ಇಂಫಾಲ್ ಕದನ
ಗೋಚರ
ಇಂಫಾಲ್ ಕದನ - ಎರಡನೆಯ ಮಹಾಯುದ್ಧದ ಕಾಲದಲ್ಲಿ ಜಪಾನೀಯರು ಏಷ್ಯದ ಆಗ್ನೇಯ ಭಾಗವನ್ನೆಲ್ಲ ವಶಪಡಿಸಿಕೊಂಡು ಬರ್ಮಾದ ಉತ್ತರಗಡಿ ದಾಟಿ ಭಾರತಕ್ಕೆ ನುಗ್ಗಲೆತ್ನಿಸಿದ್ದಾಗ 1945ರ ಮೇ ತಿಂಗಳಲ್ಲಿ ಅವರನ್ನು ತಡೆಗಟ್ಟಿದ ಕದನ.
ಭಾರತೀಯರು ಮತ್ತು ಘೂರ್ಕ ಸೈನಿಕರನ್ನೊಳಗೊಂಡ 14ನೆಯ ಬ್ರಿಟಿಷ್ ಪಡೆ, ಸಮರ್ಥ ಜಪಾನೀ ದಳಪತಿ ಲೆಫ್ಟಿನೆಂಟ್ ಜನರಲ್ ಎಂ. ಕವಾಬೆಯ ಸೇನಾಧಿಪತ್ಯದಲ್ಲಿ ಮುನ್ನುಗ್ಗಿ ಬರುತ್ತಿದ್ದ ದೊಡ್ಡ ಸೈನ್ಯವನ್ನು ಹಿಮ್ಮೆಟ್ಟುವಂತೆ ಮಾಡಿದ್ದರಿಂದ ಜಪಾನೀಯರು ಭಾರತಕ್ಕೂ ನುಗ್ಗಬಹುದೆಂಬ ಭಯ ನಿವಾರಣೆಯಾಯಿತು. ಅಲ್ಲದೆ ಬ್ರಿಟಿಷ್‍ಪಡೆ ಬರ್ಮಾದೇಶದೊಳಗೆ ನುಗ್ಗಿ ಅಲ್ಲಿದ್ದ ಜಪಾನೀಯರನ್ನು ಹೊಡೆದಟ್ಟುವುದಕ್ಕೆ ಅನುಕೂಲವಾಯಿತು. ಭೂ ಮತ್ತು ವಾಯುಪಡೆಗಳನ್ನು ಅತ್ಯಂತ ಕೌಶಲದಿಂದಲೂ ಪರಿಣಾಮಕಾರಿಯಾಗಿಯೂ ಇಲ್ಲಿ ಬಳಸಲಾಯಿತು. ಇದು ಹೆಚ್ಚು ಪ್ರತಿಭಟನೆಯೇ ಇಲ್ಲದೆ ನುಗ್ಗಿಬರುತ್ತಿದ್ದ ಜಪಾನೀಯರಿಗೆ ಆದ ಮೊದಲ ದೊಡ್ಡ ಪರಾಭವ.
ಇದನ್ನೂ ನೋಡಿ
[ಬದಲಾಯಿಸಿ]ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: