ಆರ್ಯಾವರ್ತ (ಪತ್ರಿಕೆ)

ವಿಕಿಪೀಡಿಯ ಇಂದ
Jump to navigation Jump to search

ಬಿಹಾರ, ಪಶ್ಚಿಮ ಬಂಗಾಲ, ಉತ್ತರ ಪ್ರದೇಶ ಮತ್ತು ನೇಪಾಲಗಳಲ್ಲಿ ಪ್ರಸಾರ ಹೊಂದಿರುವ ಜನಪ್ರಿಯ, ಪ್ರಗತಿಪರ ದಿನಪತ್ರಿಕೆ. ೧೯೪೦ರಿಂದ ಪಾಟ್ನದ ಇಂಡಿಯನ್ ನೇಷನ್ ಪತ್ರಿಕಾ ಗುಂಪಿನ ಅಂಗವಾಗಿ ಹಿಂದಿ ಭಾಷೆಯಲ್ಲಿ ಪ್ರಕಟವಾಗುತ್ತಿದೆ. ನಗರವಾಸಿಗಳ ಮತ್ತು ಹಳ್ಳಿಗರ ಅಭಿರುಚಿಗೆ ತಕ್ಕಂತೆ ಸುದ್ದಿಯನ್ನು ಸಾರುತ್ತ ಹಿಂದಿ ಪತ್ರಿಕೆಗಳ ಗುಂಪಿನ ಪ್ರಭಾವೀ ಪತ್ರಿಕೆಗಳಲ್ಲೊಂದೆನಿಸಿದೆ.