ವಿಷಯಕ್ಕೆ ಹೋಗು

ಆಸ್ಟ್ರಲೇಷ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾಮಾನ್ಯವಾಗಿ ಏಷ್ಯದ ದಕ್ಷಿಣ ಭಾಗದಲ್ಲಿರುವ ಭೂಭಾಗವನ್ನು ಸೂಚಿಸಲು ಈ ಶಬ್ದವನ್ನು ಮೊದಮೊದಲಿಗೆ ಬಳಸಲಾಗಿತ್ತು. ವ್ಯಾಪಕ ದೃಷ್ಟಿಯಲ್ಲಿ ಇದು ಟಾಸ್ಮೇನಿಯವನ್ನೊಳಗೊಂಡಂತಿರುವ ಆಸ್ಟ್ರೇಲಿಯ ಮತ್ತು ನ್ಯೂಜೀ಼ಲೆಂಡ್, ದ್ವೀಪವನ್ನು ಒಟ್ಟಾರೆ ಈ ಹೆಸರಿನಿಂದ ಕರೆಯುತ್ತಾರೆ. ಫ್ರಾನ್ಸಿನ ಪಂಡಿತನಾಗಿದ್ದ ಚಾರ್ಲ್ಸ್ ಡ ಬ್ರೋಸ್ (1709-77) ಹಿಸ್ಟರಿ ಡೆಸ್ ನ್ಯಾವಿಗೇಷನ್ಸ್ ಆಕ್ಸ್ ಟೆರಿಸ್ ಆಸ್ಟ್ರಲಿಸ್ (1756) ಎಂಬ ತನ್ನ ಪುಸ್ತಕದಲ್ಲಿ ಆಸ್ಟ್ರಲೇಷ್ಯ ಎಂಬ ಪದವನ್ನು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ. ಕೆಲವುವೇಳೆ ಆಸ್ಟ್ರೇಲಿಯ ಮತ್ತು ನ್ಯೂಜೀಲೆಂಡುಗಳನ್ನು ಒಟ್ಟಿಗೆ ಹೇಳುವಾಗ ಆಸ್ಟ್ರಲೇಷು ಎಂಬ ಹೆಸರಿನಿಂದ ಕರೆಯುವುದು ಬಳಕೆಯಲ್ಲಿದೆ.