ಆಲ್ಬೆಡೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಲ್ಬೆಡೊಪ್ರತಿಫಲನ ಸಾಮರ್ಥ್ಯದ ಸೂಚ್ಯಂಕ; ಬಳಕೆ ವಿಶೇಷವಾಗಿ ಖಗೋಳಶಾಸ್ತ್ರ ದಲ್ಲಿ. ಪತನ ಬೆಳಕಿನಿಂದ ಹೊಳೆಯುವ ಒಂದು ವಸ್ತು ಪತನ ಬೆಳಕಿನ ಅರ್ಧಾಂಶವನ್ನು ಪ್ರತಿಫಲಿಸಿದರೆ (ಅಂದರೆ ಹಿಂದಕ್ಕೆ ಚದುರಿಸಿದರೆ) ಆ ವಸ್ತುವಿನ ಆಲ್ಬೆಡೊ 1/2 ಎನ್ನುತ್ತೇವೆ. ಸಾಮಾನ್ಯವಾಗಿ ಮೋಡಗಳ ಮೇಲ್ಪದರಗಳ ಅಂದರೆ ಹಿಮಸ್ಫಟಿಕಗಳ ಆಲ್ಬೆಡೊ ಅತ್ಯಧಿಕ (ಸುಮಾರು 0.75). ಇತರ ಕೆಲವು ವಸ್ತುಗಳ ಆಲ್ಬೆಡೊ; ದಟ್ಟನೆಯ ಕಾಡು 0.05, ಒಣಮರಗಳು 0.30, ಒಟ್ಟು ಭೂಮಿ 0.34 (ಇದಕ್ಕೆ ಮೋಡಗಳಿಂದಲೂ ಸಂದಾಯವಿದೆ). ಚಂದ್ರ 0.07, ಶುಕ್ರ 0.61, ಗುರು 0.41, ಶನಿ 0.42. ದೂರದ ಗ್ರಹಗಳ ಆಲ್ಬೆಡೋ ಅಳೆದು ಅವುಗಳ ವ್ಯಾಸವನ್ನು ಲೆಕ್ಕಮಾಡಬಹುದು. ಪರಮಾಣು ರಿಯಾಕ್ಟರಿಗೆ ಸಂಬಂಧಿಸಿದಂತೆ ಆಲ್ಬೆಡೊ ಅಂದರೆ ಒಂದು ಮಾಧ್ಯಮವನ್ನು ಪ್ರವೇಶಿಸುವ ನ್ಯೂಟ್ರಾನುಗಳು ಮತ್ತು ಆ ಮಾಧ್ಯಮದಿಂದ ಪ್ರತಿಫಲನಗೊಳ್ಳುವ ನ್ಯೂಟ್ರಾನುಗಳು-ಇವುಗಳ ನಡುವಿನ ಪ್ರಮಾಣ (ರೇಷಿಯೊ). ಪರಮಾಣು ಪ್ರಕ್ರಿಯೆ ಸತತ ನಡೆಯಲು ನ್ಯೂಟ್ರಾನುಗಳು ಅವಶ್ಯ. ಅಧಿಕ ಪ್ರಮಾಣದಲ್ಲಿ ನ್ಯೂಟ್ರಾನುಗಳು ರಿಯಾಕ್ಟರಿನ ಮೂಲಭಾಗ ದಿಂದ ತಪ್ಪಿಸಿಕೊಂಡು ಹೋಗುವುದನ್ನು ತಡೆಗಟ್ಟಲು, ರಿಯಾಕ್ಟರಿನ ಸುತ್ತ ಅತ್ಯಧಿಕ ಆಲ್ಬೆಡೊ ಪ್ರತಿಫಲಕವೊಂದನ್ನು ಅಳವಡಿಸಿರುತ್ತಾರೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಆಲ್ಬೆಡೊ&oldid=1124241" ಇಂದ ಪಡೆಯಲ್ಪಟ್ಟಿದೆ