ಇಂಗಳದಾಳು

ವಿಕಿಪೀಡಿಯ ಇಂದ
Jump to navigation Jump to search
ಚಿತ್ರರ್ದುಗದ ನಕ್ಷೆ

ಇಂಗಳದಾಳು ಚಿತ್ರದುರ್ಗ ತಾಲ್ಲೂಕಿನ ಒಂದು ಗ್ರಾಮ. ಚಿತ್ರದುರ್ಗದಿಂದ ಆಗ್ನೇಯಕ್ಕೆ 10ಕಿಮೀ ದೂರದಲ್ಲಿದೆ. ಬಹಳ ಹಿಂದಿನ ಕಾಲದಿಂದ ಅಲ್ಲಿ ಸಿಗುವ ತಾಮ್ರದ ಅದುರನ್ನು ಸಂಸ್ಕರಿಸಿ ಕೆಂಡದಂಥ (ಇಂಗಳ) ವರ್ಣದ ಸ್ವಚ್ಫ ತಾಮ್ರವನ್ನು ಉತ್ಪಾದಿಸುತ್ತಿದ್ದುದರಿಂದ.ಈ ಪ್ರದೇಶಕ್ಕೆ ಇಂಗಳದಾಳು ಎಂಬ ಹೆಸರು ಬಂದಿದೆ. ರಾಜಧಾನಿ ಬೆಂಗಳೂರಿನಿಂದ 190ಕಿಮೀ ದೂರದಲ್ಲಿದ್ದು ಬೆಂಗಳೂರು- ಮುಂಬಯಿ ರಾಷ್ಟ್ರೀಯ ಹೆದ್ದಾರಿ ಈ ಪ್ರದೇಶದ ಮೂಲಕ ಹಾದುಹೋಗುತ್ತದೆ.

ಇತಿಹಾಸ[ಬದಲಾಯಿಸಿ]

ಕರ್ನಾಟಕದಲ್ಲಿ ಅತಿ ಪ್ರಾಚೀನ ತಾಮ್ರದ ಗಣಿ ಇರುವುದು ಇಂಗಳದಾಳಿನಲ್ಲಿ. ಈ ಪ್ರದೇಶ ಕಡಿದಾದ ಬೆಟ್ಟದ ಸಾಲುಗಳಿಂದ ಆವೃತವಾಗಿದೆ.ಹಸಿರುಡದ ಈ ಬೋಳು ಬೆಟ್ಟಗಳು ಕಡಿದಾಗಿದ್ದು ಸಮುದ್ರಮಟ್ಟಕ್ಕಿಂತ 610ಮೀ.ಗಳಷ್ಟು ಎತ್ತರವಿದೆ. ಈ ಬೆಟ್ಟದ ಸಾಲಿನ ಮಧ್ಯೆ 1007ಮೀ.ಗಳ ಎತ್ತರದ ಬೆಳ್ಳಿ ಗುಡ್ಡ ವಿಶಿಷ್ಟವಾಗಿ ಕಾಣುತ್ತದೆ. ಬೆಳ್ಳಿಗುಡ್ಡದ ಸಾಲಿನ ಪಶ್ಚಿಮ ತಪ್ಪಲಿನ ಗರ್ಭದಲ್ಲಿ 30ಕಿಮೀ ದೂರ ಆಂಟಿಮನಿ, ಆರ್ಸೆನಿಕ್, ಸೀಸ ಮತ್ತು ತಾಮ್ರದ ಅದುರುಗಳು ಕಂಡುಬಂದಿವೆ. ಇತ್ತೀಚೆಗೆ ನಡೆದ ಅಂತರ್ಗತ ಶೋಧನೆಯಿಂದ ತಿಳಿದು ಬಂದಂತೆ 1000ಮೀ ಉದ್ದ ಹಾಗೂ 300ಮೀ. ಆಳದ ಶಿಲಾಸ್ತೋಮದಾದ್ಯಂತ ಅದುರುಗರ್ಭಿತ ಬೆಣಚು ಶಿಲೆಗಳು ಹರಡಿವೆ. ಚಾಲ್ಕೊಪೈರೈಟ್, ಪಿರ್ಹೊಟೈಟ್ ಎಂಬ ತಾಮ್ರ ಹಾಗೂ ಗಂಧಕದ ಅದುರುಗಳು ಸ್ಫಾಲರೈಟ್ ಮತ್ತು ಗೆಲಿನಾ ಎಂಬ ಸತು ಮತ್ತು ಸೀಸದ ಅದುರುಗಳು ಈ ಶಿಲಾಗರ್ಭದಲ್ಲಿವೆ. ಅನೇಕ ತಜ್ಞರ ಪ್ರಯತ್ನದಿಂದ ಇಲ್ಲಿ ತಾಮ್ರದ ಅದುರಿನ ಉತ್ಪಾದನೆ ಆರಂಭವಾಗಿದೆ. 1974ರಲ್ಲಿ ಅದುರಿನ ಸಂಸ್ಕರಣ ಸ್ಥಾವರವನ್ನು ಸ್ಥಾಪಿಸಲಾಯಿತು. ಕೈಗಾರಿಕೆಗಳಿಗೆ ತಾಮ್ರ ಅತಿ ಮುಖ್ಯ ವಸ್ತುವಾಗಿದ್ದು ಅದನ್ನು ನೀಡುವ ಇಂಗಳದಾಳು ಕರ್ನಾಟಕದ ಹೆಮ್ಮೆಯ ಸ್ಥಳವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

[೧] [೨]

[೩]

  1. https://villageinfo.in › Karnataka › Chitradurga › Chitradurga
  2. soki.in/ingaladalu-chitradurga-chitradurga/
  3. https://www.onefivenine.com/india/villages/Chitradurga/Chitradurga/Ingaladalu