ಇಕಿರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಕಿರು ೧೯೫೨ ರಲ್ಲಿ ಹೊರಬಂದ ಅಕಿರಾ ಕುರೊಸಾವಾರವರು ನಿರ್ದೇಶಿಸಿದ ಜಪಾನ್ ದೇಶದ ಚಿತ್ರ. ಈ ಚಿತ್ರಕ್ಕೆ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಲಭಿಸಿದೆ.

ಕಥೆ[ಬದಲಾಯಿಸಿ]

ಊರಿನ ನಾಗರಿಕ ಸೇವೆ, ನಗರ ಪಾಲಿಕೆ ಕಚೇರಿಯಲ್ಲಿ 'ಪಬ್ಲಿಕ್ ಅಫ್ಫೇರ್ಸ್' ನೋಡಿಕೊಳ್ಳುತ್ತಿದ್ದ 'ಕಾಂಜಿ ವಾಂತನಾಬೆ', ತನ್ನ ಮೂವತ್ತು ಕಾಲದ ಸರಕಾರೀ ನೌಕರಿಯಲ್ಲಿ ಮಾಡಿದ್ದೇನೂ ಇಲ್ಲ, ಕೇವಲ ಸಮಯ ಹಾಳು. ಇವನ ದಿನನಿತ್ಯದ ಕೆಲಸ ಸರಕಾರಿ ಕಚೇರಿಯಲ್ಲಿ ಕುಳಿತು ಕಚೇರಿಯ ಮುಖ್ಯಸ್ತನಾಗಿ ಕಾಗದ ಪತ್ರಗಳ ಮೇಲೆ ಸ್ಟ್ಯಾಂಪ್ ಹಾಕುವುದು. ದೂರುಗಳನ್ನು ಕೊಂಡೊಯ್ದ ನಾಗರಿಕರನ್ನು ಕಾರಣಗಳನ್ನೊಡ್ಡಿ ಬೇರೊಂದು ಇಲಾಖೆಗೆ ದೂರು ನೀಡುವಂತೆ ದಬ್ಬುವುದು. ಹೀಗೇ ನೀರಸ ಜೀವನ ಸಾಗಿದ್ದಾಗ ಒಮ್ಮೆಲೇ ತನಗೆ ಕರುಳಿನ ಕ್ಯಾನ್ಸರ್ ಇರುವುದೆಂದು 'ಕಾಂಜಿ ವಾಂತನಾಬೆ'ಗೆ ತಿಳಿಯುತ್ತದೆ. ಇನ್ನು ಕೆಲವೇ ಕಾಲ ತಾನು ಬದುಕಿರುವುದೆಂದು ತಿಳಿದ ಕಾಂಜಿಗೆ ನಿಜಜೀವನದ ಅರಿವಾಗುತ್ತದೆ. ತಾನು ತನ್ನ ಜೀವನದಲ್ಲಿ ಸಿಕ್ಕ ಸಮಯವನ್ನು ಹಾಳು ಮಾಡಿದ ಅರಿವಾಗುತ್ತದೆ. ಇನ್ನು ತನ್ನ ಅಂತ್ಯಕ್ಕೆ ಆರು ತಿಂಗಳಿಗಿಂತ ಹೆಚ್ಚು ಕಾಲ ಇಲ್ಲವೆಂದು ತಿಳಿದ ಕಾಂಜಿ ವಾಂತನಾಬೆ ಕೊನೆಗೊಂದು ನಿರ್ಧಾರಕ್ಕೆ ಬರುತ್ತಾನೆ. ಕೊಳಚೆ ಪ್ರದೇಶದ ಜನರು ಬಂದು ಆಗಾಗ ದೂರು ನೀಡುತ್ತಿದ್ದ ಕೊಳಕಿನ ನಾಲೆಯನ್ನು ಸ್ವಚ್ಛಗೊಳಿಸಿ ಅಲ್ಲೊಂದು ಪಾರ್ಕ್ ಸ್ಥಾಪಿಸುವಲ್ಲಿ ಅವಿರತ ಪ್ರಯತ್ನ ಮಾಡಿ ಕೊನೆಗೆ ಯಶಸ್ವಿಯಾಗುತ್ತಾನೆ. ಕೊನೆಗೊಂದು ದಿನ ಅದೇ ಪಾರ್ಕಿನಲ್ಲಿ ತನ್ನ ಜೀವನದಲ್ಲಿ ಕಾಣಿಸಿಕೊಂಡ ಹೊಸ ತೃಪ್ತಿಯಿಂದ, ಸಂತೋಷದಿಂದ ಪ್ರಾಣ ಬಿಡುತ್ತಾನೆ.

ನಿರ್ದೇಶನ[ಬದಲಾಯಿಸಿ]

ಜಪಾನಿನ ಸುಪ್ರಸಿದ್ಧ ನಿರ್ದೇಶಕರಾದ ಅಕಿರಾ ಕುರೊಸಾವಾರವರ ಚಿತ್ರವಿದು. ಅಮೇರಿಕಾ ದೇಶದ ಹಲವು ಸಿನಿಮಾ ವಿಮರ್ಶಕರ ಪ್ರಕಾರ ಇದು ಕುರೊಸಾವಾರವರ ಜೀವನದ ಅತ್ಯುತ್ತಮ ಚಿತ್ರ.

"https://kn.wikipedia.org/w/index.php?title=ಇಕಿರು&oldid=933633" ಇಂದ ಪಡೆಯಲ್ಪಟ್ಟಿದೆ