ಆರ್ಕೀಡ್ ಬೆಳೆಯುವುದು ಹೇಗೆ

ವಿಕಿಪೀಡಿಯ ಇಂದ
Jump to navigation Jump to search

ಆರ್ಕೀಡ್ ಬೆಳೆಯುವುದು ಹೇಗೆ? ಅರುಣಾಚಲಪ್ರದೇಶ ರಾಜ್ಯದಲ್ಲಿ ಆರ್ಕೀಡ್ ಸಂಶೋಧನ ಕೇಂದ್ರವಿದೆ. ಅಲ್ಲಿ ಬಗೆಬಗೆಯ ನಾನಾ ವರ್ಣಗಳ ಆರ್ಕೀಡ್ ಹೂಗಳನ್ನು ಬೆಳೆಸಲಾಗುತ್ತಿದೆ. ಆರ್ಕೀಡ್ ಹೂವುಗಳು ಐದು ಬಗೆಗಳಲ್ಲಿವೆ. ಅವುಗಳೆಂದರೆ ೧.ಎಪಿಫೈಟಿಸ್ - ಇದು ಮರಗಳ ಶಾಖೆಗಳಲ್ಲಿ ಮತ್ತು ಕಾಂಡಗಳಲ್ಲಿ ಬೆಳೆಯುವಂತಹದು ೨.ಲಿಥೋಫೈಟಿಸ್- ಹಾವಸೆ ಹೊದಿಕೆ ಇರುವ ಬಂಡೆಗಲ್ಲುಗಳಲ್ಲಿ ಸಹಜವಾಗಿ ಬೆಳೆಯುವಂತಹದು. ೩. ಟೆರೆಸ್ಟ್ರಿಯಲ್ - ಮಣ್ಣಿನಲ್ಲಿ ಸಹಜವಾಗಿ ಬೆಳೆಯುವಂತಹದು ೪. ಸಪ್ರೋಫೈಟಿಸ್- ಕಾಡಿನ ಆರ್ದ್ರತೆಯಲ್ಲಿ ಮಾತ್ರ ಬೆಳೆಯುವಂತಹದು ೫. ಅಮೀಬೋಫೈಟಿಸ್ ಟೆರೆಸ್ಟ್ರಿಯಲಸ್ ಆರ್ಕೀಡ್ ಬೆಳೆವಣಿಗೆಯು ಎರ್ಡು ಹಂತಗಳಲ್ಲಿ ಆಗುತ್ತದೆ ಎಲೆಯ ಹಂತ ಮತ್ತು ಹೂ ಬಿಡುವ ಹಂತ ಕೊನೆಯ ಎರಡು ಬಗೆಯ ಆರ್ಕೀಡ್ ಗಳನ್ನು ಕೃಷಿ ಮಾಡಲಾಗದು. ಆರ್ಕೀಡ್ ಬೆಳೆಸಲು ಕೆಲವು ಟಿಪ್ಸುಗಳು ಎಪಿಫೈಟಿಕ್ ಮತ್ತು ಲಿಥೋಫೈಟಿಕ್ ಆರ್ಕೀಡ್ ಗಳನ್ನು ತೂತಿರುವ ಮಣ್ಣಿನ ಮಡಕೆಯಲ್ಲಿ ಅಥವಾ ಪ್ಲಾಸ್ಟಿಕ್ ಮ್ಡಕೆಯಲ್ಲಿ ಮರದ ಬುಟ್ಟಿಗಳಲ್ಲಿ ಅಥವಾ ಮರದ ದಿಮ್ಮೆಗಳಲ್ಲಿ ಕೃಷಿ ಮಾಡಬಹುದು. ಆರ್ಕೀಡ್ ನ ಪ್ರಕಾರಗಳ ಆಧಾರದ ಮೇಲೆ ಅದಕ್ಕೆ ಬೇಕಾದ ಕಂಟೇನರ್ ಮತ್ತು ಕ್ಂಪೋಸ್ಟ್ ನಲ್ಲಿ ಬೆಳೆಸಲಾಗುತ್ತದೆ. ಬೆಳೆಸುವ ಕ್ಂಟೇನರ್ : ಟೆರೆಸ್ಟ್ರಿಯಲ್ ಆರ್ಕೀಡ್ ಗಳನ್ನು ಮಣ್ಣಿನ ಮಡಕೆಯಲ್ಲಿ ಅಥವಾ ಪ್ಲಾಸ್ಟಿಕ್ ಮಡಕೆಯಲ್ಲಿ ಬೆಳೆಸಬಹುದು. ಗೊಬ್ಬರ ಅಥವಾ ಕಂಪೋಸ್ಟ್ ಎಫಿಫೈಟಿಕ್ ಆರ್ಕೀಡ್ ಗಳಿಗೆ ಒಂದು ಸೆಂಟಿಮೀಟರ್ ದಪ್ಪದ ಸುಟ್ಟ ಇಟ್ಟಿಗೆ ಚೂರುಗಳು ಎರಡು ಭಾಗ, ಒಂದು ಸೆಂಟಿಮೀತರ್ ದಪ್ಪದ ಇದ್ದಿಲು ಸುಟ್ಟ ಮರದ ಮಸಿ, ಅಥವಾ ಚಾರ್ಕೋ ಎರ್ಲಡು ಭಾಗ ಮತ್ತು ಕತ್ತರಿಸಲ್ಪಟ್ಟ ಒಣ ಹುಲ್ಲಿನ ತುಂಡುಗಳು ೧ ಸೆಂಟಿಮೀತರ್ ಕತ್ತರಿಸಲ್ಪಟ್ಟ ತೆಂಗಿನ ಸಿಪ್ಪೆ ೧ಸೆಂಟಿಮೀಟ್ರ್ ಕೆತ್ತಲ್ಪಟ್ಟ ಮರದ ತೊಗಟೆ ಇವುಗಳ ಕ್ಂಪೋಸ್ಟ್ ಮಿಶ್ರಣ ಟೆರೆಸ್ಟ್ರಿಯಲ್ ಆರ್ಕೀಡ್ ಗಳಿಗೆ ಮಣ್ಣಿನ ಮೇಲ್ಪದರದ ಭಾಗ (ಟೋಪ್ ಸೊಯ್ಲ್) ಅಥವಾ ಮೃದುವಾದ ಕಪ್ಪು ಮಣ್ಣು ಎರಡು ಭಾಗ, ಕತ್ತರಿಸಲ್ಪಟ್ಟ ಒಣಗಿದ ಸಿಲ್ವರ್ ಓಕ್ ಎಲೆಗಳು (೧ ಭಾಗ) ಒಣಗಿದ ಹಟ್ಟಿಗೊಬ್ಬರ(ಅರ್ಧ ಭಾಗ) ಮತ್ತು ಅರ್ಧ ಸೆಂಟಿಮೀಟರ್ ದಪ್ಪದ ಸುಟ್ಟ ಮಸಿ (ಇದ್ದಿಲು) ಅರ್ಧ ಭಾಗ ಮಡಿಕೆಯಲ್ಲಿ ಇಡುವುದು ಹೇಗೆ ಮಡಿಕೆಯ ಅಡಿ ಭಾಗದಲ್ಲಿ ನೀರು ಹರಿದು ಹೋಗುವ ತೂತಿನ ಬಳಿ ಮಡಿಕೆ ಚೂರುಗಳನ್ನು ತೂತು ಬಂದ್ ಆಗದ ಹಾಗೆ ಅಥವಾ ಬ್ಲೋಕ್ ಆಗದ ಹಾಗೆ ಇಡಿ. ಅಡಿಯಿಂದ ಐದರಿಂದ ಏಳು ಸೆಂಟಿಮೀತರನವರೆಗೆ ನಾಲ್ಫ಼್ಕು ಸೆಂಟಿಮೀಟರ್ ದಪ್ಪದ ಸುಟ್ಟ ಇಟ್ಟಿಗೆ ಚೂರುಗಳಿಂದ ಮತ್ತು ಮಸಿ ತುಂಡುಗಳಿಂದ ತುಂಬಿಸಿ. ಅದರ ಮೇಲೆ ಆಯ್ದ ಕೊಂಪೋಸ್ಟ್ ನಿಂದ ಮಡಕೆಯ ಮಧ್ಯದವರೆಗೆ ತುಂಬಿಸಿ. ಆಕ್ರ್ಕೀಡ್ ಗಿಡವನ್ನು ಕೊಂಪೋಸ್ಟಿನ ನಡುವಿನಲ್ಲಿ ಬೇರುಗಳು ಸರಿಯಾಗಿ ಹರಡುವಂತೆ ಇಡಿ. ಈಗ ಉಳಿದ ಭಾಗವನ್ನು ಆಯ್ದ ಕೊಂಪೋಸ್ಟಿನಿಂದ ತುಂಬಿಸಿ. ಗಿಡದ ಸುತ್ತ ಕೈಯಿಂದ ಸ್ವಲ್ಪ ಒತ್ತಿ ಗಟ್ಟಿಯಾಗಿ ನಿಲ್ಲುವಂತೆ ಮಾಡಿ. ಎತ್ತರದ ಆರ್ಕೀಡ್ ಗಳನ್ನು ಕಟ್ಟ್ಬೇಕಾದೀತು. ಆರ್ಕೀಡ್ ಮಡಕೆಗಳನ್ನು ಎಲ್ಲಿಡಬಹುದು ಆರ್ಕೀಡ್ ನ್ನು ವೆರಾಂಡಾದಲ್ಲಿ ಅಥವಾ ಬೆಳಿಗ್ಗೆ ಮತ್ತು ಸಂಜೆ ಸೂರ್ಯ ಕಿರಣ ಬೀಳುವ ಕಿಡಕಿಯ ಗ್ಲಾಸಿನ ಬಳಿಯಲ್ಲಿ ಇಡಬಹುದು. ಎಪಿಟೈಟಿಸ್ ಆರ್ಕೀಡ್ ಗಳನ್ನು ಕ್ಯಾಂಪಸ್ಸಿನ ದೊಡ್ಡ ಮರದ ನೆರಳು ನೀಡುವ ಮರಗಳಾದ ಮಾವು, ಟೀಕ್ ಗುಲ್ಮೋರ್ ಬೊಹಿನಿಯಾ ಇತ್ಯಾದಿಗಳಿಗೆ ನೇರವಾಗಿ ಕಟ್ಟಬಹುದು. ನೇರ ಸೂರ್ಯ ಕಿರಣ ಬೀಳುವ ಜಾಗದಲ್ಲಿ ಆದಷ್ಟು ಇಡಬೇಡಿ. ಮತ್ತು ತಂಪಾದ ಜಾಗದಲ್ಲಿ ಗಾಳಿಯಾಡುವ ಜಾಗದಲ್ಲಿ ಇಡಿ. ಗ್ಲಾಸ್ ಗೋಡೆ ಮತ್ತು ಮಾಡು (ಮೇಲ್ಛಾವಣಿ) ಇರುವ ಗ್ರೀನ್ ಹೌಸಿನಲ್ಲಿ ೫೦% ಅಥವಾ ೭೦% ನೆಟ್ಲೋನ್ ಇದ್ದರೆ ಉತ್ತಮ. ನೀರು ಹಾಕುವುದು ಮಡಿಕೆಯಲ್ಲಿನ ಮಿಶ್ರಣದಲ್ಲಿ ನೀರಿನ ಪಸೆ ಕಡಿಮೆ ಆದಾಗ ನೀರು ಹನಿಸಬೇಕು. ಅ) ಪ್ರತಿದಿನ ಬೇಸಿಗೆ ಮತ್ತು ಒಣಗಿದ ವಾತಾವರಣ ಇದ್ದಾಗ ಆ) ಮಳೆಗಾಲದಲ್ಲಿ ವಾರದಲ್ಲಿ ಎರಡು ಸಲ ಇ) ಚಳಿಗಾಲದಲ್ಲಿ ಮಳೆ ಇದ್ದರೆ ಪ್ರತಿ ಎರಡು ದಿನಕ್ಲೊಮ್ಮೆ ಈ) ಚಳಿಗಾಲದಲ್ಲಿ ಪ್ರತಿ ದಿನ ಎಂತಹ ಗೊಬ್ಬರ ಹಾಕಬೇಕು ಹಲವಾರು ಬಗೆಯ ಗೊಬ್ಬರವನ್ನು ಹಾಕಬಹುದು. ಎನ್. ಪಿ. ಕೆ ಆರ್ಕೀಡಿಗೆ ಅತಿ ಕಡಿಮೆ ಬೆಲೆಯ ಮತ್ತು ಉತ್ತಮ ಗೊಬ್ಬರ. ಬೆಳೆಯುವ ಸಮಯದಲ್ಲಿ ಅತಿ ಹೆಚ್ಚಿನ ಪ್ರಮಾಣದ ನೈಟ್ರೋಜ್ನ್ ಬೇಕು. ಪೊಸ್ಪರಸ್ ಮತ್ತು ಪೋಟ್ಯಾಸಿಯಮ್ ಹೂ ಆಗುವ ಸಮಯದಲ್ಲಿ ಹೈ ಕೊನ್ಸ್ಂಟ್ರೇಶನಲ್ಲಿ ಬೇಕು. ಆರ್ಕೀಡ್ ಹೆಚ್ಚಿಸುವುದು ಹೇಗೆ ಡೇಂಡ್ರೋಬಿಯಮ್, ಕ್ಯಾಟೆಲಿಯಾ, ಸಿಮ್ಡಿಯಮ್, ಓನ್ಸಿಡಿಯಮ್ ಇತ್ಯಾದಿ ಆರ್ಕೀಡ್ ಗಳಿಗೆ ಅನ್ವಯವಾಗುವಂತೆ ಆರ್ಕೀಡನ್ನು ಹೆಚ್ಚಿಸಲು ಅತ್ಯಂತ ಸುಲಭ ವಿಧಾನವೆಂದರೆ ದೊಡ ದೊಡ್ಡ ಒಂದೇ ಜಾತಿಯ ಗುಂಪನ್ನು ಸಣ್ಣ ಗುಂಪುಗಳನ್ನಾಗಿ ವೃದ್ಧಿಸುವುದು. ಸಹಜವಾಗಿ ಬೆಳೆದಿರುವ ಶಾಖೆ (ಓಫ಼್ ಶೂಟ್) ಹಳೆಯ ಕಾಂಡದಿಂದ ಕಂಪೋಸ್ಟಿನ ಮೇಲ್ಭಾಗದಲ್ಲಿ ಚಿಗುರಿರುವ ಸಣ್ಣ ಗಿಡವನ್ನು ಓಫ಼್ ಶೂಟ್ ಅಥವಾ ಕೆಕೀಸ್ ಎನ್ನುತ್ತಾರೆ. ಈ ಸ್ಣ್ಣ ಗಿಡಗಳನ್ನು ಹರಿತವಾದ ಚೂರಿಯಿಂದ ಜಾಗ್ರತೆಯಿಂದ ತೆಗೆಯಲಾಗುತ್ತದೆ. ಮತ್ತು ತಾಯಿ ಗಿಡಕ್ಕೆ ಒದಗಿಸಲಾದ ರೀತಿ ಕಂಪೋಸ್ಟಿನಲ್ಲಿ ಮಡಕೆಯಲ್ಲಿಡಲಾಗುತ್ತದೆ. ಈ ಪದ್ಧತಿಯನ್ನು ಕೆಲವು ಆರ್ಕೀಡ್ ಜಾತಿಗಳಾದ ಡೆಂದ್ರೋಬಿಯಮ್, ಏರಿಡಸ್, ವಂದಾ ಮುಯ್ಂತಾದವುಗಳಿಗೆ ಅನ್ವಯಿಸಲಾಗುತ್ತದೆ. ಪದರುಗಳನ್ನು ಮಾಡುವುದರಿಂದ(ಲೇಯರಿಂಗ್) ಫ಼ಯಸ್, ಫ಼ಲೆನೊಪ್ಸಿಸ್ ಇತ್ಯಾದಿ ಆರ್ಕೀಡ್ ಗಳ ಹಸಿರು ಹಳೆಯ ಹೂವಿನ ಸ್ಪೈಕುಗಳು ಪ್ರತಿ ಕಾಂಡದ ಭಾಗದಿಂದ ಅವುಗಳನ್ನು ಒದ್ದೆಯಾದ ಹೊಯಿಗೆಯ ಮೇಲೆ ಇಟ್ಟಾಗ ಸಣ್ಣ ಗಿಡಗಳನ್ನು ಉತ್ಪಾದಿಸುತ್ತದೆ. ಕತ್ತರಿಸುವುದು ವಂದಾ, ಏರಿಡಸ್, ರ್ಹಿಂಕೋಸ್ಟಿಲಸ್, ಅರಾಕ್ನಿಸ್ - ಆರ್ಕೀಡುಗಳನ್ನು ಕಾಂಡವನ್ನು (ಸ್ಟೆಮ್) ತುದಿಯಿಂದ ೨೦-೩೦ ಸೆಂಟಿಮೀಟರ್ ಕತ್ತರಿಸುವುದರಿಂದ ಹೆಚ್ಚಿಸಬಹುದು. ಆರ್ಕೀಡನ್ನು ಹಣ ಕಾಸಿನ ಬೆಳೆಯನ್ನಾಗಿ ಬೆಳೆಸ ಬಹುದು. ಈಗಂತೂ ಆರ್ಕೀಡಿಗೆ ತುಂಬ ಬೇಡಿಕೆಯಿದೆ. ಹೆಚ್ಚಿನ ವಿವರಿಗಳಿಗಾಗಿ `ಸ್ಟೇಟ್ ಫೋರೆಸ್ಟ್ ರಿಸರ್ಚ್ ಇನ್ಸ್ಟಿಟೂಟ್, ಡಿಪಾರ್ಟಮೆಂಟ್ ಆಫ್ ಎನ್ವಿರೋನ್ಮೆಂಟ್ ಎಂಡ್ ಫೋರೆಸ್ಟ್, ಗವೆರ್ನೆಮೆಂಟ್ ಆಫ್ ಅರುಣಾಚಲಪ್ರದೇಶ್ ಇಟಾನಗರ್, ೭೯೧೧೧೧ ಇದನ್ನು ಸಂಪರ್ಕಿಸಬಹುದು.