ಆರ್. ಕೆ. ಕರಂಜಿಯ
ರುಸ್ಸಿ ಕರಂಜಿಯ (ಸೆಪ್ಟೆಂಬರ್, ೧೫, ೧೯೧೨-ಫೆಬ್ರವರಿ, ೧, ೨೦೦೮)
ವೃತ್ತಿ ಜೀವನ
[ಬದಲಾಯಿಸಿ]'ರುಸ್ತುಂ ಖುರ್ ಶೆದ್ ಕರಂಜಿಯ' ಎಂದು ಮನೆಯಲ್ಲಿ ಕರೆಸಿಕೊಳ್ಳುತ್ತಿದ್ದ, ಕರಂಜಿಯರವರು, ಮೊದಲು ತಮ್ಮ ವೃತ್ತಿ ಜೀವನವನ್ನು 'ಟೈಮ್ಸ್ ಆಫ್ ಇಂಡಿಯ', ಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿ ಪ್ರಾರಂಭಿಸಿದರು. ಅವರ ಗೆಳೆಯರ ಮಧ್ಯೆ, 'ರುಸ್ತುಂ ಖುರ್ ಶೆದ್ ಕರಂಜಿಯ,' ಎಂದು ಪ್ರಖ್ಯಾತರಾಗಿದ್ದರು. ೧೯೪೦ ರಲ್ಲಿ ಅದಕ್ಕೆ ರಾಜೀನಾಮೆ ಕೊಟ್ಟು, ತಮ್ಮದೇ ಆದ ಬ್ಲಿಟ್ಜ್'Blitz', ವಾರಪತ್ರಿಕೆಯನ್ನು ಪ್ರಾರಂಭ ಮಾಡಿದರು. ಅವರ ಸಮಯದಲ್ಲಿ ಬಿರುಗಾಳಿಯಂತೆ ಜನರನ್ನು ತತ್ತರಿಸಿದ್ದ, ನಾನಾವಟಿಯವರ ಮೇಲಿನ ಕೊಲೆ ಮೊಕದ್ದಮೆಯ ಪ್ರತಿ ಹಂತಗಳನ್ನೂ ಅತ್ಯಂತ ರೋಚಕವಾಗಿ ಹೊರತರುತ್ತಿದ್ದರು.ಅಂದಿನ ದಿನಗಳಲ್ಲಿ 'ಬ್ಲಿಟ್ಝ್' ಅತ್ಯಂತ ಜನಪ್ರಿಯ ವಾರ-ಪತ್ರಿಕೆಯಾಗಿತ್ತು
ಪ್ರಸಿದ್ಧಿ
[ಬದಲಾಯಿಸಿ]'ಪ್ರೊತಿಮಾಬೇದಿ' ಯವರು, ಬೆತ್ತಲೆಯಾಗಿ ಬೊಂಬಾಯಿನ 'ಫ್ಲೋರ ಫೌಂಟೆನ್' ನಿಂದ 'ಜುಹುಬೀಚ್' ವರೆಗೆ ಓಡಿದ್ದ ಸಂಗತಿಯನ್ನು ಪ್ರಕಟಪಡಿಸಿದಮೇಲೆ ಅವರು ಪ್ರಸಿದ್ಧಿಯನ್ನು ಹೆಚ್ಚಿಸಿಕೊಂಡರು. ಅವರೊಬ್ಬ ರೂಪದರ್ಶಿಯಾಗಿ 'ವಿಮಲ್ ಸೂಟಿಂಗ್' ಬಟ್ಟೆಗಳಿಗೆ ಜಾಹಿರಾತಿಯಲ್ಲಿ ಕಾಣಿಸಿಕೊಂಡಿದ್ದರು. 'ಸೂಟ್ ಬೂಟ್ ' ಉಡುಪಿನಲ್ಲಿ ಸೊಗಸಾಗಿ ಕಾಣಿಸುತ್ತಿದ್ದರು. ಎಳೆಯ ಸುದ್ದಿಕಾರರಿಗೆ, ಪತ್ರಿಕಾಕರ್ತರಿಗೆ ಪ್ರೋತ್ಸಾಹ ಕೊಡುತ್ತಿದ್ದರು. ಅವರ ಕಷ್ಟಗಳನ್ನು ವಿಚಾರಿಸಲು ತಮ್ಮ ಮೆರಿನ್ ಡ್ರೈವ್ ನಲ್ಲಿದ ಮನೆಗೆ ಊಟಕ್ಕೆ ಆಹ್ವಾನಿಸುತ್ತಿದ್ದರು. ರುಸ್ಸಿಯವರಿಗೆ, ಎಳೆಪ್ರಾಯದ ಅಂದಚೆಂದದ ಹುಡುಗಿಯರ ಜೊತೆ ಮಾತುಕತೆಯಾಡುವ ಹುಚ್ಚಿತ್ತು. ಸದಾ ಹಸನ್ಮುಖಿ.
ನಿಧನ
[ಬದಲಾಯಿಸಿ]ಎರಡುಬಾರಿ 'ಹೃದಯಾಘಾತ'ದ ನಂತರ ಅವರ ಆರೋಗ್ಯದಲ್ಲಿ ಹೆಚ್ಚು ಸುಧಾರಣೆಯಾಗಲಿಲ್ಲ. 'ರುಸ್ಸಿ ಕರಂಜಿಯ' ತಮ್ಮ ಮುಂಬಯಿ ಮನೆಯಲ್ಲಿ ಫೆಬ್ರವರಿ, ೧, ೨೦೦೮. ರಂದು ಮರಣಹೊಂದಿದರು. ಆವರ ಪಾರ್ಥಿವ ದೇಹದ ಅಂತಿಮ ಸಂಸ್ಕಾರ ದಕ್ಷಿಣ ಮುಂಬಯಿನ್‍ನ 'ಚಂದನವಾಡಿ'ಯಲ್ಲಿ ನೆರವೇರಿತು. ೯೫ ವರ್ಷವಯಸ್ಸಿನ, 'ರುಸ್ಸಿ ಕರಂಜಿಯ' ರವರಿಗೆ ರೀಟ ಮೆಹ್ತ ಎಂಬ ಮಗಳಿದ್ದಾಳೆ. ಅವರ ಸೋದರ, ಖ್ಯಾತ ಚಲನಚಿತ್ರ ಪತ್ರಿಕೋದ್ಯಮಿ. ಇವರಲ್ಲದೆ, 'ಆರ್.ಕೆ. ಕಾರಂಜಿಯ' ರವರು ತಮ್ಮ ಅಪಾರ ಅಭಿಮಾನಿಗಳನ್ನು, ಬಳಗದವರನ್ನು ಮತ್ತು ಗೆಳೆಯರನ್ನು ಅಗಲಿ ಹೋಗಿದ್ದಾರೆ.