ವಿಷಯಕ್ಕೆ ಹೋಗು

ಆಲ್ಪ್ರೆಡ್ ಸ್ಟಾಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಲ್ಪ್ರೆಡ್ ಸ್ಟಾಕ್
ಆಲ್ಪ್ರೆಡ್ ಸ್ಟಾಕ್
ಜನನ೧೬-೦೭-೧೮೭೬
ಡಾನ್ಝಿಗ್ನಲ್ಲಿ, ಜರ್ಮನಿ
ಮರಣ೧೨-೮-೧೯೪೬
Aken an der Elbe,ಜರ್ಮನಿ
ರಾಷ್ಟ್ರೀಯತೆಜರ್ಮನಿ
ಕಾರ್ಯಕ್ಷೇತ್ರChemistry
ಸಂಸ್ಥೆಗಳುUniversity of Karlsruhe
ಡಾಕ್ಟರೇಟ್ ಸಲಹೆಗಾರರುEmil Fischer
ಡಾಕ್ಟರೇಟ್ ವಿದ್ಯಾರ್ಥಿಗಳುEgon Wiberg

ಜರ್ಮನಿಯ ಜೈವಿಕ ರಸಾಯನವಿಜ್ಞಾನಿಯಾಗಿದ್ದ ಆಲ್ಪ್ರೆಡ್ ಸ್ಟಾಕ್ರವರು 1876ರ ಜುಲೈ 16ರಂದು ಡಾನ್ಝಿಗ್ನಲ್ಲಿ (ಈಗ ಅದು ಪೋಲೆಂಡಿನ ಡಾನ್ಸ್ಕ್ ಆಗಿದೆ) ಜನಿಸಿದರು.[] 1909ರಲ್ಲಿ ಸ್ಟಾಕ್ರವರು ಬೋರಾನ್ ಹೈಡ್ರೈಡ್ಗಳ (BxHy) ಬಗ್ಗೆ ಅಧ್ಯಯನವನ್ನು ಆರಂಭಿಸಿದರು. ಮೆಗ್ನೀಷಿಯಂ ಬೋರೈಡ್ನನ್ನು ಒಂದು ಆಮ್ಲದ ಜೊತೆ ರಾಸಾಯನಿಕ ಕ್ರಿಯೆಗೆ ಒಳಪಡಿಸಿದಾಗ ಅವರು B4H10ನನ್ನು ತಯಾರಿಸಿದರು. ಹಾಗೆಯೇ ಅವರು ಇನ್ನೂ ಇತರ ಹೈಡ್ರೈಡ್ಗಳನ್ನೂ ತಯಾರಿಸಿದರು. ಅವುಗಳ ಮಿಶ್ರಣವನ್ನು ಬೇರ್ಪಡಿಸಲು ಕಉನ್ನತ ನಿರ್ವಾತ ವಿಧಾನಕಿವನ್ನು (high vacuum method) ಸ್ಟಾಕ್ರವರು 1912ರಲ್ಲಿ ರೂಪಿಸಿದರು. 1960ರ ಹೊತ್ತಿಗೆ ಬೋರಾನ್ ಹೈಡ್ರೈಡ್ಗಳು ರಾಕೆಟ್ಗಳ ಇಂಧನದ ಸಂಕಲ್ಯಗಳಾಗಿ (additives) ಮೊದಲ ಬಾರಿಗೆ ಉಪಯೋಗಿಸಲಾಯಿತು. 1921ರಲ್ಲಿ ಸ್ಟಾಕ್ರವರು ಸೋಡಿಯಂ ಮತ್ತು ಬೆರಿಲಿಯಂ ಫ್ಲೊರೈಡ್ಗಳ ಮಿಶ್ರಣವನ್ನು ವಿದ್ಯುದ್ವಿಭಜನೆಗೆ ಒಳಪಡಿಸಿ, ಬೆರಿಲಿಯಂನನ್ನು ತಯಾರಿಸಿದರು. ಬೆರಿಲಿಯಂನನ್ನು ಬೇರ್ಪಡಿಸುವ ವಿಧಾನ ಕ್ಷ-ಕಿರಣ ನಳಿಗೆಯ (X-ray tube) ಗಾಜಿನ ಗೋಡೆಗಳು, ಗಾಜಿನ ಉತ್ಪನ್ನಗಳು ಮತ್ತು ವಿಶೇಷ ರೀತಿಯ ಮಿಶ್ರಲೋಹಗಳನ್ನು ಕೈಗಾರಿಕಾ ದೃಷ್ಟಿಯಿಂದ ತಯಾರಿಸಲು ಅನುಕೂಲವಾಯಿತು. 1923ರ ಹೊತ್ತಿಗೆ ಅವರು ಪಾದರಸ ಮತ್ತು ಅದರ ಬಾಷ್ಟಕ್ಕೆ ತಮ್ಮ ದೇಹಕ್ಕೆ ಒಡ್ಡುವ ಸ್ಥಿತಿ ತಲುಪಿ ಅವರ ಆರೋಗ್ಯ ಹದಗೆಟ್ಟಿತು.[] ಹಾಗಾಗಿ ಪಾದರಸವನ್ನು ರಾಸಾಯನಿಕವಾಗಿ ಮತ್ತು ಕೈಗಾರಿಕಾ ದೃಷ್ಟಿಯಿಂದ ಬಳಸುವ ವಿಜ್ಞಾನಿಗಳು ಅನುಸರಿಸಬೇಕಾದ ರಕ್ಷಣಾವಿಧಾನಗಳ ಬಗ್ಗೆಯೂ ಅವರು ಜಾಗೃತಿ ಮೂಡಿಸುವ ಕೈಂಕರ್ಯವನ್ನು ಕೈಗೊಂಡರು. ಸ್ಟಾಕ್ರವರು 1946ರ ಆಗಸ್ಟ್ 12ರಂದು ಕಾಲ್ರ್ಸ್ರೂಹೆಯಲ್ಲಿ ನಿಧನರಾದರು.

ಉಲ್ಲೇಖಗಳು

[ಬದಲಾಯಿಸಿ]
  1. Egon Wiberg: Alfred Stock 1876–1946 In: Chemische Berichte Jahrgang 83, Nr. 6, 1950, ISSN 1099-0682, doi:10.1002/cber.19500830619. S. XXI.
  2. Brock, William H.; K. A. Jensen; Christian Klixbüll Jørgensen; George B. Kauffman (1983). "The origin and dissemination of the term "ligand" in chemistry". Polyhedron. 2 (1): 1–7. doi:10.1016/S0277-5387(00)88023-7.