ಆಶ ಅಗರ್ವಾಲ್
ಆಶ ಅಗರ್ವಾಲ್ ಭಾರತದ ಮಾಜಿ ಮ್ಯಾರಥಾನ್ ಓಟಗಾರ್ತಿ. ಇವರು ಏಷಿಯನ್ ಪಂದ್ಯಾವಳಿಯಲ್ಲಿ ಪದಕ ಗಳಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.ಇವರಿಗೆ 1985ರಲ್ಲಿ ಭಾರತೀಯ ಕ್ರೀಡಾ ಸಾಧನೆಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿಯಾದ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.[೧]
ಜನನ
[ಬದಲಾಯಿಸಿ]ಇವರು ೧೯೬೫ನೇ ಜನವರಿ ೨೬ರಂದು ಜನಿಸಿದರು.[೨]
ಸಾಧನೆ
[ಬದಲಾಯಿಸಿ]1985ರ ಸೆಪ್ಟೆಂಬರ್ ನಲ್ಲಿ ಜಕಾರ್ತದಲ್ಲಿ ನೆಡೆದ ಏಷಿಯನ್ ಟ್ರ್ಯಾಕ್ ಮತ್ತು ಫೀಲ್ಡ ಮೀಟ್ ನಲ್ಲಿ, ಮ್ಯಾರಥಾನ್ ಓಟದಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಗಳಿಸಿದ್ದಾರೆ.ಈ ಮ್ಯಾರಥಾನ್ ಓಟವನ್ನು ೨ ಗಂಟೆ 48 ನಿಮಿಶಗಳು ಮತ್ತು 51 ಸೆಕೆಂಡುಗ್ಲಳ ದಾಖಲೆ ಸಮಯದಲ್ಲಿ ಪೂರ್ತಿಗೊಳಿಸಿದ್ದಾರೆ. ಈ ದಿನದವರೆಗು ಈ ದಾಖಲೆಯನ್ನು ಯಾರು ಸಹ ಮುರಿದಿಲ್ಲ.
1986ರಲ್ಲಿ ನವದೆಹಲಿಯಲ್ಲಿ ನೆಡೆದ ಟ್ರಿಮಿಡಾಡ್ ಮ್ಯಾರಥಾನ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸುವುದರ ಮೂಲಕ ಇವರು ಭಾಗವಹಿಸಿದ 26 ಮ್ಯಾರಥಾನ್ ಪಂದ್ಯಾ ವಳಿಗಳಲ್ಲಿ 8 ಮ್ಯಾರಥಾನ್ ಓಟಗಳನ್ನು 2 ಗಂಟೆ 50 ನಿಮಿಷಗಳ ಪರಿಧಿಯೂಳಗೆ ಮುಗಿಸಿರುವ ಕೀರ್ತಿಯನ್ನು ಹೊಂದಿದ್ದಾರೆ.
ಜನವರಿ 27 1985 ರಲ್ಲಿ ಹಾಂಗ್ಕಾಂಗ್ ನಲ್ಲಿ ಆಯೋಜಿತವಾಗಿದ್ದ ಹಾಂಗ್ಕಾಂಗ್ ಮ್ಯಾರಥಾನ್ ನಲ್ಲಿ ಚಿನ್ನ ಗೆಲ್ಲುವ ಮೂಲಕ ಇತಿಹಾಸ ಸೃಷ್ಠಿಸಿದ್ದಾರೆ. 1989 ರಲ್ಲಿ ದೆಹಲಿಯಲ್ಲಿ ಆಯೋಜಿಸಲಾಗಿದ್ದ ಫ್ರೀಡಂ ರೇಸ್ ನಲ್ಲಿ ವಿಜೇತರಾಗಿದ್ದಾರೆ.
ಏಷಿಯನ್ ಮ್ಯಾರಥಾನ್ ಪಂದ್ಯಾವಳಿ
[ಬದಲಾಯಿಸಿ]ಇದೊಂದು ದ್ವಿವಾರ್ಷಿಕ ಅಂತರ ರಾಷ್ಟ್ರೀಯ ಪಂದ್ಯಾವಳಿ ಏಷಿಯನ್ ಅಥ್ಲೆಟಿಕ್ಸ ನ ಮ್ಯಾರಥಾನ್ ಓಟದ ಭಾಗವಾಗಿ ಏಷಿಯನ್ ಮ್ಯಾರಥಾನ್ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತದೆ. ಇದು ಏಷಿಯನ್ ಅಥ್ಲೆಟಿಕ್ಸ ಅಸೋಸಿಯೆಶನ್ ನ ಆಯೋಜಕತ್ವದಲ್ಲಿ ನೆಡೆಯುತ್ತದೆ. 1988 ರಲ್ಲಿ ಏಷಿಯನ್ ಅಥ್ಲೆಟಿಕ್ಸ ಪಂದ್ಯಾವಳಿಯಿಂದ 42 ಕಿ.ಮಿ ಓಟವನ್ನು ಕೈಬಿಡಲಾಯಿತು. ಆಗ ಈ ಏಷಿಯನ್ ಮ್ಯಾರಥಾನ್ ಪಂದ್ಯಾವಳಿಯನ್ನು ಪ್ರಾರಂಭಿಸಲಾಯಿತು. 1985 ಇನ್ನೂ ಮ್ಯಾರಥಾನ್ , ಏಷಿಯನ್ ದ್ವಿವಾರ್ಷಿಕ ಟ್ರಾಕ್ ಮತ್ತು ಫೀಲ್ಡ್ ಪಂದ್ಯಾವಳಿಯ ಭಾಗವಾಗಿದ್ದ ಕಾಲ. ಆಶ ಅಗರ್ವಾಲ್ ಅೊವರು ಮಹಿಳಾ ಮ್ಯಾರಥಾನ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗಳಿಸಿದ್ದಾರೆ.. ನಂತರ 1992 ರಲ್ಲಿ ಸುನಿತ ಗೋದ್ರ ಮತ್ತು 2016 ರಲ್ಲಿ ಗೋಪಿ ತೊನ್ಕಲ್ ರವರು ಏಷಿಯನ್ ಮ್ಯಾರಥಾನ್ ಪಂದ್ಯಾವಳಿಯಲ್ಲಿ ಪದರತೀಯರಾಗಿದ್ದಾರೆ.
ಆಟ | ಸ್ಥಳ | ಪ್ರಶಸ್ತಿ | ಪಂದ್ಯಾವಳಿ | ದಿನಾಂಕ | ಕಾಲಾವಧಿ |
---|---|---|---|---|---|
ಮ್ಯಾರಥಾನ್ | ನವದೆಹಲಿ | ೧ | ೨೫ ಅಕ್ಟೋಬರ್ ೧೯೮೩ | ೩:೦೮:೦೩ | |
ಮ್ಯಾರಥಾನ್ | ಸಿಯೋಲ | ೪ | ಸಿಯೊಲ್ ಪಂದ್ಯಾವಳಿ | ೩೦ ಸೆಪ್ಟೆಂಬರ್ ೧೯೮೪ | ೨:೪೬:೪೭ |
ಮ್ಯಾರಥಾನ್ | ಸಿಂಗಾಪುರ | ೩ | ೦೯ ಡಿಸೆಮಬರ್೧೯೮೪ | ೨:೪೫:೪೦ | |
ಮ್ಯಾರಥಾನ್ | ಹಾಂಗ್ಕಾಂಗ್ | ೧ | ಹಾಂಗ್ಕಾಂಗ್ ಪಂದ್ಯಾವಳಿ | ೨೭ ಜನವರಿ ೧೯೮೫ | ೨:೪೪:೫೧ |
ಮ್ಯಾರಥಾನ್ | ಜಕಾರ್ತ | ೧ | ಏಷಿಯನ್ ಪಂದ್ಯಾವಳಿ | ೨೯ ಸೆಪ್ಟೆಂಬರ್೧೯೮೫ | ೨:೪೮:೫೩ |
ಅರ್ಧ-ಮ್ಯಾರಥಾನ್ | ಪುನೆ | ೧ | ೨೦ಅಕ್ಟೋಬರ್ ೧೯೮೫ | ೧:೨೪:೧೦ | |
ಮ್ಯಾರಥಾನ್ | ಸಿಯೋಲ | ೫ | ಏಷಿಯನ್ ಪಂದ್ಯಾವಳಿ | ೧ಅಕ್ಟೋಬರ್ ೧೯೮೬ | ೨:೪೮:೪೧ |
ಮ್ಯಾರಥಾನ್ | ಜರ್ಮನಿ | ೧೩ | ವಿಶ್ವ ವಿದ್ಯಾರ್ಥಿ ಪಂದ್ಯಾವಳಿ | ೨೬ ಆಗಸ್ಟ ೧೯೮೯ | ೨:೫೪:೨೧ |
ಮ್ಯಾರಥಾನ್ | ನವದೆಹಲಿ | ೧ | ನವದೆಹಲಿ ರಾಷ್ಟ್ರೀಯ ಪಂದ್ಯಾವಳಿ | ೧೭ ಫೆಬ್ರವರಿ ೧೯೯೧ | ೨:೪೦:೨೬ |
ಉಲ್ಲೇಖಗಳು
[ಬದಲಾಯಿಸಿ]