ಆರೋಹಣ ಸಂಪಾತದ ರೇಖಾಂಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆರೋಹಣ ಸಂಪಾತದ ರೇಖಾಂಶವು (ಇದನ್ನು Ω ಚಿಹ್ನೆಯಿಂದ ಸೂಚಿಸಲಾಗುತ್ತದೆ) ಖಗೋಳ ಕಕ್ಷಾ ಅಂಶಗಳಲ್ಲಿ ಒಂದು. ಅಂತರಿಕ್ಷದಲ್ಲಿ ಖಗೋಳಕಾಯಗಳ ಕಕ್ಷೆಗಳನ್ನು ಖಚಿತವಾಗಿ ನಿರೂಪಿಸಲು ಬಳಸಲಾಗುವ ಹಲವು ಅಂಶಗಳಲ್ಲಿ ಇದೂ ಒಂದು. ಸೂರ್ಯನನ್ನು ಪರಿಭ್ರಮಿಸುತ್ತಿರುವ ಒಂದು ಕಾಯದ ಈ ರೇಖಾಂಶವು ಮೇಷದ ಮೊದಲ ಬಿಂದು ಮತ್ತು ಆ ಕಾಯದ ಆರೋಹಣ ಸಂಪಾತಗಳು ಸೂರ್ಯನಲ್ಲಿ ನಿರ್ಮಿಸುವ ಕೋನಕ್ಕೆ ಸಮನಾಗಿರುತ್ತದೆ. ಈ ಅಳತೆಯನ್ನು ಕ್ರಾಂತಿವೃತ್ತದ ನಿರ್ದೇಶಕ ಸಮತಳದಲ್ಲಿ ಮಾಡಲಾಗುತ್ತದೆ.

ಹಸಿರು ಬಣ್ಣದ ವರ್ತುಲ ಬಾಣವು ಆರೋಹಣ ಸಂಪಾತದ ರೇಖಾಂಶವನ್ನು ತೋರಿಸುತ್ತದೆ.

ಸ್ಥಿತಿ ಸದಿಶಗಳಿಂದ ಲೆಕ್ಕಾಚಾರ[ಬದಲಾಯಿಸಿ]

ಖಗೋಳಗತಿವಿಜ್ಞಾನದಲ್ಲಿ, ದೀರ್ಘವೃತ್ತೀಯ ಕಕ್ಷೆಗಳಿಗೆ, ಆರೋಹಣ ಸಂಪಾತದ ರೇಖಾಂಶ, ಅಥವಾ ಪ್ರಮಾಣವು ನಿರ್ದೇಶಕ ದಿಕ್ಕು (ಉದಾ: ವಸಂತ ವಿಷುವದತ್ತ) ಮತ್ತು ಆರೋಹಣ ಸಂಪಾತಗಳ ನಡುವಣ ಕೋನಕ್ಕೆ ಸಮನಾಗಿರುತ್ತದೆ. ಇದನ್ನು ಕಕ್ಷೀಯ ಸ್ಥಿತಿ ಸದಿಶಗಳಿಂದ ಈ ರೀತಿ ಕಂಡುಹಿಡಿಯಬಹುದು:

( ಆದರೆ, ಆಗುತ್ತದೆ)

ಚಿಹ್ನೆಗಳು:

  • ಪ್ರಮಾಣವು ಸದಿಶದ x-ಅಂಶ,
  • ಚಿಹ್ನೆಯು ಆರೋಹಣ ಸಂಪಾತದ ದಿಕ್ಕಿನಲ್ಲಿರುವ ಕಾರ್ಟೀಸಿಯನ್ ಸದಿಶ (ಅಂದರೆ, ಸದಿಶದ z-ಅಂಶವು ಸೊನ್ನೆಯಾಗಿರುತ್ತದೆ).

ಸಮಭಾಜಕೀಯ ಕಕ್ಷೆಗಳ (ಅಂದರೆ, ಈ ಕಕ್ಷೆಗಳ ಕಕ್ಷೀಯ ಓರೆಯು ಸೊನ್ನೆಯಾಗಿರುತ್ತದೆ) ಪ್ರಮಾಣಕ್ಕೆ ಯಾವ ಅರ್ಥವೂ ಇಲ್ಲ. ಇವುಗಳನ್ನು ವ್ಯಾಖ್ಯಾನಿಸಲು ಅಸಾಧ್ಯ. ಹೀಗಾಗಿ, ಇವುಗಳ ಲೆಕ್ಕಾಚಾರದ ಸಮಯದಲ್ಲಿ ವಾಡಿಕೆಯಂತೆ ಈ ಪ್ರಮಾಣವನ್ನು ಸೊನ್ನೆಯೆಂದು ಪರಿಗಣಿಸಲಾಗುತ್ತದೆ: ಅಂದರೆ, ಆರೋಹಣ ಸಂಪಾತವನ್ನು x-ಅಕ್ಷವು ವಸಂತ ವಿಷುವ ದಿಕ್ಕೆನೆಡೆಗಿದ್ದು, z-ಅಕ್ಷವು ಮೇಲ್ದಿಕ್ಕಿನೆಡೆಗಿರುವ ಒಂದು ನಿರ್ದೇಶಕ ಚೌಕಟ್ಟಿನಲ್ಲಿ ಇಂದ ಬರುವ ನಿರ್ದೇಶಕ ದಿಕ್ಕಿಗೆ ಅಳವಡಿಸಲಾಗುತ್ತದೆ.

ಇವನ್ನೂ ನೋಡಿ[ಬದಲಾಯಿಸಿ]