ಆಶಾದೇವಿ.ಎಂ.ಎಸ್

ವಿಕಿಪೀಡಿಯ ಇಂದ
Jump to navigation Jump to search

ವಿಮರ್ಶಕಿ ಡಾ|| ಎಂ.ಎಸ್.ಆಶಾದೇವಿಯವರು ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶಿಕ್ಷಣ[ಬದಲಾಯಿಸಿ]

ಕನ್ನಡದಲ್ಲಿ ಎಂ.ಎ ಹಾಗೂ ‘ನವೋದಯ ವಿಮರ್ಶೆಯ ಮೇಲೆ ಪಾಶ್ಚಾತ್ಯ ವಿಮರ್ಶೆಯ ಪ್ರಭಾವ’ ಎನ್ನುವ ವಿಷಯದ ಮೇಲೆ ಪಿ.ಎಚ್.ಡಿ ಪದವಿ ಪಡೆದಿದ್ದಾರೆ.

ಅಂಕಣ[ಬದಲಾಯಿಸಿ]

ಪ್ರಜಾವಾಣಿಯ ಭಾನುವಾರದ ಪುರವಣಿ 'ಮುಕ್ತಛಂದ'ದಲ್ಲಿ ನಾರಿಕೇಳಾ ಎಂಬ ಅಂಕಣವನ್ನು ಬರೆಯುತ್ತಿದ್ದರು. ಈ ಅಂಕಣದಲ್ಲಿ ಅವರು ಸ್ತ್ರೀವಾದದ ಬಗ್ಗೆ ಬರೆಯುತ್ತಿದ್ದರು.

ಕೃತಿಗಳು[ಬದಲಾಯಿಸಿ]

೧. ಸ್ತ್ರೀಮತವನುತ್ತರಿಸಲಾಗದೆ ? (ಸಾಹಿತ್ಯ- ಸಂಸ್ಕೃತಿಯನ್ನು ಕುರಿತ ಲೇಖನಗಳ ಸಂಗ್ರಹ)
೨. ಹುದುಗಲಾರದ ದುಃಖ.
೩. ನಡುವೆ ಸುಳಿವ ಆತ್ಮ.
೪. ಭಾರತದ ಬಂಗಾರ.

ಪ್ರಶಸ್ತಿ[ಬದಲಾಯಿಸಿ]

  1. ಜಿಎಸ್ಸೆಸ್ ಪ್ರಶಸ್ತಿ
  2. ವಿ.ಎಂ.ಇನಾಂದಾರ್ ವಿಮರ್ಶಾ ಪ್ರಶಸ್ತಿ
  3. ದೇವದುರ್ಗದ ಖೇಣೆದ್ ಮುರಿಗೆಪ್ಪ ಪ್ರತಿಷ್ಠಾನದಿಂದ ಖೇಣೆದ್‌ ಮುರಿಗೆಪ್ಪ ಅವರ ಸ್ಮರಣಾರ್ಥ ನೀಡುವ ಪ್ರಶಸ್ತಿಗೆ ವಿಮರ್ಶಕಿ ಡಾ.ಎಂ.ಎಸ್. ಆಶಾದೇವಿ ಆಯ್ಕೆಯಾಗಿದ್ದಾರೆ.

ಹೊರಗಿನ ಸಂಪರ್ಕ[ಬದಲಾಯಿಸಿ]

೧. ಸ್ತ್ರೀಮತವನುತ್ತರಿಸಲಾಗದೆ? ಪುಸ್ತಕ ಪರಿಚಯ