ಆ್ಯನ್ ಬ್ರೌನೆಲ್ ಜೇಮ್ಸ್‌ನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆ್ಯನ್ ಬ್ರೌನೆಲ್ ಜೇಮ್ಸ್‌ನ್ - 1794-1860, ಐರ್ಲೆಂಡಿನ ಕಲಾವಿಮರ್ಶಕಿ, ಪ್ರಬಂಧಕಾರ್ತಿ.

ಬದುಕು, ಬರಹ[ಬದಲಾಯಿಸಿ]

ತಂದೆ ಬ್ರೌನೆಲ್ ಮರ್ಫಿ ಚಿತ್ರಕಾರ. ಜನನ ಡಬ್ಲಿನ್‍ನಲ್ಲಿ, ಅನಂತರ ತಂದೆತಾಯಿಗಳು ಇಂಗ್ಲೆಂಡಿನಲ್ಲಿ ಬಂದು ನೆಲೆಸಿದರು. 1825ರಲ್ಲಿ ರಾಬರ್ಟ್ ಜೇಮ್ಸನ್ ಎಂಬ ರಾಜಕಾರಣಿಯೊಡನೆ ಈಕೆಯ ವಿವಾಹವಾಯಿತು. ಈತ ಹೆಚ್ಚಿನ ಸಂಪಾದನೆಗಾಗಿ ಕೆನಡಕ್ಕೆ ಹೊರಟುಹೋದ. ಆ್ಯನ್ ಅವನನ್ನು ಹಿಂಬಾಲಿಸಲಿಲ್ಲ. ವಿರಹದ ದುಃಖವನ್ನು ಗ್ರಂಥ ರಚನೆಯಿಂದ ಭರಿಸಿಕೊಂಡಳು. ಡೈರಿ ಆಫ್ ಎನ್ ಆನ್ವೆಯೀ (1826), ಲವ್ಸ್ ಆಫ್ ಪೊಯೆಟ್ಸ್ (1826), ಮೆಮ್ವಾರ್ಸ್ ಆಫ್ ಫೀಮೇಲ್ ಎಂಪರರ್ಸ್ (1831)-ಇವು ಈಕೆಯ ಮುಖ್ಯ ಕೃತಿಗಳು. ಕ್ಯಾರಕ್ಟರಿಸ್ಟಿಕ್ಸ್ ಆಫ್ ಷೇಕ್ಸ್‍ಫಿಯರ್ಸ್ ವಿಮೆನ್ (1832) ಎಂಬ ಗ್ರಂಥ ಈಕೆಗೆ ವಿಮರ್ಶಕಳೆಂಬ ಕೀರ್ತಿ ತಂದಿತು. 1836-38ರಲ್ಲಿ ಕೆನಡಕ್ಕೆ ಭೇಟಿಕೊಟ್ಟು ಎರಡು ವರ್ಷ ಗಂಡನೊಡನೆ ಇದ್ದಳು. ಆಗಲೇ ಆತ ಮೇಯರ್ ಪದವಿಗೆ ಏರಿದ್ದ. ಮರಳಿ ಇಂಗ್ಲೆಂಡಿಗೆ ಬಂದಮೇಲೆ ಚಿತ್ರಕಲೆಯ ವಿಮರ್ಶೆಯಲ್ಲಿ ತೊಡಗಿದಳು. ವಿಂಟರ್ ಸ್ಟಡೀಸ್ ಅಂಡ್ ಸಮ್ಮರ್ ರ್ಯಾಂಬಲ್ಸ್ ಇನ್ ಕೆನಡ (1838) ಗ್ರಂಥ ಕೆನಡ ಭೇಟಿಯ ಫಲ. ಪಬ್ಲಿಕ್ ಪಿಕ್ಚರ್ ಗ್ಯಾಲರೀಸ್ ಆಫ್ ಲಂಡನ್ (1942), ಮೆಮರೀಸ್ ಆಫ್ ಅರ್ಲಿ ಇಟಾಲಿಯನ್ ಪೇಂಟರ್ಸ್ (1945) ಗ್ರಂಥಗಳು ಇವಳ ಚಿತ್ರವಿಮರ್ಶೆಯ ಪ್ರಥಮ ಫಲಗಳು. ಮುಖ್ಯ ಕೃತಿಗಳು ಸೇಕ್ರೆಡ್ ಅಂಡ್ ಲೆಜೆಂಡರಿ ಆರ್ಟ್ (1848), ಲೆಜೆಂಡ್ ಆಫ್ ದಿ ಮೊನ್ಯಾಸ್ಟಿಕ್ ಆರ್ಡರ್ಸ್ (1850), ಲೆಜೆಂಡ್ಸ್ ಆಫ್ ದಿ ಮಡೋನಾ.