ಆಲ್ಬರ್ಟ್ ಬಂಡೂರ
ಆಲ್ಬರ್ಟ್ ಬಂಡೂರ | |
---|---|
ಜನನ | ಡಿಸೆಂಬರ್ ೪, ೧೯೨೫ ಅಲ್ಬೆರ್ಟಾ, ಕೆನಡ |
ರಾಷ್ಟ್ರೀಯತೆ | ಕೆನಡಿಯನ್ |
ಕಾರ್ಯಕ್ಷೇತ್ರ | ಮನೋವಿಜ್ಞಾನ, ಸಮಾಜ ಶಾಸ್ತ್ರಜ್ಞ |
ಸಂಸ್ಥೆಗಳು | ಸ್ಟಾಂಡ್ಫೋರ್ಡ್ ವಿಶ್ವವಿದ್ಯಾನಿಲಯ |
ಅಭ್ಯಸಿಸಿದ ವಿದ್ಯಾಪೀಠ | ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ |
ಪ್ರಸಿದ್ಧಿಗೆ ಕಾರಣ | ಸಾಮಾಜಿಕ ಅರಿವಿನ ಸಿದ್ಧಾಂತ, ಬೊಬೋ ಗೊಂಬೆಯ ಪ್ರಯೋಗ, ವೀಕ್ಷಣಾ ಕಲಿಕೆ |
ಪ್ರಭಾವಗಳು | ರಾಬರ್ಟ್ ಸಿಯರ್ಸ್, ಕ್ಲಾರ್ಕ್ ಹಲ್, ಕೆನ್ನೆತ್ ಸ್ಪೆನ್ಸ್, ಆರ್ಥರ್ ಲೆಸ್ಟರ್ ಬೆಂಟನ್, ನೀಲ್ ಮಿಲ್ಲರ್ |
ಆಲ್ಬರ್ಟ್ ಬಂಡೂರ ಓರ್ವ ಮನಶ್ಶಾಸ್ತ್ರಜ್ಞ. ಅವರು ಡಿಸೆಂಬರ್ ೪ ೧೯೨೫ರಂದು ಜನಿಸಿದರು. ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಸಮಾಜ ವಿಜ್ಞಾನದ ಮನಃಶ್ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದರು. ಸುಮಾರು ಆರು ದಶಕಗಳ ಕಾಲ ಅವರು ಶಿಕ್ಷಣ ಕ್ಷೇತ್ರದಲ್ಲಿ ಮತ್ತು ಸಾಮಾಜಿಕ ಅರಿವಿನ ಸಿದ್ಧಾಂತ, ಚಿಕಿತ್ಸೆ ಮತ್ತು ವ್ಯಕ್ತಿತ್ವ ಮನಶಾಸ್ತ್ರವನ್ನು ಒಳಗೊಂಡಂತೆ ಅನೇಕ ಕ್ಷೇತ್ರಕ್ಕೆ ಮನೋವಿಜ್ಞಾನದ ಕೊಡುಗೆಗಳನ್ನು ನೀಡಿದ್ದಾರೆ. ವರ್ತನಾವಾದ ಮತ್ತು ಅರಿವಿನಸಿದ್ಧಾಂತದ ನಡುವಿನ ಪರಿವರ್ತನೆಯಲ್ಲೂ ಸಹ ಕೊಡುಗೆಗಳನ್ನು ನೀಡಿದ್ದಾರೆ. ಆಲ್ಬರ್ಟ್ ಬಂಡೂರ ಸಾಮಾಜಿಕ ಕಲಿಕೆ ಸಿದ್ಧಾಂತದ ಬೊಬೋ ಗೊಂಬೆಯ ಪ್ರಯೋಗದ ಮೂಲಕ ವೀಕ್ಷಣಾ ಕಲಿಕೆಯ ಪರಿಕಲ್ಪನೆಯನ್ನು ಪರಿಚಯಿಸಿದ್ದಾರೆ.[೧]
ಆರಂಭಿಕ ಜೀವನ
[ಬದಲಾಯಿಸಿ]ಆಲ್ಬರ್ಟ್ ಬಂಡೂರ ಅಲ್ಬೆರ್ಟಾದ ಮಂಡರೆಯಲ್ಲಿ ಜನಿಸಿದರು. ಬಂಡೂರ ಶಿಕ್ಷಣದ ಮಿತಿಗಳನ್ನು ಸ್ವತಂತ್ರವಾಗಿ ಕಲಿತರು ಮತ್ತು ಇದು ಸ್ವಯಂ ಪ್ರೇರಣೆಗೆ ಒಳಗಾಗಲು ಕಾರಣವಾಯಿತು. ಮತ್ತು ಈ ಪ್ರಮುಖ ಗುಣಲಕ್ಷಣಗಳು ಅವರ ಸುದೀರ್ಘ ವೃತ್ತಿಜೀವನದಲ್ಲಿ ಬಹಳ ಸಹಾಯಕವಾಗಿದ್ದವು. ಬಂಡುರಾ ಅವರ ತಂದೆತಾಯಿಗಳು ಅವರನ್ನು ಪ್ರೋತ್ಸಾಹಿಸುವಲ್ಲಿ ಪ್ರಮುಖ ಪ್ರಭಾವ ಬೀರಿದ್ದರು. ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಬಂಡೂರ ಯುಕಾನ್ನಲ್ಲಿ ಕೆಲಸ ಮಾಡಿದರು. ೧೯೪೯ ರಲ್ಲಿ ಬಂಡೂರ ಅಮೇರಿಕಾಗೆ ಆಗಮಿಸಿದರು. ೧೯೫೨ ರಲ್ಲಿ ಅವರು ವರ್ಜಿನಿಯಾ ವಾರ್ನ್ಸ್ ರನ್ನು ವಿವಾಹವಾದರು. ಅವರು ಇಬ್ಬರು ಹೆಣ್ಣು ಮಕ್ಕಳು ಕರೋಲ್ ಮತ್ತು ಮೇರಿ.[೨]
ಶಿಕ್ಷಣ ಮತ್ತು ವೃತ್ತಿ
[ಬದಲಾಯಿಸಿ]ಆಲ್ಬರ್ಟ್ ಬಂಡೂರ ಅವರು ವಿಧ್ಯಾರ್ಥಿಯಾಗಿದ್ದಾಗ ಮನೋವಿಜ್ಞಾನ ವಿಷಯದ ಬಗ್ಗೆ ಆಕರ್ಷಿತರಾದರು. ೧೯೪೯ರಲ್ಲಿ ಬಿ.ಎ. ಪದವಿಯನ್ನು ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಪಡೆದರು. ಮನೋವಿಜ್ಞಾನದಲ್ಲಿ ಬೊಲೊಕಾನ್ ಪ್ರಶಸ್ತಿಯನ್ನು ಗೆದ್ದರು. ಆಯೋವಾ ವಿಶ್ವವಿದ್ಯಾನಿಲಯದಿಂದ ಯಲ್ಲಿ ತಮ್ಮ ಪಿಎಚ್.ಡಿ ಅನ್ನು ಪಡೆದರು. ೧೯೫೨ರಲ್ಲಿ ಅಯೋವಾದಲ್ಲಿ ಆರ್ಥರ್ ಬೆಂಟನ್ ಅವರ ಶೈಕ್ಷಣಿಕ ಸಲಹೆಗಾರರಾಗಿದ್ದರು. ಪದವಿಯ ನಂತರ ಅವರು ವಿಚಿತಾ ಗೈಡೆನ್ಸ್ ಸೆಂಟರ್ನಲ್ಲಿ ತಮ್ಮ ಪೋಸ್ಟ್ಡಾಕ್ಟೋರಲ್ ಇಂಟರ್ನ್ಶಿಪ್ ಅನ್ನು ಪೂರ್ಣಗೊಳಿಸಿದರು.೧೯೫೩ರಲ್ಲಿ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಅವರು ಬೋಧನಾ ಸ್ಥಾನಮಾನವನ್ನು ಸ್ವೀಕರಿಸಿದರು. ೧೯೭೪ರಲ್ಲಿ ಅವರು ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಶನ್ (ಎಪಿಎ) ಅಧ್ಯಕ್ಷರಾಗಿ ಆಯ್ಕೆಯಾದರು. ಕ್ರೀಡಾ ತರಬೇತುದಾರರಾಗಿಯೂ ಕಾರ್ಯನಿರ್ವಹಿಸಿದರು.[೩]
ಸಂಶೋಧನೆ
[ಬದಲಾಯಿಸಿ]ಆಲ್ಬರ್ಟ್ ಬಂಡೂರ ಮಾನವ ಪ್ರೇರಣೆ, ಆಲೋಚನೆ ಮತ್ತು ಕ್ರಿಯೆಯಲ್ಲಿ ಸಾಮಾಜಿಕ ಮಾದರಿಯ ಪಾತ್ರಕ್ಕೆ ತಮ್ಮ ಆರಂಭಿಕ ಸಂಶೋಧನೆಯನ್ನು ನಿರ್ದೇಶಿಸಿದರು. ರಿಚರ್ಡ್ ವಾಲ್ಟರ್ಸ್ ಅವರ ಮೊದಲ ಡಾಕ್ಟರೇಟ್ ವಿದ್ಯಾರ್ಥಿಯ ಸಹಯೋಗದೊಂದಿಗೆ ಅವರು ಸಾಮಾಜಿಕ ಕಲಿಕೆ ಮತ್ತು ಆಕ್ರಮಣಶೀಲತೆಯ ಅಧ್ಯಯನಗಳಲ್ಲಿ ತೊಡಗಿದ್ದರು. ಅವರು ಮಾನವ ನಡವಳಿಕೆಯಲ್ಲಿ ಮಾಡೆಲಿಂಗ್ನ ನಿರ್ಣಾಯಕ ಪಾತ್ರ ಮತ್ತು ಮತ್ತು ಪರಿವೀಕ್ಷಣಾ ಕಲಿಕೆಯ ಕಾರ್ಯವಿಧಾನಗಳ ಕುರಿತಾದ ಸಂಶೋಧನೆಯನು ಮಾಡಿದರು.[೪]
ಸಾಮಾಜಿಕ ಕಲಿಕೆಯ ಸಿದ್ಧಾಂತ
[ಬದಲಾಯಿಸಿ]ಬಂಡೂರ ಸಂಶೋಧನೆಯು ಆರಂಭಿಕ ಹಂತದಲ್ಲಿ ಮಾನವ ಕಲಿಕೆಯ ಅಡಿಪಾಯ,ಮಕ್ಕಳು ಹಾಗೂ ವಯಸ್ಕರಲ್ಲಿ ನಿರ್ದಿಷ್ಟವಾಗಿ ಆಕ್ರಮಣಶೀಲತೆಯನ್ನು ಅನುಸರಿಸುವುದರ ಕುರಿತು ವಿಶ್ಲೇಷಿಸಿತು. ಸಾಮಾಜಿಕ ಕಲಿಕೆ ಸಿದ್ಧಾಂತದ ಪ್ರಕಾರ ಹೊಸ ನಡವಳಿಕೆಗಳನ್ನು ಕಲಿಯಲು ಮತ್ತು ವರ್ತನೆಯಲ್ಲಿ ಬದಲಾವಣೆಯನ್ನು ಸಾಧಿಸಲು ಮಾದರಿಗಳು ಒಂದು ಪ್ರಮುಖ ಮೂಲವಾಗಿದೆ. ನಡವಳಿಕೆಯನ್ನು ನಿಯಂತ್ರಿಸುವ ಮೂರು ನಿಯಂತ್ರಕ ವ್ಯವಸ್ಥೆಗಳಿವೆ ಎಂದು ಸಾಮಾಜಿಕ ಕಲಿಕೆಯ ಸಿದ್ಧಾಂತವು ಹೇಳುತ್ತದೆ. ಪೂರ್ವಭಾವಿ ಪ್ರೇರಿತಗಳು ವರ್ತನೆಯ ಸಮಯ ಮತ್ತು ಪ್ರತಿಕ್ರಿಯೆಯನ್ನು ಹೆಚ್ಚು ಪ್ರಭಾವ ಬೀರುತ್ತವೆ. ವರ್ತನೆಯ ಪ್ರತಿಕ್ರಿಯೆಯ ಮೊದಲು ಉಂಟಾಗುವ ಪ್ರಚೋದನೆಯು ಸಾಮಾಜಿಕ ಸನ್ನಿವೇಶ ಮತ್ತು ಪ್ರದರ್ಶಕರ ಸಂಬಂಧದಲ್ಲಿ ಸೂಕ್ತವಾಗಿರಬೇಕು. ಪ್ರತಿಕ್ರಿಯೆ ಹಾಗೂ ಪ್ರತಿಕ್ರಿಯೆ ಪ್ರಭಾವಗಳು ಕೂಡಾ ಒಂದು ಪ್ರಮುಖ ಕಾರ್ಯವನ್ನು ನಿರ್ವಹಿಸುತ್ತವೆ. ಒಂದು ಪ್ರತಿಕ್ರಿಯೆಯ ನಂತರ ಬಲವರ್ಧನೆಗಳು, ಅನುಭವ ಅಥವಾ ವೀಕ್ಷಣೆಯಿಂದ ಭವಿಷ್ಯದಲ್ಲಿ ನಡವಳಿಕೆಯ ಸಂಭವಿಸುವಿಕೆಯನ್ನು ಹೆಚ್ಚು ಪರಿಣಾಮ ಬೀರುತ್ತದೆ. ಸಾಮಾಜಿಕ ಕಲಿಕೆಯಲ್ಲಿ ಜ್ಞಾನಗ್ರಹಣದ ಕ್ರಿಯೆಗಳು ಪ್ರಮುಖವಾಗಿವೆ.[೫]
ಸಾಮಾಜಿಕ ಅರಿವಿನ ಸಿದ್ಧಾಂತ
[ಬದಲಾಯಿಸಿ]೧೯೮೦ರ ದಶಕದ ಮಧ್ಯಭಾಗದಲ್ಲಿ ಬಂಡೂರ ಸಂಶೋಧನೆಯು ಹೆಚ್ಚು ಸಮಗ್ರವಾಯಿತು ಮತ್ತು ಅವರ ವಿಶ್ಲೇಷಣೆಗಳು ಸಾಮಾಜಿಕ ಕಲಿಕೆಗೆ ಸಂಬಂಧಿಸಿದಂತೆ ಮಾನವ ಅರಿವಿನ ಹೆಚ್ಚು ಸಮಗ್ರ ಅವಲೋಕನವನ್ನು ನೀಡಿದವು. ಅವರು ಸಾಮಾಜಿಕ ಕಲಿಕೆಯ ಸಿದ್ಧಾಂತದಿಂದ ವಿಸ್ತರಿಸಿದ ಸಿದ್ಧಾಂತವನ್ನು ಸಾಮಾಜಿಕ ಅರಿವಿನ ಸಿದ್ಧಾಂತವೆಂದು ಹೆಸರಿಸಲಾಯಿತು.
ಪುರಸ್ಕಾರ
[ಬದಲಾಯಿಸಿ]ಬಂಡೂರವರಿಗೆ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯ, ಒಟ್ಟಾವಾ ವಿಶ್ವವಿದ್ಯಾಲಯ, ಆಲ್ಫ್ರೆಡ್ ವಿಶ್ವವಿದ್ಯಾಲಯ, ರೋಮ್ ವಿಶ್ವವಿದ್ಯಾಲಯ, ಲೆಥ್ ಬ್ರಿಡ್ಜ್ ವಿಶ್ವವಿದ್ಯಾಲಯ, ಸ್ಪೇನ್ನಲ್ಲಿ ಸಲಾಮಾಂಕಾ ವಿಶ್ವವಿದ್ಯಾಲಯ, ಇಂಡಿಯಾನಾ ವಿಶ್ವವಿದ್ಯಾಲಯ ಸೇರಿದಂತೆ ಹದಿನಾರು ಗೌರವ ಪದವಿಗಳನ್ನು ಪಡೆದಿದ್ದಾರೆ. ಬ್ರನ್ಸ್ವಿಕ್, ಪೆನ್ ಸ್ಟೇಟ್ ಯೂನಿವರ್ಸಿಟಿ, ಲೀಡೆನ್ ಯೂನಿವರ್ಸಿಟಿ ಮತ್ತು ಫ್ರೈ ಯುನಿವರ್ಸಿಟಾಟ್ ಬರ್ಲಿನ್, ನ್ಯೂಯಾರ್ಕ್ ನಗರ ವಿಶ್ವವಿದ್ಯಾಲಯದ ಗ್ರಾಜ್ಯುಯೇಟ್ ಸೆಂಟರ್, ಸ್ಪೇನ್ನಲ್ಲಿ ಯೂನಿವರ್ಸಿಟಾಟ್ ಜಾಮ್ ಐ, ಅಥೆನ್ಸ್ ವಿಶ್ವವಿದ್ಯಾನಿಲಯ ಮತ್ತು ಅಲ್ಬರ್ಟಾ ವಿಶ್ವವಿದ್ಯಾಲಯ ಮತ್ತು ಕ್ಯಾಟನಿಯಾ ವಿಶ್ವವಿದ್ಯಾಲಯಗಳ ಪ್ರಶಸ್ತಿಗಳು ಲಭಿಸಿವೆ. ಅವರು ೧೯೮೦ರಲ್ಲಿ ಅಮೇರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸಸ್ ನ ಫೆಲೋ ಆಗಿ ಆಯ್ಕೆಯಾದರು. ೧೯೮೦ ರಲ್ಲಿ ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ನಿಂದ ಸ್ವಯಂ-ನಿಯಂತ್ರಿತ ಕಲಿಕೆಯ ಕ್ಷೇತ್ರದ ಸಂಶೋಧನೆಗೆ ಪ್ರವರ್ತಕರಾಗಿದ್ದಕ್ಕಾಗಿ ಹಾಗೂ ವೈವಿಧ್ಯಮಯ ವೈಜ್ಞಾನಿಕ ಕೊಡುಗೆಗಳಿಗಾಗಿ ಪ್ರಶಸ್ತಿ ಪಡೆದರು. ೧೯೯೯ ರಲ್ಲಿ ಅವರು ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ನಿಂದ ನೀಡುವ ಥಾರ್ನ್ಡಿಕ್ ಪ್ರಶಸ್ತಿಯನ್ನು ಪಡೆದರು. ಮತ್ತು ೨೦೦೧ರಲ್ಲಿ ಬಿಹೇವಿಯರ್ ಥೆರಪಿಗಾಗಿ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್ಮೆಂಟ್ ಆಫ್ ದಿ ಅಡ್ವಾನ್ಸ್ಮೆಂಟ್ ಆಫ್ ಬಿಹೇವಿಯರ್ ಥೆರಪಿ ಯಿಂದ ಅವರು ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಪಡೆದರು. ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಶನ್ ಮತ್ತು ಪಾಶ್ಚಾತ್ಯ ಸೈಕಲಾಜಿಕಲ್ ಅಸೋಸಿಯೇಷನ್, ಅಮೇರಿಕನ್ ಸೈಕಲಾಜಿಕಲ್ ಸೊಸೈಟಿಯಿಂದ ಜೇಮ್ಸ್ ಮ್ಯಾಕ್ಕೀನ್ ಕ್ಯಾಟೆಲ್ ಪ್ರಶಸ್ತಿ. ೨೦೦೮ರಲ್ಲಿ ಅವರು ಮನೋವಿಜ್ಞಾನಕ್ಕೆ ನೀಡಿದ ಕೊಡುಗೆಗಳಿಗಾಗಿ ಲೂಯಿಸ್ವಿಲ್ಲೆ ಗ್ರಾಮೆಯಾಯರ್ ಪ್ರಶಸ್ತಿಯನ್ನು ಪಡೆದರು.[೬]
ಉಲ್ಲೇಖ
[ಬದಲಾಯಿಸಿ]- ↑ https://www.britannica.com/biography/Albert-Bandura
- ↑ "ಆರ್ಕೈವ್ ನಕಲು". Archived from the original on 2018-07-19. Retrieved 2018-07-04.
- ↑ https://www.psych.ualberta.ca/GCPWS/Bandura/Biography/Bandura_bio1.html
- ↑ https://www.simplypsychology.org/bandura.html
- ↑ https://www.learning-theories.com/social-learning-theory-bandura.html
- ↑ http://professoralbertbandura.com/albert-bandura-awards.html