ಆಲ್ಬರ್ಟ ಲಿಅನ್ ಬ್ಯಾಟಿಸ್ಟ
Jump to navigation
Jump to search
1404-72. ಹದಿನೈದನೆಯ ಶತಮಾನದ ಇಟಲಿಯ ವಿಜ್ಞಾನಿ. ಕಲೆಗಾರ, ಸಾಹಿತಿ, ಗಣಿತಶಾಸ್ತ್ರಜ್ಞ. ಶಿಲ್ಪಕಲೆ ಸಂಗೀತಶಾಸ್ತ್ರಗಳಲ್ಲಿ ಸರ್ವತೋಮುಖವಾದ ಪ್ರತಿಭೆಯನ್ನುಳ್ಳ ಪಂಡಿತ.
ಹೊಸ ಹುಟ್ಟಿನ (ರೆನೈಸಾನ್ಸ್) ಕಾಲದ ಆದರ್ಶ ಸದ್ಗೃಹಸ್ಥರ ಪ್ರತೀಕವಾಗಿದ್ದ. ಶಿಲ್ಪಶಾಸ್ತ್ರ ನ್ಯಾಯಶಾಸ್ತ್ರಗಳನ್ನು ಕುರಿತ ಗ್ರಂಥಗಳನ್ನು ಇಟಾಲಿಯನ್ ಮತ್ತು ಲ್ಯಾಟಿನ್ ಭಾಷೆಗಳೆರಡರಲ್ಲೂ ರಚಿಸಿದ. ಇಟಾಲಿಯನ್ ಭಾಷೆಯನ್ನು ಬಹಳವಾಗಿ ಶ್ಲಾಘಿಸಿ, ಅದರ ಮಹತ್ತ್ವವನ್ನು ಎತ್ತಿ ಹಿಡಿಯಲು ಶ್ರಮಿಸಿದ. ಡೆಲ್ಲಾ ಫ್ಯಾಮಿಲಿಯಾ ಎಂಬುದು ಇವನ ಅತ್ಯುತ್ತಮ ಗ್ರಂಥ. ಇದು ಸಂವಾದಗಳ ರೂಪದಲ್ಲಿರುವ ವಿಚಾರಪರಿಪ್ಲುತಕೃತಿ. ಮಕ್ಕಳ ವಿದ್ಯಾಭ್ಯಾಸಕ್ರಮ, ವಿವಾಹ, ಗೃಹಸ್ಥ ಜೀವನ, ತಂದೆಯಾದವನ ಕರ್ತವ್ಯ, ಗೆಳೆತನ-ಮುಂತಾದ ಲೌಕಿಕ ವಿಷಯಗಳನ್ನು ಕುರಿತದ್ದಾಗಿದೆ.