ಆನೆಗುಡ್ಡೆ ವಿನಾಯಕ ದೇವಸ್ಥಾನ

ವಿಕಿಪೀಡಿಯ ಇಂದ
Jump to navigation Jump to search

ಆನೆಗುಡ್ಡೆ ]]ವಿನಾಯಕ]] ದೇವಸ್ಥಾನವು ಬಹು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರ. ಇಲ್ಲಿ ಪ್ರತಿದಿನ ಸಾವಿರಾರು ಭಕ್ತಾದಿಗಳು ವಿನಾಯಕನ ದರ್ಶನವನ್ನು ಪಡೆಯುತ್ತಾರೆ. ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪ್ರಸಿದ್ದವಾದ ದೇವಸ್ಥಾನಗಳಲ್ಲಿ ಇದೂ ಕೂಡ ಒಂದು. ಈ ಕ್ಷೇತ್ರವು ಪರಶುರಾಮ ಮಹರ್ಷಿಯ ಸೃಷ್ಟಿಯೆಂದು ಹೇಳಲಾಗಿದೆ. ಕಾಲಕ್ರಮೇಣ, ಈ ದೇವಸ್ಥಾನವಿರುವ ಸ್ಥಳವು ಬೇರೆ ಬೇರೆ ಹೆಸರುಗಳನ್ನು ಪಡೆದುಕೊಂಡಿತು. ಈ ದೇವಾಲಯದ ಪರಿಸರದಲ್ಲಿನ ಪ್ರಶಾಂತತೆ ನಿಜವಾಗಿಯೂ ಒಂದು ಅದ್ಭುತ ಅನುಭವ.

ವಿನಾಯಕ ಮೂರ್ತಿ[ಬದಲಾಯಿಸಿ]

ಈ ದೇವಸ್ಥಾನದಲ್ಲಿ ವಿನಾಯಕ ರ್ಮೂತಿಯು ನಿಂತಿರುವ ಭಂಗಿಯಲ್ಲಿ ಭಕ್ತಾದಿಗಳಿಗೆ ದರ್ಶನವನ್ನು ಕೊಟ್ಟಿರುತ್ತಾನೆ. ರ್ಮೂತಿಯ ನಾಲ್ಕು ಹಸ್ತದಲ್ಲಿ ಎರಡು "ವರದ ಹಸ್ತ"ವು ಭಕ್ತರು ಬೇಡಿದ ವರಗಳನ್ನು ಕೊಡಲೂ, ಇನ್ನೆರೆಡು ಹಸ್ತವು ಶರಣಾಗತಿಯಾಗಿರ ಬೇಕೆಂಬುದನ್ನು ತೋರಿಸುತ್ತದೆ.

ಇತಿಹಾಸ[ಬದಲಾಯಿಸಿ]

ಪುರಾಣಗಳ ಪ್ರಕಾರ ಈ ಕ್ಷೇತ್ರದಲ್ಲಿ ಬರಗಾಲವು ಬಂದಾಗ ಅಗಸ್ತ್ಯಮುನಿಗಳು ವರುಣನ ಮನವೂಲಿಸಲು ಯಜ್ನ್ಯವೂಂದನ್ನು ಇಲ್ಲಿ ನೆರವೇರಿಸಿದರು. ಈ ಯಜ್ನ್ಯವನ್ನು ಭಂಗಗೊಳಿಸಲು "ಕುಂಭಾಸುರ"ನೆಂಬ ರಾಕ್ಷಸನು ಋಷಿ ಮುನಿಗಳಿಗೆ ಉಪಟಳ ನೀಡಲಾರಂಭಿಸಿದನು. ಋಷಿಗಳನ್ನು ಕಾಪಾಡಲು ಭೀಮನು ಗಣೇಶನಿಂದ ವರವಾಗಿ ಪಡೆದ ಗದೆಯಿಂದ ಕುಂಭಾಸುರನನ್ನು ಕೊಂದಿರುವನು.

ವಿಶೇಷ ದಿನಗಳು[ಬದಲಾಯಿಸಿ]

  • ಗಣೇಶ ಚೌತಿ ಅಥವಾ ಗಣೇಶ ಚರ್ತುಥಿಯನ್ನು ಇಲ್ಲಿ ಮುಖ್ಯ ವಾಗಿ ಆಚರಿಸುತ್ತಾರೆ.
  • ಪ್ರತಿ ಹುಣ್ಣಿಮೆಯ ನಂತರದ ಚೌತಿಯಂದು ವಿಶೇಷ ಪೂಜೆಯೂ ದೇವಸ್ಥಾನದಲ್ಲಿರುತ್ತದೆ.

ವಿಶೇಷ ಸೇವೆಗಳು[ಬದಲಾಯಿಸಿ]

  • ತುಲಾಭಾರ
  • ಗಣ ಹೋಮ
  • ಮೂಡ ಗಣಪತಿ
  • ರಂಗ ಪೂಜೆ

ಇಲ್ಲಿಗೆ ತಲುಪುವುದು ಹೇಗೆ?[ಬದಲಾಯಿಸಿ]

  1. ರಸ್ತೆ ಮಾರ್ಗ: ಉಡುಪಿ ಮತ್ತು ಕುಂದಾಪುರದಿಂದ ರಾ.ಹೆ. ೬೬ (ರಾ.ಹೆ. ೧೭)ರಲ್ಲಿ ಖಾಸಗಿ ಸಾರಿಗೆ ವ್ಯವಸ್ಥೆ ಇದೆ. ಉಡುಪಿಯಿಂದ ೩೨ ಕಿ.ಮೀ ಹಾಗೂ ಕುಂದಾಪುರದಿಂದ ೯ ಕಿ.ಮೀ ದೂರ.
  2. ಹತ್ತಿರದ ರೈಲ್ವೆ ನಿಲ್ದಾಣ: ಬಾರಕೂರು (ಕೊಂಕಣ ರೈಲ್ವೆ ) ಅಥವಾ ಕುಂದಾಪುರ (ಕೊಂಕಣ ರೈಲ್ವೆ ).
  3. ಹತ್ತಿರದ ವಿಮಾನ ನಿಲ್ದಾಣ: ಬಜಪೆ ವಿಮಾನ ನಿಲ್ದಾಣ, ಮಂಗಳೂರು

ಆಹಾರ ಮತ್ತು ವಸತಿ ಸೌಕರ್ಯಗಳು[ಬದಲಾಯಿಸಿ]

ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಆಹಾರವನ್ನು ಕೊಡುತ್ತಾರೆ. ದೇವಸ್ಥಾನದ ಆಡಳಿತ ಮಂಡಳಿಯ "ಆಮೋದ" ಮತ್ತು "ಪ್ರಮೋದ" ಅತಿಥಿ ಗೃಹಗಳು ಇಲ್ಲಿ ಲಭ್ಯವಿವೆ. ಅತಿಥಿ ಗೃಹದಲ್ಲಿ ಉಳಿದುಕೊಳ್ಳಲು ಮುಂಗಡವಾಗಿ ಕಾಯ್ದಿರಿಸಬೇಕು.

ಸಂರ್ಪಕ ವಿಳಾಸ[ಬದಲಾಯಿಸಿ]

ಆನೆಗುಡ್ಡೆ ವಿನಾಯಕ ದೇವಸ್ಥಾನ ಕುಂಭಾಶಿ, ಕುಂದಾಪುರ ತಾ||, ಉಡುಪಿ ಜಿ|| ಕರ್ನಾಟಕ ರಾ||, ಭಾರತ- ೫೭೬ ೨೫೭

ಇತರೇ ದೇವಸ್ಥಾನಗಳು[ಬದಲಾಯಿಸಿ]

ಆನೆಗುಡ್ಡೆಯಲ್ಲಿ ಇರುವ ಇತರೇ ದೇವಸ್ಥಾನಗಳು: "ಶ್ರೀ ಹರಿಹರ ದೇವಸ್ಥಾನ", "ಶ್ರೀ ಸೂರ್ಯ ನಾರಾಯಣ ದೇವಸ್ಥಾನ" ಮತ್ತು "ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ". ಎಲ್ಲಾ ದೇವಸ್ಥಾನಗಳು ಆನೆಗುಡ್ಡೆ ವಿನಾಯಕ ದೇವಸ್ಥಾನದ ಹತ್ತಿರದಲ್ಲಿಯೇ ಇದೆ.