. ಇಲ್ಲಿ ಸ್ವಾಭಾವಿಕ ಮೆಡಿಟರೇನಿಯನ್ ಸಸ್ಯವರ್ಗವಿದೆ.ಈ ಪಟ್ಟಣದ ಜನಸಂಖ್ಯೆ ಸು. 3 ಲಕ್ಷ.[೧]

ಇತಿಹಾಸ[ಬದಲಾಯಿಸಿ]

ಹೋಮರ್ ಮಹಾಕವಿಯ ಜನ್ಮಸ್ಥಳವೆಂದು ಹೇಳುವ ಪಟ್ಟಣಗಳಲ್ಲಿ ಇದೂ ಒಂದಾಗಿದೆ. ಅಯೋನಿಯನ್ ವಸಾಹತುಗಳಲ್ಲಿ ಒಂದಾದ ಇಜ್ಮಿರ್ ಕ್ರಿ.ಪೂ. 688ರಲ್ಲಿ ಅಯೋನಿಯನ್ ಒಕ್ಕೂಟಕ್ಕೆ ಸೇರಿತು. ಅನಂತರ ಇದು ಲಿಡಿಯಾದ ದೊರೆಯ ವಶಕ್ಕೆ ಬಂದಮೇಲೆ ಏಷ್ಯಾದ ಏಳು ಅತ್ಯುತ್ತಮ ನಗರಗಳಲ್ಲಿ ಒಂದು ಎನ್ನಿಸಿಕೊಂಡಿತು. ಇಜ್ಮಿರ್ ಕ್ರಿ.ಶ. 178ರಲ್ಲಿ ಭೂಕಂಪಕ್ಕೆ ಒಳಗಾಗಿ ನಾಶವಾಯಿತು. ಆದರೆ ಮಾರ್ಕಸ್ ಆರೇಲಿಯಸ್‍ನ ಕಾಲದಲ್ಲಿ ಮತ್ತೆ ಈ ನಗರವನ್ನು ಕಟ್ಟಲಾಯಿತು. ಕ್ರಿ.ಶ. 1402ರಿಂದ ಇತ್ತೀಚಿನವರೆಗೂ ಇದು ತುರುಕರ ವಶದಲ್ಲಿತ್ತು. 1923ರಲ್ಲಿ ಇದು ಸಂಪೂರ್ಣವಾಗಿ ತುರಕರ ಆಧಿಪತ್ಯಕ್ಕೆ ಒಳಗಾದ ಮೇಲೆ ತುರ್ಕಿಯಲ್ಲಿದ್ದ ಗ್ರೀಕರು ಗ್ರೀಸಿಗೂ ಗ್ರೀಸ್‍ನಲ್ಲಿದ್ದ ತುರುಕರು ತುರ್ಕಿಗೂ ವರ್ಗಾವಣೆಯಾದರು. ಆದರೆ ಕುಶಲ ಶಿಲ್ಪಿಗಳು, ನೇಕಾರರು, ಕಾರ್ಖಾನೆಗಳ ಒಡೆಯರು-ಇವರುಗಳಲ್ಲಿ ಬಹುಪಾಲು ಗ್ರೀಕರೇ ಆಗಿದ್ದುದರಿಂದ ಇಜ್ಮಿರ್ ತನ್ನ ಪ್ರಾಮುಖ್ಯವನ್ನು ಕಳೆದುಕೊಂಡಿತು; ಮತ್ತೆ ಎರಡನೆಯ ಮಹಾಯುದ್ಧದ ಹೊತ್ತಿಗೆ ಜಾಗತಿಕ ಪ್ರಶಸ್ತಿ ಗಳಿಸಿತು.[೨]

ಪ್ರಸಿದ್ಧಿ[ಬದಲಾಯಿಸಿ]

ಇಜ್ಮಿರ್ ಜಿಲ್ಲೆ ವ್ಯವಸಾಯ, ಗಣಿಕೆಲಸ, ಕೈಗಾರಿಕೆಗಳು, ಹಡಗಿನ ಉದ್ಯಮಗಳಿಗೆ ಪ್ರಸಿದ್ಧಿ ಪಡೆದಿದೆ. ಆಲಿವ್ ಮರಗಳು, ದ್ರಾಕ್ಷಿ, ಖರ್ಜೂರ, ಬಾದಾಮಿ, ಹೊಗೆಸೊಪ್ಪು, ಗೋಧಿ, ಬಾರ್ಲಿ, ಹತ್ತಿ ಮುಂತಾದವು ಪ್ರಮುಖ ಬೆಳೆಗಳು. ಜೇನುಸಾಕಣೆಗೂ ಇದು ಪ್ರಸಿದ್ಧ. ಹಂದಿ ಮಾಂಸದ ರಫ್ತಿಗೂ ಹಡಗು ನಿರ್ಮಾಣಕಾರ್ಯಕ್ಕೂ ಹೆಸರು ಪಡೆದಿದೆ. ಇಜ್ಮಿರ್ ಜಮಖಾನೆಗಳಿಗೆ ವಿಶ್ವ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.

ನ್ಯಾಟೋ ಒಪ್ಪಂದದಂತೆ ಆಗ್ನೇಯ ಯೂರೋಪಿನ ಸೈನಿಕ ಠಾಣೆ ಇಲ್ಲಿದೆ. ಅನೇಕ ವಿಮಾನಮಾರ್ಗ ಕೇಂದ್ರಗಳಿದ್ದು, ಉತ್ತಮವಾದ ರೈಲ್ವೆ ಸಂಪರ್ಕವಿದೆ. ಈ ಪಟ್ಟಣಕ್ಕೆ ಸ್ವಾಭಾವಿಕ ಬಂದರಿನ ಉತ್ತಮ ಅನುಕೂಲತೆಯಿದ್ದರು ಇಸ್ತಾನ್ ಬುಲ್‍ನಂಥ ರೇವು ಸೌಲಭ್ಯಗಳಿಲ್ಲ.

ಹವಾಮಾನ[ಬದಲಾಯಿಸಿ]

ಇಜ್ಮಿರ್ ಮೆಡಿಟರೇನಿಯನ್ ವಾತಾವರಣವನ್ನು ಹೊಂದಿದೆ (ಕೊಪ್ಪೆನ್ ಹವಾಮಾನ ವರ್ಗೀಕರಣ :ಸಿಎಸ್‌‌ಎ), ಇದರ ಗುಣಲಕ್ಷಣಗಳೆಂದರೆ: ಉದ್ದದ ಮತ್ತು ಒಣ ಬೇಸಿಗೆಗಳು ಮತ್ತು ತಂಪು ಮಳೆಯ ಚಳಿಗಾಲ ಸೌಮ್ಯ. ಇಜ್ಮಿರ್‌ನಲ್ಲಿ ವಾರ್ಷಿಕವಾಗಿ ಒಟ್ಟು 686 ಮಿಲಿಮೀಟರ್‌ ಮಳೆಯಾಗುತ್ತದೆ; ಆದರೆ, 77% ಮಳೆ ನವೆಂಬರ್ನಿಂದ ಮಾರ್ಚ್ವರೆಗೆ ಬರುತ್ತದೆ. ಉಳಿದ ಮಳೆ ಏಪ್ರಿಲ್‌ಯಿಂದ ಮೇ ಮತ್ತು ಸೆಪ್ಟೆಂಬರ್‌ಯಿಂದ ಅಕ್ಟೋಬರ್‌ ಸಮಯದಲ್ಲಿ ಬರುತ್ತದೆ. ಜೂನ್ನಿಂದ ಆಗಸ್ಟ್ ಅತಿ ಕಡಿಮೆ ಮಳೆಯಾಗುತ್ತದೆ.

ಚಳಿಗಾಲದಲ್ಲಿ ಸಾಮಾನ್ಯವಾಗಿ, ಗರಿಷ್ಠ ತಾಪಮಾನವು 10°ಸಿ ಮತ್ತು 16°ಸಿ (50°ಎಫ್ ಮತ್ತು 61°ಎಫ್) ನಡುವೆಯಿರುತ್ತದೆ. ಇದು ಅಪರೂಪದ ಸಾಧ್ಯತೆಯಾದರೂ,ಇಜ್ಮಿರ್‌ನಲ್ಲಿ ಡಿಸೆಂಬರ್ನಿಂದ ಫೆಬ್ರುವರಿವರೆಗೆ ಇಡೀ ದಿನದ ಬದಲಿಗೆ ಹಿಮ ಕೆಲವು ಗಂಟೆಗಳ ಕಾಲ ಬೀಳುವುದು. ಬೇಸಿಗೆಯಲ್ಲಿ , ಅದು ಜೂನ್ನಿಂದ ಸೆಪ್ಟೆಂಬರ್ವರೆಗೆ ಗಾಳಿಯ ಉಷ್ಣಾಂಶ 40 ° ಸಿ (104 ಡಿಗ್ರಿ ಫ್ಯಾರನ್ಹೀಟ್)ವರೆಗೆ ಏರಬಹುದು. ಆದರೆ ಸಾಮಾನ್ಯವಾಗಿ ಇದು 30°ಸಿ ಮತ್ತು 36°ಸಿ (86°ಎಫ್ ಮತ್ತು 97°ಎಫ್) ನಡುವೆಯಿದುತ್ತದೆ. ದಾಖಲೆ ಮಳೆ = 145,3 ಕೆಜಿ / ಮೀ (29.09.2006) ದಾಖಲೆ ಹಿಮ = 8.0 ಸೆಂ (04.01.1979)

ಕ್ರೀಡೆ[ಬದಲಾಯಿಸಿ]

ಹಲವಾರು ಪ್ರಮುಖ ಅಂತರರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳನ್ನು ಇಜ್ಮಿರ್ ನಡೆದಿವೆ:

  • 26-28 ಏಪ್ರಿಲ್ 2013: 2012-13 ಎಫ್ಐಬಿಎ ಯುರೊಛಲ್ಲೆನ್‌ಜ್ (EuroChallenge) ಫೈನಲ್ ಫೋರ್.
  • 18-19 ಜೂನ್ 2011 : 2011 ಮೊದಲ ಯುರೋಪಿಯನ್ ಟೀಮ್ ಚಾಂಪಿಯನ್ಷಿಪ್ಗಳು ಲೀಗ್.
  • 28 ಆಗಸ್ಟ್ - 2 ಸೆಪ್ಟೆಂಬರ್ 2010 : ಗ್ರೂಪ್ ಡಿ 2010 ಎಫ್ಐಬಿಎ ​​ವಿಶ್ವ ಚಾಂಪಿಯನ್ಷಿಪ್.
  • 4-9 ಜುಲೈ 2006 : 2006 ಯುರೋಪಿಯನ್ ಹಿರಿಯ ಫೆನ್ಸಿಂಗ್ ಚಾಂಪಿಯನ್ಷಿಪ್.
  • 14-23 ಜುಲೈ 2006 : ಮೆನ್ U20 ಯುರೋಪಿಯನ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್.

ಉಲ್ಲೇಖಗಳು[ಬದಲಾಯಿಸಿ]

  1. http://www.bbc.com/news/world-europe-22802572
  2. http://www.akparti.org.tr/site/haberler/iste-35-izmir-35-proje/8254#1
"https://kn.wikipedia.org/w/index.php?title=ಇಜ್ಮಿರ್&oldid=924562" ಇಂದ ಪಡೆಯಲ್ಪಟ್ಟಿದೆ