ಆರ್ ಎಮ್ ಎಸ್ ಟೈಟಾನಿಕ್

ವಿಕಿಪೀಡಿಯ ಇಂದ
Jump to navigation Jump to search

ಆರ್ ಎಮ್ ಎಸ್ ಅರ್ ಎಮ್ ಎಸ್ ಟೈಟಾನಿಕ್

    ಟೈಟಾನಿಕ್ ಎಂಬುದರ ಅರ್ಥ ಏನೆಂದರೆ ದೊಡ್ಡ ಪ್ರಮಾಣದ ಬಲಶಾಲಿಯಾದ ಮತ್ತು ಶಕ್ತಿ ಉಳ್ಳ ತಕ್ಕದ್ದು. ಈ ಒಂದು ಶಬ್ದವನ್ನು ಗ್ರೀಕ್ ಭಾಷೆಯಿಂದ ಅಳವದಿಸಲಾಗಿದೆ. 

ಚರಿತ್ರೆಯಲ್ಲಿ ಎರಡನೆಯದಾಗಿ ಟೈಟಾನಿಕ್ ಹಡಗು ಬಹಳ ಪ್ರಸಿದ್ದವಾದುದ್ದು ಮತ್ತು ದುರಾಸೆಯಿಂದ ಕೂಡಿದ ಸಾಧನವಗಿತ್ತು. ಮೊದಲನೆಯ ದೊಡ್ಡ ಪ್ರಮಣದ ಹಡಗು ನೊಹಸ್ ಆರ್ಕ್. ಟೈಟಾನಿಕ್ ಹಡಗು ದೊಡ್ಡ ಪ್ರಮಾಣದ, ಬಲವಾದ,
ಸುಂದರವಾದ ಆಕೃತಿಯನ್ನು ಹೊಂದಿ, ಸಮುದ್ರಯಾನಕ್ಕೆ ಸುಖಕರವಾಗಿತ್ತು. ಈ ಹಡಗಿನ ಫ್ರಯಾಣಿಕರ ಪಟ್ಟಿ ತುಂಬಾ ಪ್ರಸಿದ್ದವಾದ ಹೆಸರನ್ನು ಹೊಂದಿರುತ್ತದೆ. ವೈಟ್ ಸ್ಟಾರ್ ಲೈನ್ ಎಂಬ ಕಂಪನಿಯೂ ಇದರ ಮಾಲಿಕತ್ವವನ್ನು ಪಡೆದಿತ್ತು. 'ವಿಸ್ತೀರ್ಣ ಮತ್ತು ವಿನ್ಯಾಸ' : ಟೈಟಾನಿಕ್ ಹಡಗು ೮೮೨ ಅಡಿ ಮತ್ತು ೯ ಇಂಚುಗಳ ಉದ್ದದ ಪ್ರಮಾಣದಲ್ಲಿದ್ದು ಹಾಗು ೯೨ ಅಡಿ, ೬ ಇಂಚುಗಳ ಅಗಲವಿತ್ತು. ಇದರ ಸಂಪೂರ್ಣ ಎತ್ತರವನ್ನು , ದಿಮ್ಮಿ ತಳದಿಂದ ಸೇತುವೆ ಮೇಲಿನವರಗೆ ಇದ್ದ ಅಳತೆ ೧೦೪ ಅಡಿ. ಇದರ ಅಳತೆ
೪೬೩೨೮ ಸಮಗ್ರ ರಿಜಿಸ್ಟ್ ರ್ ಅಳತೆ ಮತ್ತು ೩೪ ಅಡಿ ೭ ಇಂಚು ತೇಲುವಷ್ಟು ನೀರಿನ ಅಳ. ಇದರ ಮೇಲಂತಸ್ತಿನಲ್ಲಿ ಅಪಘಾತದಿಂದ ರಕ್ಷಿಸುವ ಚಿಕ್ಕ ದೋಣಿಗಳನ್ನು ಇರಸಲಾಗಿದೆ. ಹಡಗಿನ ಸೇತುವೆ ಮತ್ತು ಚಕ್ರದ ಮನೆ ಮುಂಭಾಗದಲ್ಲಿದ್ದು
ಇದರ ಮುಂದೆ ನೌಕಾಧಿಪತಿ ಮತ್ತು ಅಧಿಕರಿಗಳು ಇರಲು ವಸತಿ ಕೋಣೆಗಳಿದ್ದು ಚಕ್ರದ ಮನೆ ಹಿಂಭಾಗದಲ್ಲಿದ್ದು ಮೊದಲನೆಯ ದರ್ಜೆಯ ಕೋಣೆಗಳಿಗೆ ಹೋಗುವ ದಾರಿ ಸುಂದರವಾದ ಮೆಟ್ಟಲುಗಳು ಮತ್ತು ವ್ಯಾಯಮಶಾಲೆ ಹಡಗಿನ
ಮದ್ಯಭಾಗದಲ್ಲಿದ್ದು ಇದರ ಜೊತೆ ಮೊದಲೆನೆಯ ದರ್ಜೆಯ ಐಷಾರಾಮಿ ಕೋಣೆಗಳ ಚಾವಣಿ ಏರಿಸಲಾಗಿತ್ತು. ಈ ಹಡುಗಿನ ಮೇಲ್ಭ್ಹಾಗದ ಚಾವಣಿಯ ಹಿಂಭಾಗದಲ್ಲಿ ಮೊದಲನೆಯ ದಾರ್ಜೆಯ ಪ್ರಯಾಣಿಕರ ಧೂಮಪಾನ ಮಾಡುವ
ಕೋಣೆಯಿದ್ದು ಇದಕ್ಕೆ ಸೇರಿದ ಜಾಗದಲ್ಲಿ ಸಾಧಾರಣ ಎರಡನೇ ದರ್ಜೆಯ ಪ್ರಯಾಣಿಕರಿಗಾಗಿ ಪ್ರವೇಶ ದಾರಿ ಇತ್ತು. ಮರದ ಹಲಗೆಯಿಂದ ಮಾಡಲಾದ ಹಡಗಿನ ಮೇಲ್ ಚಾವಣಿ, ನಾಲ್ಕು ಭಾಗಗಳನ್ನಾಗಿ ಮಾಡಿ, ಅಧಿಕಾರಿಗಳ,
ಮೊದಲನೆಯ ದರ್ಜೆಯ ಪ್ರಯಾಣಿಕರು, ಕಾರ್ಯಪಾಲಕರು ಮತ್ತು ಎರಡನೆಯ ದರ್ಜೆಯ ಪ್ರಯಾಣಿಕರಿಗಾಗಿ ವಾಯುವಿಹಾರ ಮಾಡಲು ನಾಲ್ಕು ವಿಭಾಗಗಳನ್ನು ಮಾಡಲಾಗಿತ್ತು. ಮೇಲ್ ಚಾವಣಿಯ ಹಡಗಿನ ಪಕ್ಕದಲ್ಲಿರುವ
ಮೊದಲನೆಯ ದರ್ಜೆಯ ಪ್ರಯಾಣಿಕರಿಗಾಗಿ ಪ್ರದೇಶವನ್ನು ಬಿಟ್ಟು ಅಫಘಾತದ ಸಮಯದಲ್ಲಿ ಉಪಯೋಗಿಸುವ ಚಿಕ್ಕ ದೋಣಿಗಳನ್ನು ಇರಿಸಲಗಿತ್ತು. ಈ ವ್ಯವಸ್ಥೆಗಾಗಿ ಸ್ವಲ್ಪ ಖಾಲಿ ಜಾಗವನ್ನು ಬಿಡಾಲಾಗಿತ್ತು ಏಕೆಂದರೆ ಸುಂದರವಾದ
ಚಿಕ್ಕ ದೋಣಿಗಳ ನೋಟವನ್ನು ನೋಡುವ ಸಲುವಾಗಿ. ಏ ದರ್ಜೆಯ ಮೇಲ್ ಚಾವಣಿಯನ್ನು ವಾಯುವಿಹಾರದ ಚಾವಣಿ ಎಂದು ಸಹ ಕರೆಯಲಾಗಿತ್ತು. ಈ ಸ್ಥಳವನ್ನು ಮೊದಲನೆಯ ದರ್ಜೆಯ ಪ್ರಯಾಣಿಕರಿಗೆ ಮೀಸಲಾಗಿತ್ತು. ಮತ್ತ್ತು ಇಲ್ಲಿ ಅಧಿಕಾರಿಗಳ ಕೋಣೆಗಳು, ಹಾಗು
ಐಷಾರಾಮಿ ಕೋಣೆಗಳು, ಧೂಮಪಾನ ಮಾಡುವ ಕೋಣೆ,ಅಧ್ಯಯನ ಮತ್ತು ಬರೆಯುವ ಕೋಣೆ ಹಾಗು ಪಾಮ್ ಕೋರ್ಟುಗಳಿದ್ದವು . ಬಿ ದರ್ಜೆಯ ಮೇಲ್ ಚಾವಣೆ- ಸೇತುವೆಯ ಮೇಲ್ ಚಾವಣೆಯಾಗಿದ್ದು , ಹಡಗಿನ ಮೇಲ್ ಭಾಗದ ಭಾರವನ್ನು ಹೊರುವ ಸಾಧನವಾಗಿದ್ದು ಇದು ಹಡಗಿನ ತುಂಬಾ ಮೇಲ್ ಭಾಗದಲ್ಲಿರುತ್ತದೆ. ಬಹಳವಾಗಿ, ಮೊದಲನೆಯ
ದರ್ಜೆಯ ಪ್ರಯಾಣಿಕರ ಸುಖಾಸನಗಳು ಇಲ್ಲಿ ಇರುತ್ತವೆ. ಈ ಹಡಗಿನಲ್ಲಿ "ಅಲಾ ಕಾರ್ಟೆ" ಭೊಜನ ಮಂದಿರ ಮತ್ತು ಪರಿಸಿಯನ್ ಶೈಲಿತ ಹೋಟಲ್ ಇದ್ದು ಹಾಗು ಐಷಾರಾಮಿ ಶೈಲಿಯ ಊಟದ ವಸತಿಗಳನ್ನು ಮೊದಲ ದರ್ಜೆಯ
ಪ್ರಯಾಣಿಕರಿಗಾಗಿ ಮಾಡಲಾಗಿತ್ತು. ಧೂಮಪಾನ ಕೋಣೆ ಹಾಗು ಸಭಾಂಗಣಕ್ಕೆ ಹೊಗುವ ದಾರಿ ಮತ್ತು ಎರಡನೆಯ ದರ್ಜೆಯ ಪ್ರಯಾಣಿಕರಿಗಾಗಿ ಕೋಣೆಗಳನ್ನು ಮಾಡಿ ಈ ರೀತಿ ಎರಡು ತರಹದ ವ್ಯವಸ್ಥೆಯಿತ್ತು. ಸಿ ದರ್ಜೆ ಮೇಲ್ ಚಾವಣಿ- ಇದು ಸಹ ಹಡಗಿನ ಮೇಲ್ ಚಾವಣಿಯಾಗಿದ್ದು, ತುಂಬಾ ಏತ್ತರದಲ್ಲಿದ್ದು, ಅಡೆತಡೆಯಿಲ್ಲದೇ, ಹಡಗು ಚಲಿಸಲು ಸಹಾಯಕರವಾಗಿದೆ. ಇದು ಮೇಲ್ ಚಾವಣಿಗಳ ಎರಡು ಭಾಗಗಳು ಇಲ್ಲಿರುತ್ತವೆ.
ಹಡಗಿನ ಹಿಂಭಾಗದ ಒಂದು ಭಾಗ ಮೂರನೆಯ ದರ್ಜೆಯು ವಾಯುವಿಹಾರಕ್ಕಾಗಿ ಇರಿಸಲಾಗಿತ್ತು. ಹಡಗಿನ ಸಿಬ್ಬಂದಿವರ್ಗದವರು ಇರಲು ಹಡಗಿನ ಮುನ್ನಟ್ಟ ಕೆಳಭಾಗದಲ್ಲಿ ಮೂರನೆ ದರ್ಜೆಯ ಸಾರ್ವಜನಿಕ ಕೋಣೆಗಳಿದ್ದವು.
ಈ ಮದ್ಯದಲ್ಲಿ ಬಹಳವಾಗಿ ಮೊದಲನೆ ದರ್ಜೆಯ ಹಾಗು ಎರಡನೆ ದರ್ಜೆಯ ಪ್ರಯಾಣಿಕರಿಗಾಗಿ ಕೋಣೆಗಳು ಇದ್ದವು. ಇದ್ರ ಜೊತೆ ಪ್ರಯಾಣಿಕರಿಗಾಗಿ ಗ್ರಂಥಾಲಯವತ್ತು. ಡಿ ದರ್ಜೆಯ ಮೇಲ್ ಚಾವಣಿ- ಪ್ರಯಾಣಿಕರ ಕೋಣೆ, ಇದರಲ್ಲಿ ವಿಶಾಲವಾದ ಮೂರು ಸಾರ್ವಜನಿಕ ಕೊಠಡಿಗಳಿದ್ದವು. ಇಲ್ಲಿ ಮೊದಲ ದರ್ಜೆಯ ಸ್ವಗತಕಾರರ ಕೋಣೆ, ಮೊದಲ ದರ್ಜೆ ಭೋಜನ ಶಾಲೆ ಮತ್ತು ಎರಡನೇಯ
ದರ್ಜೆಯ ಭೋಜನ ಶಾಲೆಗಳಿದ್ದವು. ಇಲ್ಲಿ ತೆರೆದ ಪ್ರದೇಶ ಮೂರನೆ ದರ್ಜೆ ಪ್ರಯಾಣಿಕರಿಗಾಗಿ ಇರಿಸಲಾಗಿತ್ತು. ಹಾಗು ಮೂರು ದರ್ಜೆಗಳ ಕೋಣೆಗಳು ಈ ಮೇಲ್ ಚಾವಣಿಯಲ್ಲಿದ್ದವು. ಈ ದರ್ಜೆಯ ಚಾವಣಿ- ಈ ಚಾವಣಿಯಲ್ಲಿ ಪ್ರಮುಖವಾಗಿ ಎಲ್ಲಾ ಮೂರು ದರ್ಜೆಯ ಪ್ರಯಾಣಿಕರ ವಸತಿ ಸೌಕರ್ಯಗಳಿಗಾಗಿ ಉಪಯೋಗಿಸಿದ್ದ ಪ್ರದೇಶ. ಇದರ ಜೊತೆಗೆ ಬಾಣಿಸಿರಿಗಾಗಿ ಅನುಕೂಲ, ನಾವಿಕರಿಗಾಗಿ
ಪಾರುಪತ್ಯಗಾರಿಗಾಗಿ ಹಾಗು ವ್ಯವಸ್ಥಿತರಿರ ಅನುಕೂಲಕ್ಕಾಗಿ ಅಳವಡಿಸಿದೆ. ಎಫ್ ದರ್ಜೆಯ ಚಾವಣಿ- ಇದು ಮಧ್ಯ ಭಾಗದ ಚಾವಣಿ ಮತ್ತು ಕೊನೆಯ ಭಾಗದ ಪೂರ್ಣ ಚಾವಣಿ. ಇದನ್ನು ಮುಖ್ಯವಾಗಿ ಎರಡನೆ ಮತ್ತು ಮೂರನೆ ದರ್ಜೆಯ ಪ್ರಯಾಣಿಕರನ್ನು ಒಯ್ಯಲು ಉಪಯೋಗಿಸಲಾಗಿತ್ತು.
ಇಲ್ಲಿ ಹಡಗು-ಸಿಬ್ಬಂದಿಗಾಗಿ ಹಲವಾರು ಶಾಖೆಗಳಿದ್ದವು. ಮೂರನೆ ದರ್ಜೆಯ ಭೋಜನಶಾಲೆಯೂ ಸಹ ಇಲ್ಲಿ ಅಳವಡಿಸಲಾಗಿತ್ತು. ಜಿ ದರ್ಜೆಯ ಚಾವಣಿ- ಕೆಳ ಚಾವಣಿ ಇದನ್ನು ಪೂರ್ಣವಾಗಿ ಪ್ರಯಾಣಿಕರನ್ನು ಸಾಗಿಸಲು ಉಪಯೋಗಿಸುತ್ತಿದ್ದರು. ಹಡಗಿನ ಕೆಳಭಾಗದಲ್ಲಿ ಸಮುದ್ರದ ನೀರಿನ ಮೇಲ್ವಾಗದಲ್ಲಿ ಕಿಟಕಿಗಳಿದ್ದವು. ಜನಜಂಗುಳಿ ಮೋಜು ತಮಾಶೆಗಾಗಿ
ಜನ ಸೇರಲು ನಿರ್ಮಿಸಿದ ಜಾಗ ಸಹ ಇಲ್ಲಿ ಅಳವಡಿಸಿತ್ತು. ಇದರ ಜೊತೆಗೆ ಪ್ರಯಾಣಿಕರ ಅಂಚೆ ಕಛೇರಿಯಿತ್ತು. ಅಂಚೆಪೇದೆಗಳು ಇಲ್ಲಿ ಪ್ರಯಾಣಿಕರ ಪತ್ರಗಳನ್ನು ಹಾಗು ವಸ್ತುಗಳ ಕಟ್ಟುಗಳನ್ನು ಅನುಕೂಲಕ್ಕಾಗಿ ಬೇರ್ಪಡಿಸುವ ಜಾಗವಾಗಿತ್ತು.
ಇವುಗಳನ್ನು ಬೇರ್ಪಡಿಸಿ ಸಿದ್ದತೆ ಮಾಡಿ ಹಡಗು ಬಂದರಿನಲ್ಲಿ ನಿಂತಾಗ ಬಟವಾಡೆ ಮಡಲಾಗುತಿತ್ತು. ಆಹಾರ ಧಾನ್ಯಗಳು ಸಹ ಇಲ್ಲಿ ಶೇಖರಣೆ ಮಾಡಲಾಗಿತ್ತು.

ಪ್ರಯಾಣಿಕರ ಅನುಕೂಲತೆಗಳು[ಬದಲಾಯಿಸಿ]

ಪ್ರಯಾಣಿಕರ ಅನುಕೂಲತೆಗಳು ಈ ಟೈಟಾನಿಕ್ ಹಡಗಿನಲ್ಲಿ ತುಂಬಾ ಐಷಾರಮಿ ಶೈಲಿಯಲ್ಲಿತ್ತು. ಈ ಹಡಗಿನಲ್ಲಿ ಸಾದಾರಣ ಏರ್ಪಾಡುಗಳು ನಕ್ಷೆಯ ಪ್ರಕಾರ ಮೊದಲನೆಯ ದರ್ಜೆಯ ಪ್ರಯಾಣಿಕರಿಗಾಗಿ ೮೩೩ ಆಸನಗಳನ್ನು
, ಎರಡನೇ ಎರ್ದರ್ಜೆಯ ಪ್ರಯಾಣಿಕರಿಗಾಗಿ ೬೧೪ ಆಸನಗಳನ್ನು ಹಾಗು ೧೦೦೬ ಆಸನಗಳನ್ನು ಮೂರನೆ ದರ್ಜೆಯ ಪ್ರಯಾಣಿಕರಿಗಾಗಿ ಅಳವಡಿಸಿತ್ತು. ಎಲ್ಲ ದರ್ಜೆಯ ಪ್ರಯಾಣಿಕರನ್ನು ಅಂದರೆ ಒಟ್ಟಾರೆ ೨೪೫೩ ಒಯ್ಯುವ
ಸಾಮರ್ಥ್ಯ ಈ ಹಡಗಿನಲ್ಲಿತ್ತು. ಇದರ ಜೊತೆಗೆ ೯೦೦ಕ್ಕು ಹೆಚ್ಚಿನ ಮಂದಿ ನಾವಕ ಸಿಬಂದಿಯನ್ನು ಒಯ್ಯವ ಸಾಮರ್ಥ್ಯ ಸಹ ಒಳಗೊಂಡಿತ್ತು. ಈ ಹಡಗಿನ ಭಾರವನ್ನು ಹಗುರವಾಗಿರುವ ರೀತಿಯಲ್ಲಿ ನಿರ್ಮಾಣ ಮಾಡಿ ಕಟ್ಟಲಾಗಿತ್ತು. ಇದು ಹೇಗಿತ್ತೆಂದರೆ, ಆಗಿನ ಕಾಲದ ಮೇಲ್ ದರ್ಜೆಯ ಐಷಾರಾಮಿ ಹೋಟ್ಲಗಳ ರೀತಿಯಲ್ಲಿತ್ತು. ರಿಜ್ ಹೋಟಲ್ ಕ್ರಮಪದ್ದತಿ
ಅಳವಡಿಸಿತ್ತು. ಮೊದಲನೆ ದರ್ಜೆಯ ಕೋಣೆಗಳನ್ನು ಮಹಾರಾಜರ ಅರಮನೆಗಳಂತೆ ಆಡಂಬರದಿಂದ ನಿರ್ಮಿಸಲಾಗಿತು. ಕೋಣಿಗಳು ಹಲವಾರು ಸುಂದರ ಆಕರ್ಷಕ ಶೈಲಿಗಳಿದ್ದವು. ಕೋಣೆಗಳ ಶ್ರೇಣಿ ರಿನೆಯಾಝಾನ್ಸ ಕಾಲದಿಂದ
ವಿಕ್ಟೋರಿಯನ್ ಕಾಲದವರೆಗೂ ಹೋಲಿಸಲಾಗಿದೆ. ಈ ಕೋಣೆಗಳು ಮೊದಲನೆಯ ಹಾಗು ಎರಡನೇಯ ದರ್ಜೆಯ ಪ್ರಯಾನಿಕರಿಗಾಗಿ ಮಾಡಲಾಗಿತ್ತು. ಪ್ರಯಾಣಿಕರಿಗೆ ದೂರವಾಣಿ ಸೌಲಭ್ಯ,, ಎರವಲು ಗ್ರಂಥಾಲಯ ಹಾಗು
ವಿಶಾಲವಾದ, ಕ್ಷೌರಿಕರ ಅಂಗಡಿಯಿತ್ತು. ಮೊದಲನೆಯ ದರ್ಜೆಯ ಪ್ರಯಾಣಿಕರಿಗಾಗಿ ಈಜುಕೊಳ, ವ್ಯಾಯಾಮಶಾಲೆ, ಪ್ರಯಾಣಿಕರು ಒಟ್ಟಿಗೆ ಸೇರಿ ಮೋಜು ತಮಾಶೆ ಮಾಡುವ ಪ್ರದೇಶವಿತ್ತು. ಟರ್ಕಿಶ್ ಶೈಲಿಯ ಸ್ಥಾನದ ಕೋಣೆ,
ವಿದ್ಯುತ್ ಸಲಕಕರಣೆಗಳಿಂದ ಕೂಡಿದ ಸ್ನಾನದಮನೆಯ ಸೌಲಬ್ಯವಿತ್ತು ಹಾಗು ಅಂಗಳದಲ್ಲಿ ಪಲಹಾರಮಂದಿರವಿತ್ತು. ಮೊದಲನೆಯ ದರ್ಜೆಯ ಸಾಧಾರಣ ಕೋಣೆಗಳು ಆರ್ನೆಟ್ ಮರದಿಂದ ಸುಂದರ ಹಾಗು ಆಕರ್ಷಕವಾಗಿ ಮಾಡಿ
ಇದಕ್ಕೆ ಸೌಂದ್ಯರ್ಯೋಪಾಯ ಹಲಗೆಗಳನ್ನು ಅಳವಡಿಸಿತ್ತು ಈ ಮರಕೆಲಸವು ಅತ್ಯಂತ ಸುಂದರವಾಗಿ ಆಕರ್ಷಕವಾಗಿದ್ದ್ದದಲ್ಲದೆ ದುಬಾರಿಯಾಗಿತ್ತು. ಮೂರನೇ ದರ್ಜೆಯ ಸಮಾನ್ಯ ಕೋಣೆಗಳು ಪೈನ್ ಮರದ ಹಲಗೆಗಳ ಹಾಗು ಟೀಕ್
ಮರದ ಜೋಡಣೆಗಳಿಂದ ನಿರ್ಮಿದಲಾಗಿತ್ತು. ಪರಿಶಿಯನ್ ಶೈಲಿಯ ಫಲಹಾರಮಂದಿರ ಸೂಯನ ಬೆಳಕು ಬರುವ ಅಂಗಳದಲ್ಲಿ ನಿರ್ಮಿಸಲಗಿತ್ತು. ಈ ಅಂಗಳದಲ್ಲಿ ಅಲಂಕಾರಕ್ಕಾಗಿ ಬಳ್ಳಿಗಳನ್ನು ಹಬ್ಬಿಸಲು ಸಲಕರಣಿಗಳಿದ್ದವು, ಫ್ರೆಂಚ್
ಹ್ಯಾಟೆ ಅಡುಗೆ ಶೈಲಿಯ ಕೋಣೆಗಳು ಮೊದಲನೆ ದರ್ಜೆಯ ಪ್ರಯಾಣಿಕರಿಗಾಗಿ ನಿರ್ಮಿಸಿದ್ದರು. ಮೂರನೆ ದರ್ಜೆಯ ಪ್ರಯಾಣಿಕರಿಗಾಗಿ ವಸತಿಸೌಕರ್ಯಗಳಲ್ಲಿ ಅವರಿಗಾಗಿಯೇ ಮಾಡಿದ ಭೋಜನ ಕೋಣೆಗಳಿದ್ದವು. ಜನಜಂಗುಲಿ ಸೇರುವ ಪ್ರದೇಶ ತೆರದ ಚಾವಣಿಯಲ್ಲಿ ವಿಶಾಲವಾಗಿತ್ತು. ಈ ಚಾವಣಿಯಲ್ಲಿ ಗಂಡಸರ
ಧೂಮಪಾನ ಮಾಡುವ ಕೋಣೆ, ಹೆಂಗಸರ ಒದುವ ಕೋಣೆಗಳಿದ್ದವು.ವಿರಾಮವೇಳೆಯ ಅನುಕೂಲಗಳನ್ನು ಪಡೆಯಲು ಹಾಗು ಸಮಯವನ್ನು ಕಳೆಯಲು ಈ ಎಲ್ಲಾ ಮೂರು ದರ್ಜೆಯ ಪ್ರಯಾಣಿಕರಿಗಾಗಿ ಇಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಹಡಗಿನ ಒಳಭಾಗದಲ್ಲಿ ಸಮಯವನ್ನು ಕಲೆಯಲು ಗ್ರಂಥಾಲಯ, ಧೂಮಪಾನ ಕೋಣೆಗಳು ಮತ್ತು ವ್ಯಾಯಾಮ ಶಾಲೆಗಳಿದ್ದವು. ಮೇಲ್ವಾಣಿಯಲ್ಲಿ ಎಲ್ಲಾ ಪ್ರಯಾಣಿಕರು ಒಟ್ಟಾಗಿ ಸೇರಿ ಸಾಮಾಜಿಕವಾಗಿ ಮೋಜಿಗಾಗಿ ಮಾತುಕಥೆಗಳನ್ನು
ಮಾಡುವುದು ರೂಡಿಯಲ್ಲಿತ್ತು. ಈ ಪ್ರಯಾಣಿಕಕರ ವಾಯುವಿಹಾರಕ್ಕೆ ಅಥವಾ ವಶ್ರಾಂತಿಗಾಗಿ ಚಾವಣಿ ಕುರ್ಚಿಗಳು ಅಥವಾ ಹಲಗೆ ಬೆಂಚುಗಳು ಬಾಡಿಗೆಗಾಗಿ ದೊರೆಯುತ್ತಿದ್ದವು. ಈ ಹಡಗಿನಲ್ಲಿ ವಿಶಿಷ್ಟವಾಗಿದ್ದಿದು ಮೊದಲನೆ ದರ್ಜೆಯ
ಮಹಡಿ ಮೆಟ್ಟಲುಗಳು ಈ ಮೆಟ್ಟಲುಗಳು ಸುಂದರವಾಗಿ ಆಕರ್ಷಕವಾಗಿ ಎಲ್ಲರ ಮನ ಸೆಳೆಯುತ್ತಿದ್ದವು

ಅಂತ್ಯ ವರದಿ[ಬದಲಾಯಿಸಿ]

ಟೈಟಾನಿಕ್ ಬೃಹತ್ ಹಡಗು ನಿರ್ಮಾಣ ಮಾಡಲು ೫ ವರ್ಷಗಳು ತೆಗೆದುಕೊಂಡಿವೆ ಆದರೆ ದುರಂತಕ್ಕೆ ಒಳಗಾಗಿ ಇದರ ಆಯಸ್ಸು ಬಹಳವಾಗಿ ಕುಗ್ಗಿತ್ತು. ದಿನಾಂಕ ೧೦ ಮೇ ೧೯೧೧ ರಲ್ಲಿ ಇದು ಅಸ್ಥಿತ್ವಕ್ಕೆ ಬಂದು ೧೪ ಏಪ್ರಿಲ್
೧೦೧೨ ರಂದು ಅಫಘಾತಕ್ಕೆ ಒಳಗಾಗಿ ಸಮುದ್ರದಲ್ಲಿ ಮುಳುಗಿಹೋಯಿತು. ಈ ಹಡಗು ೧೦ ಏಪ್ರಿಲ್ ೧೯೧೨ ರಂದು ಸೌತ್ ಆಫ್ಟನ್ (ಇಂಗ್ಲ್ಯಾಂಡ್) ನಿಂದ ಹೊರಟು ನ್ಯೂಯಾರ್ಕ್ ಪಟ್ಟಣಕ್ಕೆ ತಲಪಬೇಕಾಗಿತ್ತು. ಆದರೆ ಅಫಘಾತದ
ಕಾರಣದಿಂದಾಗಿ ತಲಪಲಾಗಲಿಲ್ಲ. ಸುಮಾರು ೬ ಸಾರಿ, ಸಮುದ್ರದ ಹಿಮಗಡ್ಡೆಗಳ ಬಗ್ಗೆ ಹಾಗೂ ಅತಿ ವೇಗದ ಬಗ್ಗೆ ಹೆಚ್ಚರಿಕೆಯನ್ನು ಕೊಟ್ಟರು ಸಹ ಪಾಲಿಸದೆ ಕೊನೆಗೆ ಅತಿ ವೇಗದಿಂದ ಹಿಮಗಡ್ಡೆಗಳಿಗೆ ಹೊಡೆದು ಅಫಘಾತದಿಂದ
ನುಚ್ಚುನೂರಾಯಿತು. ಈ ಅಫಘಾತವು ನ್ಯೂಪೌಂಡ್ ಲ್ಯಾಂಡ್ ಎಂಬ ಸಮುದ್ರ ತೀರದ ಪ್ರದೇಶದಲ್ಲಿ ೧೪ ಏಪ್ರಿಲ್ ೧೯೧೨ ಮದ್ಯರಾತ್ರಿಯ ಮೊದಲೆ ಈಡಾಗಿರುವುದು ದುರಾದೃಷ್ಟಕರ ಸಂಗತಿ. ಈ ಹಡಗಿನ ಘೋರ
ಅಫಘಾತದಿಂದಾಗಿ ಸುಮಾರು ೧೫೦೦ ಜನರು ಮರಣ ಹೊಂದಿದರು ಹಾಗು ಸುಮಾರು ಜನ ಗಾಯಗೊಂಡು ಕೈಕಾಲುಗಳನ್ನು ಕಳೆದುಕೊಂಡು ಚಿಂತಾಜನಕ ಪರಸ್ಥಿತಿ ಉಂಟಾಗಿತ್ತು. ಟೈಟಾನಿಕ್ ಹಡಗಿನ ಕಥೆಯು ಕುತೂಹಲಕಾರಿ ಅನುಭವಕ್ಕೆ ಕಾರಣವಾಗಿದೆ. ಇದರ ಕಥೆಯು ಮೂಲಭೂತವಾಗಿ ಸಂಯೋಜಿಸಲಟ್ಟು ಪುರಾತನಕಾಲದ ದುರ್ಘಟನೆಯಾಗಿ ಚರಿತ್ರೆಯಲ್ಲಿದೆ. ಈ ಒಂದು ದುರ್ಘಟನೆಯು ಭಿನ್ನವಾಗಿದ್ದು
ವಿಶೆಷವಾಗಿದ್ದು ಹಾಗು ಗೌರವ ಘನತೆಯಿಂದಿರುತ್ತದ. ಈ ಘಟನೆ ನಂಬಿಕೆಗೆ ಹಾಗು ಊಹಪೋಹಗಳಿಗೆ ಒಳಪಟ್ಟಿರುತ್ತದೆ. ಈ ಘಟನೆ ಸತ್ಯಕ್ಕೆ ಹತಿರವಾದ್ದರು ಸಹ ಇದರ ಅಂತ್ಯ ಮಾತ್ರ ಮುಸುಕು ಮುಚ್ಚಿದ ಹಾಗೆ ರಹಸ್ಯದಿಂದ ಕೂಡಿರುತದೆ. ಇದರ ಬಗ್ಗೆ ಹಲವಾರು ವಾದವಿವಾದಗಳಿವೆ. ಈ ಘಟನೆಯ ಪತ್ತೆದಾರರು ನಿಪುಣತೆಯಿಲ್ಲದವರು, ಇವರ ಈ ಘಟಣೆಯನ್ನು
ಅಲ್ಪರೀತಿಯಲ್ಲಿ ನೋಡಿ ಭ್ರಮೆಯೊಳಗೆ ಎಲ್ಲರನ್ನು ನೂಕಿದ್ದಾರೆ. ಒಟ್ಟಾರೆ ಟೈಟನಿಕ್ ದುರಂತದ ಒಂದು ಕಥೆ ಹಾಗು ಚರಿತ್ರೆಯಲ್ಲಿ ಅಮರವಾಗಿ ಪ್ರಪಂಚದ ಎಲ್ಲಾ ಜನರ ಗಮನವನ್ನು ಸೆಳೆಯುತ್ತದೆ.