ಆಮ್ಲ ಕೈಗಾರಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೈಡ್ರೋಪ್ಲೆಕ್ಸ್
)ಸಲ್ಫೇಟ್ ಹೆಪ್ತೈಡ್ರೇಟ್

ಆಮ್ಲಗಳಲ್ಲಿ ಕೆಲವು ಪ್ರಧಾನ ಆಮ್ಲಗಳ ತಯಾರಿಕಾ ವಿಧಾನ ಮತ್ತು ಉಪಯೋಗಗಳನ್ನು ನಿರವಯವ ಮತ್ತು ಸಾವಯವ ಆಮ್ಲಗಳೆಂದೆ ಗುರಿತಿಸಬಹುದು.

ಸಲ್ಫೂರಿಕ್ ಆಮ್ಲ (ಊ2Sಔ4)[ಬದಲಾಯಿಸಿ]

ಸಲ್ಫರನ್ನು (S) ಗಾಳಿ ಅಥವಾ ಆಕ್ಸಿಜನ್‍ನಲ್ಲಿ (ಔ) ಉರಿಸಿದಾಗ ಸಲ್ಫರ್ ಡೈಆಕ್ಸೈಡ್ ದೊರೆಯುತ್ತದೆ.[೧] S+ಔ2(Sಔ2 . ಇದನ್ನು ವೇಗವರ್ಧಕಗಳ ಸಂಪರ್ಕದಿಂದ ಉತ್ಕರ್ಷಣೆ ಮಾಡಿದಾಗ ಸಲ್ಫರ್ ಟ್ರೈ ಆಕ್ಸೈಡ್ (Sಔ3) ಉಂಟಾಗುತ್ತದೆ. 2Sಔ2 + ಔ2 ( 2Sಔ3 ಸಲ್ಫರ್ ಟ್ರೈ ಆಕ್ಸೈಡ್ ನೀರಿನಲ್ಲಿ ಲೀನವಾದಾಗ ಸಲ್ಫ್ಯೂರಿಕ್ ಆಮ್ಲ ಲಭಿಸುವುದು. Sಔ3 + ಊ2ಔ ( ಊ2Sಔ4 ಆದ್ದರಿಂದ ಈ ಆಮ್ಲದ ಉತ್ಪಾದನೆಗೆ ಬೇಕಾದ ಮುಖ್ಯ ಕಚ್ಚಾ ವಸ್ತುಗಳು ಸಲ್ಫರ್ (ಗಂಧಕ), ಗಾಳಿ (ಆಕ್ಸಿಜನ್ ರೂಪದಲ್ಲಿ) ಮತ್ತು ನೀರು. ಸಲ್ಫರ್ ಡೈ ಆಕ್ಸೈಡ್‍ನ್ನು ಸಲ್ಫ್ಯೂರಿಕ್ ಆಮ್ಲವಾಗಿ ಪರಿವರ್ತಿಸಲು ಎರಡು ಪ್ರಮುಖ ಕೈಗಾರಿಕಾ ವಿಧಾನಗಳು ಪ್ರಮುಖವಾಗಿವೆ.[೨]

ಸೀಸಕೋಷ್ಠಿವಿಧಾನ (ಲೆಡ್ ಚೇಂಬರ್ ಪ್ರೋಸೆಸ್)[ಬದಲಾಯಿಸಿ]

ಸಲ್ಫರ್ ಡೈ ಆಕ್ಸೈಡ್, ನೀರಿನ ಹಬೆ, ಅಮೋನಿಯ ಇವುಗಳನ್ನು ಬಳಸಿ ಉತ್ಕರ್ಷಣದಿಂದ ತಯಾರಿಸಲ್ಪಟ್ಟ ನೈಟ್ರೊಜನ್ ಆಕ್ಸೈಡ್‍ಗಳು ಮತ್ತು ಯಥೇಚ್ಛವಾದ ಗಾಳಿ ಇವುಗಳ ಮಿಶ್ರಣವೊಂದು ಮೊದಲು ಆಮ್ಲಸಹಿಷ್ಣು ಇಟ್ಟಿಗೆಗಳಿಂದ ನಿರ್ಮಿತವಾದ ಎತ್ತರದ ಗ್ಲೋವರನ ಗೋಪುರವನ್ನು ಪ್ರವೇಶಿಸುವುದು, ಅಲ್ಲಿಂದ ಮುಂದೆ ಸೀಸ (ಲೆಡ್) ಲೋಹದಿಂದ ನಿರ್ಮಿತವಾದ ವಿಶಾಲವಾಗಿರುವ ಕ್ರಿಯಾಗಾರದೊಳಗೆ (ಲೆಡ್‍ಚೇಂಬರ್ ಅಥವಾ ಸೀಸಕೋಷ್ಠಿ) ಪ್ರವಹಿಸುವುದು. ನೈಟ್ರೊಜನ್ ಆಕ್ಸೈಡ್‍ಗಳ ಪಾತ್ರವೆಂದರೆ ಗಾಳಿಯಲ್ಲಿನ ಆಕ್ಸಿಜನ್ ನ್ನು ಸಲ್ಫರಿನ ಡೈ ಆಕ್ಸೈಡ್‍ಗೆ ವರ್ಗಾಯಿಸಿ ಉತ್ಕರ್ಷಣೆಯಿಂದ ಸಲ್ಫರಿನ ಟ್ರೈ ಆಕ್ಸೈಡ್‍ನ ಉತ್ಪಾದನೆಯ ವರ್ಧನೆ. ನೈಟ್ರೊಜನ್ನಿನ ಆಕ್ಸೈಡ್‍ಗಳು ರಾಸಾಯನಿಕ ಕ್ರಿಯೆಯಲ್ಲಿ ಒಂದು ರೀತಿಯಲ್ಲಿ ವೇಗವರ್ಧಕಗಳಾಗಿ ಪಾತ್ರವಹಿಸುವವು. ಉತ್ಕರ್ಷಣ ಕ್ರಿಯೆಯಿಂದ ಉತ್ಪನ್ನವಾದ ಸಲ್ಫರ್ ಟ್ರೈ ಆಕ್ಸೈಡ್ ನೀರಿನೊಳಗೆ ಲೀನವಾಗಿ ಸಲ್ಫ್ಯೂರಿಕ್ ಆಮ್ಲ ದ್ರಾವಣ ಹನಿಹನಿಯಾಗಿ ಸೀಸಕೋಷ್ಠಿ ತಳದಲ್ಲಿ ಕ್ರಮೇಣ ಶೇಖರವಾಗುತ್ತದೆ.[೩]

ಊ2ಔ + Sಔ 2 + 1/2 ಔ 2 (ಊ2Sಔ4)

ಚಿತ್ರ-1

ಆಮ್ಲ ಉತ್ಪಾದನೆಯಲ್ಲಿ ಹೊರಹೊಮ್ಮುವ ಉಷ್ಣವನ್ನು ಸುತ್ತ ಆವರಿಸಿರುವ ನೀರಿನ ಕೊಳಾಯಿಗಳ ಮೂಲಕ ಹೀರಲಾಗುವುದು. ಅಪರಿವರ್ತಿತ ಅನಿಲಗಳು ಅಲ್ಲಿಂದ ಮುಂದೆ ಗೇಲ್ಯುಸಾಕ್‍ನ ಗೋಪುರವನ್ನು ಪ್ರವೇಶಿಸುವುವು. ನೈಟ್ರೋಜನ್ ಆಕ್ಸೈಡ್‍ಗಳನ್ನು ತಣ್ಣನೆಯ ಆಮ್ಲದಲ್ಲಿ ಹೀರಿ, ಪುನಃ ಗ್ಲೋವರನ ಗೋಪುರಕ್ಕೆ ಕಳುಹಿಸಲಾಗುವುದು. ಶೇಖರಿತ ಆಮ್ಲವನ್ನು ವಿಶೇಷ ತುಕ್ಕು ನಿರೋಧಕ ಲೋಹಗಳಿಂದ ನಿರ್ಮಿತವಾದ ಯಂತ್ರಗಳ ಮೂಲಕ ಹೊರಕ್ಕೆಳೆದು ಸೂಕ್ತ ಜೇಡಿಮಣ್ಣಿನ, ಗಾಜಿನ, ಸಿಲಿಕಾನ್ ಅಂಶ ಹೆಚ್ಚಾಗಿರುವ ಬೀಡು ಕಬ್ಬಿಣದ ಆಥವಾ ವಿಶೇಷ ಉಕ್ಕಿನ ಆಶಯಗಳಲ್ಲಿ ತುಂಬುವರು. ಈ ವಿಧಾನದಲ್ಲಿ ಒಂದು ಸಲ ಕಾರ್ಯಾರಂಭವಾದ ಮೇಲೆ ಕ್ರಿಯೆ ನಿರಂತರವಾಗಿ ನಡೆಯುವುದು. ಆದರೆ ಉತ್ಪಾದಿತ ಆಮ್ಲದಲ್ಲಿ ನೀರಿನ ಅಂಶ ಹೆಚ್ಚಾಗಿದ್ದು ದುರ್ಬಲವಾಗಿರುತ್ತದೆ. ದ್ರಾವಣದ ಪ್ರಬಲತೆ ಮತ್ತು ಸಾಂದ್ರತೆಗಳನ್ನು ಅಳೆದು ತಿಳಿಯಬಹುದು. ಆಮ್ಲಾಂಶ 93.19% ಮಟ್ಟ ಮೀರಿದಾಗ ಆಮ್ಲದ ಪ್ರಬಲತೆಯನ್ನು ಅದರ ವಿದ್ಯುದ್ವಾಹಕ ಶಕ್ತಿ ಪ್ರಮಾಣ ಮಾಪನೆಯಿಂದ ನಿರ್ಧರಿಸಬಹುದು. ಸೀಸಕೋಷ್ಠಿ ವಿಧಾನ ಇಂದು ಅಷ್ಟಾಗಿ ಬಳಕೆಯಲ್ಲಿಲ್ಲ.

  • ಸಂಪರ್ಕವಿಧಾನ (ಕಾಂಟ್ಯಾಕ್ಟ್ ಪ್ರೋಸೆಸ್) : ಆಧುನಿಕ ಸಂಪರ್ಕ ವಿಧಾನದಲ್ಲಿ ಕ್ರಿಯಾ ವಸ್ತುಗಳಾದ ಸಲ್ಫರ್ ಡೈ ಆಕ್ಸೈಡ್ ಮತ್ತು ಗಾಳಿಯಲ್ಲಿನ ಆಮ್ಲಜನಕದ ಸಂಪರ್ಕದಲ್ಲಿ ಒಂದು ಘನ ವೇಗವರ್ಧಕ ಇರುತ್ತದೆ. ಉತ್ಕರ್ಷಣ ಕ್ರಿಯಾ ಪ್ರೇರಣೆಗೆ ಅತ್ಯಂತ ಅನುಕೂಲಕರವಾದ ಉಷ್ಣತೆಯ ಮಟ್ಟ 4500 ಸೆ. ಉತ್ಕರ್ಷಣ ಕ್ರಿಯೆಯಿಂದಾಗಿ ಸಲ್ಫರ್ ಟ್ರೈಆಕ್ಸೈಡ್ ಉತ್ಪನ್ನವಾಗುತ್ತದೆ. ಇದನ್ನು ನೇರವಾಗಿ ನೀರಿನೊಳಕ್ಕೆ ನುಗ್ಗಿಸುವಂತಿಲ್ಲ. ಇಂಥ ಕ್ರಿಯೆ ಉಷ್ಣೋತ್ಪತ್ತಿಯಿಂದ ಆಸ್ಫೋಟನಾ ಪ್ರೇರಕವಾಗಿದೆ. ಉತ್ಪಾದಿತ ಸಲ್ಫರ್ ಟ್ರೈಆಕ್ಸೈಡನ್ನು ಹೀರಲು ನೀರಿನ ಬದಲು ಸೀಸಕೋಷ್ಠಿ ವಿಧಾನದಿಂದ ಆಥವಾ ಇನ್ನಾವುದೇ ಮೂಲದಿಂದ ದೊರೆಯುವ ದುರ್ಬಲ ಸಲ್ಫ್ಯೂರಿಕ್ ಆಮ್ಲದ ದ್ರಾವಣವನ್ನೇ ಉಪಯೋಗಿಸಬೇಕು. ವೇಗವರ್ಧಕವಾಗಿ ಪ್ಲಾಟಿನಂ, ಕಬ್ಬಿಣದ ಆಕ್ಸೈಡ್, ಕ್ರೋಮಿಯಂ, ಯುರೇನಿಯಂ ಮತ್ತಿತರ ಲೋಹಗಳ ಆಕ್ಸೈಡ್‍ಗಳು, ವೆನೇಡಿಯಂ ಪೆಂಟಾಕ್ಸೈಡ್ ಈ ಎಲ್ಲವೂ ಕೆಲಸಕ್ಕೆ ಬರುವಂಥವು ಮೊದಮೊದಲು ಕೈಗಾರಿಕೆಗಳಲ್ಲಿ ಕಬ್ಬಿಣದ ಆಕ್ಸೈಡ್ ಅನಂತರ ಶ್ರೇಷ್ಠ ಮಟ್ಟದ ಶುದ್ಧತೆಯಲ್ಲಿರಬೇಕು; ಕಲ್ಮಷಗಳಿದ್ದಲ್ಲಿ ಪ್ಲಾಟಿನಂ ಲೋಹ ಬಹುಬೇಗ ತನ್ನ ವೇಗವರ್ಧಕ ಶಕ್ತಿಯನ್ನು ಕಳೆದುಕೊಳ್ಳುವುದೆಂದು ತಿಳಿಯಿತು. ಪುನಃ ಪುನಃ ಪ್ಲಾಟಿನಂ ಲೋಹವನ್ನು ಬಳಸುವುದು ದುಬಾರಿಯಾದಾಗ ಅದರ ಬದಲು ಅಗ್ಗದ ಬೆಲೆಯ ವೆನೇಡಿಯಂ ಪೆಂಟಾಕ್ಸೈಡ್ ಸಂಯುಕ್ತವನ್ನು ಉಪಯೋಗಿಸತೊಡಗಿದರು. ಈ ಸಂಯುಕ್ತವನ್ನು ಕಲ್ನಾರು ಅಥವಾ ಶುದ್ಧ ಮರಳಿನ ಹರಳುಗಳ ಮೇಲೆ ಉರಿಸಿ ಉಪಯೋಗಿಸುವರು. ಇದು ಪ್ಲಾಟಿನಂನಷ್ಟು ಸುಲಭವಾಗಿ ತನ್ನ ವೇಗವರ್ಧಕತೆಯ ಶಕ್ತಿಯನ್ನು ಕಳೆದು ಕೊಳ್ಳುವುದಿಲ್ಲ; ಅನೇಕ ವರ್ಷಗಳ ಕಾಲ (ಸರಾಸರಿ 2 1/2) ಸತತವಾಗಿ ಉಪಯೋಗಕ್ಕೆ ಬರುತ್ತದೆ.

ಚಿತ್ರ-2

ಉತ್ಕರ್ಷಣಕ್ರಿಯೆ ಜರುಗುವ ಸಂಪರ್ಕಾಲಯದಲ್ಲಿ ವೇಗವರ್ಧಕಗಳ ಅನೇಕ ಪದರಗಳನ್ನು ಒಂದರಮೇಲೊಂದರಂತೆ ಕ್ರಮೇಣ ದಪ್ಪಹಚ್ಚುವ ರೀತಿಯಲ್ಲಿ ಜೋಡಿಸಿರುತ್ತಾರೆ. ಬಿಸಿಯಾದ ಸಲ್ಫರ್ ಡೈ ಆಕ್ಸೈಡ್ ಮತ್ತು ಯಥೇಚ್ಛ ಪ್ರಮಾಣದ ಗಾಳಿಯ ಮಿಶ್ರಣವನ್ನು ನಿಯಂತ್ರಿತ ಉಷ್ಣತೆಯ ಮಟ್ಟದಲ್ಲಿ (4000 ಮೇಲೆ 5950 ಸೆ. ಒಳಗೆ) ಸಂಪರ್ಕಾಲಯದೊಳಕ್ಕೆ ಬಿಡುವರು. ಉಷ್ಣತೆಯ ಮಟ್ಟ 4000 ಸೆ. ಗೆ ಕಡಿಮೆಯಾದರೆ ರಾಸಾಯನಿಕ ಉತ್ಕರ್ಷಣ ಕ್ರಿಯೆಯ ವೇಗ ಕಡಿಮೆಯಾಗುವುದು. 5950 ಸೆ. ಹೆಚ್ಚಾದರೆ ಉತ್ಪಾದಿತ ಸಲ್ಫರ್ ಟ್ರೈ ಆಕ್ಸೈಡ್ ಪುನಃ ಉಷ್ಣ ವಿಭಜನೆಹೊಂದಿ ಸಲ್ಫರ್ ಡೈ ಆಕ್ಸೈಡ್, ಆಮ್ಲಜನಕಗಳು ಉಂಟಾಗುವುವು.

  • 595(0 ಸೆ.
  • 2Sಔ3
  • 2Sಔ2 +ಔ2

ವೇಗವರ್ಧಕದ ಸಂಪರ್ಕದಲ್ಲಿ ರಾಸಾಯನಿಕ ಉತ್ಕರ್ಷಣದಿಂದಾಗಿ ಸಲ್ಫರ್ ಟ್ರೈ ಆಕ್ಸೈಡ್ ಉತ್ಪತ್ತಿಯಾಗಿ ಹೊರಬೀಳುವುದು. ಇದನ್ನು ದುರ್ಬಲ ಸಲ್ಫ್ಯೂರಿಕ್ ಆಮ್ಲದೊಳಗೆ ಸತತವಾಗಿ ಹೀರುವಂತೆ ಏರ್ಪಾಡು ಮಾಡಲಾಗಿದ್ದು ಪ್ರಬಲ ಸಲ್ಫ್ಯೂರಿಕ್ ಆಮ್ಲ ನಿರಂತರವಾಗಿ ಉತ್ಪಾದನೆಯಾಗುತ್ತಿರುತ್ತದೆ. ಸಂಪರ್ಕ ವಿಧಾನದ ಮೂಲತತ್ತ್ವಗಳು ಪ್ರಥಮವಾಗಿ 1831ರಲ್ಲಿಯೇ ಪ್ರತಿಪಾದಿಸಲ್ಪಟ್ಟವು. ಆದರೂ ಅನೇಕ ತಾಂತ್ರಿಕ ತೊಂದರೆಗಳ ಪರಿಣಾಮವಾಗಿ 1898ರವರೆಗೂ ಯಶಸ್ವೀ ಕೈಗಾರಿಕೋತ್ಪನ್ನ ಸಾಧ್ಯವಾಗಲಿಲ್ಲ. ಸಂಪರ್ಕ ವಿಧಾನ ಇಂದು ಹೆಚ್ಚಾಗಿ ಬಳಕೆಯಲ್ಲಿದೆ.

ಮೂಲವಸ್ತು ಸ್ವರೂಪದ ನಿಕ್ಷೇಪಗಳಿಂದ ಪಡೆಯುವ ಪ್ರಕೃತಿ ಮೂಲ ಸಲ್ಫರಿನ ಶುದ್ಧತೆಯ ಮಟ್ಟ ಹೆಚ್ಚು; ಭಾರ ಕಡಿಮೆ. ಆದ್ದರಿಂದ ಅದನ್ನು ಸುಲಭ ಖರ್ಚಿನಲ್ಲಿ ಸಾಗಿಸುವುದು ಸಾಧ್ಯ. ಉಳಿದ ಕಚ್ಚಾವಸ್ತುಗಳು ಗಾಳಿ, ನೀರು ಆದುದರಿಂದ ಸಲ್ಫ್ಯೂರಿಕ್ ಆಮ್ಲ ಕೈಗಾರಿಕಾ ಕೇಂದ್ರಗಳನ್ನು ಎಲ್ಲಿ ಬೇಕಾದರೂ ಅಂದರೆ, ಆಮ್ಲದ ಪೂರೈಕೆಯ ಅವಲಂಬಿತ ಇತರ ಕೈಗಾರಿಕಾ ಕೇಂದ್ರಗಳು ಎಲ್ಲಿವೆಯೋ ಅಲ್ಲಿಯೇ ನಿರ್ಮಿಸಬಹುದು.

ಪ್ರಬಲ ಸಲ್ಫ್ಯೂರಿಕ್ ಅಮ್ಲ ಮತ್ತಷ್ಟು ಸಲ್ಫರ್ ಟ್ರೈ ಆಕ್ಸೈಡನ್ನು ಹೀರಿ ತನ್ನಲ್ಲಿ ಲೀನಮಾಡಿಕೊಳ್ಳುವ ಲಕ್ಷಣ ಹೊಂದಿದೆ. ಹೀಗೆ ದೊರೆಯುವ ಆಮ್ಲದ ಉಗ್ರತೆ ಬಹು ತೀಕ್ಷ್ಣ. ಅದು ಅತಿ ಅಪಾಯಕಾರಿಯೂ ಹೌದು. ಇದರ ಹೆಸರು ಓಲಿಯಂ. ಇದಕ್ಕೂ ಅನೇಕ ಕೈಗಾರಿಕಾ ಉಪಯೋಗಗಳಿವೆ.

ಸಲ್ಫ್ಯೂರಿಕ್ ಆಮ್ಲವನ್ನು ಮಾರುಕಟ್ಟೆಗೆ ಸಾಮಾನ್ಯವಾಗಿ ನಾಲ್ಕು ದರ್ಜೆಗಳಲ್ಲಿ ಬಿಡುಗಡೆ ಮಾಡಲಾಗುವುದು; ವಾಣಿಜ್ಯ ದರ್ಜೆಯದು, ವಿದ್ಯುತ್ ಕೋಶದರ್ಜೆಯದು, ರಾಸಾಯನಿಕವಾಗಿ ಶುದ್ಧವಾದುದು ಮತ್ತು ಅತ್ಯಂತ ಶುದ್ಧವಾದುದು. ನಿಯೋಜಿತ ಉದ್ದೇಶ ಉಪಯೋಗಗಳಿಗೆ ತಕ್ಕಂತೆ ಬೇಕಾದುದನ್ನು ಆರಿಸಿಕೊಳ್ಳಬಹುದು. ಬಹು ಭಾರಿ ಪ್ರಮಾಣದ ಕೈಗಾರಿಕೆಗಳಿಗೆ (ಉದಾಹರಣೆಗೆ ರಾಸಾಯನಿಕ ಗೊಬ್ಬರ ಮತ್ತಿತರ ಆಮ್ಲಗಳ ತಯಾರಿಕೆ) ಅಷ್ಟೇನೂ ಶುದ್ಧವಾದುದು ಬೇಕಾಗಿಲ್ಲ; ವಾಣಿಜ್ಯ ದರ್ಜೆಯ ಆಮ್ಲವೇ ಸಾಕು. ಅದೇ ಔಷಧಿ ಅಥವಾ ಆಹಾರ ಸಾಮಗ್ರಿಗಳಿಗೆ ಸಂಬಂಧಿತ ಕೈಗಾರಿಕೆಗಳಿಗೆ ಅತ್ಯಂತ ಶುದ್ಧ ಅಂದರೆ ಸೀಸ ಮತ್ತು ಆರ್ಸೆನಿಕ್ ರಹಿತವಾದ ಆಮ್ಲದ ಪೂರೈಕೆಯಾಗಬೇಕು. ಸಲ್ಫ್ಯೂರಿಕ್ ಆಮ್ಲ ಮಂದವಾದ ಎಣ್ಣೆಯಂತೆ ಕಾಣುವ ವರ್ಣರಹಿತ ದ್ರಾವಣ. ಅದಕ್ಕೆ ನೀರು ಅಥವಾ ತೇವವನ್ನು ತೀವ್ರವಾಗಿ ಹೀರುವ ಗುಣವಿದೆ. ನೀರಿನೊಡನೆ ಬೆರೆತಾಗ ಗಣನೀಯ ಪ್ರಮಾಣದ ಉಷ್ಣ ಉತ್ಪಾದಿಸುವುದು. ಬಹುತೇಕ ಲೋಹಗಳನ್ನು ಸುಲಭವಾಗಿ ತಿಂದು ಹಾಕುವುದು. ಪ್ರಬಲ ಆಮ್ಲ ಸೀಸವನ್ನು ಸಹ ಕ್ರಮೇಣ ಜೀರ್ಣಿಸಿಕೊಳ್ಳಬಲ್ಲುದು. ಚರ್ಮಕ್ಕೆ ಸೋಂಕಿದರೆ ತೀವ್ರ ಸುಟ್ಟಗಾಯಗಳಾಗುವುವು. ಮರಮುಟ್ಟುಗಳೂ ಸುಟ್ಟು ಕಪ್ಪಾಗುತ್ತವೆ. ಇದರಿಂದಾಗಿ ಈ ಆಮ್ಲದ ಶೇಖರಣೆ ಮತ್ತು ಸಾಗಾಣಿಕೆಯಲ್ಲಿ ಬಹುವಾಗಿ ಸುಟ್ಟ ಜೇಡಿಮಣ್ಣಿನ ಜಾಡಿಗಳು, ಗಾಜಿನ ದೊಡ್ಡ ಸೀಸೆ ಅಥವಾ ಹಂಡೆಗಳನ್ನು ಉಪಯೋಗಿಸುವುದು ವಾಡಿಕೆಯಾಗಿತ್ತು. ಇತ್ತೀಚೆಗೆ ಅಗಾಧ ಪ್ರಮಾಣದಲ್ಲಿ ಆಮ್ಲ ಸರಬರಾಜಿನ ಆವಶ್ಯಕತೆಯುಂಟಾದಂತೆ, ಲಾರಿ ಹಡಗುಗಳಲ್ಲಿ ಸಾಗಿಸಬೇಕಾಗಿ ಬಂದಿತು. ಈ ಕಾರಣ ದೈತ್ಯಾಕಾರದ ಉಕ್ಕಿನ ಆಶಯಗಳಿಗೆ ಗಾಜು, ಸೀಸ, ಪ್ಲಾಸ್ಟಿಕ್‍ಗಳ ಬಿಳಿ ಮೈ ಪದರವನ್ನು ಹೊದಿಸಿ ಪಿಂಗಾಣಿ ತೂಬುಗಳನ್ನು ಅಳವಡಿಸಿ, ಟೆಪ್ಲಾನ್ ಪ್ಲಾಸ್ಟಿಕ್ ಕೊಳವೆಗಳ ಮೂಲಕ (ಪೆಟ್ರೋಲ್, ಸೀಮೆಎಣ್ಣೆಯ ಸರಬರಾಜಿನಂತೆ) ಸುಲಭವಾಗಿ ಆಮ್ಲವನ್ನು ಪೂರೈಕೆಮಾಡುವ ವಿಧಾನ ಆಚರಣೆಗೆ ಬಂದಿದೆ.

ಭಾರತದಲ್ಲಿ ಸಲ್ಫರ್ ನಿಕ್ಷೇಪಗಳು ಇರಲಿಲ್ಲ. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸಣ್ಣ ನಿಕ್ಷೇಪಗಳು ಕಂಡುಬಂದಿವೆ. ಸಲ್ಫರನ್ನು ಅಮೆರಿಕ, ಫ್ರಾನ್ಸ್, ಕೆನಡ, ಮೆಕ್ಸಿಕೊ, ರಷ್ಯ ಮುಂತಾದ ದೇಶಗಳಿಂದ ಅಗಾಧ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಬೇಕಾಗಿರುವುದರಿಂದ ಸಲ್ಫ್ಯೂರಿಕ್ ಆಮ್ಲದ ಕೈಗಾರಿಕೆ ಸ್ವಾವಲಂಬಿಯಲ್ಲ. ಆಂಧ್ರಪ್ರದೇಶದ ಕಮ್ಮಂಜಿಲ್ಲೆಯ ಕೊತ್ತಗುಂಡಂನಲ್ಲಿ ಗಂಧಕವನ್ನು ಅಲ್ಪ ಪ್ರಮಾಣದಲ್ಲಿ ಇತ್ತೀಚೆಗೆ ತಯಾರಿಸಲಾಗುತ್ತಿದೆ. ಬಿಹಾರ್‍ನ ಶಹಬಾದ್ ಜಿಲ್ಲೆಯ ಅಮಜ್ಹೋರ್, ತಮಿಳುನಾಡಿನ ಉತ್ತರ ಆರ್ಕಾಟ್, ಮೈಸೂರಿನ ಚಿತ್ರದುರ್ಗ ಜಿಲ್ಲೆಯ ಇಂಗಳ ಹಾಳ್‍ಗಳಲ್ಲಿ ಸಲ್ಫೈಡ್ ನಿಕ್ಷೇಪಗಳಿರುವುದು ತಿಳಿದಿದೆ. ಅಮಜ್ಹೋರ್‍ನ ನಿಕ್ಷೇಪಗಳ ಉಪಯೋಗ ಆರಂಭವಾಗಿದೆ. ದುರ್ಗಾಪುರ ಮತ್ತು ಸಿಂಧ್ರಿಗಳಲ್ಲಿ ಸಲ್ಫೈಡ್ ನಿಕ್ಷೇಪಗಳಾಧಾರಿತ ಸಲ್ಫ್ಯೂರಿಕ್ ಆಮ್ಲತಯಾರಿಕೆಯ ಕೈಗಾರಿಕೆಗಳು ಕಾರ್ಯಗತವಾಗಲಿವೆ. ಪೆಟ್ರೋಲಿಯಂ ಎಣ್ಣೆ ಶುದ್ಧೀಕರಣ ಕಾರ್ಯಾಗಾರಗಳು ಹೆಚ್ಚಿದಂತೆಲ್ಲ ಹೆಚ್ಚು ಹೆಚ್ಚಾಗಿ ದೊರೆಯಲಾರಂಭಿಸಿರುವ ಸಲ್ಫರ್ ಆಂಶವಿರುವ ಅನಿಲಗಳನ್ನವಲಂಬಿಸಿಯೂ ಆಮ್ಲತಯಾರಿಕೆ ಸಾಧ್ಯ. ಪಂಜಾಬ್, ರಾಜಾಸ್ತಾನ್, ತಮಿಳುನಾಡುಗಳಲ್ಲಿ ಗಣನೀಯ ಪ್ರಮಾಣದಲ್ಲಿ ದೊರಕುವ ಕ್ಯಾಲ್ಸಿಯಂ ಸಲ್ಫೇಟ್ ನಿಕ್ಷೇಪಗಳನ್ನೂ ಕಲ್ಲಿದ್ದಲಿನಲ್ಲಿರುವ ಗಂಧಕಾಂಶವನ್ನೂ ಅವಲಂಬಿಸಿದಂತೆ ಕೈಗಾರಿಕಾಭಿವೃದ್ಧಿಯಾಗಬೇಕಾದುದು ಅಪೇಕ್ಷಣೀಯ.

ಮೊಟ್ಟಮೊದಲನೆಯ ಸೀಸಕೋಷ್ಠಿ ವಿಧಾನದ ಸಲ್ಫ್ಯೂರಿಕ್ ಆಮ್ಲ ಕೈಗಾರಿಕೆ ಭಾರತದಲ್ಲಿ ಸ್ಥಾಪಿತವಾದುದು ಪಶ್ಚಿಮ ಬಂಗಾಳದ ಹೂಗ್ಲಿ ನದಿಯ ದಂಡೆಯ ಮೇಲೆ (1890ರಲ್ಲಿ). ಇಂಗ್ಲೆಂಡಿನಲ್ಲಿ ಬರ್ಮಿಂಗ್‍ಹ್ಯಾಂ ನಗರದಲ್ಲಿ ಈ ಕೈಗಾರಿಕೆ ಸ್ಥಾಪಿತವಾದುದು 1746ರಲ್ಲಿ. ಅಲ್ಲಿಂದೀಚೆಗೆ 20ನೆಯ ಶತಮಾನದ ಆದಿಯಿಂದಲೂ ಕ್ರಮೇಣ ಕೈಗಾರಿಕಾಸಂಸ್ಥೆಗಳು ಅಸ್ತಿತ್ವಕ್ಕೆ ಬಂದು ಉತ್ಪನ್ನ ಹೆಚ್ಚಾಗುತ್ತಲೇ ಇದೆ. 1935ರಲ್ಲಿ ಮೊಟ್ಟಮೊದಲನೆಯ ಸಂಪರ್ಕವಿಧಾನಾಧಾರಿತ ಕೈಗಾರಿಕೆ ಟಾಟಾರವರ ಜಂಷಡ್‍ಪುರದಲ್ಲಿ ಸ್ಥಾಪಿತವಾಯಿತು. 1950-1951ರಲ್ಲಿ 1,01,000 ಟನ್ ಸಲ್ಫ್ಯೂರಿಕ್ ಆಮ್ಲ ತಯಾರಿಸಲ್ಪಟ್ಟಿದ್ದು ( ಅದೇ ವರ್ಷದಲ್ಲಿ ಅಮೆರಿಕ ದೇಶದ ಉತ್ಪಾದನೆ 13,30 ,00,000 ಟನ್), 1964-65ರಲ್ಲಿ 6,95,000 ಟನ್‍ಗಳಷ್ಟೂ 1965--66ರಲ್ಲಿ 6,55,000 ಟನ್‍ಗಳಷ್ಟೂ ತಯಾರಿಸಲಾಗಿದೆ. ಮೈಸೂರು ರಾಜ್ಯಕ್ಕೆ ಸಂಬಂಧಿಸಿದಂತೆ ಮೊದಲನೆಯ ಸಲ್ಫ್ಯೂರಿಕ್ ಆಮ್ಲ ತಯಾರಿಕಾ ಕೈಗಾರಿಕೆ ಸ್ಥಾಪಿತವಾದುದು ಮಂಡ್ಯ ಜಿಲ್ಲೆಯ ಬೆಳಗೊಳದಲ್ಲಿ.

ಸಲ್ಫ್ಯೂರಿಕ್ ಆಮ್ಲಕ್ಕಿರುವ ಉಪಯೋಗಗಳು ಅಸಂಖ್ಯಾತ. ಶಾಂತಿ ಮತ್ತು ಯುದ್ಧಕಾಲಗಳೆರಡರಲ್ಲೂ ರಾಷ್ಟ್ರದ ಕ್ಷೇಮಕ್ಕೆ ಈ ಆಮ್ಲ ಅತ್ಯಾವಶ್ಯಕ. ಸಲ್ಫ್ಯೂರಿಕ್ ಆಮ್ಲದ ವಿವಿಧ ಉಪಯೋಗಗಳ ಯಾದಿ: ಕೃತಕ ರಾಸಾಯನಿಕ ಗೊಬ್ಬರಗಳು (ನೈಟ್ರೊಜನ್ ಮೂಲ ಅಮೋನಿಯಂ ಸಲ್ಫೇಟ್ ಮತ್ತು ರಂಜಕಮೂಲ ಸೂಪರ್ ಫಾಸ್ಫೇಟ್) ಇತರ ಆಮ್ಲಗಳು (ಹೈಡ್ರೊಕ್ಲೋರಿಕ್, ನೈಟ್ರಿಕ್, ಫಾಸ್ ಫಾರಿಕ್ ಮತ್ತು ಕ್ರೋಮಿಕ್), ರೇಯಾನ್ ಕೃತಕನೂಲು ಬಣ್ಣಗಳು, ಔಷಧಿಗಳು, ಆಹಾರ, ಯುರೇನಿಯಂ, ನಿಕ್ಕಲ್, ಕೋಬಾಲ್ಟ್ ಲೋಹಗಳ ತಯಾರಿಕೆ, ಲೋಹಗಳ ಶುದ್ಧೀಕರಣ, ಲೊಹಗಳನ್ನು ಮತ್ತು ಉಕ್ಕುಗಳನ್ನು ಸ್ವಚ್ಛ ಮಾಡುವುದು, ಪೆಟ್ರೋಲಿಯಂ ಶುದ್ಧಿಕರಣ, ಕಾರು ಬಸ್ಸು ಲಾರಿ ಭಾರಿ ಟ್ರಕ್ಕುಗಳಲ್ಲಿನ ವಿದ್ಯುತ್ಕೋಶಗಳು, ಬ್ಯಾಟರಿಗಳು, ಸಾವಯವ ಸಂಯುಕ್ತಗಳ ತಯಾರಿಕೆಯ ಕೈಗಾರಿಕೆಗಳು, ಮಾರ್ಜಕಗಳು, ಸ್ಫೋಟಕಗಳು, ನೀರಿನ ಶುದ್ಧೀಕರಣದಲ್ಲಿ ಉಪಯೋಗಿಸುವ ಅಲ್ಯೂಮಿನಿಯಂ ಸಲ್ಫೇಟ್ ಮತ್ತು ಪಟಿಕಗಳ ತಯಾರಿಕೆ ಇತ್ಯಾದಿ. ಅಮೋನಿಯಂ ಸಲ್ಫೇಟ್, ಹೈಟ್ರೊಕ್ಲೋರಿಕ್ ಆಮ್ಲ, ನೈಟ್ರಿಕ್ ಅಮ್ಲಗಳ ತಯಾರಿಕೆಯಲ್ಲಿ ಹೊಸ ವಿಧಾನಗಳ ಅನುಸರಣೆಯಿಂದ ಸಲ್ಫ್ಯೂರಿಕ್ ಆಮ್ಲದ ಬಳಕೆ ಕುಗ್ಗುತ್ತಲಿದೆ. ಆದರೆ ಇತರ ಅನೇಕ ಕೈಗಾರಿಕಾ ಬೆಳವಣಿಗೆ ಹೆಚ್ಚಿದಂತೆ ಹೊಸ ಹೊಸ ಉಪಯೋಗಗಳು (ಕೃತಕ ಸಾಬೂನಿನ ತಯಾರಿಕೆ) ಕಂಡುಹಿಡಿಯುವಿಕೆಯಿಂದಲೂ ಸಲ್ಫ್ಯೂರಿಕ್ ಆಮ್ಲದ ಕೈಗಾರಿಕೆ ಬೆಳೆಯುತ್ತಲೇ ಇದೆ. ಹೀಗಾಗಿ ಒಟ್ಟಿನಲ್ಲಿ ಸಲ್ಫ್ಯೂರಿಕ್ ಆಮ್ಲ ತಯಾರಿಕಾ ಕೈಗಾರಿಕೆ ಒಂದು ಮೂಲಭೂತ ಭಾರಿ ಪ್ರಮಾಣದ ರಾಸಾಯನಿಕ ಕೈಗಾರಿಕೆ. ಸಲ್ಫ್ಯೂರಿಕ್ ಆಮ್ಲ ತಯಾರಿಕೆಗೆ ಸಂಬಂಧಿಸಿದಂತೆ ಕೆಲವು ನೂತನ ವಿಧಾನಗಳನ್ನು ಅನುಸರಣೆಗೆ ತರಲು ಸಂಶೋಧನೆಗಳು ನಡೆಯುತ್ತಿವೆ. ಕ್ಯಾಲ್ಸಿಯಂ ಸಲ್ಫೇಟ್ ಮತ್ತು ಇತರ ಲೋಹಗಳ ಸಲ್ಫೇಟ್‍ಗಳ ದ್ರಾವಣಗಳ ವಿದ್ಯುದ್ವಿಭಜನೆಯ ಮೂಲಕ ಆಮ್ಲವನ್ನು ಪಡೆಯಲು ಸಾಧ್ಯ. ಸಲ್ಫರ್‍ನ ಆಕ್ಸೈಡ್ ಮತ್ತು ಆಕ್ಸಿಜನ್‍ಗಳ ರಾಸಾಯನಿಕ ಸಂಯೋಗವನ್ನುಂಟುಮಾಡಲು ವೇಗವರ್ಧಕಗಳ ಸಂಪರ್ಕದಲ್ಲಿ ಕಾಯಿಸುವುದರ ಬದಲು ಅತಿ ನೇರಳೆ ಬಣ್ಣದ ಕಿರಣಗಳು, ರೇಡಿಯಂ ಮುಂತಾದ ಲೋಹಗಳು ಹೊರಸೂಸುವ ವಿಕಿರಣಗಳು ಅತಿಶಬ್ದತರಂಗಗಳು, ಕೃತಕ ವಿದ್ಯುಚ್ಚಾಪ-ಇವೇ ಮುಂತಾದವು ಎಷ್ಟರ ಮಟ್ಟಿಗೆ ಪ್ರಭಾವಯುತವಾದವು ಎಂಬುದನ್ನು ಅರಿಯಲು ಸಂಶೋಧನೆಗಳು ನಡೆಯುತ್ತಲಿವೆ. 2 ನೈಟ್ರಿಕ್ ಆಮ್ಲ (ಊಓಔ3) : ತಯಾರಿಕೆಯ ಪ್ರಮಾಣ ಮತ್ತು ಉಪಯುಕ್ತತೆಯ ವೈವಿಧ್ಯ ಇವೆರಡು ದೃಷ್ಟಿಗಳಿಂದಲೂ ಎರಡನೆಯ ಸ್ಥಾನ ನೈಟ್ರಿಕ್ ಆಮ್ಲಕ್ಕೆ ಸಲ್ಲುತ್ತದೆ. ಇದರ ತಯಾರಿಕೆಯಲ್ಲಿಯೂ ಎರಡು ಪ್ರಮುಖ ವಿಧಾನಗಳಿವೆ. ನೈಟ್ರೇಟ್ ಲವಣವನ್ನು ಸಲ್ಫ್ಯೂರಿಕ್ ಆಮ್ಲದೊಡನೆ ಬಟ್ಟಿ ಇಳಿಸುವದು ಒಂದನೆಯ ವಿಧಾನ. ಓಚಿಓಔ3 + ಊ2Sಔ4 ( ಊಓಔ3 + ಓಚಿಊSಔ4

ಚಿಲಿದೇಶದ ನೈಟ್ರೇಟ್ ಲವಣಗಳ ನಿಕ್ಷೇಪಗಳ ವಿಶ್ವವಿಖ್ಯಾತಿಗೆ ಇದೇ ಕಾರಣ. ಪ್ರಪಂಚದ ಎಲ್ಲ ರಾಷ್ಟ್ರಗಳೂ ಈ ಸೋಡಿಯಂ ನೈಟ್ರೇಟ್ ಲವಣವನ್ನು ಬೀಡು ಕಬ್ಬಿಣ ಅಥವಾ ಸಾಮಾನ್ಯ ಉಕ್ಕಿನ ಭಟ್ಟಿ ಇಳಿಸುವ ಪಾತ್ರೆಯೊಂದರಲ್ಲಿ ಮೊದಲು ತೆಗೆದುಕೊಳ್ಳಬೇಕು. ಅದನ್ನು ಪೂರ್ಣವಾಗಿ, ಮೇಲಿನ ಸಮೀಕರಣದಲ್ಲಿ ನಿರೂಪಿಸಿರುವಂತೆ ಸೋಡಿಯಂ ಬೈಸಲ್ಫೇಟ್ ಆಗಿ ಪರಿವರ್ತಿಸಲು ಎಷ್ಟು ಸಲ್ಫ್ಯೂರಿಕ್ ಆಮ್ಲ ಬೇಕೋ ಅಷ್ಟೇ ಪ್ರಮಾಣದ ಸಲ್ಫ್ಯೂರಿಕ್ ಆಮ್ಲವನ್ನು ಮಾತ್ರ ಹಾಕಿ ಬೆರಸಿ ಕಾಯಿಸಿ ಭಟ್ಟಿ ಇಳಿಸಿದರೆ ನೈಟ್ರಿಕ್ ಆಮ್ಲ ದೊರೆಯುವುದು. ಸಾಮಾನ್ಯವಾಗಿ ಸಲ್ಫ್ಯೂರಿಕ್ ಆಮ್ಲ ತಯಾರಿಕಾ ಕೈಗಾರಿಕೆಗಳೆಲ್ಲವೂ ತಮ್ಮದೇ ಆದ ನೈಟ್ರಿಕ್ ಆಮ್ಲ ಕೈಗಾರಿಕೆಯನ್ನು ಹೊಂದಿರುತ್ತಿದ್ದುದು ಈ ಕಾರಣದಿಂದಲೇ.

ಭಟ್ಟಿ ಇಳಿಸುವಾಗ ಉಷ್ಣತೆಯ ನಿಯಂತ್ರಣ ಅವಶ್ಯಕ. ಹೆಚ್ಚಾಗಿ ಕಾಯಿಸಿದರೆ ನೈಟ್ರಿಕ್ ಆಮ್ಲ ಉಷ್ಣ ವಿಭಜನೆ ಹೊಂದುವ ಸಾಧ್ಯತೆ ಇದೆ. ಈ ವಿಧಾನ ಈಗ ಹೆಚ್ಚಾಗಿ ಬಳಕೆಯಲ್ಲಿಲ್ಲ.

ಇನ್ನೊಂದು ವಿಧಾನ ಸೂತ್ರ ನಿಸರ್ಗದ ಅನುಕರಣೆ. ಗಾಳಿಯಲ್ಲಿರುವ ಆಕ್ಸಿಜನ್, ನೈಟ್ರೊಜನ್‍ಗಳು ಆಕಾಶದಲ್ಲಿ ಮಿಂಚು ಹೊಡೆದಾಗ ರಾಸಾಯನಿಕವಾಗಿ ಸಂಯೋಗ ಹೊಂದಿ ಮೊದಲ ಹಂತದಲ್ಲಿ ನೈಟ್ರೊಜನ್ನಿನ ಆಕ್ಸೈಡ್ ಸಂಯುಕ್ತವನ್ನು ಕೊಡುತ್ತವೆ. ಇದು ಗಾಳಿಯಲ್ಲಿರುವ ಆಕ್ಸಿಜನ್ನಿನೊಡನೆ ಸುಲಭವಾಗಿ ಉತ್ಕರ್ಷಣ ಹೊಂದಿ ನೈಟ್ರೊಜನ್ನಿನ ಡೈಆಕ್ಸೈಡ್ ಆಗಿ ಪರಿವರ್ತನೆಹೊಂದಿ, ಮಳೆಯುಂಟಾದಾಗ ನೀರಿನೊಡನೆ ಲೀನವಾಗಿ ನೈಟ್ರಿಕ್ ಆಮ್ಲವಾಗುತ್ತದೆ. ನಿಸರ್ಗದ ಈ ಕ್ರಿಯೆಯ ಪ್ರತಿರೂಪವೊಂದನ್ನು ಕೃತಕವಾಗಿ ನಡೆಸುವ ಸಾಹಸ ನಡೆದಿದೆ. ಮಿಂಚಿನ ಬದಲಾಗಿ ಗಾಳಿಯ ಮೂಲಕ ಕೃತಕ ವಿದ್ಯುಚ್ಚಾಪವನ್ನು ಹಾಯಿಸುವುದು ಇಲ್ಲಿನ ಕ್ರಮ. ವಿದ್ಯುಚ್ಚಾಪದ ಉಷ್ಣತೆಯ ಮಟ್ಟ ಸುಮಾರು 3,0000 ಸೆ. ಅಗಲವಾದ ಕೃತಕ ವಿದ್ಯುಚ್ಚಾಪದ ಮೂಲಕ ಗಾಳಿಯನ್ನು ಹಾಯಿಸಿ ನೈಟ್ರೊಜನ್ ಆಕ್ಸಿಜನ್‍ಗಳ ರಾಸಾಯನಿಕ ಸಂಯೋಗ ಉಂಟಾಗುವಂತೆ ಮಾಡುತ್ತಾರೆ. ಅಲ್ಲಿಂದಾಚೆಗೆ ಉಳಿದ ಕ್ರಿಯೆಗಳು ಹಿಂದೆ ವಿವರಿಸಿದಂತೆ. ಇಲ್ಲಿ ವಿದ್ಯುಚ್ಛಕ್ತಿ ಹೇರಳ ಮತ್ತು ಅಗ್ಗವಾಗಿ ದೊರೆತರೆ ಮಾತ್ರ ಈ ವಿಧಾನ ಆರ್ಥಿಕವಾಗಿ ಸಾಧ್ಯ. ಮೊದಲು ನಾರ್ವೆ ದೇಶದಲ್ಲಿ ಈ ವಿಧಾನ ಯಶಸ್ವಿಯಾಗಿ ಸ್ಥಾಪಿತವಾಯಿತು. ಈಗ ಇಲ್ಲಿಯೂ ಅಷ್ಟಾಗಿ ಆಚರಣೆಯಲ್ಲಿಲ್ಲ. ಮೊದಲು ಜಾಗತಿಕ ಸಮರ ಸಮಯದಲ್ಲಿ ಚಿಲಿ ನೈಟ್ರೇಟ್ ಲವಣಾಧಾರಿತ ವಿಧಾನ ಮಿತಿ, ಆ ಲವಣ ದೊರೆಯದೆ ಸಂಕುಚಿತವಾಯಿತು. ಆಗ ಭಾರತದಲ್ಲಿ ಇಲ್ಲೇ ದೊರೆಯುವ ಪೊಟಾಸಿಯಂ ನೈಟ್ರೇಟ್ ಲವಣವನ್ನು ಉಪಯೋಗಿಸಿ ನೈಟ್ರಿಕ್ ಆಮ್ಲವನ್ನು ತಯಾರಿಸುವ ಪ್ರಯತ್ನ ಯಶಸ್ವಿಯಾಗಿ ನಡೆಯಿತು. ಆದರೆ ಬೆಲೆ ಮಾತ್ರ ದುಬಾರಿಯಾಗಿ ಕೈಗಾರಿಕೆ ಊರ್ಜಿತವಾಗಲಿಲ್ಲ, ಪಾಶ್ಚಾತ್ಯ ರಾಷ್ಟ್ರಗಳೂ ಇಂಥ ಸನ್ನಿವೇಶವನ್ನು ಎದುರಿಸಬೇಕಾಗಿ ಬಂದು ಪರಿಹಾರ ಕ್ರಮವಾದ ಸಂಶೋಧನೆಯ ಫಲವಾಗಿ ವೇಗವರ್ಧಕವೊಂದರ ಸಮ್ಮುಖದಲ್ಲಿ ಅಮೋನಿಯಾದ ಉತ್ಕರ್ಷಣೆ ಮಾಡುವ ಹೊಸ ಕ್ರಮ ಪ್ರಚಲಿತವಾಯಿತು. ಇದೇ ಎರಡನೆಯ ಪ್ರಮುಖ ವಿಧಾನ. ಗಾಳಿಯಲ್ಲಿರುವ ಯಥೇಚ್ಛ ನೈಟ್ರೊಜನ್ ಅನ್ನು ನೀರಿನಿಂದ ಪಡೆದ ಹೈಡ್ರೊಜನ್ನೊಂದಿಗೆ ಸಂಯೋಗ ಹೊಂದುವಂತೆ ಮಾಡಿ ಹೇರಳವಾಗಿ ಅಮೋನಿಯಾವನ್ನು ಕೃತಕವಾಗಿ ತಯಾರಿಸುವ ಯಶಸ್ವಿಕೈಗಾರಿಕೆ ಆಗತಾನೆ ಬೆಳಕಿಗೆ ಬಂದಿತ್ತು. ಓ2 + 3ಊ2 ( 2ಓಊ3

ಅಮೋನಿಯಾವನ್ನು ಗಾಳಿಯೊಡನೆ 1:9 ಪ್ರಮಾಣದಲ್ಲಿ ಬೆರಸಿ ಕಾದ (7000 - 9300 ಸೆಂ.ಗ್ರೇ. ಉಷ್ಣತೆ) ಪ್ಲಾಟಿನಂ ಲೋಹದ ತೆಳುವಾದ ಒಂದು ಜಾಲರಿಯ ಮೇಲೆ ಹಾಯಿಸಿದರೆ, ಅಮೋನಿಯಾ ಉತ್ಕರ್ಷಣ ಹೊಂದಿ ನೈಟ್ರೊಜನ್ನಿನ ಆಕ್ಸೈಡ್ ಉತ್ಪನ್ನವಾಗುತ್ತದೆ.

ಈ ಕ್ರಿಯೆಯಲ್ಲಿ ಅಧಿಕ ಉಷ್ಣೋತ್ಪತ್ತಿಯಾಗಿ ಆ ಉಷ್ಣವೇ ಪ್ಲಾಟಿನಂನ ಉಷ್ಣತೆಯ ಮಟ್ಟವನ್ನು ಸತತವಾಗಿ ಕಾಪಾಡುತ್ತದೆ. ಈ ನೈಟ್ರೊಜನ್ನಿನ ಆಕ್ಸೈಡ್‍ನ್ನು ಮತ್ತಷ್ಟು ಗಾಳಿ ಅಥವಾ ಆಕ್ಸಿಜನ್ನಿನೊಡನೆ ಬೆರೆಯುವಂತೆ ಮಾಡಿದರೆ ನೈಟ್ರೊಜನ್ನಿನ ಡೈಆಕ್ಸೈಡ್‍ನ್ನು ನೀರಿನಲ್ಲಿ ಹೀರಿದರೆ ನೈಟ್ರಿಕ್ ಆಮ್ಲ ಉಂಟಾಗುವುದು.

4ಓಊ3+ಔ2(4ಓಔ+6ಊ2ಔ
2ಓಔ+ಔ2(2ಓಔ2
2ಓಔ2(ಓ2ಔ4
3ಓ2ಔ4+2ಊ2ಔ(4ಊಓಔ3+ಓಔ

ಅಮೋನಿಯಾದೊಡನೆ ಗಾಳಿಯ ಬದಲು ಆಕ್ಸಿಜನ್ನನ್ನು ಬೆರೆಸುವದು ಮತ್ತು ಉತ್ಕರ್ಷಣ ಕ್ರಿಯೆಯನ್ನು ಹೆಚ್ಚಿನ ಒತ್ತಡದಲ್ಲಿ ನಡೆಸುವುದು ಇವು ನೈಟ್ರಿಕ್ ಆಮ್ಲದ ಉತ್ಪನ್ನವನ್ನು ಅಭಿವೃದ್ಧಿಪಡಿಸುವುದಕ್ಕೆ ಸಹಕಾರಿ. ಕಿರ್ಕಿ, ಅರವನ ಕಾಡುಗಳಲ್ಲಿರುವ ರಾಷ್ಟ್ರೀಯ ರಕ್ಷಣಾ ಕೈಗಾರಿಕಾ ಕೇಂದ್ರಗಳಲ್ಲಿ ಈ ವಿಧಾನವನ್ನು ಅನುಸರಿಸುವರು. ಭಾರತದಲ್ಲಿ ಮೊದಮೊದಲು ಟಂಕಸಾಲೆಗಳೇ ನೈಟ್ರಿಕ್ ಆಮ್ಲವನ್ನು ಹೆಚ್ಚಾಗಿ ಬಳಸುತ್ತಿದ್ದುವು. ಆಗ ನಾರ್ವೆ ಜರ್ಮನಿಗಳಿಂದ ಆಮ್ಲವನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳಲಾಗುತ್ತಿತ್ತು. 1937-38ರಲ್ಲಿ ಭಾರತದಲ್ಲಿ ಕೇವಲ 487 ಟನ್ (ಅದೇ ವರ್ಷ ಅಮೆರಿಕದಲ್ಲಿ 1,76,000 ಟನ್), 1944-45ರಲ್ಲಿ 722 ಟನ್, 1966ರಲ್ಲಿ 16,836 ಟನ್ ನೈಟ್ರಿಕ್ ಆಮ್ಲ ತಯಾರಾಯಿತು.

ಈ ಮೇಲಿನ ವಿಧಾನದಿಂದ ನಮಗೆ ದೊರೆಯುವ ನೈಟ್ರಿಕ್ ಆಮ್ಲ ದುರ್ಬಲ. 60%-65% ರಷ್ಟು ಮಾತ್ರ ಆಮ್ಲದ ಪ್ರಮಾಣ : ಸ್ಫೋಟಕ ವಸ್ತುಗಳ ತಯಾರಿಕೆಗೂ ಬಣ್ಣಗಳ ತಯಾರಿಕೆಗೂ ಪ್ರಬಲ ನೈಟ್ರಿಕ್‍ಆಮ್ಲ (90%-98%)ಅವಶ್ಯಕ. ದುರ್ಬಲ ಆಮ್ಲವನ್ನು ಕಾಯಿಸಿ ಭಟ್ಟಿ ಇಳಿಸಿದರೂ ಆವಿಯಲ್ಲಿ ಆಮ್ಲ ಮತ್ತು ನೀರು ಎರಡೂ ಅದೇ ಪ್ರಮಾಣದಲ್ಲಿ ಹೊರ ಬೀಳುವುವು. ಹೀಗಾಗಿ ಪ್ರಬಲ ನೈಟ್ರಿಕ್ ಆಮ್ಲವನ್ನು ತಯಾರಿಸಲು ಬೇರೆ ವಿಧಾನವನ್ನು ಅನುಸರಿಸಬೇಕಾಗುವದು. ಆಮ್ಲದಲ್ಲಿರುವ ಹೆಚ್ಚಿನ ನೀರನ್ನು ಪ್ರಬಲ ಸಲ್ಫ್ಯೂರಿಕ್ ಆಮ್ಲವನ್ನು ಬೆರೆಸುವದರಿಂದ ತಡೆಹಿಡಿದು, ಅನಂತರ ಭಟ್ಟಿ ಇಳಿಸಿದರೆ ಪ್ರಬಲ ನೈಟ್ರಿಕ್ ಆಮ್ಲ ಭಟ್ಟಿ ಇಳಿಯುವುದು. ಪ್ರಬಲ ಸಲ್ಫ್ಯೂರಿಕ್ ಆಮ್ಲ ದುರ್ಬಲ ನೈಟ್ರಿಕ್ ಆಮ್ಲಗಳನ್ನು ಬೆರೆಸಿ ಮಿಶ್ರಣವನ್ನು ಹೊರಗಿನಿಂದ ಕಾಯಿಸಲಾಗಿ ನೀರಿನ ಹಬೆಯನ್ನು ಅದರ ಮೂಲಕ ಬಿಟ್ಟು ಕಾಯಿಸಿಯಾಗಲಿ ಬಟ್ಟಿ ಇಳಿಸಿದರೆ ನೈಟ್ರಿಕ್ ಆಮ್ಲದ ಆವಿ ಹೊರಬಿದ್ದು ತಣ್ಣಗಾದೊಡನೆ ದ್ರವೀಕರಿಸುವುದು. ಸಲ್ಫ್ಯೂರಿಕ್ ಆಮ್ಲದ ಬದಲು ಮೆಗ್ನೀಸಿಯಂ ನೈಟ್ರೇಟ್‍ನ್ನು ಉಪಯೋಗಿಸಿ ಜಲಾಂಶವನ್ನು ಪ್ರತಿಬಂಧಿಸಿ ಪ್ರಬಲ ನೈಟ್ರಿಕ್ ಆಮ್ಲವನ್ನು ಬಟ್ಟಿ ಇಳಿಸುವರು.

ಚಿತ್ರ-3

ಪ್ರಬಲ ನೈಟ್ರಿಕ್‍ಆಮ್ಲದ ಶೇಖರಣೆಯೂ ಸಾಗಾಣಿಕೆಯೂ ಕಷ್ಟಕರ ಮತ್ತು ಅಪಾಯಕಾರಿ. ಅನೇಕ ಲೋಹಗಳು, ಮರಮುಟ್ಟುಗಳು, ಚರ್ಮ ಇವುಗಳ ಮೇಲೆಲ್ಲ ನೈಟ್ರಿಕ್ ಆಮ್ಲ ಕ್ರಿಯಾತ್ಮಕ. ಅತಿಶುದ್ಧ ಅಲ್ಯೂಮಿನಿಯಂ, ತುಕ್ಕು ನಿರೋಧಕ ಸ್ಟೈನ್‍ಲೆಸ್ ಸ್ಟೀಲ್, ಟ್ಯಾಂಟಲಮ್ ಗಾಜು, ಪಿಂಗಾಣಿಗಳನ್ನು ನೈಟ್ರಿಕ್ ಆಮ್ಲ ಶೇಖರಣೆಗೆ ಸಾಗಾಣಿಕೆಗೆ ಬಳಸುವರು.

ವಿವಿಧ ರೀತಿಯ ಅಸ್ಫೋಟಕ ವಸ್ತುಗಳ ತಯಾರಿಕಾ ಕೈಗಾರಿಕೆಗೆ ನೈಟ್ರಿಕ್ ಆಮ್ಲ ಆವಶ್ಯಕ. ಕೆಲವು ಮುಖ್ಯ ಸ್ಫೋಟಕಗಳೆಂದರೆ ನೈಟ್ರೋಗ್ಲಿಸರೀನ್, ಗನ್‍ಕಾಟನ್, ಟೈನೈಟ್ರೋಟೋಲುಇನ್, ಪಿಕ್ರಿಕ್ ಆಮ್ಲ, ಅಮಟಾಲ್, ಇತ್ಯಾದಿ. ಕೃತಕ ರಾಸಾಯನಿಕ ಗೊಬ್ಬರಗಳ ಉಪಯುಕ್ತತೆಯ ಅರಿವಾದಂತೆಲ್ಲ ಪ್ರಪಂಚದ ಎಲ್ಲ ದೇಶಗಳಲ್ಲೂ ವ್ಯವಸಾಯ ಕ್ಷೇತ್ರದಲ್ಲಿ ಅವುಗಳ ಬಳಕೆ ಅಗಾಧ ಪ್ರಮಾಣದಲ್ಲಿ ಬೆಳೆಯುತ್ತಿರುವುದು ಸಹಜವಾದುದು. ಸಸ್ಯಗಳಿಗೆ ನೈಟ್ರೊಜನ್ ಪೂರೈಕೆಗೋಸ್ಕರ ಬಳಸುವ ಒಂದು ಪ್ರಮುಖ ಕೃತಕ ಗೊಬ್ಬರ ಅಮೋನಿಯಂ ನೈಟ್ರೈಟ್. ಇದರ ತಯಾರಿಕೆಯಲ್ಲಿ ಈಗ ನೈಟ್ರಿಕ್ ಆಮ್ಲವನ್ನು ಪ್ರಧಾನವಾಗಿ ಉಪಯೋಗಿಸುತ್ತಿದ್ದಾರೆ. ಈ ನೈಟ್ರೇಟ್ ಲವಣವನ್ನು ನೈಟ್ರಿಕ್ ಆಮ್ಲ ಮತ್ತು ಸಂಶ್ಲೇಷಿತ ಅಮೋನಿಯಾಗಳ ಮಿಶ್ರಣದಿಂದ ತಯಾರಿಸಲಾಗುವುದು. ಕೃತಕ ದಾರಗಳು ಮತ್ತು ಪ್ಲಾಸ್ಟಿಕ್‍ಗಳು, ಬಣ್ಣದ ತಯಾರಿಕೆ, ಚಿನ್ನ ಬೆಳ್ಳಿಯ ಶುದ್ಧೀಕರಣ, ಹಳೆಯ ನಾಣ್ಯಗಳನ್ನು ಕರಗಿಸುವುದು, ತಾಮ್ರ, ಸೀಸ ಮುಂತಾದ ಲೋಹಗಳನ್ನು ಕರಗಿಸುವುದು, ಪರಮಾಣು ಶಕ್ತಿ ಉತ್ಪಾದನೆಗೆ ಮೂಲ ಇಂಧನವಾದ ಯುರೇನಿಯಂ ಲೋಹದ ತಯಾರಿಕೆ, ಆಕಾಶಬಾಣಗಳನ್ನು ಹಾರಿಸಲು ಉಪಯೋಗಿಸುವ ಇಂಧನದಲ್ಲಿ ಉತ್ಕರ್ಷಣಕಾರಿಯಾಗಿ ಔಷಧಿಗಳ ತಯಾರಿಕೆ, ನರುಳ್ಳೆ ಅಥವಾ ವಾರ್ಟ್ಸ್‍ಗಳನ್ನು ಸುಟ್ಟು ನಿರ್ಮೂಲಿಸಲು, ಮುದ್ರಣಕ್ಕೆ ಅನುಕೂಲವಾಗುವಂತೆ ಛಾಯಾ ಚಿತ್ರಗಳ ಪ್ರತಿಯನ್ನು ಲೋಹದ ಮೇಲೆ ಕೊರೆಯುವುದಕ್ಕೆ (ಪೋಟೋ ಎನ್‍ಗ್ರೇವಿಂಗ್) ಮುಂತಾದ ಕೆಲಸಗಳಿಗೆ ನೈಟ್ರಿಕ್ ಆಮ್ಲವನ್ನು ಉಪಯೋಗಿಸುವರು.

ಹೈಡ್ರೊಕ್ಲೋರಿಕ್ ಆಮ್ಲ (ಊಅI)[ಬದಲಾಯಿಸಿ]

ರಾಸಾಯನಿಕವಾಗಿ ಹೈಡ್ರೊಕ್ಲೋರಿಕ್ ಆಮ್ಲ ಹೈಡ್ರೊಜನ್ ಕ್ಲೋರೈಡ್‍ನ ದ್ರಾವಣ. ಹೈಡ್ರೊಜನ್ ಕ್ಲೋರೈಡ್ ಅನಿಲ ನೀರಿನಲ್ಲಿ ಸುಲಭವಾಗಿ ಲೀನವಾಗಿ ಆಮ್ಲವನ್ನು ಉತ್ಪಾದಿಸುವದು. ಈ ಕ್ರಿಯೆಯಲ್ಲಿ ಆಧಿಕ ಉಷ್ಣೋತ್ಪತ್ತಿಯಾಗುವದು. ಶುದ್ಧ ಆಮ್ಲ ಬಣ್ಣವಿಲ್ಲದ ತಿಳಿ ದ್ರಾವಣ. ಆದರೆ ಬಹಳ ಘಾಟು ವಾಸನೆ. ಪ್ರಬಲ ದ್ರಾವಣವಂತೂ ಗಾಳಿಯಲ್ಲಿ ಹೊಗೆಯಾಡುತ್ತದೆ. ಚರ್ಮದ ಮೇಲೆ ಬಿದ್ದರೆ ವೇದನೆಯುಂಟಾಗುತ್ತದೆ. ಈ ಆಮ್ಲ ಕಬ್ಬಿಣ, ತವರ, ಸತು, ನಿಕ್ಕಲ್ ಮುಂತಾದ ಸಾಮಾನ್ಯ ಲೋಹಗಳನ್ನೆಲ್ಲ ಬಲು ಸುಲಭವಾಗಿ ತಿಂದು ಹಾಕುತ್ತದೆ. ಜೇಡಿಮಣ್ಣು ಮರಳು, ಸುಣ್ಣಕಲ್ಲು ಸಂಬಂಧಿತ ವಸ್ತುಗಳನ್ನು ರಾಸಾಯನಿಕವಾಗಿ ವಿಭಜಿಸಬಲ್ಲದು. ಆದರೆ ಶುಷ್ಕ ಹೈಡ್ರೊಜನ್ ಕ್ಲೋರೈಡ್ ಅನಿಲ ರಾಸಾಯನಿಕವಾಗಿ ಅಷ್ಟು ಕ್ರಿಯಾಶೀಲವಲ್ಲ. ಈ ಮೇಲಿನ ಅಂಶಗಳನ್ನು ಹೈಡ್ರೊಕ್ಲೋರಿಕ್ ಆಮ್ಲದ ತಯಾರಿಕೆ, ಶೇಖರಣೆ, ಉಪಯೋಗಗಳನ್ನು ಪರಿಶೀಲಿಸುವಾಗ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಹೈಡ್ರೊಕ್ಲೋರಿಕ್ ಆಮ್ಲದ ತಯಾರಿಕೆಗೆ ನಾಲ್ಕು ಮುಖ್ಯ ವಿಧಾನಗಳು ಆಚರಣೆಯಲ್ಲಿವೆ.

  1. ಸೋಡಿಯಂ ಕ್ಲೋರೈಡ್ (ಉಪ್ಪು) ಸಲ್ಫ್ಯೂರಿಕ್ ಆಮ್ಲ ವಿಧಾನ
  2. ಹಾರ್‍ಗ್ರೀವನ್ ವಿಧಾನ
  3. ಮೂಲವಸ್ತುಗಳಿಂದ ನೇರಸೃಷ್ಟಿ
  4. ಸಾವಯವ ಸಂಯುಕ್ತಗಳನ್ನು ಕ್ಲೋರಿನ್ನಿನೊಡನೆ ಕ್ರಿಯೆಗೊಳಪಡಿಸುವ ವಿಧಾನ

ಸೋಡಿಯಂ ಕ್ಲೋರೈಡ್ ಸಲ್ಫ್ಯೂರಿಕ್ ಆಮ್ಲವಿಧಾನ : ಇದೇ ಎಲ್ಲಕ್ಕಿಂತ ಮೊದಲು ಆಚರಣೆಗೆ ಬಂದ ಕೈಗಾರಿಕಾ ವಿಧಾನ. ಸೋಡಿಯಂ ಕ್ಲೋರೈಡ್‍ಗೆ ಪ್ರಬಲ ಸಲ್ಫ್ಯೂರಿಕ್ ಆಮ್ಲವನ್ನು ಲೆಕ್ಕಾಚಾರ ಮಾಡಿ ನಿಯಂತ್ರಿತ ಪ್ರಮಾಣದಲ್ಲಿ ಹಾಕಿ ಮಿಶ್ರಣವನ್ನು ಕಾಯಿಸಿ ಬಟ್ಟಿ ಇಳಿಸಿದರೆ ಹೈಡ್ರೊಕ್ಲೋರಿಕ್ ಆಮ್ಲ ಹೊಗೆಯಂತೆ ಹೊರ ಬೀಳುವುದು. ಇದನ್ನು ನೀರಿನಲ್ಲಿ ಹಾಯಿಸಿದರೆ ಹೈಡ್ರೊಕ್ಲೋರಿಕ್ ಆಮ್ಲದ ದ್ರಾವಣವುಂಟಾಗುವುದು.

  1. ಓಚಿಅI+ಊ2Sಔ4 (ಓಚಿಊSಔ4+ಊಅI
  2. ಓಚಿಊSಔ4+ಓಚಿಅI (ಓಚಿ2Sಔ4+ಊಅI

ಭಟ್ಟಿಯಲ್ಲಿ ಉಳಿದುಕೊಳ್ಳುವ ಸೋಡಿಯಂ ಸಲ್ಫೇಟ್‍ಅನ್ನು ಕಾಗದ ಮತ್ತು ಗಾಜಿನ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಮೊದ ಮೊದಲು ಈ ವಿಧಾನ ಹೈಡ್ರೊಕ್ಲೋರಿಕ್ ಆಮ್ಲದ ತಯಾರಿಕೆಗಿಂತ ಸೋಡಾಕ್ಷಾರ (ಸೋಡ ಆ್ಯಷ್, ಓಚಿ2ಅಔ3) ತಯಾರಿಕೆಯ ಮೊದಲ ಹಂತವಾಗಿ ಆಚರಣೆಯಲ್ಲಿತ್ತು. ಆದರೆ ವಾತಾವರಣವನ್ನು ಬಹುವಾಗಿ ಕಲುಷಿತಗೊಳಿಸುವ ಹೈಡ್ರೊಕ್ಲೋರಿಕ್ ಆಮ್ಲವನ್ನು ಕಾರ್ಖಾನೆಗಳಿಂದ ನೇರವಾಗಿ ಗಾಳಿಗೆ ಬಿಡುವುದನ್ನು ಸರ್ಕಾರ ಶಾಸನಬಾಹಿರವನ್ನಾಗಿ ಮಾಡಿದಂದಿನಿಂದ ಹೈಡ್ರೊಕ್ಲೋರಿಕ್ ಆಮ್ಲ ತಯಾರಿಕೆ ಪ್ರಾರಂಭವಾಯಿತು.

ಹಾರ್‍ಗ್ರೀವನ ವಿಧಾನ : ಮೇಲಿನ ವಿಧಾನದಲ್ಲಿ ದೊರೆಯುವ ಉತ್ಪನ್ನಗಳನ್ನು ಇಲ್ಲೂ ಪಡೆಯಬಹುದು. ಸಲ್ಫರ್ ಡೈಆಕ್ಸೈಡ್ ಆಮ್ಲ, ನೀರಿನ ಹಬೆ ಮತ್ತು ಗಾಳಿಗಳ ಮಿಶ್ರಣವೊಂದನ್ನು ಕ್ರಿಯಾಗಾರಗಳಲ್ಲಿ ಜೋಡಿಸಿ ಉಪ್ಪಿನ ಪದರಗಳ ಮೂಲಕ ಹಾಯಿಸುವುದೇ ಹಾರ್‍ಗ್ರೀವನ ವಿಧಾನ.

  1. 2Sಔ2+ಔ2+2ಊ2ಔ+4ಓಚಿಅI(2ಓಚಿ2Sಔ4+4ಊಅI

ಈ ವಿಧಾನದಲ್ಲಿ ದೊರೆಯುವ ಆಮ್ಲ ದುರ್ಬಲವಾದುದು. ಈ ವಿಧಾನ ಅಷ್ಟು ಜನಪ್ರಿಯವಾಗಿಲ್ಲ.

ಮೂಲವಸ್ತುಗಳಿಂದ ನೇರ ಉತ್ಪಾದನೆ: ಇದೇ ಈಗ ಆಚರಣೆಯಲ್ಲಿರುವ ಬಹು ಜನಪ್ರಿಯ ವಿಧಾನ. ಹೈಡ್ರೊಜನ್ ಮತ್ತು ಕ್ಲೋರಿನ್ ಅನಿಲವನ್ನು ಜೊತೆಯಾಗಿ ಉರಿಸುವುದರಿಂದ ಹೈಡ್ರೊಕ್ಲೋರಿಕ್ ಆಮ್ಲ ಉತ್ಪನ್ನವಾಗುವದು.

  1. ಊ2+ಅI2 (2ಊಅI

ಈ ವಿಧಾನದಲ್ಲಿ ಉತ್ಪನ್ನವಾಗುವ ಆಮ್ಲ ಹೆಚ್ಚು ಶುದ್ಧವೂ ಹೆಚ್ಚು ಪ್ರಬಲವೂ ಆಗಿರುತ್ತದೆ. ಭಾರಿಪ್ರಮಾಣದ ಮೂಲಭೂತ ರಾಸಾಯನಿಕ ಕೈಗಾರಿಕೆಗಳಲ್ಲೊಂದಾದ ಕ್ಷಾರ ತಯಾರಿಕೆಯಲ್ಲಿ ಹೈಡ್ರೊಜನ್ ಮತ್ತು ಕ್ಲೋರಿನ್‍ಗಳೆರಡೂ ಉಪಉತ್ಪನ್ನಗಳಾಗಿ ದೊರೆಯುವುವು. ಉಪ್ಪಿನ ವಿದ್ಯುದ್ವಿಭಜನೆಯಿಂದ ಸೋಡಿಯಂ ಲೋಹ ಮತ್ತು ಕ್ಲೋರಿನ್‍ಗಳು ಉತ್ಪನ್ನವಾಗುವುವು. ಉಪ್ಪುನೀರಿನ ವಿದ್ಯುದ್ವಿಭಜನೆಯಿಂದ ಸೋಡಿಯಂ ಹೈಡ್ರಾಕ್ಸೈಡ್ ಕ್ಷಾರ, ಹೈಡ್ರೊಜನ್ ಮತ್ತು ಕ್ಲೋರಿನ್‍ಗಳು ಉತ್ಪನ್ನವಾಗುವುವು. ಹೈಡ್ರೊಜನ್ ಕ್ಲೋರಿನ್ ಮಿಶ್ರಣಗಳ ದಹನ ಅಸ್ಫೋಟನಕಾರಕ. ಅಗಾಧ ಪ್ರಮಾಣದ ಉಷ್ಣವೂ ಉತ್ಪತ್ತಿಯಾಗುವುದು. ಹೈಡ್ರೊಜನ್ ಕ್ಲೋರೈಡ್ ಅನಿಲ ನೀರಿನೊಳಗೆ ಲೀನವಾದಾಗ ಅಧಿಕ ಉಷ್ಣೋತ್ಪತ್ತಿಯಾಗುವುದು. ಈ ಕಾರಣಗಳಿಂದ ದಹನಕಾರ್ಯ ಮತ್ತು ಆಮ್ಲದ ದ್ರಾವಣ ತಯಾರಿಕೆಯ ಎರಡು ಹಂತಗಳಲ್ಲೂ ಬಹಳ ಎಚ್ಚರಿಕೆ ವಹಿಸಬೇಕು. ದಹನಗೋಪುರ ಆಮ್ಲರೋಧಕ ಇಟ್ಟಿಗೆ ಹೊದಿಸಿ ಒಳಮೈನ ಉಕ್ಕಿನಿಂದಾಗಲಿ ತಣ್ಣೀರಿನ ಕೊಳವೆಗಳಿಂದ ಆವೃತವಾದ ಉಕ್ಕಿನ ಫಲಕ ಅಥವಾ ಗ್ರಾಫೈಟ್ ಇದ್ದಲಿನ ರಚನಾ ಸಾಮಗ್ರಿಯಿಂದಾಗಲಿ ನಿರ್ಮಿತವಾಗಿರುವುದು. ನಿಯಂತ್ರಿತ ರೀತಿಯಲ್ಲಿ ಹೈಡ್ರೊಜನ್, ಕ್ಲೋರಿನ್ ಅನಿಲಗಳನ್ನು ದಹನ ಮಂದಿರದೊಳಕ್ಕೆ ಬಿಟ್ಟು ಮಿಶ್ರಣಕ್ಕೆ ಅಗ್ನಿ ಸ್ಪರ್ಶಿಸಿದರೆ ಮಿಶ್ರಣ ಉಗ್ರವಾಗಿ ಉರಿಯಲಾರಂಭಿಸುವುದು. ಉತ್ಪಾದಿತ ಉಷ್ಣವನ್ನು ಆವೃತ ತಣ್ಣೀರು ಸತತವಾಗಿ ಹೀರಿಕೊಳ್ಳುತ್ತಿರುವುದು.

ಚಿತ್ರ-4

ರಾಸಾಯನಿಕ ಸಂಯೋಗದಿಂದ ಉತ್ಪಾದನೆಯಾದ ಹೈಡ್ರೊಜನ್‍ಕ್ಲೋರೈಡ್ ಅನಿಲ ಹೊರಬಿದ್ದು ಮುಂದೆ ಇನ್ನೊಂದು ಗೋಪುರದಲ್ಲಿ ತುಂತುರು ನೀರಿನೋಡನೆ ಸಂಪರ್ಕ ಹೊಂದುವಂತೆ ಮಾಡಲಾಗುವುದು. ಈ ಗೋಪುರದಿಂದ ಹೈಡ್ರೊಕ್ಲೋರಿಕ್ ಆಮ್ಲ ದ್ರಾವಣ ಉಂಟಾಗಿ ಅಂತಿಮವಾಗಿ ಹೊರಬೀಳುವುದು. ಉತ್ಪನ್ನ ಹೈಡ್ರೊಜನ್ ಕ್ಲೋರೈಡ್ ಅನಿಲ ರೂಪದಲ್ಲಿಯೇ ಬೇಕಾದಾಗ, ಎರಡನೆಯ ಗೋಪುರದೊಳಗೆ ನೀರಿನ ಪೂರೈಕೆಯನ್ನು ಕಡಿದು ಹಾಕಬೇಕು. ತನ್ಣೀರಿನಿಂದ ಸುತ್ತುವರಿಸಿ ಅನಿಲವನ್ನು ತಣ್ಣಗೆ ಮಾತ್ರ ಮಾಡಿ, ಅರಿದ ಅನಿಲವನ್ನು ನೇರವಾಗಿ ಉಕ್ಕಿನ ಸಿಲಿಂಡರುಗಳಲ್ಲಿ ಒತ್ತಡಭರಿತವಾಗಿ ಶೇಖರಿಸಬಹುದು ಅಥವಾ ದ್ರವೀಕರಿಸಬಹುದು.

ನಾಲ್ಕನೆಯ ವಿಧಾನ[ಬದಲಾಯಿಸಿ]

ಮಿಥೇನ್, ಬೆಂಜೀನ್ ಮುಂತಾದ ಹೈಡ್ರೊಜನ್, ಇಂಗಾಲ ಸಂಯುಕ್ತಗಳನ್ನು ಕ್ಲೋರಿನ್ ನೊಡನೆ ಕ್ರಿಯೆಗೊಳಪಡಿಸುವಿಕೆ. ಇತ್ತೀಚೆಗೆ ಅನೇಕ ಸಾವಯವ ಸಂಬಂಧಿತ ರಾಸಾಯನಿಕ ಕೈಗಾರಿಕೆಯಲ್ಲಿ ಹೆಚ್ಚಾಗಿ, ಹೈಡ್ರೊಜನ್ ಕ್ಲೋರೈಡ್ ಹೇರಳವಾಗಿ ಉಪ ಉತ್ಪನ್ನವಾಗಿ ದೊರೆಯಲಾರಂಭಿಸಿದೆ. ಆದರಿಂದ ಹೈಡ್ರೊಕ್ಲೋರಿಕ್ ಆಮ್ಲ ತಯಾರಿಕೆ ಒಂದು ನೂತನ ಪ್ರಮುಖ ಮೂಲ ದೊರೆತಿದೆ. ವೀನೈಲ್ ಕ್ಲೋರೈಡ್ ಆಧಾರಿತ ಕೃತಕ ರಬ್ಬರ್ ತಯಾರಿಕೆಯಲ್ಲಿ ಎಥಿಲೀನ್ ಕ್ಲೋರೈಡ್ ಅನ್ನು ಕಾಯಿಸಿದರೆ ಉಷ್ಣವಿಭಜನೆಯಿಂದ ವೀನೈಲ್ ಕ್ಲೋರೈಡ್ ಮತ್ತು ಹೈಡ್ರೊಜನ್ ಕ್ಲೋರೈಡ್ ದೊರೆಯುವುವು. ಈ ವಿಧಾನಗಳಲ್ಲಿ ಹೊರಬೀಳುವ ಹೈಡ್ರೊಜನ್ ಕ್ಲೋರೈಡ್ ಮಾತ್ರ ಅಶುದ್ಧವಾಗಿದ್ದು ಅದನ್ನು ಸ್ವಚ್ಛ ಮಾಡಬೇಕಾಗುವುದು. ದುರ್ಬಲ ಆಮ್ಲ ದ್ರಾವಣ ಕೂಡ ಎಲ್ಲ ಸಾಮಾನ್ಯ ಲೋಹಗಳ ಮೇಲೂ ರಾಸಾಯನಿಕವಾಗಿ ತೀಕ್ಷ್ಣಕ್ರಿಯೆ ಹೊಂದಿರುವುದರಿಂದ ಆಮ್ಲದ ತಯಾರಿಕೆ ಮತ್ತು ಶೇಖರಣೆಗಳಲ್ಲಿ ಗಾಜು, ಗಾಜಿನ ಒಳಮೈನ ಲೋಹಗಳು, ಟ್ಯಾಂಟಲಮ್ ಮತ್ತು ಗ್ರಾಫೈಟ್ ಇದ್ದಲು- ಈ ಮೂರೇ ಹೆಚ್ಚು ಬಳಕೆಯಲ್ಲಿರುವ ವಸ್ತುಗಳು. ಸುಟ್ಟ ಜೇಡಿಮಣ್ಣು ಅಥವಾ ಪಿಂಗಾಣಿ ಮತ್ತು ರಬ್ಬರ್‍ಗಳೂ ಆಮ್ಲ ಸಹಿಷ್ಣುಗಳು.

ಹೈಡ್ರೊಕ್ಲೋರಿಕ್ ಆಮ್ಲ ಒಂದು ಉಪಯುಕ್ತ ಕೈಗಾರಿಕಾ ಆಮ್ಲ. ಕಬ್ಬಿಣ ಉಕ್ಕು ಮತ್ತಿತರ ಲೋಹಗಳ ಮೇಲ್ಮೈ ತುಕ್ಕನ್ನು ತೆಗೆಯಲು, ಕಬ್ಬಿನ ಸಕ್ಕರೆ ಶುದ್ಧೀಕರಣದಲ್ಲಿ ಉಪಯೋಗಿಸುವ ಇದ್ದಿಲಿನ ಪುಡಿಯ ಪುನಶ್ಚೇತನ, ಅಲ್ಯೂಮಿನಿಯಂ, ಮೆಗ್ನೀಸಿಯಂ, ವೆನೇಡಿಯಂ, ಯುರೇನಿಯಂ, ಟಂಗ್‍ಸ್ಟನ್, ಟ್ಯಾಂಟಲಮ್, ಮ್ಯಾಂಗನೀಸ್, ಜರ್ಮೇನಿಯಂ ಲೋಹಗಳ ಬೇರ್ಪಡೆ, ಕೃತಕ ರಬ್ಬರ್ ತಯಾರಿಕೆ. ಪಿಷ್ಟಪದಾರ್ಥಗಳಿಂದ ಸಕ್ಕರೆ ಮತ್ತು ಗ್ಲೂಕೋಸ್ ತಯಾರಿಕೆ, ಪೆಟ್ರೋಲಿಯಂ ಎಣ್ಣೆಯ ಪ್ರವಾಹ ಅಡಚಣೆಗಳಿಂದ ಕಾರ್ಯಸ್ತಬ್ಧವಾಗಿರುವ ಎಣ್ಣೆ ಬಾವಿಗಳ ಪುನಶ್ಚೇತನ, ರಾಸಾಯನಿಕ ಸಂಶೋಧನೆಗಳೇ ಮುಂತಾದ ಅನೇಕ ಉಪಯೋಗಗಳಿಗೆ ಹೈಡ್ರೊಕ್ಲೋರಿಕ್ ಆಮ್ಲವನ್ನು ಬಳಸುವರು. ಭಾರತ ಈ ಆಮ್ಲವನ್ನು ಹೆಚ್ಚಾಗಿ ಆಮದುಮಾಡಿಕೊಳ್ಳುತ್ತಿಲ್ಲ. 1937-38 ರಲ್ಲಿನ ಉತ್ಪಾದನೆ 346 ಟನ್‍ಗಳಷ್ಟಾದರೆ 1966ರಲ್ಲಿ 19,016 ಮೆಟ್ರಿಕ್ ಟನ್‍ಗಳಷ್ಟಾಗಿತ್ತು. (ಅಮೆರಿಕಾದಲ್ಲಿ 1965ರಲ್ಲಿ ಉತ್ಪಾದನೆ 13,10,000ಟನ್‍ಗಳು.)

ಹೈಡ್ರೊಫ್ಲೋರಿಕ್ ಆಮ್ಲ : ಹೈಡ್ರೊಕ್ಲೋರಿಕ್ ಆಮ್ಲದ ಗುಂಪಿಗೇ ಸೇರಿದ ಹೈಡ್ರೊಜನ್ ಮತ್ತು ಫ್ಲೋರಿನ್ ಸಂಯುಕ್ತದ ದ್ರಾವಣ ಹೈಡ್ರೊಫ್ಲೋರಿಕ್ ಆಮ್ಲ. ಪ್ರಕೃತಿಯಲ್ಲಿ ದೊರಕುವ ಕ್ಯಾಲ್ಸಿಯಂ ಫ್ಲೋರೈಡ್ (ಫ್ಲೋರೋಸ್ಟಾರ್) ಮತ್ತು ಪ್ರಬಲ ಸಲ್ಫ್ಯೂರಿಕ್ ಆಮ್ಲಗಳ ಮಿಶ್ರಣವನ್ನು ಕಾಯಿಸಿ ಬಟ್ಟಿ ಇಳಿಸಿದರೆ ಹೈಡ್ರೊಜನ್ ಫ್ಲೋರೈಡ್ ಉತ್ಪತ್ತಿಯಾಗುವುದು. ಅಚಿಈ2+ಊ2Sಔ4 (ಅಚಿSಔ4+2ಊಈ

ಸುಣ್ಣಕಲ್ಲು ಮತ್ತು ಮರಳಿನ ಅಂಶ ಕಡಿಮೆಯಿರುವ ಉತ್ತಮ ದರ್ಜೆಯ ಕ್ಯಾಲ್ಸಿಯಂ ಫ್ಲೋರೈಡ್ ನಿಕ್ಷೇಪಗಳನ್ನು ಛಿದ್ರಿಸಿ ನಯವಾದ ಪುಡಿ ಮಾಡಬೇಕು. ಆ ಪುಡಿಗೆ 96%-98% ಪ್ರಮಾಣದ ಪ್ರಬಲತೆಯ ಸಲ್ಫೂರಿಕ್ ಆಮ್ಲವನ್ನು ಹಾಕಿ ಚೆನ್ನಾಗಿ ಕದಡಿ ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ಉಕ್ಕಿನ ಅಥವಾ ಸೀಸ ಅಥವಾ ಮೊನೆಲ್ ಮಿಶ್ರಲೋಹ (ಮುಖ್ಯವಾಗಿ ನಿಕ್ಕಲ್ ಮತ್ತು ತಾಮ್ರ) ಪಾತ್ರೆಗಳಲ್ಲಿ 2000-2500 ಸೆಂ. ಗ್ರೇ. ಉಷ್ಣತೆಯ ಮಟ್ಟದಲ್ಲಿ 30-60 ಮಿನಿಟುಗಳವರೆಗೆ ಕಾಯಿಸಿದರೆ ಹೈಡ್ರೊಜನ್ ಫ್ಲೋರೈಡ್ ಅನಿಲ ಹೊರಬೀಳುವುದು. ಇತ್ತೀಚೆಗೆ ಜಲಾಂಶ ರಹಿತ ಅಂದರೆ ಒಣ ಅಥವಾ ಶುಷ್ಕ ಹೈಡ್ರೊಜನ್ ಫ್ಲೋರೈಡ್ ಅನಿಲಕ್ಕೆ ಹೆಚ್ಚು ಉಪಯೋಗಗಳಿರುವುದರಿಂದ ಉತ್ಪಾದಿತ ಅನಿಲವನ್ನು ನೇರವಾಗಿ ಉಕ್ಕಿನ ಸಿಲಿಂಡರುಗಳಲ್ಲಿ ಒತ್ತಡದಲ್ಲಿಯಾಗಲೀ ಅಥವಾ ದ್ರವರೂಪದಲ್ಲಿಯಾಗಲೀ ಶೇಖರಿಸುವರು. ಹೈಡ್ರೊಫ್ಲೋರಿಕ್ ಆಮ್ಲದ ಅವಶ್ಯಕತೆಯಿದ್ದಾಗ ಅನಿಲವನ್ನು ನೇರವಾಗಿ ನೀರಿನಲ್ಲಿ ಹೀರಿದರೆ ಮೊದಲು ದುರ್ಬಲ ದ್ರಾವಣ ದೊರೆಯುವುದು. ಈ ದುರ್ಬಲ ದ್ರಾವಣವನ್ನು ಸಲ್ಫ್ಯೂರಿಕ್ ಆಮ್ಲದೊಡನೆ ಮಿಶ್ರಮಾಡಿ ಬಟ್ಟಿ ಇಳಿಸುವುದರ ಮೂಲಕ ಪ್ರಬಲ ಆಮ್ಲವನ್ನು ಪಡೆಯುತ್ತಾರೆ. ಶುಷ್ಕ ಅನಿಲಕ್ಕಿಂತ ದ್ರಾವಣವೇ ಅದರಲ್ಲೂ ದುರ್ಬಲ ದ್ರಾವಣ ರಾಸಾಯನಿಕವಾಗಿ ಉಗ್ರ ಚಟುವಟಿಕೆಯುಳ್ಳದ್ದು. ದ್ರಾವಣ ಸಾಮಾನ್ಯ ಎಲ್ಲ ಲೋಹಗಳನ್ನೂ ಗಾಜು, ಮರಳುಗಳನ್ನೂ ತಿಂದು ಹಾಕುವುದು. ಸೀಸ ಅಥವಾ ಪ್ಲಾಟಿನಂ ಲೋಹ ಮತ್ತು ಕೃತಕ ಪ್ಲಾಸ್ಟಿಕ್‍ಗಳು ಈ ಆಮ್ಲ ನಿರೋಧಕಗಳಾದುದರಿಂದ ಆಮ್ಲದ ದ್ರಾವಣವನ್ನು ಇವುಗಳಲ್ಲಿಯೇ ಉಪಯೋಗಿಸಬೇಕು. ಅದೇ ಶುಷ್ಕ ಹೈಡ್ರೊಜನ್ ಫ್ಲೋರೈಡ್ ಅನಿಲವನ್ನು ಉಕ್ಕಿನ ಸಿಲಿಂಡರ್‍ಗಳಲ್ಲಿ ಯಾವ ರಾಸಾಯನಿಕ ಕ್ರಿಯೆಯೂ ಇಲ್ಲದೆ ಶೇಖರಿಸಬಹುದು. ಸಾಮಾನ್ಯವಾಗಿ ಗಾಜನ್ನು ಕರಗಿಸುವ ಶಕ್ತಿಯುಳ್ಳ ಹೈಡ್ರೊಫ್ಲೋರಿಕ್ ಆಮ್ಲವನ್ನು ಅನೇಕರು ಅತ್ಯುಗ್ರ ಆಮ್ಲವೆಂದು ನಂಬಿದರೂ ಅದರ ಉಗ್ರತೆ ಅಥವಾ ಕ್ರಿಯೆ ಆಮ್ಲದ ಪ್ರಬಲತೆ, ಜಲಾಂಶ, ಉಷ್ಣತೆ ಅದರಲ್ಲಿರುವ ಅರ್ಸೆನಿಕ್ ಮುಂತಾದ ಅಶುದ್ಧತೆಗಳು- ಇವುಗಳನ್ನವಲಂಬಿಸಿರುತ್ತದೆ. ಆದುದರಿಂದ ಪರಿಸ್ಥಿತಿಗೆ ತಕ್ಕಂತೆ ಉತ್ಪಾದನೆ, ಶೇಖರಣೆ, ಸಾಗಾಣಿಕೆಗಳಿಗೆ ಸೂಕ್ತ ಆಮ್ಲ ನಿರೋಧಕ ವಸ್ತುಗಳನ್ನು ಆರಿಸಿಕೊಳ್ಳಬೇಕು.

ಶುಷ್ಕ ಹೈಡ್ರೊಜನ್ ಫ್ಲೋರೈಡ್ ಒಂದು ಬಣ್ಣ ರಹಿತ ಅನಿಲ ಅಥವಾ ದ್ರವ (ಕುದಿ ಬಿಂದು 19.50 ಸೆಂ.ಗ್ರೇ.). ನೀರಿನಲ್ಲಿ ಸುಲಭವಾಗಿ ಲೀನವಾಗುವುದು. ವಾತಾವರಣದ ಸಂಪರ್ಕದಲ್ಲಿ ಹೊಗೆಯಾಡುವುದು. ಚರ್ಮ, ಕಣ್ಣು, ಶ್ವಾಸಕೋಶಗಳಿಗೆ ತೀವ್ರ ಅಪಾಯಕಾರಿ. ದ್ರಾವಣ ರಾಸಾಯನಿಕವಾಗಿ ಚಟುವಟಿಕೆಯುಳ್ಳ ವಸ್ತು. ಆದುದರಿಂದ ಈ ಆಮ್ಲದ ಬಳಕೆಯಲ್ಲಿ ಎಚ್ಚರ ಅತ್ಯವಶ್ಯಕ. ಕೆಲಸಗಾರರಿಗೆ ಸೂಕ್ತ ಆಮ್ಲ ನಿರೋಧಕ ಬಟ್ಟೆಗಳು, ಕಣ್ಣಿಗೆ ಕನ್ನಡಕ, ಮುಖವಾಡ, ಅತಿ ಸಮೀಪದಲ್ಲಿಯೇ ಅವಶ್ಯವಿದ್ದರೆ ಕೃತಕ ಉಸಿರಾಟಕ್ಕೆ ಆಕ್ಸಿಜನ್ನಿನ ಸಿಲಿಂಡರುಗಳು, ವೈದ್ಯಕೀಯ ಸಹಾಯ-ಇವು ಅವಶ್ಯಕ.

ಬಹು ಕಾಲದಿಂದ ಆಚರಣೆಯಲ್ಲಿರುವ ಮತ್ತು ಈಗಲೂ ಬಳಕೆಯಲ್ಲಿರುವ ಒಂದು ಉಪಯೋಗ ಗಾಜಿಗೆ ಹೊಳಪು ಕೊಡುವುದು ಮತ್ತು ಗಾಜಿನ ಮೇಲೆ ಅಕ್ಷರ, ರೇಖೆಗಳು, ರೇಖಾಚಿತ್ರಗಳು ಮುಂತಾದುವನ್ನು ಕೊರೆಯುವುದು. 1670ರಲ್ಲೇ ಈ ಕ್ರಿಯೆಯ ಅರಿವಾಗಿ ಹೈಡ್ರೊಫ್ಲೋರಿಕ್ ಆಮ್ಲ ಆಗಲೇ ಮೊದಲು ತಯಾರಿಸಲಾಯಿತೆಂದು ಭಾವಿಸಬಹುದು. ಆದರೆ 1813-14ರಲ್ಲಿ ಮೊದಲ ಬಾರಿಗೆ ಇದು ಒಂದು ನೂತನ ಮೂಲವಸ್ತು ಫ್ಲೋರಿನ್‍ನ ಸಂಯುಕ್ತವೆಂದು ನಿರ್ಧರಿಸಲಾಯಿತು. ಈಗ ಹೈಡ್ರೊಜನ್ ಫ್ಲೋರೈಡಿಗೆ ಇರುವ ಪ್ರಮುಖ ಉಪಯೋಗವೆಂದರೆ ಫ್ಲೋರಿನ ಸಾವಯವ ಸಂಯುಕ್ತಗಳ ಕೈಗಾರಿಕಾ ತಯಾರಿಕೆ, ಪ್ಲಾಸ್ಟಿಕ್‍ಗಳು, ನೊರೆಯೀಯುವ ವಸ್ತುಗಳು, ಲೋಹಗಳ ತುಕ್ಕು ಸ್ವಚ್ಛ ಮಾಡುವ ದ್ರವಗಳು, ರಾಕೆಟ್‍ಗಳಲ್ಲಿ ಚಿಮ್ಮುವಿಕೆಗೆ ಪ್ರಚೋದಕಗಳು, ಇತ್ಯಾದಿ. ಎರಡನೆಯ ಮುಖ್ಯ ಉಪಯೋಗ ವಿದ್ಯುದ್ವಿಭಜನಾ ವಿಧಾನದಿಂದ ಅಲ್ಯೂಮಿನಿಯಂ ಲೋಹ ತಯಾರಿಸುವಾಗ ವಿದ್ಯುತ್ ವಿಶ್ಲೇಷಣೆಗಾಗಿ ಅವಶ್ಯವಾದ ಅಲ್ಯೂಮಿನಿಯಂ ಫ್ಲೋರೈಡ್ ಮತ್ತು ಕೃತಕ ಕ್ರಿಯೊಲೈಟ್‍ಗಳ (ಓಚಿ3ಂI ಈ6) ಉತ್ಪಾದನೆ. ಮೂರನೆಯದಾಗಿ ಪರಮಾಣು ಶಕ್ತಿ ಉತ್ಪಾದನೆಯಲ್ಲಿ ಮೂಲ ಇಂಧನವಾದ ಯುರೇನಿಯಂ ಲೋಹದ ಉತ್ಪಾದನೆ, ನಾಲ್ಕನೆಯದಾಗಿ ಪೆಟ್ರೋಲಿಯಂ ಎಣ್ಣೆ, ಕೈಗಾರಿಕೆಯಲ್ಲಿ, ವಿಮಾನಗಳಲ್ಲಿ ಬಳಸುವ ಪೆಟ್ರೋಲ್‍ನ ತಯಾರಿಕೆ (ವೇಗವರ್ಧಕವಾಗಿ) ಸ್ಟೈನ್‍ಲೆಸ್ ಸ್ಟೀಲನ್ನು ಸ್ವಚ್ಛಗೊಳಿಸುವುದು, ಲೋಹಗಳ ಎರಕಗಳಿಗಂಟಿರುವ ಮರಳಿನ ನಿರ್ಮೂಲನ, ಫ್ಲೋರಿನ್ ತಯಾರಿಕೆ, ಕೊಳೆ ಬಟ್ಟೆಗಳ ಕಲೆಗಳನ್ನು ತೆಗೆಯುವ ವಸ್ತುಗಳ ತಯಾರಿಕೆ, ವಿಶೇಷ ಬಣ್ಣ ಮತ್ತು ಔಷಧಿಗಳ ತಯಾರಿಕೆ, ಖನಿಜಗಳ ರಾಸಾಯನಿಕ ವಿಶ್ಲೇಷಣೆ ಇತ್ಯಾದಿ ಇತರ ಕೆಲವು ಸಾಮಾನ್ಯ ಉಪಯೋಗಗಳು.

ಬೋರಿಕ್ ಆಮ್ಲ (ಊ3ಃಔ3)[ಬದಲಾಯಿಸಿ]

ಇದು ರಸಾಯನ ಶಾಸ್ತ್ರಜ್ಞರು ಇಟ್ಟ ಹೆಸರು; ಔಷಧಿ ತಯಾರಿಕಾಗಾರರು ಬೊರಾಸಿಕ್ ಆಮ್ಲವೆಂದು ಇದನ್ನು ಕರೆಯುವರು. ಈ ಆಮ್ಲವನ್ನು 1702ರಲ್ಲಿ ಮೊದಲ ಬಾರಿಗೆ ತಯಾರಿಸಲು ಉಪಯೋಗಿಸಿದ ವಿಧಾನವೇ ಇಂದೂ ಕೈಗಾರಿಕೆಯಲ್ಲಿ ಆಚರಣೆಯಲ್ಲಿದೆ. ಪ್ರಕೃತಿಯಲ್ಲಿ ದೊರಕುವ ಬೋರಾಕ್ಸ್ ಲವಣದ ದ್ರಾವಣವೊಂದಕ್ಕೆ ಸಲ್ಫ್ಯೂರಿಕ್ ಆಮ್ಲವನ್ನು ಮಿಶ್ರಿತ ದ್ರಾವಣ ಆಮ್ಲಕ್ರಿಯೆ ತೋರಿಸುವವರೆಗೂ ಹಾಕುವರು. ಅನಂತರ ಫಲಿತ ದ್ರಾವಣವನ್ನು ತಂಪಾಗುವಂತೆ ಮಾಡಿದರೆ ಬಿಳಿಯ ಬೋರಿಕ್ ಆಮ್ಲದ ಹರಳುಗಳು ಹೊರಬೀಳುವುವು. ಅವುಗಳನ್ನು ಶೋಧಿಸಿ ಪ್ರತ್ಯೇಕಿಸಿದ ಅನಂತರ ಉಳಿದ ತಿಳಿ ದ್ರಾವಣವನ್ನು ಕಾಯಿಸಿ ನೀರನ್ನು ಆವಿಯಾಗಿಸಿದರೆ ಸೋಡಿಯಂ ಸಲ್ಫೇಟ್ ಲವಣವೂ ದೊರೆಯುವುದು. ಓಚಿ2ಃ4ಔ7+ ಊ2Sಔ4+5ಊ2ಔ (4ಊ3ಃಔ3+ಓಚಿSಔ4

ಸಲ್ಫ್ಯೂರಿಕ್ ಆಮ್ಲದ ಬದಲು ಹೈಡ್ರೊಕ್ಲೋರಿಕ್ ಆಮ್ಲವನ್ನೂ ಉಪಯೋಗಿಸಬಹುದು. ಭಾರತದಲ್ಲಿ ಬೋರಾಕ್ಸ್ ನಿಕ್ಷೇಪಗಳು ಕಾಶ್ಮೀರದ ಪೂಗಾ ಕಣಿವೆಯ ವಲಯದಲ್ಲಿ, ರಾಜಾಸ್ಥಾನದಲ್ಲಿ ಇರುವುದು ವರದಿಯಾಗಿದೆ.

ಫಾಸ್‍ಫಾರಿಕ್ ಆಮ್ಲ (ಊ3Pಔ4)[ಬದಲಾಯಿಸಿ]

ಪ್ರಕೃತಿಯಲ್ಲಿ ದೊರಕುವ ಫಾಸ್‍ಫೇಟ್ ಕಲ್ಲಿನ ನಿಕ್ಷೇಪಗಳು ರಾಸಾಯನಿಕವಾಗಿ ಕ್ಯಾಲ್ಸಿಯಂ ಫಾಸ್‍ಫೇಟಿ. ಪ್ರಾಣಿಗಳ ಮೂಳೆಗಳಲ್ಲಿಯೂ ಇದೇ ಪ್ರಧಾನಾಂಶ. ಕ್ಯಾಲ್ಸಿಯಂ ಪಾಸ್‍ಫೇಟಿನಿಂದ ಪಾಸ್‍ಪಾರಿಕ್ ಆಮ್ಲವನ್ನು ಎರಡು ವಿಧಾನಗಳಿಂದ ತಯಾರಿಸಬಹುದು. ಮೊದಲನೆಯದರಲ್ಲಿ ಪುಡಿ ಮಾಡಿದ ಫಾಸ್‍ಫೇಟ್ ಕಲ್ಲು ಅಥವಾ ಒಣ ಮೂಳೆ ಪುಡಿಯನ್ನು ಹೆಚ್ಚಿನ ಪ್ರಮಾಣದ ಪ್ರಬಲ ಸಲ್ಪ್ಯೂರಿಕ್ ಆಮ್ಲದೊಡನೆ ಮಿಶ್ರಣಮಾಡಿ ರಾಸಾಯನಿಕ ಕ್ರಿಯೆ ಜರುಗಲು ಸಾಕಷ್ಟು ಕಾಲಾವಕಾಶ ಕೊಟ್ಟರೆ ಅಂತಿಮವಾಗಿ ಫಾಸ್‍ಪಾರಕ್ ಆಮ್ಲ ದೊರೆಯುವುದು. ದ್ರಾವಣವನ್ನು ಸೋಸಿ ಕ್ಯಾಲ್ಸಿಯಂ ಸಲ್ಪೇಟ್ ಘನ ವಸ್ತುವನ್ನು ಪ್ರತ್ಯೇಕಿಸಿ ತಿಳಿ ಆಮ್ಲ ದ್ರಾವಣವನ್ನು ಪಡೆಯಬಹುದು. ಹೀಗೆ ಪಡೆದ ಆಮ್ಲವನ್ನು ಕಾಯಿಸಿ ಜಲಾಂಶವನ್ನು ಕಡಿಮೆ ಮಾಡಿ ಶುದ್ಧೀಕರಣಕ್ಕೊಳಪಡಿಸಿ ಪ್ರಬಲ ಆಮ್ಲವನ್ನು ಹೊಂದಬಹುದು.

  1. ಅಚಿ3 (Pಔ4 ) 2 + 3ಊ2Sಔ4 + 6ಊ2ಔ ( 2ಊ3Pಔ4+3 (ಅಚಿSಔ4 . 2ಊ2ಔ )

ಮೇಲಿನ ರಾಸಾಯನಿಕಕ್ರಿಯೆ ನಡೆಸುವಾಗ ಸಲ್ಫ್ಯೂರಿಕ್ ಆಮ್ಲದ ಪ್ರಮಾಣ ಕಡಿಮೆ ಮಾಡಿ ನಿಯಂತ್ರಿಸಿದರೆ ಕೃತಕ ರಾಸಾಯನಿಕ ಗೊಬ್ಬರಗಳಾದ ಸೂಪರ್ ಫಾಸ್‍ಫೇಟ್‍ಗಳು ದೊರೆಯುವುವು.

ಫಾಸ್ಫರಸ್‍ನಿಂದ (ರಂಜಕ) ಪಾಸ್‍ಪಾರಿಕ್ ಆಮ್ಲವನ್ನು ತಯಾರಿಸುವುದು ಎರಡನೆಯ ಪ್ರಧಾನ. ಫಾಸ್‍ಫೇಟ್ ಕಲ್ಲು ಅಥವಾ ಮೂಳೆಗಳ ಪುಡಿ, ಮರಳು ಮತ್ತು ಕಲ್ಲಿದ್ದಲುಗಳ ಮಿಶ್ರಣವೊಂದನ್ನು ವಿದ್ಯುತ್ ಕುಲುಮೆಯೊಂದರೊಳಗೆ ಕಾಯಿಸಿದರೆ ಹೆಚ್ಚು ಉಷ್ಣದಿಂದ ಕೂಡಿದ ಅನಿಲಗಳು ಕುಲುಮೆಯಿಂದ ಹೊರ ಬೀಳುವುವು. ಅಚಿ3 (Pಔ 4 )2 + 3Siಔ2 + 5ಅ ( 3ಅಚಿSiಔ3 + P2 + 5ಅಔ

ಈ ಬಿಸಿ ಅನಿಲವನ್ನು ಆರಲು ಬಿಟ್ಟರೆ ರಂಜಕ ಘನೀಭೂತವಾಗಿ ಶೇಖರವಾಗುವುದು. ದ್ರವರೂಪದಲ್ಲಿರುವ ಪಂಪುಗಳ ಮೂಲಕ ಹೊರ ಸೆಳೆದು ಶೇಖರಿಸಬಹುದು. ಈ ಫಾಸ್‍ಫರಸ್ಸನ್ನು ಒಂದು ಕುಲುಮೆಯೊಳಗೆ ಯಥೇಚ್ಛವಾಗಿ ಗಾಳಿಯಲ್ಲಿ ಉರಿಸಿದರೆ ಫಾಸ್‍ಫರಿಸಿನ ಆಕ್ಸೈಡ್ ಆಗಿ ಪರಿವರ್ತನೆ ಹೊಂದುವುದು. ಅನಂತರ ಇದನ್ನು ನೀರೊಡನೆ ಮಿಶ್ರಗೊಳ್ಳುವಂತೆ ಮಾಡಿದರೆ ಪಾಸ್‍ಪಾರಿಕ್ ಆಮ್ಲ ದೊರೆಯುವುದು.

4P+ 5ಔ2 ( 2P2 ಔ5
P2ಔ5+3ಊ2ಔ ( 2ಊ3Pಔ4

ಇತ್ತೀಚೆಗೆ ಬಳಕೆಯಲ್ಲಿರುವ ಮತ್ತೊಂದು ಬಗೆಯ ಈ ವಿಧಾನದಲ್ಲಿ ಸಲ್ಫ್ಯೂರಿಕ್ ಆಮ್ಲದ ಬದಲು ಹೈಡ್ರೊಕ್ಲೊರಿಕ್ ಆಮ್ಲವನ್ನು ಫಾಸ್ಪೇಟ್ ಕಲ್ಲಿನ ಜೊತೆ ರಾಸಾಯನಿಕ ಕ್ರಿಯೆಗೊಳಪಡಿಸಿ ಫಲಿತ ಫಾಸ್‍ಫಾರಿಕ್ ಆಮ್ಲವನ್ನು ಸೂಕ್ತ ಲೀನಕಾರಿಗಳಿಂದ ಬೇರೆ ಮಾಡಲಾಗುವುದು.

ಫಾಸ್ಫರಸ್‍ ಅಂಶ ಕೂಡಿರುವ ಕೃತಕ ರಾಸಾಯನಿಕಗೊಬ್ಬರಗಳ ತಯಾರಿಕೆ ಪಾಸ್‍ಪಾರಿಕ್ ಆಮ್ಲಕ್ಕಿರುವ ಪ್ರಮುಖ ಉಪಯೋಗ: ಅಲ್ಲದೆ ಸಾಬೈನು, ಸ್ವಚ್ಛಕಾರಿಗಳು, ಲೋಹಗಳನ್ನು ತುಕ್ಕಿನಿಂದ ರಕ್ಷಿಸುವುದು. ಔಷಧಿಗಳು, ಪೆಟ್ರೋಲಿಯಂ ಕೈಗಾರಿಕೆ (ವೇಗವರ್ಧಕವಾಗಿ), ಸಕ್ಕರೆ ಶುದ್ಧೀಕರಣ, ಗಡಸು ನೀರನ್ನು ಕೈಗಾರಿಕಾ ಉಪಯೋಗಗಳಿಗೆ ಮೆದುಮಾಡುವುದು ಅಪಾರದರ್ಶಕ ಗಾಜಿನ ತಯಾರಿಕೆ, ಮೇಣ, ಪಾಲಿಷ್‍ಗಳ ತಯಾರಿಕೆ, ಬಟ್ಟೆಗಳಿಗೆ ಬಣ್ಣಹಾಕುವ ಕೈಗಾರಿಕೆ, ಆಹಾರ ಪಾನಿಯಗಳ ಕೈಗಾರಿಕೆ-ಇವೇ ಮುಂತಾದ ಅನೇಕ ಕೈಗಾರಿಕೆಗಳಲ್ಲಿ ಉಪಯೋಗಿಸುವರು.

ಭಾರತದಲ್ಲಿ ¥sóÁಸ್¥sóÁರಿಕ್ ಆಮ್ಲತಯಾರಿಕೆ 1923 - 24 ರಿಂದಲೇ ಬೊಂಬಾಯಿನಲ್ಲಿ ಆರಂಭವಾಯಿತು. ಮೊದಮೊದಲು ಮೂಳೆಗಳಿಂದ ಆಮ್ಲವನ್ನು ಉತ್ಪಾದಿಸಲಾಯಿತು. ಏಕೆಂದರೆ ಭಾರತದಲ್ಲಿ ¥sóÁಸ್¥sóÉೀಟ್ ಕಲ್ಲಿನ ನಿಕ್ಷೇಪಗಳಿಲ್ಲ. ಆದರೆ ಮೂಳೆಗಳಿಗೆ ರಫ್ತು ಮೌಲ್ಯವಿರಲಾಗಿ ಈಗ ¥sóÁಸ್¥sóÉೀಟ್ ಕಲ್ಲನ್ನು ಆಲ್ಜಿರೀಯ. ಮೊರಾಕೊ ಮುಂತಾದ ದೇಶಗಳಿಂದ ಭಾರಿ ಪ್ರಮಾಣದಲ್ಲಿ ಆಮದು ಮಾಡಿಕೊಂಡು ಆಮ್ಲವನ್ನು ತಯಾರಿಸಲಾಗುತ್ತದೆ. 1923-1928 ರ ಅವಧಿಯಲ್ಲಿ ಕೇವಲ 16 ಟನ್ ಆಮ್ಲವನ್ನು ಉತ್ಪಾದಿಸುವ ಸಾಮಥ್ರ್ಯದ ಕೈಗಾರಿಕೆ ಬೆಳೆದಿತ್ತು. ¥sóÁಸ್¥sóÀರಸನ್ನು ಉರಿಸಿ ಆಮ್ಲವನ್ನು ಅಂತಿಮವಾಗಿ ಪಡೆಯುವ ವಿಧಾನವೂ ಆಚರಣೆಯಲ್ಲಿದೆ. ಮಂಗಳೂರಿನಲ್ಲಿ 6000 ಟನ್ ರಂಜಕದ ವಾರ್ಷಿಕ ಉತ್ಪಾದನಾ ಸಾಮಥ್ರ್ಯವುಳ್ಳ ಕೈಗಾರಿಕೆಯೊಂದನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

ಸಾವಯವ ಆಮ್ಲಗಳು[ಬದಲಾಯಿಸಿ]

ಎಥಾನಾಯಿಕ್ ಆಮ್ಲ (ಅಊ3.ಅಔಔಊ)[ಬದಲಾಯಿಸಿ]

ಸುಮಾರು 5000 ವರ್ಷಗಳಿಂದಲೂ ತಿಳಿದಿರುವ ಈ ಸಾವಯವ ಆಮ್ಲದ ಪರಿಚಿತನಾಮ ಅಸಿಟಿಕ್ ಆಮ್ಲ. ಇದರ ಉತ್ಪಾದನೆ ವಿಪುಲ. ಇದು ಹಲವಾರು ರಾಸಾಯನಿಕ ಕೈಗಾರಿಕೆ ಉತ್ಪನ್ನಗಳಿಗೆ ಆಧಾರವಸ್ತು. ದ್ರಾಕ್ಷಿ ಸೇಬು ಮುಂತಾದ ಹಣ್ಣುಗಳ ರಸ ಗಾಳಿಗೆ ಬಿಟ್ಟಂತೆಲ್ಲ ಕ್ರಮೇಣ ಹೆಚ್ಚು ಹೆಚ್ಚಾಗಿ ಹುಳಿ ಹಿಡಿಯುವುದಕ್ಕೆ ಕಾರಣ ಈ ಅಸಿಟಿಕ್ ಆಮ್ಲದ ವರ್ಧನೆ. ದ್ರಾಕ್ಷಾರಸದಲ್ಲಿನ ಮದ್ಯಸಾರ ಗಾಳಿಯಲ್ಲಿನ ಆಕ್ಷಿಜನ್‍ನಿಂದ ಉತ್ಕರ್ಷಣ ಹೊಂದಿ ಅಂತಿಮವಾಗಿ ಆಸಿಟಿಕ್ ಆಮ್ಲವುಂಟಾಗಲು ಕಾರಣವಾಗುತ್ತದೆ. ಈ ಉತ್ಕರ್ಷಣಕ್ರಿಯೆ ಅನೇಕ ಏಕಾಣು ಜೀವಿಗಳು ಬಹಳ ಉತ್ತೇಜನಕಾರಿಗಳು. ಪ್ರಾಯಶಃ ಮದ್ಯಸಾರ ಮೊದಲು ಉತ್ಕರ್ಷಣ ಕ್ರಿಯೆಯಿಂದ ಅಸಿಟಾಲ್ಡಿಹೈಡ್ ಆಗಿ, ಅಂತಿಮವಾಗಿ ಅಸಿಟಿಕ್ ಆಮ್ಲ ಆಗುವುದು. ಹಣ್ಣಿನ ರಸಗಳನ್ನು ಹುದುಗುವಂತೆ ಮಾಡಿ ಹುಳಿಹಿಡಿಸಿ, ಅಸಿಟಿಕ್ ಆಮ್ಲವನ್ನು ತಯಾರಿಸಿದ್ದು ಮೊದಲಕೈಗಾರಿಕಾ ವಿಧಾನವೆನ್ನವಹುದು. ಈ ವಿಧಾನದಲ್ಲಿ ಉತ್ಪಾದಿತವಾಗುವ ಆಮ್ಲದ ಪರಮಾಧಿ ಶೇಕಡಾಂಶ 5 ಕಚ್ಚಾ ಹಣ್ಣಿನ ಬದಲು ದುರ್ಬಲ ಆಲ್ಕೋಹಾಲ್ ಉಪಯೋಗಿಸಿ ಆಮ್ಲದ ಶೇಕಡಾಂಶವನ್ನು 12-14 ರವರೆಗೆ ಏರಿಸಬಹುದು. ಆಧುನಿಕ ಕೈಗಾರಿಕೆಯ ವಿಧಾನಗಳಲ್ಲಿ ಮುಖ್ಯವಾದವು ನಾಲ್ಕು :

  1. ಅಸಿಟಾಲ್ಡಿ ಹೈಡ್‍ನ ಉತ್ಕರ್ಷಣೆ ; ೧. ಅಊ3 . ಅಊಔ + 1/2 ಔ2 ೨. ಅಊ3ಅಔಔಊ
  2. ಮದ್ಯಸಾರ ಅಂದರೆ ಈಥೈಲ್ ಆಲ್ಕೊಹಾಲ್‍ನ ಉತ್ಕರ್ಷಣೆ : ೧. ಅ2ಊ5 . ಔಊ + ಔ2 ೨. ಅಊ3ಅಔಔಊ +ಊ2ಔ
  3. ಹೈಡ್ರೊಜನ್ --- ಇಂಗಾಲ ಸಂಯುಕ್ತಗಳ ಉತ್ಕರ್ಷಣೆ. ೧. ಅಊ ಅಊ + ಊ2ಔ ೨. ಅಊ3 ,ಅಔಔಊ ೩. 2ಅಊ3 . ಅಊಔ + ಔ2 ೪. 2ಅಊ3 . ಅಔಔಊ
  4. ಮಿಥೈಲ್ ಆಲ್ಕೊಹಾಲ್ ಇಂಗಾಲದ ಮಾನಾಕ್ಸೈಡ್ ವಿಧಾನ. ೧. ಅಊ3ಔಊ + ಅಔ ೨. ಅಊ3 .ಅಔಔಊ

ಮೂಲಭೂತವಾಗಿ ಪೆಟ್ರೋಲಿಯಂ ಎಣ್ಣೆಬಾವಿಗಳನ್ನು ತೋಡುವಾಗ ಚಿಮ್ಮುವ ನೈಸರ್ಗಿಕ ಅನಿಲದಿಂದ ಅಂತಿಮವಾಗಿ ಅಸಿಟಿಕ್ ಆಮ್ಲವನ್ನು ಈ ನಾಲ್ಕನೆಯ ವಿಧಾನದಿಂದ ಪಡೆಯಬಹುದು. ಒಟ್ಟಿನಲ್ಲಿ ಈ ಎಲ್ಲ ವಿಧಾನಗಳಲ್ಲೂ ಉತ್ಪನ್ನವಾಗುವ ಅಸಿಟಿಕ್ ಆಮ್ಲ ಇತರ ಅನೇಕ ಸಾವಯವ ಸಂಯುಕ್ತಗಳು ಮತ್ತು ನೀರಿನೊಡನೆ ಬೆರೆತೇ ದೊರೆಯುವುದು. ನಿಯಂತ್ರಿತ ರೀತಿಯಲ್ಲಿ ಭಟ್ಟಿ ಇಳಿಸುವುದರ ಮೂಲಕ ಶುದ್ಧ ಅಸಿಟಿಕ್ ಆಮ್ಲವನ್ನು ಬೇರ್ಪಡಿಸಬೇಕು. ಅಸಿಟಿಕ್ ಆಮ್ಲವನ್ನು ಉಪಯೋಗಿಸುವ ಕೈಗಾರಿಕೆಗಳಲ್ಲಿ ಉಪಯೋಗದ ಅನಂತರ ದುರ್ಬಲ ಅಸಿಟಿಕ್ ಆಮ್ಲ ದ್ರಾವಣ ಗಣನೀಯ ಪ್ರಮಾಣದಲ್ಲಿ ಶೇಖರಿತವಾಗುವುದು. ಅದನ್ನು ಸೂಕ್ತ ರೀತಿಯಲ್ಲಿ ಭಟ್ಟಿ ಇಳಿಸುವುದರಿಂದಾಗಲಿ ಅಥವಾ ಲೀನಕಾರಿಗಳಲ್ಲಿ ಮಿಲನವಾಗುವಂತೆ ಮಾಡಿ ಅನಂತರ ಮತ್ತೆ ಭಟ್ಟಿ ಇಳಿಸುವುದರಿಂದಾಗಲಿ ಸಾರೀರಕಣ ಮಾಡಿ ಮತ್ತೆ ಉಪಯೋಗಿಸುವರು.

ಅಸಿಟಿಕ್ ಆಮ್ಲ ಬಣ್ಣವಿರದ, ಘಾಟುವಾಸನೆಯಿಂದಕೂಡಿರುವ ತೀಕ್ಷ್ಣಹುಳಿ ರುಚಿಯ ದ್ರವ. ಘನರೂಪದಲ್ಲಿ ಮಂಜುಗಡ್ಡೆಯ ತೆಳು ಚೆಕ್ಕೆಗಳಂತೆ ಕಾಣುವುದು. ಪ್ರಬಲ ದ್ರಾವಣ ಮತ್ತು ಅದರ ಆವಿ ಚರ್ಮಕ್ಕೂ ಕಣ್ಣಿಗೂ ಬಹಳ ಅಪಾಯಕಾರಿ. ನೀರು, ಆಲ್ಕೋಹಾಲ್, ಈಥರ್‍ಗಳಲ್ಲಿ ಧಾರಾಳವಾಗಿ ವಿಲೀನವಾಗುವುದು. ಅನೇಕ ಸಾವಯವ ಸಂಯುಕ್ತಗಳಿಗೂ ನಿರವಯವ ಆಮ್ಲಗಳಿಗೂ ಉತ್ತಮ ಲೀನಕಾರಿ. ಅಸಿಟಿಕ್ ಆಮ್ಲ ಕೈಗಾರಿಕಾ ಸಲಕರಣೆಗಳಿಗೆ ಮೊದಮೊದಲು ತಾಮ್ರವನ್ನು ವಿಶೇಷವಾಗಿ ಉಪಯೋಗಿಸುತ್ತಿದ್ದರು. ತುಕ್ಕು ನಿರೋಧಕ ಲಕ್ಷಣಗಳುಳ್ಳ ಲೋಹ ಅಥವಾ ಮಿಶ್ರಲೋಹಗಳಿಗೆ ಸಂಬಂಧಿಸಿದಂತೆ ಸಂಶೋಧನೆಗಳಲ್ಲಿ ಪ್ರಗತಿಯಾದಂತೆಲ್ಲ ಅಲ್ಯೂಮಿನಿಯಂ, ಸ್ಟೈನ್‍ಲೆಸ್ ಸ್ಟೀಲ್, ಮೋನೆಲ್ ಮಿಶ್ರ ಲೋಹ, ಟ್ಯಾಂಟಲಮ್ ಮುಂತಾದುವು ಹೆಚ್ಚು ಹೆಚ್ಚು ಬಳಕೆಗೆ ಬರುತ್ತಿವೆ. ಶೇಖರಣೆಗೆ ಮತ್ತು ಸಾಗಾಣಿಕೆಗೆ ಪಿಂಗಾಣಿ, ಸುಟ್ಟ ಜೇಡಿ ಮಣ್ಣು, ಗಾಜು, ರಬ್ಬರ್ ಅಥವಾ ಪ್ಲಾಸ್ಟಿಕ್ ಒಳಮೈ ಹೊಂದಿರುವ ಉಕ್ಕು ಇವೇ ಮುಂತಾದ ವಿವಿಧ ಸಾಮಗ್ರಿಗಳನ್ನು ಬಳಸುವರು.

ಅಸಿಟಿಕ್ ಆಮ್ಲದ ಪ್ರಧಾನ ಉಪಯೋಗಗಳು[ಬದಲಾಯಿಸಿ]

  1. ಕೃತಕ ದಾರಗಳು, ಪ್ಲಾಸ್ಟಿಕ್‍ಗಳು ಮತ್ತು ಔಷಧಿಗಳ ತಯಾರಿಕೆ, ಛಾಯಾಚಿತ್ರಗ್ರಾಹಿ ಫಿಲ್ಮುಗಳು, ಅರಗಿನ ಅಥವಾ ರಾಳದ ಬಣ್ಣಗಳು, ಚರ್ಮ, ಬಟ್ಟೆ ಮತ್ತು ಬಣ್ಣಗಳ ತಯಾರಿಕೆ, ನೈಲಾನ್, ಜೀವಾತುಗಳು (ವಿಟಮಿನ್ಸ್) ಆಸ್ಪಿರಿನ್ ಮುಂತಾದ ಔಷಧಿಗಳು, ರಬ್ಬರ್, ಸುವಾಸನಾ ದ್ರವ್ಯಗಳು ಇವೇ ಮುಂತಾದ ಅನೇಕ ನಿತ್ಯೋಪಯೋಗಿ ವಸ್ತುಗಳ ತಯಾರಿಕಾ ಕೈಗಾರಿಕೆಗಳಿಗೆ ಅಸಿಟಿಕ್ ಆಮ್ಲ ಅತ್ಯಾವಶ್ಯ.
  2. ಕೊಬ್ಬಿನ ಆಮ್ಲಗಳು (ಫ್ಯಾಟಿ ಆಸಿಡ್ಸ್): ಆಸಿಟಿಕ್ ಆಮ್ಲಕ್ಕೆ ಸಂಬಂಧಿಸಿದ ಆದರೆ ತನ್ನ ಅಣುವಿನಲ್ಲಿ ಅಸಿಟಿಕ್ ಆಮ್ಲಕ್ಕಿಂತ ಇನ್ನೂ ಹೆಚ್ಚು ಉದ್ದವಾದ ಇಂಗಾಲ ಸರಪಳಿಗಳನ್ನು ಅನೇಕ ಸಾವಯವ ಆಮ್ಲಗಳು ಸಸ್ಯ ಮತ್ತು ಪ್ರಾಣಿ ಮೂಲದ ಎಣ್ಣೆ ಮತ್ತು ಕೊಬ್ಬುಗಳಲ್ಲಿ ಅಡಗಿವೆ. ಇವುಗಳಲ್ಲಿ ಕೆಲ ಪ್ರಮುಖ ಆಮ್ಲಗಳೆಂದರೆ ಲಾರಿಕ್ ಅಮ್ಲ (ಅ11ಊ23ಅಔಔಊ), ಓಲಿಯಕ್ ಆಮ್ಲ (ಅ17ಊ33ಅಔಔಊ ) ಮತ್ತು ಸ್ಟಿಯರಿಕ್ ಆಮ್ಲ(ಅ17ಊ35ಅಔಔಊ). ಇವು ಗ್ಲಿಸರೀನಿನೊಡನೆ ಸಂಯುಕ್ತದ ಸ್ವರೂಪದಲ್ಲಿ (ಗ್ಲಿಸಿರಿಕ್ ಎಸ್ಟರ್ಸ್), ಕೊಬ್ಬು ಮತ್ತು ಎಣ್ಣೆಗಳಲ್ಲಿ ದೊರೆಯುತ್ತವೆ. ದನ, ಕುದುರೆ ಮತ್ತು ಕುರಿ, ಕೊಬ್ಬರಿ, ಹತ್ತಿಕಾಳು, ಎಣ್ಣೆಬೀಜಗಳು ಇವೆಲ್ಲವುಗಳಿಂದಲೂ ಕೊಬ್ಬಿನ ಆಮ್ಲವರ್ಗದ ಆಮ್ಲಗಳನ್ನು ಪಡೆಯಲು ಸಾಧ್ಯ. ಘನಸ್ಥಿತಿಯಲ್ಲಿರುವ ಆಮ್ಲಗಳನ್ನು ಮೇಣದ ಬತ್ತಿ, ಲೋಹ ಮತ್ತು ಪಾದರಕ್ಷೆಗಳಿಗೆ ಉಪಯೋಗಿಸುವ ಪಾಲಿಷ್‍ಗಳು, ಔಷಧಿ ಮತ್ತು ಕೇಶ, ಅಂಗಾರಾಗಗಳ ತಯಾರಿಕೆಯಲ್ಲಿಯೂ ದ್ರವರೂಪದ ಆಮ್ಲಗಳನ್ನು ಬಣ್ಣಗಳ ತಯಾರಿಕೆ, ಚರ್ಮ ಹದಮಾಡುವುದು, ಬಟ್ಟೆ ಕೈಗಾರಿಕೆಗಳಲ್ಲಿಯೂ ಉಪಯೋಗಿಸುವರು. ಎಲ್ಲ ಆಮ್ಲಗಳಿಂದಲೂ ಕೀಲೆಣ್ಣೆ ಮತ್ತು ಚರಬಿಗಳನ್ನು (ಗ್ರೀಸ್) ತಯಾರಿಸಬಹುದು.
  3. ಸಿಟ್ರಿಕ್ ಆಮ್ಲ (ಅ6ಊ8ಔ7): ಇದು ಆಹಾರ ಪಾನೀಯಗಳ ಕೈಗಾರಿಕೆಯಲ್ಲಿ ಹೇರಳವಾಗಿ ಬಳಕೆಯಲ್ಲಿರುವ ಆಮ್ಲ. ನೀರಿನಲ್ಲಿ ಸುಲಭವಾಗಿ ಧಾರಾಳವಾಗಿ ಲೀನವಾಗುವುದು. ಹಿತಕರವಾದ ಹುಳಿ ರುಚಿಯಿದ್ದು ಸುಲಭವಾಗಿ ಜೀರ್ಣವಾಗುವುದು. ಪ್ರಬಲ ದ್ರಾವಣದಲ್ಲಿಯೂ ಅಪಾಯಕಾರಿಯಲ್ಲ. ಬೆಲೆ ಕಡಿಮೆ. ಈ ಕಾರಣಗಳಿಂದ ಮಿಠಾಯಿ, ಕಲ್ಲುಸಕ್ಕರೆ, ಹಣ್ಣುಗಳಿಂದ ಮಾಡುವ ಸಿಹಿಗಳು, ಸಿಹಿಪಾನೀಯಗಳು, ಹಣ್ಣಿನ ರಸಗಳು ಮುಂತಾದ ಖಾದ್ಯ ವಸ್ತುಗಳ ತಯಾರಿಕೆಯಲ್ಲಿ ಸಿಟ್ರಿಕ್ ಆಮ್ಲವನ್ನು ಧಾರಾಳವಾಗಿ ಉಪಯೋಗಿಸುವರು. ಅಲ್ಲದೆ ಕೆಲವು ಔಷಧಿಗಳು, ಕೇಶ ಮತ್ತು ಅಂಗರಾಗಗಳು, ಲೋಹಗಳನ್ನು ಸ್ವಚ್ಛಮಾಡಲು ಬಳಸುವ ದ್ರಾವಣಗಳು, ಚರ್ಮ ಹದಮಾಡುವಿಕೆ, ಶಾಯಿ ತಯಾರಿಕೆ, ಬಟ್ಟೆಗಳಿಗೆ ಬಣ್ಣ ಸ್ಥಿರಗೊಳಿಸುವುದು ಮುಂತಾದ ಇತರ ಕೈಗಾರಿಕೆಗಳಲ್ಲೂ ಉಪಯೋಗಗಳಿವೆ. ಕಿತ್ತಳೆ, ನಿಂಬೆ, ಅನಾನಸ್ ವರ್ಗದ ಹುಳಿ ಹಣ್ಣುಗಳಲೆಲ್ಲಾ ಸಿಟ್ರಿಕ್ ಆಮ್ಲಾಂಶವಿದೆ. ಬಹು ಕಾಲದವರೆಗೂ ಸಿಟ್ರಿಕ್ ಆಮ್ಲ ತಯಾರಿಕೆಗೆ ಈ ಹಣ್ಣುಗಳ ರಸಗಳೇ ಆಧಾರವಾಗಿದ್ದವು. ಈ ಹಣ್ಣುಗಳನ್ನು ಹೇರಳವಾಗಿ ಬೆಳೆಯುವ ಇಟಲಿ, ಅಮೆರಿಕದ ಕ್ಯಾಲಿಫೋರ್ನಿಯ ಮತ್ತು ಹವಾಯ್ ದ್ವೀಪಗಳು ಸಿಟ್ರಿಕ್ ಆಮ್ಲ ಉತ್ಪಾದನೆಯಲ್ಲಿ ಅಗ್ರಸ್ಥಾನ ಪಡೆದಿದ್ದವು. ಕಚ್ಚಾ ನಿಂಬೆ, ಕಿತ್ತಳೆಯ ಕೆಳದರ್ಜೆಯ ಹುಳಿ ಹಣ್ಣುಗಳು, ಅನಾನಸ್ ಹಣ್ಣಿನ ಮುಖ್ಯ ತಿರುಳಿನ ಗಾಲಿಗಳನ್ನು ಪ್ರತ್ಯೇಕಿಸಿದ ಮೇಲೆ ಉಳಿಯುವ ಚೂರುಗಳು ಇವೆಲ್ಲವನ್ನೂ ಹಿಂಡಿ, ಕಚ್ಚಾರಸವನ್ನು ಕೆಲದಿನಗಳು ಹುಳಿ ಹಿಡಿಯಲು ಹಾಗೇ ಬಿಡುವುದು ಮೊದಲ ಹಂತ. ಅನಂತರ ರಸವನ್ನು ಶೋಧಿಸಿ ತಿಳಿರಸಕ್ಕೆ ಶುದ್ಧವಾದ ಸುಣ್ಣಕಲ್ಲಿನ ಪುಡಿಯನ್ನು (ಕ್ಯಾಲ್ಸಿಯಂ ಕಾರ್ಬೋನೇಟ್) ಬೆರೆಸಿದರೆ ಕ್ಯಾಲ್ಸಿಯಂ ಸಿಟ್ರೇಟ್ ಲವಣ ಘನರೂಪದಲ್ಲಿ ಹೊರಬೀಳುವುದು. ಆ ಲವಣವನ್ನು ಶೋಧಿಸಿ, ಬಿಸಿನೀರಿನಲ್ಲಿ ತೊಳೆದು ಅನಂತರ ಸಲ್ಫ್ಯೂರಿಕ್ ಆಮ್ಲದೊಡನೆ ಬೆರೆಸಿದರೆ ಸಿಟ್ರಿಕ್ ಆಮ್ಲ ದ್ರಾವಣರೂಪದಲ್ಲಿಯೂ ಕ್ಯಾಲ್ಸಿಯಂ ಸಲ್ಫೇಟ್ ಘನರೂಪದಲ್ಲಿಯೂ ದೊರೆಯುವುವು. ಘನವಸ್ತುವನ್ನು ಸೋಸಿ ತೆಗೆದರೆ ತಿಳಿ ಸಿಟ್ರಿಕ್ ಆಮ್ಲ ದ್ರಾವಣ ಸಿಗುವುದು. ಜಲಾಂಶವನ್ನು ಬತ್ತಿಸಿದರೆ ಘನ ಸಿಟ್ರಿಕ್ ಆಮ್ಲ ಉಳಿದುಕೊಳ್ಳುವುದು.
ಸಿಟ್ರಿಕ್ ಆಮ್ಲದ ವ್ಯಾಪಾರದಲ್ಲಿ ಇಟಲಿ ದೇಶದ ಪ್ರಾಬಲ್ಯ ಮತ್ತು ಏಕ ಸ್ವಾಮ್ಯವನ್ನು ಮುರಿಯಲು ಅಮೆರಿಕದಲ್ಲಿ ನಡೆಸಿದ ಸಂಶೋಧನೆಗಳ ಫಲವಾಗಿ ಸಕ್ಕರೆಯಿಂದ ಸಿಟ್ರಿಕ್ ಆಮ್ಲವನ್ನು ತಯಾರಿಸುವ ನೂತನ ಕ್ರಮ ಆಚರಣೆಗೆ ಬಂದು ಈಗ ಹೆಚ್ಚಾಗಿ ಬಳಕೆಯಲ್ಲಿದೆ. ಅಲ್ಯೂಮಿನಿಯಂ ಅಥವಾ ಸ್ಟೆಯಿನ್‍ಲೆಸ್ ಸ್ಟೀಲ್ ಪಾತ್ರೆಯೊಂದರಲ್ಲಿ ಅಸ¥sóÀರ್‍ಜಿಲಸ್ ನಿಗರ್ ಎಂಬ ಸೂಕ್ಷ್ಮದರ್ಶಕೀಯ ಬೂಷ್ಟು ವರ್ಗದ ಜೀವಿಯನ್ನು (ಫಂಗೈ) ಸಕ್ಕರೆಯ ದ್ರಾವಣದೊಳಗೆ ವೃದ್ಧಿಸಲು ಅವಕಾಶ ಮಾಡಿಕೊಟ್ಟರೆ ಕೆಲದಿನಗಳಲ್ಲಿ ಸಿಟ್ರಿಕ್ ಆಮ್ಲ ತಯಾರಾಗುತ್ತದೆ. ಮುಂದೆ ಗಷ್ಟನ್ನು ಶೋಧಿಸಿ ತೆಗೆದು, ತಿಳಿದ್ರಾವಣದಿಂದ ಜಲಾಂಶವನ್ನು ಬತ್ತಿಸಿ ಸಿಟ್ರಿಕ್ ಆಮ್ಲವನ್ನು ಪಡೆಯಬಹುದು. ಉಷ್ಣ ದೇಶವಾದ ಭಾರತದಲ್ಲಿ ಹುಳಿ ಕಿತ್ತಳೆ, ನಿಂಬೆ, ಅನಾನಸ್ ಹಣ್ಣುಗಳು ಸಮೃದ್ಧಿಯಾಗಿ ಬೆಳೆಯುವವಾಗಿದ್ದು ಆ ಹಣ್ಣುಗಳು ಬಿಡುವ ಕಾಲದಲ್ಲಿ ಬೇಡಿಕೆಗಿಂತ ಪೂರೈಕೆ ಸಂದರ್ಭಗಳು ಹೆಚ್ಚಾಗಿದ್ದಾಗಲೆಲ್ಲ ಕೊಳೆಸುವುದಕ್ಕಿಂತ ಅವುಗಳಿಂದ ಸಿಟ್ರಿಕ್ ಆಮ್ಲವನ್ನು ಪಡೆಯಬಹುದಾಗಿದೆ.
  1. ಇತರ ಸಾವಯವ ಆಮ್ಲಗಳು: ವಿಶೇಷತಃ ಸಸ್ಯಮೂಲಗಳಿಂದ ದೊರೆಯುವ, ವಿವಿಧ ಕೈಗಾರಿಕೆಗಳಲ್ಲಿ ಉಪಯೋಗಗಳನ್ನು ಹೊಂದಿರುವ ಇನ್ನೂ ಅನೇಕ ಸಾವಯವ ಆಮ್ಲಗಳು ಇವೆ. ಕೆಲವಕ್ಕೆ ಮಾತ್ರ ಸಂಬಂಧಿಸಿದಂತೆ ಸಂಕ್ಷಿಪ್ತ ವಿಷಯ ಸಂಗ್ರಹಣೆ ಪಟ್ಟಿಯ ರೂಪದಲ್ಲಿ ಕೊಡಲಾಗಿದೆ.
ಆಮ್ಲದ ಹೆಸರು ಮತ್ತು ಸೂತ್ರ ತಯಾರಿಕೆಗೆ ಮುಲಕಚ್ಚಾವಸ್ತು ಮುಖ್ಯ ಉಪಯೋಗಗಳು
ಟಾರ್ಟಾರಿಕ್ ಆಮ್ಲ ದ್ರಾಕ್ಷಾರಸ, ಹುಣಸೆ ಹಣ್ಣು ಪಾನೀಯಗಳು, ಅಡಿಗೆಸೋಡ, ಬಟ್ಟೆಗಳಿಗೆ ಬಣ್ಣ ಕಚ್ಚಿಸುವುದು, ಛಾಯಾಚಿತ್ರ ಗ್ರಹಣ.
ಟ್ಯಾನಿಕ್ ಆಮ್ಲ ಅಥವಾ ಟ್ಯಾನಿನ್ (ಸೂತ್ರ ಅಷ್ಟು ನಿಖರವಾಗಿ ತಿಳಿದಿಲ್ಲ) ಕೆಲವು ಮರಗಳ ಎಲೆಗಳು, ತೊಗಟೆ, ಹಣ್ಣು ಇತ್ಯಾದಿ( ಉದಾ; ಓಕ್ ಮರ, ಚಹಾ ಎಲೆ, ಹಲವು ಬಗೆಯ ಕುರುಚಲು ಗಿಡಗಳು, ಮಲಯ ದೇಶದ ಮ್ಯಾಂಗ್ರೋವ್ ಗಿಡದ ತೊಗಟೆ) (ಮ್ಯಾನ್ ಗ್ರೂವ್‍ಬಾರ್ಕ್) ಚರ್ಮ ಹದಮಾಡುವುದು, ಬಟ್ಟೆಗಳಿಗೆ ಬಣ್ಣ ಕಚ್ಚಿಸುವುದು, ಶಾಯಿ ತಯಾರಿಕೆ, ಔಷಧಿಗಳು.
ಆಕ್ಸಾಲಿಕ್ ಆಮ್ಲ ಮರದ ಪುಡಿ ಅಥವಾ ಹೊಟ್ಟು( ನೀಲಗಿರಿ ತೈಲದ ಮರದಂತೆ ಮೃದುವಾದ ಮರಗಳಾದರೆ ಉತ್ತಮ), ಶರ್ಕರ ಪಿಷ್ಟ ಪದಾರ್ಥಗಳು, ಸೋಡಿಯಂ ಫಾರ್ಮೇಟ್ ಬಟ್ಟೆಗಳ ಮೇಲೆ ಬಣ್ಣವನ್ನು ಸ್ಥಿರಪಡಿಸುವುದು ಚೆಲುವೆಕಾರಿ, ಶಾಯಿ ತಯಾರಿಕೆ, ಛಾಯಾಚಿತ್ರ ಗ್ರಹಣ.
ಗ್ಯಾಲಿಕ್ ಆಮ್ಲ ಕೆಲವು ಸಸ್ಯಗಳು, ಉದಾ : ಓಕ್ ಮರದತೊಗಟೆಯಲ್ಲಿನ ಗಂಟುಗಳು, ಹೆಮ್‍ಲಾಕ್ ವಿಷಸಸ್ಯ, ಚೆಸ್ಟನಟ್ ಮರ. ಚರ್ಮ ಹದಮಾಡುವುದು, ಶಾಯಿ ತಯಾರಿಕೆ, ಬಣ್ಣಗಳು, ಔಷಧಿ.
ಕ್ಷೀರಾಮ್ಲ ಹುಳಿಹಾಲು, ಕಾಕಂಬಿ, ಸಕ್ಕರೆ ಪಾಕ, ಲ್ಯಾಕ್ಟೋನೈಟ್ರೈಲ್ ಆಹಾರ ಪಾನೀಯಗಳು, ಪ್ಲಾಸ್ಟಿಕ್ಸ್‍ಗಳು, ಕ್ರಿಮಿನಾಶಕಗಳು, ಶಾಯಿ, ಚರ್ಮ ಹದಮಾಡುವುದು, ಉಣ್ಣೆ ಬಟ್ಟೆಗಳಿಗೆ ಬಣ್ಣ ಕಚ್ಚಿಸುವುದು.

ಉಲ್ಲೇಖ[ಬದಲಾಯಿಸಿ]

  1. http://www.essentialchemicalindustry.org/chemicals/sulfuric-acid.html
  2. http://www.3rd1000.com/chem101/chem104x.htm
  3. http://www.3rd1000.com/chem101/chem101c.htm#Alchemy