ವಿಷಯಕ್ಕೆ ಹೋಗು

ಆನ್ನೆ ಡಿ ಬ್ಲೋನ್ಸ್ಟೀನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆನ್ನೆ ಡಿ ಬ್ಲೋನ್ಸ್ಟೀನ್ ಅವರು ರವರು ಬ್ರಿಟಿಷ್ ಕವಿಯತ್ರಿ ಮತ್ತು ಭಾಷಾಂತಕಾರರು.

ಆನ್ನೆ ಡಿ ಬ್ಲೋನ್ಸ್ಟೀನ್ ಅವರು ೨೨ ಏಪ್ರಿಲ್ ೧೯೫೮ ರಂದು ಯುನೈಡ್ ಕಿಂಗ್ಡಮ್ನಲ್ಲಿ ಜನಿಸಿದರು.ಆನ್ನೆ ಬ್ಲೋನ್ಸ್ಟೀನ್ ರವರು ಬ್ರಿಟಿಷ್ ಕವಯಿತ್ರಿ ಮತ್ತು ಭಾಷಾಂತಕಾರರಾಗಿದ್ದರು.ಅನಂತರ ಈಕೆ ಸ್ವಿಜರ್ಲ್ಯಾಂಡನ ಬೇಸಲ್ನಲ್ಲಿ ತುಂಬಾ ದಿನಗಳ ಕಾಲ ವಾಸಿಸಿದ್ದರು.ಬೇಸಲ್ ನಲ್ಲಿ ಇವರು ಸ್ವತಂತ್ರ ಅನುವಾದಕಿ ಮತ್ತು ಸಂಪಾದಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.ಬ್ಲೋನ್ಸ್ಟೀನ್ ಸಂಪೂರ್ಣವಾಗಿ ಜಾತ್ಯತೀತ ಮತ್ತು ತಾಂತ್ರಿಕ ಸನ್ನಿವೇಶದಲ್ಲಿ ಬೆಳೆದರು.ಅವರ ತಂದೆ ಇಂಜಿನಿಯರ್ ಆಗಿದ್ದರು ಮತ್ತು ಅವರು ಊಪಗ್ರಹಗಳ ಸಂವಹನ ವ್ಯವಸ್ಥೆಯನ್ನು ವಿನ್ಯಾಸಗೊಳಿಸುತ್ತಿದ್ದರು.ಅವಳ ಸಹೋದರ ಟೆಕ್ಸಾನ್ ಇನ್ಸ್ಟ್ರುಮೆಂಟ್ಸ್ನ ಮಾಜಿ ತಾಂತ್ರಿಕ ನಿರ್ದೇಶಕರಾಗಿದ್ದಾರೆ.ಆನ್ನೆ ಬ್ಲೋನ್ಸ್ಟೀನ್ರವರು ೨೦೦೮ರಿಂದ ಕ್ಯಾನ್ಸರ್ ರೋಗದಿಂದ ಬಳಳುತ್ತಿದ್ದರು ಅನಂತರ ಆನ್ನೆ ಬ್ಲೋನ್ಸ್ಟೀನ್ ರವರು ೫೨ನೇ ವಯಸ್ಸಿನಲ್ಲಿ ತಮ್ಮ ಅಸ್ವಸ್ಥೆಯನ್ನು ಬಹಿರಂಗಪಡಿಸಲಿಲ್ಲ .ಅನಂತರ ಅವರು ೧೯ ಏಪ್ರಿಲ್ ೨೦೧೧ರಲ್ಲಿ ನಿಧನರಾದರು.

ಸಾಹಿತ್ಯ ಕೊಡುಗೆಗಳು

[ಬದಲಾಯಿಸಿ]
ಆನ್ನೆ ಡಿ ಬ್ಲೋನ್ಸ್ಟೀನ್ ರವರ ಬ್ಲೂ ಪರ್ಲ್ ಗ್ರಂಥ

ಆನ್ನೆ ಡೆ ಬ್ಲೋನ್ಸ್ಟೀನ್ ರವರು ಆರು ಪೂರ್ಣ ಉದ್ದದ ಸಂಗ್ರಹಗಳ ಲೇಖಕಿಯಾಗಿದ್ದಾರೆ.ಬ್ಲೂ ಪರ್ಲ್,ವರ್ಕ್ಡ್ ಆನ್ ಸ್ಕೀನ್,ಮೆಮೊರಿಯಲ್ ಮಾರ್ನಿಂಗ್,ಬಟ್ಟರ್ಪ್ಲೈಸ್ ಅಂಡ್ ಬರ್ನಿಂಗ್ಸ್,ಕರೆಸ್ಪಾಂಡಿಗ್ ವಿಥ್ ನೋಬಡಿ ಮತ್ತು ಟು ಬಿ ಕಂಟಿನ್ಯೂಡ್.ನೊಟಾರಿಕನ್ ಜೊತೆ ಕೆಲಸ ಮಾಡುತ್ತಿದ್ದ ಆನ್ನೆ ಡಿ ಬ್ಲೋನ್ಸ್ಟೀನ್ ರವರು ಅವಳ ಕಾವ್ಯಾತ್ಮಕ ಅನುಕ್ರಮಗಳಿಗೆ ಅವರು ಹೆಸರುವಾಸಿಯಾಗಿದ್ದಳು-ಮೂಲತಃ ಹೀಬ್ರೂ ಸ್ಕ್ರಿಪ್ಚರ್ಸ ಅನ್ನು ಅರ್ಥೈಸಲು ಬಳಸುವ ಒಂದು ರಬ್ಬಿಕ್ ಮತ್ತು ಕಬ್ಬಲಿಸ್ಟಿಕ್ ವಿಧಾನ.ಪ್ರಾಚೀನ ಮತ್ತು ಆಧುನಿಕ ಏರಡೂ ವಿಭಿನ್ನ ಭಾಷೆಗಳು ಮತ್ತು ಪಠ್ಯಗಳೊಂದಿಗೆ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು ಸಮಕಾಲೀನ ಕಾವ್ಯಾತ್ಮಕ ಕಾರ್ಯವಿಧಾನವಾಗಿ ಪುನಃ ನೇಮಕಗೊಂಡರು ಮತ್ತು ವಿವರಿಸಿದರು.

ವೃತ್ತಿ ಜೀವನ

[ಬದಲಾಯಿಸಿ]

ಆನ್ನೆ ಬ್ಲೋನ್ಸ್ಟೀನ್ ಬ್ರಿಟೀಷ್ನ ಯಹೂದಿ ವಲಸೆಗಾರರ ಮರಿಮೊಮ್ಮಗಳು ಆಗಿದ್ದರು. ಇವರು ಹುಟ್ಟಿದ್ದು ಬೆಳೆದಿದ್ದು ಮೊದಲ ಹಾರ್ಪ್ಂಡನ್,ಹರ್ಟ್ಫೋರ್ಡ್ಶೈರ್ ನಂತರ ಆನ್ನೆ ಬ್ಲೋನ್ಸ್ಟೀನ್ ಹನ್ನೊಂದು ವರ್ಷದವಳಾಗಿದ್ದಾಗ ಅವಳ ಕುಟುಂಬದವರು ಅವರನ್ನು ಸುರ್ರೆಗೆ ಕರೆದುಕೊಂಡು ಹೋದರು.೧೯೮೩ರಲ್ಲಿ ಬ್ರಿಟನ್ನಿಂದ ಹೊರಡುವ ಮೊದಲು ಕೇಂಬ್ರಿಡ್ಜ ನಲ್ಲಿ ಅವರು ಆರು ವರ್ಷ ಕಳೆದರು.ಅಲ್ಲಿ ಅವರು ನೈಸರ್ಗಿಕ ವಿಜಾನದಲ್ಲಿ ಪದವಿಯನ್ನು ಪಡೆದುಕೊಂಡರು ಮತ್ತು ನಂತರ ಜೆನೆಟಿಕ್ಸ್ ಮತ್ತು ಸಸ್ಯ ತಳಿಗಳಲ್ಲಿ ಪಿಎಚ್ಡಿ ಮಾಡಿದರು. ಆನ್ನೆ ಬ್ಲೋನ್ಸ್ಟೀನ್ ಅವರು ಸ್ವಿಜರ್ಲ್ಯಾಂಡನ ಬೇಸಲ್ನಲ್ಲಿ ವಾಸಿಸುತ್ತಿದ್ದರು.ಸ್ವಿಜರ್ಲ್ಯಾಂಡನ್ ಬೇಸಲ್ನಲ್ಲಿ ಇತರ ಕಲಾಕಾರರೊಂದಿಗೆ ಅನೇಕ ಯೋಜನೆಗಳಲ್ಲಿ ಸಹ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.ಸೆರಾಮಿಸ್ಟ್ ಪ್ಯಾಟ್ ಕಿಂಗ್ ಮತ್ತು ಸ್ವಿಸ್ ಸಂಯೋಜಕರು,ಮೇಲಾ ಮೀರ್ಹಾನ್ಸ ಮತ್ತು ಮಾರ್ರಿಟ್ ಶೆಂಕರ್ ಇವರೆಲ್ಲರೂ ಬ್ಲೋನ್ಸ್ಟೀನ್ ಜೊತೆ ಅನೇಕ ಯೋಜನೆಗಳಲ್ಲಿ ಕೆಲಸಮಾಡಿದ್ದರೆ. thumb|ಆನ್ನೆ ಡಿ ಬ್ಲೋನ್ಸ್ಟೀನ್

ಕೃತಿಗಳು

[ಬದಲಾಯಿಸಿ]

ಆನ್ನೆ ಬ್ಲೋನ್ಸ್ಟೀನ್ನ ಕೃತಿಗಳು ಡೆನ್ವರ್ ಕ್ವಾರ್ಟರ್ಲಿ,ಡೆಸ್ಕಾಂಟ್,ಡಸೀ,ಹೌ ೨.ಇಂಡಿಯಾನಾ ಮತ್ತು ರಿವ್ಯೂ ಮತ್ತು ದಿ ನೂಟ್ರೆ ಡೇಮ್ ರಿವ್ಯೂನಲ್ಲಿ ಕಾಣಿಸಿಕೊಂಡವು.ಆನ್ನೆ ಬ್ಲೋನ್ಸ್ಟೀನ್ ರವರು ೧೯೮೩ರಲ್ಲಿ ಬೆಸಲ್ನಲ್ಲಿ ಫ್ರೆಡ್ರಿಕ್ ಮಿಶಠ್ ನ ಸಂಸ್ಥೆಯಲ್ಲಿ ಪೋಸ್ಟ್ ಡಾಕ್ಟರನ್ ಸಹಭಾಗಿತ್ವರಾಗಿ ನೇಮಕಗೊಂಡರು. ಇಲ್ಲಿ ಅವಳು ಆಕೆಯ ಉಳಿದ ಜೀವನಕ್ಕಾಗಿ ಬದುಕಬೇಕಾಯಿತು.ಬ್ಲೋನ್ಸ್ಟೀನ್ ರವರು ಅತ್ಯುತ್ತಮ ಮಹೋನ್ನತ ಸಂಶೋಧಕಿಯಾಗಿದ್ದರು.೧೯೯೧ರಲ್ಲಿ ಈಕೆ ವಿಜಾನದಲ್ಲಿ ತಮ್ಮ ವೃತ್ತಿಜೀವನವನ್ನು ಕೈಬಿಟ್ಟರು.ಬ್ಲೋನ್ಸ್ಟೀನ್ ಕವಯಿತ್ರಿಯಾಗಿದ್ದು ಇವರು ಆಂಗ್ಲ ಭಾಷೆಯಲ್ಲಿ ಕವಿತೆಯನ್ನು ಬರೆಯುತ್ತಿದ್ದರು.ಆದರೆ ಈಕೆ ಆಂಗ್ಲ ಅಥವಾ ಇತರ ಯಾವುದೇ ಸಾಹಿತ್ಯದಲ್ಲಿ ಉನ್ನತ ಶಿಕ್ಷಣವನ್ನು ಹೊಂದಿರಲಿಲ್ಲ.೧೯೪೮ರಲ್ಲಿ ಬ್ಲೋನ್ಸ್ಟೀನ್ ರವರು ಪ್ಯಾರಿಸ್ನಲ್ಲಿ ನೆಲೆಗೊಂಡರು ಅನಂತರ ಈಕೆ ಕವನಗಳನ್ನು ಹೆಚ್ಚು ವಿಕೃತ ಮತ್ತು ಸಂಕ್ಷೇಪಿತ ಜರ್ಮನ್ ಭಾಷೆಯಲ್ಲಿ ಬರೆದರು.ಸೆಲಾನ್ನಲ್ಲಿ ಈಕೆ ಒಂದು ಭಾಷೆಯ ಪಾಂಡಿತ್ಯವನ್ನು ಕಂಡುಕೊಂಡಳು ಇದಕ್ಕೆ ಈಕೆ ಪ್ರತಿಕ್ರಿಯಿಸಬಹುದಾಗಿತ್ತು ಮತ್ತು ಇದು ನಿಷ್ಠಾವಂತ ನೈತಿಕ ಸಂಯಮಕ್ಕೆ ಕಾರಣವಾಯಿತು.ಆನ್ನೆ ಬ್ಲೋನ್ಸ್ಟೀನ್ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ.ಮೊದಲು ೧೫ ವರ್ಷಗಳವರೆಗೆ ಪ್ರಕಾಶಕರನ್ನು ಹುಡುಕಲು ಬ್ಲೋನ್ಸ್ಟೀನ್ ವಿಫಲರಾದರು ಅನಂತರ ೨೦೦೩ರಲ್ಲಿ ಸಾಲ್ಟ್ ಪ್ರಕಾಶಕರ ಸಹಾಯದಿಂದ ಬ್ಲೂ ಪರ್ಲ್ ಎಂಬ ಗ್ರಂಥವನ್ನು ಪ್ರಕಟಿಸಿದರು.೨೦೦೫ರಲ್ಲಿ ವರ್ಕ್ಡ್ ಆನ್ ಸ್ಕೀನ್ ಕವಿತೆ, ಸಾಲ್ಜ್ಬರ್ಗ್ ಎಂಬ ಗ್ರಂಥವನ್ನು ಬರೆದರು ಮತ್ತು ಗಿಬ್ಬನ್ ಪ್ರೆಸ್ನ ಸಹಾಯದಿಂದ ಎಟರ್ನಿಟಿ ಪರ್ಸನಲ್ ಪ್ರೊನೌನ್ ಹಾಗು ಪ್ಲಾನ್ ಬಿ ಪ್ರೆಸ್ನ ದೋಸ್ ಲಿಪ್ಸ್ ಹಾಡ್ ಲಾಂಗ್ವೆಜ್ ಎಂಬ ಗ್ರಂಥವನ್ನು ಪ್ರಕಟಿಸಿದರು.೨೦೦೭ರಲ್ಲಿ ನೀನು ಕೊಲ್ಲಬಾರದು,ಡ್ಯೂಸಿ ವೀ ಚಾಪ್ ಗ್ರಂಥಗಳು ಮತ್ತು ಬ್ರೈಟ್ ಹಿಲ್ ಪ್ರೆಸ್ನ ಸಹಾಯದಿಂದ ಹೇರ್ಪಿನ್ ಲೂಪಃ ಕವಿತೆಗಳನ್ನು ಪ್ರಕಟಿಸಿದರು.೨೦೦೨ರಲ್ಲಿ ಬ್ರೊಕನ್ ಬೌಲ್ಡರ್ ಪ್ರೆಸ್ನ ಸಹಾಯದಿಂದ ಸ್ಯಾನ್ಡ್.ಸೋಡಾ.ಲೈಮ್ ಎಂಬ ಗ್ರಂಥಗಳನ್ನು ಪ್ರಕಟಿಸಿದರು.೨೦೦೮ರಲ್ಲಿ ಮೆಮೊರಿಯ ಬೆಳಿಗ್ಗೆ,ಶಿಯರ್ಸ್ಮನ್ ಬುಕ್ಸ್ ಮತ್ತು ಎಲೆಕ್ಟ್ರಿಕ್ ಪ್ರೆಸ್ನ ಸಹಾಯದಿಂದ ಯಾರು ಇಲ್ಲದ ಕರೆಸ್ಪಾಂಡೆನ್ಸ್ ವಿಥ್ ನೋಬಡಿ ಎಂಬ ಗ್ರಂಥವನ್ನು ಪ್ರಕಟಿಸಿದ್ದಾರೆ.೨೦೦೯ರಲ್ಲಿ ಡ್ಯೂಸಿ ಪ್ರೆಸ್ನ ಸಹಾಯದಿಂದ ಬಟ್ಟರ್ಪ್ಲೆಸ್ ಅಂಡ ಬರ್ನಿಂಗ್ಸ್ ಎಂಬ ಗ್ರಂಥವನ್ನು ಪ್ರಕಟಿಸಿದ್ದಾರೆ. ಹೀಗಾಗಿ ಬ್ಲೋನ್ಸ್ಟೀನ್ ಗ್ರಂಥಸೂಚಿಯಾಗಿ ಹೊಸ ಸಹಸ್ರಮಾನದ ಕಟ್ಟುನಿಟ್ಟಿನ ಕವಯಿತ್ರಿಯಾಗಿದಾರೆ.ಡಿಜಿಟಲ್ ಜಗತ್ತಿನಲ್ಲಿ ಸಂಕೇತಗಳು ಮತ್ತು ಸಂಯೋಜನೆಗಳು ಸಂಯೋಜಿತ ಸಾಧನೆಗಳಿಗಿಂತ ಹೆಚ್ಚಾಗಿವೆ.ಆನ್ನೆ ಬ್ಲೋನ್ಸ್ಟೀನ್ ರವರ ನೀಲಿ ಮುತ್ತು ಎಂಬ ಕವಿತೆಗಳೊಗೆ ಇತರ ಪಠ್ಯಗಳನ್ನು ನಿಯೋಜಿಸುವುದರಲ್ಲಿ ಸಮರ್ಥರಾಗಿದ್ದಾರೆ.ಬ್ಲೋನ್ಸ್ಟೀನ್ನ ಕವಿತೆಗಳು ಬರಹಗಾರರು ಮತ್ತು ಕಲಾವಿದರೊಂದಿಗೆ ಭಾಷೆಗಳು,ಸಮಯ ಮತ್ತು ಸ್ಥಳಾವಕಾಶದಲ್ಲಿ ಸಂವಹನ ಜಾಲಬಂಧವನ್ನು ಸೃಷ್ಟಿಸುತ್ತದ್ದೆ. ಆನ್ನೆ ಬ್ಲೋನ್ಸ್ಟೀನ್ ರೊಮಿಯನ್ ಯಹೂದಿಯ ಕವಿಯಾದ ಪಾಲ್ ಸೆಲಾನ್ ಅವರು ಬರೆಯುತ್ತಿದ್ದ ಕವಿತೆಗಳನ್ನು ಓದುತ್ತಿದ್ದ.ಆನ್ನೆ ಬ್ಲೋನ್ಸ್ಟೀನ್ ಮೆಮೊರಿಯಲ್ ಮಾರ್ನಿಂಗೆಂಬ ಕವಿತೆಯನ್ನು ಕ್ಯಾಥರಿನ್ರವರು ಆನ್ಲೈನ ವಿಮರ್ಶೆ ಮಾಡಿದರು.೨೦೦೯ರಲ್ಲಿ ಕರೆಸ್ಪಾಂಡೆಸ್ ವಿಥ್ ನೋಬಡಿ ಎಂಬ ಕವಿತೆಯನ್ನು ಮರಿಯಾ ಡ್ರೆಮನ್ರವರು ಆನ್ಲೈನ ವಿಮರ್ಶೆ ಮಾಡಿದರು.೨೦೦೭ರಲ್ಲಿ ವರ್ಕ್ಡ್ ಆನ್ ಸ್ಕೀನ್ ಎಂಬ ಕವಿತೆಯನ್ನು ವಿಮರ್ಶೆ ಮಾಡಿದರು. ಜ್ಯಾಕ್ ಅಲುನ್ ಆನ್ನೆ ಬ್ಲೋನ್ಸ್ಟೀನ್ರವರ ಸಂದರ್ಶನವನ್ನು ಮಾಡಿದರು.

[]

ಉಲ್ಲೇಖಗಳು

[ಬದಲಾಯಿಸಿ]