ಇಂಡೊನೇಷ್ಯ ಭಾಷೆ
| Indonesian | |
|---|---|
| bahasa Indonesia | |
| Pronunciation | ಟೆಂಪ್ಲೇಟು:IPA-id |
| Native to | ಇಂಡೋನೇಷ್ಯಾ |
Native speakers | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".[೧] L2 speakers: ೧೫೬ million (2010 census)[೧] |
| Latin (Indonesian alphabet) Indonesian Braille | |
| Official status | |
Official language in | |
| Language codes | |
| ISO 639-1 | id |
| ISO 639-2 | ind |
| ISO 639-3 | ind |
ಇಂಡೊನೇಷ್ಯ ಭಾಷೆ
ಭಾಷಾ ಇಂಡೊನೇಷ್ಯ ಎಂಬ ಹೆಸರಿನ ಈ ಭಾಷೆ ಇಂಡೊನೇಷ್ಯ ಗಣರಾಜ್ಯದ ಅಧಿಕೃತ ಭಾಷೆ. ಇದು ಭಾಷೆಯ ಶಿಷ್ಟರೂಪಗಳಲ್ಲಿ ಒಂದು. ಅದರ ಇನ್ನೊಂದು ಶಿಷ್ಟರೂಪ ಮಲೆಯದ ಭಾಷೆ. ಇದನ್ನು ಅನೇಕ ವೇಳೆ ಮಲೈ ಎಂದು ಕರೆಯುವ ವಾಡಿಕೆಯುಂಟು. ಶಬ್ದ ಸಂಪತ್ತು ಮತ್ತು ಅದಕ್ಕೆ ಸಂಬಂಧಿಸಿದ ಅಕ್ಷರ ಸಂಯೋಜನ ವಿಧಾನಗಳಲ್ಲಿ ಈ ಶಿಷ್ಟರೂಪಗಳು ಬಹುಮಟ್ಟಿಗೆ ಒಂದಕ್ಕಿಂತ ಒಂದು ಭಿನ್ನವಾಗಿವೆಯಾದರೂ ಇವುಗಳ ಮೂಲಭೂತ ರಚನೆ ಮತ್ತು ಶಬ್ದಕೋಶ ಒಂದೇ ಆಗಿದೆ. ಪರ್ಯಾಯದ್ವೀಪದಲ್ಲಿ ಬಳಸುವ ಮಲೈ ಭಾಷೆಗೆ ಲ್ಯಾಟಿನ್ ಮತ್ತು ಅರಬ್ಬೀ ವರ್ಣಮಾಲೆಯನ್ನೇ ಅಧಿಕೃತವಾಗಿ ಬಳಸಲಾಗುತ್ತಿದೆ. ಆದರೆ ಇಂಡೊನೇಷ್ಯ ಭಾಷಾ ಲಿಪಿ ಲ್ಯಾಟಿನ್ನಿನದಾಗಿದೆ. ಇಂಡೊನೇಷ್ಯನ್ ಭಾಷೆಯ ಅಕ್ಷರ ಸಂಯೋಜನೆ ಮಲೈ ಭಾಷೆಯ ಅಕ್ಷರ ಸಂಯೋಜನೆಗಿಂತ ಭಿನ್ನವಾಗಿದೆ. ಅಲ್ಲಿ ಟ್ಜ, ದ್ವ, ನ್ಜ, ಜ ಗಳಿಗೆ ಬದಲಾಗಿ ಛ. ಜ, ನ್ಯ, ಯ ಗಳನ್ನು ಕ್ರಮವಾಗಿ ಬಳಸುತ್ತಾರೆ.
ಭೌಗೋಳಿಕ ಪ್ರಸರಣ ಹಂಚಿಕೆ
[ಬದಲಾಯಿಸಿ]ಇಂಡೊನೇಷ್ಯ ಭಾಷೆ ರಾಷ್ಟ್ರದ ಅಧಿಕೃತ ಭಾಷೆಯಾಗಿದ್ದರೂ ಅದು ಅಲ್ಲಿಯ ಜನಸಂಖ್ಯೆಯ ಸುಮಾರು 10ನೆಯ ಒಂದು ಭಾಗದಷ್ಟು ಜನರ ಪ್ರಥಮ ಭಾಷೆ ಮಾತ್ರ ಆಗಿದೆ. ಇವರಲ್ಲಿ ಬಹುಪಾಲು ಮಲೆಯನ್ನರೇ ಇದ್ದಾರೆ. ಮತ್ತೆ ಕೆಲವರು ಇಂಡೊನೇಷ್ಯ ಭಾಷೆಯನ್ನು ತಮ್ಮ ಮನೆಯ ಭಾಷೆಯನ್ನಾಗಿ ಸ್ವೀಕರಿಸಿರುವ ತಂದೆ ತಾಯಿಗಳ ಮಕ್ಕಳು. ಉಳಿದವರಿಗೆಲ್ಲ ಈ ಭಾಷೆಯನ್ನು ಶಾಲೆಯಲ್ಲಿ ಹೇಳಿಕೊಡಬೇಕಾಗಿದೆ. ಇಂಡೊನೇಷ್ಯದ ಎಲ್ಲ ಭಾಷೆಗಳೂ ಒಂದಲ್ಲ ಒಂದು ರೀತಿಯಲ್ಲಿ ಮಲೈ ಭಾಷೆಗೆ ಸಂಬಂಧಪಟ್ಟಿರುವುದರಿಂದ ದ್ವಿತೀಯ ಭಾಷೆಯಾಗಿ ಇಂಡೊನೇಷ್ಯ ಭಾಷೆಯನ್ನು ಕಲಿಯುವುದು ಸುಲಭ.
ಇತಿಹಾಸ
[ಬದಲಾಯಿಸಿ]1928ರಲ್ಲಿ ಮಲೈ ಭಾಷೆಯನ್ನು ರಾಷ್ಟ್ರೀಯ ಚಳವಳಿಯ ಹಾಗೂ ಭವಿಷ್ಯದಲ್ಲಿ ರೂಪು ತಳೆಯಲಿದ್ದ ಸ್ವತಂತ್ರ ಇಂಡೊನೇಷ್ಯ ರಾಷ್ಟ್ರದ ಭಾಷೆಯಾಗಿ ಸ್ವೀಕರಿಸಲಾಯಿತು. ಈಸ್ಟ್ ಇಂಡಿಯ ದ್ವೀಪಸ್ತೋಮದಾದ್ಯಂತವೂ ಸಂಪರ್ಕಭಾಷೆಯಾಗಿ ಮಲೈ ಭಾಷೆಯನ್ನು ಬಹುಕಾಲದಿಂದ ವ್ಯಾಪಕವಾಗಿ ಬಳಸುತ್ತಿದರು. ಅಲ್ಲದೆ ಮಲೈ ಭಾಷೆಯನ್ನು ಸ್ವೀಕರಿಸುವುದರಿಂದ ಈ ಮೊದಲೇ ಪ್ರಬಲವಾಗಿದ್ದಂಥ ವರ್ಗವೊಂದಕ್ಕೆ ರಾಜಕೀಯ ಪ್ರಾಬಲ್ಯ ದೊರೆತಂತಾಗುವುದಿಲ್ಲವೆಂಬ ಅಂಶವನ್ನೂ ಗಣನೆಗೆ ತೆಗೆದುಕೊಳ್ಳಲಾಯಿತು. ಹೀಗಾಗಿ ಬಹುಸಂಖ್ಯಾತರ ಭಾಷೆಗಳಾಗಿದ್ದ ಇತರ ಭಾಷೆಗಳನ್ನು, ಉದಾಹರಣೆಗೆ-ಜಾವ ಭಾಷೆಯನ್ನು ಬದಿಗಿರಿಸಿ ಮಲೈ ಭಾಷೆಯನ್ನು ಸ್ವೀಕರಿಸಲು ಇವೇ ಪ್ರಮುಖ ಕಾರಣಗಳಾದವು.[೨][೩]
ಇಂಡೊನೇಷ್ಯದ ಮೇಲಿನ ಅಧಿಕಾರ ಉಳಿಸಿಕೊಳ್ಳಲು ನಡೆದ ಯತ್ನದ ಅವಧಿಯಲ್ಲಿ ಜಪಾನೀಯರೇ ಇಂಡೊನೇಷ್ಯ ಭಾಷೆಯನ್ನು ಬಳಸಿ ಬೆಳೆಸಿದ್ದರಾದರೂ ಯುದ್ಧ ಮುಗಿದು ದೇಶ ಸ್ವಾತಂತ್ರ್ಯವನ್ನು ಗಳಿಸಿದ ಮೇಲೆಯೇ ಈ ಭಾಷೆಯನ್ನು ವ್ಯಾಪಕವಾಗಿ ಬಳಸಲು ತೀವ್ರ ಕ್ರಮಕೈಗೊಳ್ಳಲಾಯಿತು. ವಿe್ಞÁನ ಕ್ಷೇತ್ರದಲ್ಲಿ ಹಾಗೂ ಸಾಮಾನ್ಯ ಬಳಕೆಯಲ್ಲಿ ಯಾವ ಶಬ್ದಗಳನ್ನು ಸ್ವೀಕರಿಸಬೇಕು, ಯಾವ ಶಬ್ದಗಳನ್ನು ಬಿಡಬೇಕು ಎಂಬ ವಿಚಾರವನ್ನು ನಿರ್ಣಯಿಸುವ ಅಧಿಕಾರವನ್ನು ಪಾರಿಭಾಷಿಕಶಬ್ದ ಸಮಿತಿಯೊಂದಕ್ಕೆ ನೀಡಲಾಯಿತು. ಇಂದು ಅಧಿಕೃತ ಪ್ರಕಟಣೆಗಳಲ್ಲಿ, ವರ್ತಮಾನ ಪತ್ರಿಕೆಗಳಲ್ಲಿ, ನಿಯತಕಾಲಿಕ ಪತ್ರಿಕೆಗಳಲ್ಲಿ, ಮಾತ್ರವಲ್ಲದೆ ಪಠ್ಯಪುಸ್ತಕಗಳಲ್ಲೂ ವೈe್ಞÁನಿಕ ಮತ್ತು ಸಾಹಿತ್ಯಕ ಪ್ರಕಟಣೆಗಳಲ್ಲೂ ಇಂಡೊನೇಷ್ಯ ಭಾಷೆಯನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ಉಲ್ಲೇಖ ದೋಷ: Invalid
<ref>tag; no text was provided for refs namedsensus2010 - ↑ http://www.omniglot.com/writing/indonesian.htm
- ↑ http://www.bbc.co.uk/ws/languages