ಆರ್.ಎನ್.ಪದ್ಮನಾಭ
ಗೋಚರ
ಆರ್.ಎನ್.ಪದ್ಮನಾಭ ನಿವೃತ್ತ ಪ್ರಾಧ್ಯಾಪಕರು, ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ಮಹಾರಾಜ ಕಾಲೇಜು ಮೈಸೂರು. ಬಹುಮುಖ ಪ್ರತಿಭಾವಂತರಾದ ಇವರು ಪತ್ರಿಕೋದ್ಯಮಿ, ಒಯಾಸಿಸಿ, ಧ್ವನಿ, ಪ್ರತಿಧ್ವನಿ, ರ‍್ಯಾನ್ಸ್ಯಾಕ್ ಸ್ಪಂದನ, ನೆಳಲು-ಬೆಳಕು, ಗೋಡೆ ಪತ್ರಿಕೆಗಳ ಸಂಯೋಜನಾಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಜನನ, ವಿದ್ಯಾಭ್ಯಾಸ
[ಬದಲಾಯಿಸಿ]ಆರ್.ಎನ್.ಪದ್ಮನಾಭ ಅವರು ೦೧.೦೧.೧೯೪೭ರಲ್ಲಿ ಹಾಸನಜಿಲ್ಲೆಯ ಅರಕಲಗೋಡು ತಾಲ್ಲೋಕಿನ "ರುದ್ರಪಟ್ಟಣ"ದಲ್ಲಿ ಜನಿಸಿದರು. ತಂದೆ- ಎಂ.ಆರ್.ನಾಗಪ್ಪ, ತಾಯಿ-ಸುಬ್ಬಲಕ್ಷ್ಮಮ್ಮ. ಶಾಲಾ ವಿದ್ಯಾಭ್ಯಾಸ ರುದ್ರಪಟ್ಟಣ ಮತ್ತು ಬಸವಪಟ್ಟಣದಲ್ಲಾಯಿತು.
- ೧೯೭೦ ರಲ್ಲಿ ಬಿ.ಎ. -ಮಹಾರಾಜ ಕಾಲೇಜು
- ೧೯೭೩ ರಲ್ಲಿ ಎಂ.ಎ - ಮಾನಸಗಂಗೋತ್ರಿ
- ೧೯೭೮ ರಲ್ಲಿ ಡಿಪ್ ಇನ್ ಫಿಲ್ಮ್ ಅಪ್ರಿಸಿಯೇಷನ್ - ಪುಣೆ
ವೃತ್ತಿ ಜೀವನ
[ಬದಲಾಯಿಸಿ]- ೧೯೭೩ ರಲ್ಲಿ ಪ್ರಜಾವಾಣಿ ವರದಿಗಾರರಾಗಿ ವೃತ್ತಿಜೀವನವನ್ನು ಆರಂಭಿಸಿದರು.
- ೧೯೭೩ ನವೆಂಬರ್ ೧೪ ರಿಂದ ಸಂವಹನ ಮತ್ತು ಪತ್ರಿಕೋದ್ಯಮ ಉಪನ್ಯಾಸಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ ಮಹಾರಾಜ ಕಾಲೇಜಿನಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ.
- ಕನ್ನಡ ಮಾಧ್ಯಮದಲ್ಲಿ ಮೊದಲ ಬಾರಿಗೆ ಬಿ.ಎ.ಪತ್ರಿಕೋದ್ಯಮ ಆರಂಭಿಸಿದರು.
- ೧೯೦೬ ರಲ್ಲಿ ನಿವೃತ್ತಿ ಪಡೆದರು.
ಸಂದರ್ಶನ ಪ್ರಾಧ್ಯಾಪಕರಾಗಿ
[ಬದಲಾಯಿಸಿ]ಇವರು ಸಂದರ್ಶನ ಪ್ರಾಧ್ಯಾಪಕರಾಗಿ ಹಲವೆಡೆ ಸೇವೆ ಸಲ್ಲಿಸಿದ್ದಾರೆ.
- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ -ಮೈಸೂರು
- ಜೆ.ಎಸ್.ಎಸ್. ಮಹಿಳಾ ಕಾಲೇಜು -ಮೈಸೂರು
- ಸಂತ ಫಿಲೋಮಿನಾ ಕಾಲೇಜು -ಮೈಸೂರು
- ಮಹಾಜನ ಪ್ರಥಮ ದರ್ಜೆ ಕಾಲೇಜು -ಮೈಸೂರು
- ಜ್ಷಾನಬುತ್ತಿ ವೃತ್ತಿ ತರಭೇತಿ ಕೇಂದ್ರ -ಮೈಸೂರು
- ಸಂದೇಶ ಪತ್ರಕೋದ್ಯಮ ಸಂಸ್ಥೆ -ಮಂಗಳೂರು
- ಬೆಂಗಳೂರು ವಿಶ್ವವಿದ್ಯಾನಿಲಯ -ಬೆಂಗಳೂರು
- ಕುವೆಂಪುನಗರ ವಿಶ್ವವಿದ್ಯಾನಿಲಯ -ಬೆಂಗಳೂರು
- ಎನ್.ಎಂ.ಕೆ.ಆರ್.ವಿ ಕಾಲೇಜು -ಬೆಂಗಳೂರು
- ಮಣಿಪಾಲ್ ಕೇಂದ್ರ - ಉಡುಪಿ
- ಸಿದ್ದಾರ್ಥ ಮಾಧ್ಯಮ ಕೇಂದ್ರ -ತುಮಕೂರು
- ಪಾಂಡುಚೇರಿ ಕೇಂದ್ರಿಯ ವಿಶ್ವವಿದ್ಯಾನಿಲಯ
ನಿರ್ದೇಶಕರಾಗಿ
[ಬದಲಾಯಿಸಿ]- ನೆಳಲು-ಬೆಳಕು ನಾಟಕ ಸಂಘ -ಮಹಾರಾಜ ಕಾಲೇಜು
- ಯು.ಜಿಸಿ ಅನುದಾನ ಸಿನಿಮಾ ಆಧ್ಯಯನ ಕೇಂದ್ರ -ಮಹಾರಾಜ ಕಾಲೇಜು
- ಮೈಸೂರು ವಿಶ್ವವಿದ್ಯಾನಿಲಯ ಕನ್ನಡ ಮಾಧ್ಯಮ ಸಿನಿಮಾ ಆಧ್ಯಯನ ಕೇಂದ್ರ
- ಭಾರತದಲ್ಲಿ ಪ್ರಪ್ರಥಮ ಬಾರಿಗೆ ಆರಂಭವಾದ ಎಂ.ಎಸ್ಸಿ ಇನ್ ಇಲೆಕ್ಟ್ರಾನಿಕ್ ಮೀಡಿಯಾದ ವ್ಯವಸ್ಥಾಪಕ ನಿರ್ದೇಶಕರು - ಇ.ಎ.ಆರ್.ಸಿ- ಮಾನಸಗಂಗೋತ್ರಿ ಮೈಸೂರು
ಪ್ರಚಾರ ನಿರ್ದೇಶಕರಾಗಿ
[ಬದಲಾಯಿಸಿ]- ರಾಷ್ಟ್ರೀಯ ಅರ್ಥಶಾಸ್ತ್ರ ಕಾಂಗ್ರೆಸ್
- ರಾಷ್ಟ್ರೀಯ ಸಮಾಜಶಾಸ್ತ್ರ ಕಾಂಗ್ರೆಸ್
- ರಾಷ್ಟ್ರೀಯ ಮಹಿಳಾ ಕಾಂಗ್ರೆಸ್
- ರಾಷ್ಟ್ರೀಯ ಮಹಿಳಾ ಸಮಖ್ಯ
ಕಾರ್ಯಗಾರಗಳ ಆಯೋಜನೆ
[ಬದಲಾಯಿಸಿ]- ನೂರಕ್ಕೂ ಹೆಚ್ಚು ರಾಷ್ಟ್ರ ಮಟ್ಟದ, ರಾಜ್ಯ ಮಟ್ಟದ ಕಾರ್ಯಾಗಾರಗಳಲ್ಲಿ, ವಿಚಾರಸಂಕಿರಣಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಪ್ರಸಾರಾಂಗ ಎಕ್ಸಟೇನ್ಶನ್ ಉಪನ್ಯಾಸಗಳನ್ನು ನೀಡಿದ್ದಾರೆ.
- ನಟನೆ, ನಿರ್ದೇಶನ, ಬೆಳಕು, ಸಂಯೋಜನೆ, ಸ್ಕ್ರಿಪ್ಟ್ ಬರವಣಿಗೆ, ಪತ್ರಿಕಾ ಬರವಣಿಗೆ, ಛಾಯಾಚಿತ್ರಕಲೆ, ಮೂಕಾಭಿನಯ, ಭಾಷಣಕಲೆ, ವಸ್ತ್ರಾಲಂಕಾರ, ಸಿನಿಮಾರಸಗ್ರಹಣ, ಮೇಕ್ ಅಪ್, ಮ್ಯಾನೇಜ್ ಮೆಂಟ್ ಮುಂತಾದುವು.
ಪೂರಕ ಮಾಹಿತಿ
[ಬದಲಾಯಿಸಿ]ಮಹಾರಾಜ ಕಾಲೇಜಿನ ವಾರ್ಷಿಕ ಸಂಚಿಕೆ ಅನಂತಯಾತ್ರಿಯಿಂದ.
ಉಲ್ಲೇಖಗಳು
[ಬದಲಾಯಿಸಿ]
[೧][೨] [೩][೪] [೫][೬] [೭][೮] [೯][೧೦] [೧೧]
ಬಾಹ್ಯಕೊಂಡಿಗಳು
[ಬದಲಾಯಿಸಿ]- ↑ ಕರ್ನಾಕ ರಾಜ್ಯ ಮುಕ್ತ ವಿವಿ : ಫೆಬ್ರವರಿ 24 ರಿಂದ ಮಾರ್ಚ್ 4 ರವರೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರ
- ↑ "ಆರ್ಕೈವ್ ನಕಲು". Archived from the original on 2015-04-04. Retrieved 2015-06-21.
- ↑ ಅವಕಾಶ ಬಳಕೆಗೆ ವಿದ್ಯಾರ್ಥಿಗಳಿಗೆ ಸಲಹೆ
- ↑ http://vijaykarnataka.indiatimes.com/district/mysuru/-/articleshow/31549620.cms
- ↑ >> ಜಿಲ್ಲೆ› ಮೈಸೂರು ಅಧ್ಯಾಪಕ ವೃತ್ತಿಯಲ್ಲಿ ಸಾರ್ಥಕ್ಯ: ವಾನಳ್ಳಿ
- ↑ http://www.prajavani.net/article/%E0%B2%85%E0%B2%A7%E0%B3%8D%E0%B2%AF%E0%B2%BE%E0%B2%AA%E0%B2%95-%E0%B2%B5%E0%B3%83%E0%B2%A4%E0%B3%8D%E0%B2%A4%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%B8%E0%B2%BE%E0%B2%B0%E0%B3%8D%E0%B2%A5%E0%B2%95%E0%B3%8D%E0%B2%AF-%E0%B2%B5%E0%B2%BE%E0%B2%A8%E0%B2%B3%E0%B3%8D%E0%B2%B3%E0%B2%BF
- ↑ ಮೈಸೂರಲ್ಲಿ ವಿವೇಕರ ಸ್ಮರಣೆ
- ↑ http://vijaykarnataka.indiatimes.com/district/mysuru/-/articleshow/45858349.cms
- ↑ ಪುಟ್ಟಣ್ಣ ಕಣಗಾಲ್ ಜನ್ಮದಿನ ಡಿ.1ಕ್ಕೆ
- ↑ http://www.kannadaprabha.com/districts/mysore/%E0%B2%AA%E0%B3%81%E0%B2%9F%E0%B3%8D%E0%B2%9F%E0%B2%A3%E0%B3%8D%E0%B2%A3-%E0%B2%95%E0%B2%A3%E0%B2%97%E0%B2%BE%E0%B2%B2%E0%B3%8D-%E0%B2%9C%E0%B2%A8%E0%B3%8D%E0%B2%AE%E0%B2%A6%E0%B2%BF%E0%B2%A8-%E0%B2%A1%E0%B2%BF1%E0%B2%95%E0%B3%8D%E0%B2%95%E0%B3%86/141511.html
- ↑ "ಆರ್ಕೈವ್ ನಕಲು". Archived from the original on 2016-03-04. Retrieved 2015-06-21.