ವಿಷಯಕ್ಕೆ ಹೋಗು

ಆರ್.ವಿ.ಭಂಡಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆರ್.ವಿ.ಭಂಡಾರಿ
ಜನನಮೇ ೫, ೧೯೩೬
ಕೆರೆಕೋಣ, ಹೊನ್ನಾವರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ
ಮರಣಅಕ್ಟೋಬರ್ ೨೫, ೨೦೦೮
ಮಣಿಪಾಲ, ದಕ್ಷಿಣ ಕನ್ನಡ ಜಿಲ್ಲೆ
ಅಂತ್ಯ ಸಂಸ್ಕಾರ ಸ್ಥಳಕೆರೆಕೋಣ, ಹೊನ್ನಾವರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ
ವೃತ್ತಿಪ್ರಾಥಮಿಕ ಶಾಲಾ ಶಿಕ್ಷಕ (ನಿ. ೧೯೯೪ ಜೂನ್), ಲೇಖಕ,
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಮಂಗಳೂರು ವಿಶ್ವವಿದ್ಯಾನಿಲಯ
ಕಾಲ20ನೆಯ ಶತಮಾನ
ಪ್ರಕಾರ/ಶೈಲಿಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕಥೆ, ಶಿಶು ಸಾಹಿತ್ಯ
ಸಾಹಿತ್ಯ ಚಳುವಳಿಬಂಡಾಯ
ಪ್ರಮುಖ ಪ್ರಶಸ್ತಿ(ಗಳು)ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ(೨೦೦೫), ವಾಜಂತ್ರಿ ಪ್ರಶಸ್ತಿ, ಕೊಗ್ರೆ ಶಿಕ್ಷಣ ಪ್ರತಿಷ್ಠಾನದ ಪ್ರಶಸ್ತಿ
ಬಾಳ ಸಂಗಾತಿಸುಬ್ಬಿ
ಮಕ್ಕಳುಇಂದಿರಾ, ಮಾಧವಿ, ವಿಠ್ಠಲ
ಸಂಬಂಧಿಗಳುಸರಸ್ವತಿ (ತಾಯಿ) ಛಾಯಾ, ಅನಿಲ (ಮೊಮ್ಮಕ್ಕಳು) ಕಮಲಾಕರ (ಅಳಿಯ), ಯಮುನಾ ಗಾಂವ್ಕರ (ಸೊಸೆ)

ಪ್ರಭಾವಿತರು

ವೃತ್ತಿಯಲ್ಲಿ ಶಿಕ್ಷಕರಾಗಿ, ಸಾಹಿತ್ಯ ಕ್ಷೇತ್ರದಲ್ಲಿ ಬಂಡಾಯ ಸಾಹಿತಿಯೆಂದೇ ಗುರುತಿಸಿಕೊಂಡಿದ್ದ ಆರ್. ವಿ. ಭಂಡಾರಿಯವರು ಮಕ್ಕಳ ಸಾಹಿತ್ಯ, ವಿಮರ್ಶನೆ ಮತ್ತು ಸಾಕ್ಷರತಾ ಸಾಹಿತ್ಯ ಕ್ಷೇತ್ರದಲ್ಲಿ ಬಹುಮುಖ್ಯ ಕೊಡುಗೆ ನೀಡಿದ್ದಾರೆ.

೫ ಮೇ, ೧೯೩೬ರಲ್ಲಿ ಹೊನ್ನಾವರ ತಾಲ್ಲೂಕಿನ ಕೆರೆಕೋಣದಲ್ಲಿ ಜನಿಸಿದ ಆರ್. ವಿ. ಭಂಡಾರಿಯವರು ಇಂಗ್ಲಿಷ್ ಮತ್ತು ಕನ್ನಡಗಳಲ್ಲಿ ಎಂ. ಎ. ಪದವಿಗಳನ್ನುಗಳಿಸಿ, ೧೯೯೫ರಲ್ಲಿ ಮಂಗಳೂರಿನ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ವ್ಯಾಸಂಗನ್ನೂ ಪೂರೈಸಿದರು. ನಂತರ, ಶಿಕ್ಷಕರಾಗಿ ೧೯೯೪ರಲ್ಲಿ ನಿವೃತ್ತಿ ಹೊಂದಿದರು.


ಪ್ರಶಸ್ತಿ-ಪುರಸ್ಕಾರಗಳು

[ಬದಲಾಯಿಸಿ]
  • ವಾಜಂತ್ರಿ ಶಿಕ್ಷಕ ಪ್ರಶಸ್ತಿ
  • ಜಿಲ್ಲಾ ಶಿಕ್ಷಕ ಪ್ರಶಸ್ತಿ - ೧೯೯೨
  • ರಾಜ್ಯ ಶಿಕ್ಷಕ ಕಲ್ಯಾಣ ಪ್ರಶಸ್ತಿ - ೧೯೯೪
  • ಕೊಗ್ರೆ ಶಿಕ್ಷಣ ಪ್ರತಿಷ್ಠಾನ ಪ್ರಶಸ್ತಿ
  • ಗೌರೀಶ ಕಾಯ್ಕಿಣಿ ಪ್ರತಿಷ್ಠಾನದ ಪ್ರಶಸ್ತಿ - ೧೯೯೬
  • 'ಸಿಸು ಸಂಗಮೇಶ ದತ್ತಿ' ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ
  • ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಅಂಬೇಡ್ಕರ್ ಫೆಲೋಶಿಪ್ - ೧೯೯೭
  • ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ೨೦೦೨ ('ಯಶವಂತನ ಯಶೋಗೀತ' ಮಕ್ಕಳ ಕಾದಂಬರಿಗೆ)
  • ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿ - ೨೦೦೫

ಕೃತಿಗಳು

[ಬದಲಾಯಿಸಿ]

ಕಾದಂಬರಿಗಳು

[ಬದಲಾಯಿಸಿ]
  • ಬೆಂಕಿಯ ಮಧ್ಯೆ - ೧೯೮೪ [೧]
  • ಬಿರುಗಾಳಿ - ೨೦೦೧
  • ನೆರೆ ಹಾವಳಿ ಮತ್ತು ಗೋಡೆಗಳು - ೨೦೦೨
  • ತಲೆಮಾರು - ೨೦೦೪

ಕವನ ಸಂಕಲನ

[ಬದಲಾಯಿಸಿ]
  • ಕಣ್ಣೇಕಟ್ಟೆ ಕಾಡೇ ಗೂಡೆ - ೧೯೭೭
  • ಕೊಲೆಗಾರ ಪತ್ತೆಯಾಗಲಿಲ್ಲ - ೧೯೮೧
  • ಹದ್ದುಗಳು - ೨೦೦೭

ವಿಮರ್ಶೆ

[ಬದಲಾಯಿಸಿ]
  • ಸಮಾಜವಾದಿ ವಾಸ್ತವ - ೧೯೮೯
  • ವರ್ಣದಿಂದ ವರ್ಗದ ಕಡೆಗೆ - ೨೦೦೩
  • ಕನ್ನಡ ಕಾದಂಬರಿಗಳಲ್ಲಿ ವರ್ಣ ಮತ್ತು ವರ್ಗ ಸಂಘರ್ಷ - ೨೦೦೩
  • ಒಳದನಿ - ೨೦೦೫
  • ಸಾಹಿತ್ಯ ಮತ್ತು ಪ್ರಭುತ್ವ- ೨೦೦೫
  • ಕುವೆಂಪು ದೃಷ್ಠಿ-ಸೃಷ್ಠಿ

ಮಕ್ಕಳ ಸಾಹಿತ್ಯ

[ಬದಲಾಯಿಸಿ]
  • ಪ್ರೀತಿಯಕಾಳು (ಮಕ್ಕಳ ನಾಟಕ ಸಂಕಲನ)
  • ಅಪ್ಪಿಕೋ ಮತ್ತೆರಡು ಮಕ್ಕಳ ನಾಟಕಗಳು - ೧೯೮೪
  • ಬೆಳಕಿನ ಕಡೆಗೆ (13 ನಾಟಕಗಳು)
  • ಬೆಳಕು ಹಂಚಿದ ಬಾಲಕ & ನಾನೂ ಗಾಂಧಿ ಆಗ್ತೇನೆ (2 ನಾಟಕಗಳು) - ೨೦೦೪
  • ಬಣ್ಣದ ಹಕ್ಕಿ (2 ನಾಟಕಗಳು) - ೨೦೦೫
  • ಆಡು ಬಾ ಹಾಡು ಬಾ
  • ಹೂವಿನೊಡನೆ ಮಾತುಕತೆ - ೨೦೦೭
  • ಯಶವಂತನ ಯಶೋಗೀತ (ಕಾದಂಬರಿ) - ೨೦೦೨
  • ಚಿನ್ನದ ಹುಡುಗಿ ಚಿನ್ನಮ್ಮ (ಕಿರುಕಾದಂಬರಿ) - ೨೦೦೮
  • ಈದ್ಗಾ ಮತ್ತು ಬೆಳಕಿನ ಕಡೆಗೆ(ನಾಟಕ) - ೨೦೦೯
  • ಪ್ರೀತಿಯ ಕಾಳು (ನಾಟಕ) - ೨೦೧೧
  • ಒಂದೇ ಗೂಡಿನ ಹಕ್ಕಿಗಳು(ನಾಟಕ) - ೨೦೧೧

ವ್ಯಕ್ತಿಚಿತ್ರ

[ಬದಲಾಯಿಸಿ]
  • ನಿರಂಜನ - ೨೦೦೫
  • ಕಾಡಿನ ಕವಿ (ಕುವೆಂಪು) - ೨೦೦೪
  • ನೇತಾಜಿ ಸುಭಾಶ್ಚಂದ್ರ ಬೋಸ್ - ೨೦೦೩

ಸಾಕ್ಷರತಾ ಸಾಹಿತ್ಯ

[ಬದಲಾಯಿಸಿ]
  • ಕೇವಲ ಸಹಿ - ೧೯೯೪
  • ಐದು ಯಕ್ಷಗಾನ ಏಕಾಂಕಗಳು - ೧೯೯೪
  • ಇಟ್ಟ ಹೆಜ್ಜೆ ಮುಂದಕೆ - ೨೦೦೨
  • ನಾನು ಪ್ರೀತಿಸುತ್ತೇನೆ

ಸಂಪಾದನೆ

[ಬದಲಾಯಿಸಿ]
  • ರಸರಾಜ
  • ದೀಪರಾಧನೆ
  • ಕಲ್ಯಾಣ ಪ್ರಸಂಗಗಳು (ಯಕ್ಷಗಾನ ಪ್ರಸಂಗ ಸಂಪುಟ)
  • ಗೌರೀಶ ಕಾಯ್ಕಿಣಿ ಸಾಹಿತ್ಯ ಸಂಪುಟ (ಸಂಪಾದಕ ಮಂಡಲಿ ಸದಸ್ಯರು)
  • ಉಪಸಂಸ್ಕೃತಿ ಮಾಲೆ- ಕನರ್ಾಟಕ ಸಾಹಿತ್ಯ ಅಕಾಡಮಿ ಇತ್ಯಾದಿ (ಸಂಪಾದಕ ಮಂಡಲಿ ಸದಸ್ಯರು)
  • ಯಾನ ಮತ್ತು ಇತರ ನಾಟಕಗಳು - ೨೦೦೧
  • ಮೀನ್‌ಪಳ್ದಿ (ಕಥಾ ಸಂಕಲನ) - ೨೦೦೭
  • ಕನ್ನಡದಲ್ಲಿ ಇಂಗ್ಲಿಷ ವ್ಯಾಕರಣ - ೨೦೦೪

ದೀರ್ಘಕಾಲದ ಅಸ್ವಸ್ಥತೆಯ ನಂತರ ಅಕ್ಟೋಬರ್ ೨೫, ೨೦೦೮ರ ಶನಿವಾರ ಮಧ್ಯಾಹ್ನ ಮಣಿಪಾಲದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮರುದಿನ ಬೆಳಿಗ್ಗೆ ಅವರ ಊರಾದ ಹೊನ್ನಾವರ ತಾಲ್ಲೂಕಿನ ಕೆರೆಕೋಣದಲ್ಲಿ ಅಂತ್ಯಕ್ರಿಯೆ ನಡೆಯಿತು. [೨]

  1. https://pusthakapreethi.wordpress.com/2008/10/28/%e0%b2%b9%e0%b2%bf%e0%b2%b0%e0%b2%bf%e0%b2%af-%e0%b2%ac%e0%b2%82%e0%b2%a1%e0%b2%be%e0%b2%af-%e0%b2%b8%e0%b2%be%e0%b2%b9%e0%b2%bf%e0%b2%a4%e0%b2%bf-%e0%b2%86%e0%b2%b0%e0%b3%8d%e0%b2%b5%e0%b2%bf/