ವಿಷಯಕ್ಕೆ ಹೋಗು

ಆರೆಂಜ್ ಫ್ರೀಸ್ಟೇಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಕ್ಷಿಣ ಆಫ್ರಿಕದ ಮಧ್ಯಭಾಗದಲ್ಲಿರುವ ಒಂದು ಪ್ರಾಂತ್ಯ. ದಕ್ಷಿಣಕ್ಕೆ ಆರೆಂಜ್ ನದಿ, ಉತ್ತರಕ್ಕೆ ಅದರ ಉಪನದಿಯಾದ ವಾಲ್ ನದಿ, ಪ್ರಾಂತ್ಯದ ಎಲ್ಲೆಗಳು ೧೮೪೮-೫೪ರವರೆಗೆ ಬ್ರಿಟಿಷ್ ಆಡಳಿತಕ್ಕೊಳಪಟ್ಟಿತ್ತು. ೧೮೫೪ರಲ್ಲಿ ಆರೆಂಜ್ ಫ್ರೀಸ್ಟೇಟ್ ಆಗಿ ಅಸ್ತಿತ್ವಕ್ಕೆ ಬಂತು. ೧೯೯೫ರಲ್ಲಿ ಇದನ್ನು ಫ್ರೀಸ್ಟೇಟ್ ಎಂದು ಕರೆಯಲಾಯಿತು. ವಿಸ್ತೀರ್ಣ: ೧೨೯,೧೫೨ ಚ.ಕಿ.ಮೀ. ರಾಜಧಾನಿ ಬ್ಲೋಯೆಂಫಾಂಟೀನ್: ಜನಸಂಖ್ಯೆ:೩೩೩,೭೬೯ (೧೯೯೬) ಫ್ರೀಸ್ಟೇಟ್ ಜನರಲ್ಲಿ ಬಹುಪಾಲು ನಗರವಾಸಿಗಳು.

ಮೇಲ್ಮೈಲಕ್ಷಣ

[ಬದಲಾಯಿಸಿ]

ದಕ್ಷಿಣ ಆಫ್ರಿಕದ ಒಳನಾಡಿನ ಅಥವಾ ಉನ್ನತ ವೆಲ್ಡ್ ಪ್ರಸ್ಥಭೂಮಿಯ ಒಂದು ಭಾಗ. ಅಲ್ಲಲ್ಲಿ ಏರಿಳಿತಗಳುಳ್ಳ ಮೈದಾನ ಪ್ರದೇಶ, ಒಳಿದಾದ ಇಳಿಜಾರು, ನಡುವೆ ಬೆಟ್ಟ ಸಾಲುಗಳು ಉಂಟು. ಪಶ್ಚಿಮಾರ್ಧ ೧೦೦೦-೧೫೦೦ ಮೀ ಎತ್ತರವಾಗಿದ್ದರೆ, ಪೂರ್ವಧ ಭಾಗ ೧೫೦೦-೨000 ಮೀ ಎತ್ತರವಾಗಿದೆ. ಪೂರ್ವ ಭಾಗದಲ್ಲಿ ಡ್ರೇಕನ್ನ್ ಬರ್ಗ್ ಪರ್ವತಗಳಿವೆ. ಈಶಾನ್ಯಕ್ಕೆ ರೂಯಿ ಬರ್ಗ್ ಮತ್ತು ಗೋಲ್ಡನ್ ಗೇಟ್ ಶ್ರೇಣಿಗಳಿವೆ. ರಿಬೋಕ್ಕೋಪ್ ಎತ್ತರವಾದ ಶಿಖರ (೨೮೪0ಮೀ).

ನದಿಗಳು

[ಬದಲಾಯಿಸಿ]

ಆರೆಂಜ್ ಮತ್ತು ವಾಲ್ ಮುಖ್ಯನದಿಗಳು. ಅನೇಕ ಉಪನದಿಗಳನ್ನು ಕೂಡಿಕೊಂಡು ಪಶ್ಚಿಮದ ಕಡೆಗೆ ಹರಿಯುತ್ತವೆ. ಪ್ರಾಂತ್ಯದ ಆರ್ಥಿಕವ್ಯವಸ್ಥೆಯಲ್ಲಿ ಮುಖ್ಯ ಪಾತ್ರವಹಿಸುತ್ತವೆ. ಏಕೆಂದರೆ ಈ ನದಿಗಳು ಮತ್ತು ಅವುಗಳನ್ನು ಸೇರುವ ಉಪನದಿಗಳಿಗೆ ಹಲವು ಅಣೆಕಟ್ಟೆಗಳನ್ನು ನಿರ್ಮಿಸಿ ನೀರಾವರಿ ಮತ್ತು ಜಲವಿದ್ಯುಚ್ಛಕ್ತಿ ಪಡೆಯಲಾಗುತ್ತದೆ.

ವಾಯುಗುಣ

[ಬದಲಾಯಿಸಿ]

ಭೂಸ್ವರೂಪ ಮತ್ತು ಸಮುದ್ರಗಳಿಂದಿರುವ ದೂರಗಳು ಪ್ರಾಂತ್ಯದ ವಾಯುಗುಣ ನಿರ್ಧರಿಸುತ್ತವೆ. ಖಂಡಾಂತರ ಸಮೋಷ್ಣ ಮಾದರಿ ವಾಯುಗುಣ, ಅದು ಹಿತಕರ ಬೇಸಗೆ ಉಷ್ಣಾಂಶ ಹೆಚ್ಚು ಮಳೆ ಬೀಳುತ್ತದೆ. ಹವಾಗುಣ ತಂಪಾಗಿರುತ್ತದೆ. ಚಳಿಗಾಲ ಶೀತ ಮತ್ತು ಶುಷ್ಕವಾಗಿರುತ್ತದೆ. ಎತ್ತರವಾದ ಪರ್ವತ-ಪ್ರಸ್ಥಭೂಮಿಗಳಲ್ಲಿ ಹಿಮ ಮತ್ತು ಮಂಜು ಬೀಳುತ್ತವೆ.

ಆರ್ಥಿಕತೆ

[ಬದಲಾಯಿಸಿ]

ಗಣಿಗಾರಿಕೆ ಮತ್ತು ಕೃಷಿ ಜನರ ಮುಖ್ಯ ವೃತ್ತಿಗಳು. ವಿಪುಲವಾದ ಚಿನ್ನದ ನಿಕ್ಷೇಪದ ಹಂಚಿಕೆಯಿದ್ದು, ಚಿನ್ನದ ಉತ್ಪಾದನೆ ಹೆಚ್ಚು. ಕಲ್ಲಿದ್ದಲು, ವಜ್ರ, ಬೆಳ್ಳಿ, ಯುರೇನಿಯಂ ಮತ್ತು ಸುಣ್ಣಗಳ ಉತ್ಪಾದನೆಯೂ ಸಾಕಷ್ಟಿದೆ. ಗಸ್ಟೇಟ್‌ನ್ನು ದಕ್ಷಿಣ ಆಫ್ರಿಕದ ಆಹಾರದ ಅಕ್ಷಯವೆನ್ನುವರು. ಪ್ರಾಂತ್ಯದ ಶೇ.೯೦ ಭಾಗ ಕೃಷಿಗಾಗಿ ಬಳಕೆಯಾಗುತ್ತಿದೆ. ಗೋದಿ ಪ್ರಮುಖ ಬೆಳೆ. ಮೆಕ್ಕೆಜೋಳ, ಅಲ್ಫಾಲ್ಫಾ, ಬಾರ್ಲಿ, ಅವರೆ, ಓಟ್ಸ್, ಬಟಾಣಿ, ಆಲೂಗಡ್ಡೆ, ಸ್ಟೇಸೊರ್ಗಾಮ್ ಮತ್ತು ಸೂರ್ಯಕಾಂತಿ. ಇತರೆ ಬೆಳೆಗಳು. ಕೃಷಿಕರು ಉಣ್ಣೆ ಮತ್ತು ಮಾಂಸ ಹಾಗೂ ಹೈನದ ಪದಾರ್ಥಗಳಿಗಾಗಿ ದನಕರು ಮತ್ತು ಕುರಿಗಳನ್ನು ಸಾಕುವರು. ಕೈಗಾರಿಕೆಗಳ ಅಭಿವೃದ್ಧಿ ಕಡಿಮೆ. ರಾಸಾಯನಿಕ ಮತ್ತು ತೈಲ ಶುದ್ಧೀಕರಣ ಘಟಕಗಳು ಪ್ರಮುಖವಾದವು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: