ಆಳ್ವಾರ್ ತಿರುನಗರಿ
ಗೋಚರ
ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಶ್ರೀ ವೈಕುಂಠಮ್ ತಾಲ್ಲೂಕಿನಲ್ಲಿ ತಾಮ್ರಪರ್ಣಿ ನದಿಯ ದಡದಲ್ಲಿರುವ ಒಂದು ಊರು. ಹದಿನೆಂಟು ಪ್ರಸಿದ್ಧ ವೈಷ್ಣವಕ್ಷೇತ್ರಗಳಲ್ಲಿ ಒಂದು. ನಮ್ಮಾಳ್ವಾರರ ಜನ್ಮಸ್ಥಳವೆನ್ನುವರು. ಇಲ್ಲಿಯ ಆದಿನಾಥ ದೇವಾಲಯ ತಿರುನಲ್ವೇಲಿ ಜಿಲ್ಲೆಯ ಬೃಹದ್ದೇವಾಲಯಗಳಲ್ಲೊಂದು. ಈ ವಿಷ್ಣುದೇವಾಲಯ ಮೂಲತಃ 10ನೆಯ ಶತಮಾನಕ್ಕಿಂತ ಹಳೆಯದಾಗಿದ್ದಿರ ಬಹುದಾದರೂ ಈಗಿರುವ ಕಟ್ಟಡ ಪಾಂಡ್ಯರಾಜರ ಕಾಲದಲ್ಲಿ ಪ್ರ.ಶ. 13ನೆಯ ಶತಮಾನದಲ್ಲಿ ಕಟ್ಟಿದ್ದು. ಆ ಕಾಲದ ಅನೇಕ ಶಾಸನಗಳು ಈ ದೇವಾಲಯದಲ್ಲಿ ದೊರಕಿವೆ.