ಆಲಿವರ್ ಜೋಸೆಫ್ ಲಾಡ್ಜ್
ಆಲಿವರ್ ಜೋಸೆಫ್ ಲಾಡ್ಜ್ | |
---|---|
Born | ಆಲಿವರ್ ಜೋಸೆಫ್ ಲಾಡ್ಜ್ ೧೮೫೧ ಜೂನ್ ೧೨ ಬ್ರಿಟನ್ |
Nationality | ಬ್ರಿಟನ್ |
ಬ್ರಿಟನ್ನಿನ ಭೌತವಿಜ್ಞಾನಿಯಾಗಿದ್ದ ಆಲಿವರ್ ಜೋಸೆಫ್ ಲಾಡ್ಜ್‌ರವರು ೧೮೫೧ರ ಜೂನ್ ೧೨ರಂದು ಸ್ಟೆಫರ್ಡ್‌ಷೈರಿನ ಪೆಂಕ್‌ಹಲ್‌ನಲ್ಲಿ ಜನಿಸಿದರು. ಡೇನಿಯಲ್‌ರವರು (೧೭೯೦-೧೮೪೫) ೧೮೩೬ರಲ್ಲಿ ಕಂಡುಹಿಡಿದಿದ್ದ ‘ಡೇನಿಯಲ್ ವಿದ್ಯುತ್ಕೋಶ’ದ ಪರಿಷ್ಕೃತ ಮಾದರಿಯನ್ನು ವಿದ್ಯುತ್ಚಾಲಕ ಬಲದ (electromotive force) ಅಳತೆಯಲ್ಲಿ ಮಾನಕವಾಗಿ ಹೇಗೆ ಉಪಯೋಗಿಸಬಹುದೆಂದು ಲಾಡ್ಜ್‌ರವರು ತೋರಿಸಿಕೊಟ್ಟರು.[೧] ಲಾಡ್ಜ್‌ರವರು ವಿದ್ಯುದಯಸ್ಕಾಂತ ತರಂಗಗಳನ್ನು ಗುರುತಿಸುವ ವಿಧಾನಗಳನ್ನು ಕಂಡುಹಿಡಿದು, ನಂತರ ದೂರದಲ್ಲಿರುವ ಪ್ರೇಷಕದಿಂದ (transmitter) ಹೊರಹೊಮ್ಮಿದ ರೇಡಿಯೋ ತರಂಗಗಳನ್ನು ಗುರುತಿಸುವ ಸಾಮರ್ಥ್ಯವುಳ್ಳ ‘ಕೊಹೆರರ್’ (coherer) ಉಪಕರಣವನ್ನು ಸುಮಾರು ೧೮೮೮ರಲ್ಲಿ ಕಂಡುಹಿಡಿದರು.[೨] ಆದರೆ ಭಾರತದ ವಿಜ್ಞಾನಿ ಜಗದೀಶ್ ಚಂದ್ರ ಬೋಸರು (೧೮೫೮-೧೯೩೭) ೧೮೯೮ರಲ್ಲಿಯೇ ಅತ್ಯಂತ ಪರಿಪೂರ್ಣವಾದ ‘ಕೊಹೆರರ್’ನಂತಹ ಸಾಧನವನ್ನು ಕಂಡುಹಿಡಿದಿದ್ದರೂ ಅದಕ್ಕೆ ಅಂತರರಾಷ್ಟ್ರೀಂii ಮಾನ್ಯತೆ ಸಿಗದಿದ್ದದು ವಿಪರ್ಯಾಸದ ಸಂಗತಿಯಾಗಿದೆ. ಫ್ರಾನ್ಸಿನ ವಿಜ್ಞಾನಿ ಬ್ರಾನ್ಲಿಯವರು (೧೮೪೪-೧೯೪೦) ೧೮೯೦ರಲ್ಲಿ ಕಂಡುಹಿಡಿದ ‘ಕೊಹೆರರ್’ ಉಪಕರಣ ವಿಶ್ವಮಾನ್ಯತೆ ಪಡೆಯಿತು! ಈಥರ್ ವಿದ್ಯುದಯಸ್ಕಾಂತ ತರಂಗಗಳ ಚಲನೆಗೆ ಮಾಧ್ಯಮವಾಗಿದೆ ಎಂಬುದಾಗಿ ಹಿಂದಿನ ವಿಜ್ಞಾನಿಗಳು ಪ್ರತಿಪಾದಿಸಿದ್ದರು. ೧೮೯೩ರಲ್ಲಿ ಲಾಡ್ಜ್‌ರವರು ಈಥರ್ ಅಸ್ತಿತ್ವದಲ್ಲಿಯೇ ಇಲ್ಲ ಎಂಬುದಾಗಿ ರುಜುವಾತು ಮಾಡಿದರು. ಲಾಡ್ಜ್‌ರವರು ೧೯೪೦ರ ಆಗಸ್ಟ್ ೨೨ರಂದು ಸಾಲಿಸ್‌ಬರಿಯಲ್ಲಿ ನಿಧನರಾದರು.
ಉಲ್ಲೇಖಗಳು
[ಬದಲಾಯಿಸಿ]