ಆನೆಕಾಲು ರೋಗ
ಆನೆ ಕಾಲು ಎಂಬುದು ಪರಾವಲಂಬಿ ರೋಗವಾಗಿದೆ.ಇದು ಹೆಲ್ಮಿಂಥಿಯಾಸಸ್ ಎಂಬ ರೋಗದ ಗುಂಪಿಗೆ ಸೇರಿದೆ. ಫಿಲೇರಿಯೊಯಿಡಾ ಪ್ರಕಾರದ ರೌಂಡ್‌ವರ್ಮ್‌ಗಳ ಸೋಂಕಿನಿಂದ ಬರುವ ಈ ರೋಗವು, ನೊಣಗಳು ಹಾಗೂ ಸೊಳ್ಳೆಗಳಿಂದ ಹರಡುತ್ತದೆ.
ರೋಗ ಲಕ್ಷಣಗಳು
[ಬದಲಾಯಿಸಿ]ಆನೆ ಕಾಲು ರೋಗದ ಮುಖ್ಯ ಲಕ್ಷಣವೆಂದರೆ, ಮಾನವನಲ್ಲಿ ಆನೆಯ ಪಾದ- ಆನೆಯ ಕಾಲಿನಂತಿರುವ ದಪ್ಪಕಾಲು; ಎಡಿಮಾ. ಸೊಳ್ಳೆ ಕಡಿತದಿಂದ ಹರಡುವ ಮೊದಲ ಕಾಯಿಲೆಯೇ ಎಡಿಮಾ.[೧] ದುಗ್ಧರಸ ವ್ಯವಸ್ಥೆಯಲ್ಲಿ ಪರಾವಲಂಬಿಗಳು ವಾಸಿಸಿದಾಗ ಎಲಿಫೆಂಟಿಯಾಸಿಸ್ ಉಂಟಾಗುತ್ತದೆ. ಎಲಿಫಾಂಟಿಯಾಸಿಸ್ ಮುಖ್ಯವಾಗಿ ಕೆಳ ತುದಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಕಿವಿಗಳು ಲೋಳೆಯ ಪೊರೆಗಳ ಮೇಲೆ ಹೆಚ್ಚಿನ ಪರಿಣಾಮವನ್ನು ಬಿರುವುದಿಲ್ಲ. ವಿವಿಧ ಜಾತಿಯ ಫಿಲೇರಿಯಲ್ ಹುಳುಗಳು ದೇಹದ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರುತ್ತವೆ. ವುಚೆರಿಯಾ ಬ್ಯಾನ್‌ಕ್ರಾಫ್ಟಿ ಕೂಡ ಇತರ ಅಂಗಾಗಗಳಾದ ಕಾಲು, ಎದೆ, ಸ್ಕ್ರೋಟಮ್, ಯೋನಿಗಳ ಮೇಲೆ ಪರಿಣಾಮ ಬೀರುತ್ತದೆ.
ಸಬ್ಕ್ಯುಟೇನಿಯಸ್ ಹುಳಗಳು ಬೆವರುಸಾಲೆ, ಪಪೂಲ್ಗಳು, ಸಂಧಿವಾತ, ವರ್ಣದ್ರವ್ಯದ ಮಚ್ಚೆಗಳಲ್ಲಿ ಇರುತ್ತವೆ. ಒಂಚೊಸೆರ್ಕಾ ವೋಲ್ವುಲಸ್ ನಿಂದಾಗಿ ಒಂಕೊಸೆರ್ಸಿಯಾಸಿಸ್ ಎಂಬ ಕುರುಡುತನ ಆರಂಭವಾಗುತ್ತದೆ. ಹೊಟ್ಟೆ ನೋವು ಕೂಡ ಈ ರೋಗದ ಲಕ್ಷಣವಾಗಿದೆ. ಏಕೆಂದರೆ ಈ ರೋಗಕ್ಕೆ ಕಾರಣವಾದ ಹುಳುಗಳು ಹೆಚ್ಚಾಗಿ ಅಂಗಾಗದ ಒಳಭಾಗದಲ್ಲಿ ಅತ್ಯಂತ ಆಳದಲ್ಲಿ ಬೆಳೆಯುತ್ತವೆ.
ಹರಡುವಿಕೆ
[ಬದಲಾಯಿಸಿ]ಆನೆ ಕಾಲು ರೋಗಕ್ಕೆ ಪ್ರಮುಖ ಕಾರಣವೆಂದರೆ, ಉರುಳೆ ಆಕಾರದ ಹುಳು. ಈ ಹುಳುವು ಐದು ಹಂತಗಳನ್ನು ಹೊಂದಿರುತ್ತದೆ. ಗಂಡು ಮತ್ತು ಹೆಣ್ಣು ಹುಳಗಳ ಸಂಗಾತದ ನಂತರ, ಹೆಣ್ಣು ಹುಳವು ಸಾವಿರಾರು ಮೈಕ್ರೊಫಿಲೇರಿಯಾಕ್ಕೆ ಜನ್ಮ ನೀಡಿ, ಅದರಲ್ಲೇ ಜೀವಿಸುತ್ತದೆ. ವೆಕ್ಟರ್ ಕೀಟಗಳು ರಕ್ತವನ್ನು ಹಿರುವ ಸಮಯದಲ್ಲಿ ಮೈಕ್ರೋಫಿಲೇರಿಯಾವನ್ನು ತೆಗೆದುಕೊಳ್ಳುತ್ತವೆ. ಇದಕ್ಕೆ ಮಧ್ಯಂತರ ಹೋಸ್ಟ್ ಎಂದು ಕರೆಯುತ್ತಾರೆ. ಈ ಸಂದರ್ಭದಲ್ಲಿ ಮೈಕ್ರೋಫಿಲೇರಿಯಾಗಳು ಕರಗಿ, ಸೋಂಕಿತ ಲಾರ್ವಗಳಾಗಿ ಬೆಳೆಯುತ್ತದೆ. ಮತ್ತೋಂದು ಸಲ ರಕ್ತವನ್ನು ಹಿರುವ ಸಂದರ್ಭದಲ್ಲಿ ವೆಕ್ಟರ್ ಕೀಟಗಳು, ಸೋಂಕಿತ ಲಾರ್ವಗಳನ್ನು ಒಳಚರ್ಮದ ಪದರಕ್ಕೆ ಚುಚ್ಚುತ್ತದೆ. ಇದಾದ ಒಂದು ವರ್ಷದ ನಂತರ ಲಾರ್ವಗಳು ಎರಡು ಹಂತಗಳಲ್ಲಿ ಕರಗಿ, ಹುಳುಗಳಾಗಿ ಬೆಳೆಯುತ್ತವೆ.
ರೋಗನಿರ್ಣಯ
[ಬದಲಾಯಿಸಿ]ವಿಧಾನಗಳು
[ಬದಲಾಯಿಸಿ]ರೋಗನಿರ್ವಾಹಕಗಳಲ್ಲಿ ಹಲವಾರು ವಿಧಾನಗಳಿವೆ. ಅವುಗಳೆಂದರೆ,
- ಮೆಂಬರೇನ್ ಫಿಲ್ಟರ್
- ನಾಟ್‌ನ ಸಾಂದ್ರತೆಯ ವಿಧಾನ
- ಸೆಡಿಮೆಂಟೇಶನ್ ತಂತ್ರ
ಚಿಕಿತ್ಸೆ
[ಬದಲಾಯಿಸಿ]೨೦೦೩ರಲ್ಲಿ ಡಾಕ್ಸಿಸೈಕ್ಲಿನ್ ಎಂಬ ಔಷಧವನ್ನು ಸಾಮಾನ್ಯವಾಗಿ ಸೂಚಿಸಲಾಗುತ್ತಿತ್ತು. ಆನೆಕಾಲು ರೋಗದಲ್ಲಿ ಕಂಡುಬರುವ ಪರಾವಲಂಬಿಗಳು ವೋಲ್ಬಾಚಿಯಾ ಎಂಬ ಬ್ಯಾಕ್ಟೀರಿಯಾವನ್ನು ಹೊಂದಿವೆ. ಈ ವೋಲ್ಬಾಚಿಯಾಗಳು ಕ್ರಿಮಿಗಳ ಒಳಗೆ ಜೀವಿಸುತ್ತವೆ. ಇವು ಸಂತಾನೋತ್ಪತಿ ಮತ್ತು ರೋಗದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಔಷಧವು ಸಂತಾನೋತ್ಪತಿಯನ್ನು ಕಡಿಮೆ ಮಾಡಿಡುವುದರಿಂದ ಸಂತಾನಹೀನತೆ ಉಂಟಾಗುತ್ತದೆ. ೨೦೦೫ರ ಜೂನ್ಲಿ ನಲ್ಲಿ ಲಿವರ್‌ಪೂಲ್ ಸ್ಕೂಲ್ ಆಫ್ ಟ್ರಾಪಿಕಲ್ ಮೆಡಿಸಿನ್ ಸಂಸ್ಥೆಯ ನೆಡೆಸಿದ ಎಂಟು ವಾರಗಳ ಚಿಕಿತ್ಸಾ ಕಾರ್ಯದಲ್ಲಿ ಮೈಕ್ರೋಫಿಲರೇಮಿಯಾವನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ ಎಂದು ವರದಿಯಾಗಿದೆ.
ಸಮಾಜ ಮತ್ತು ಸಂಸ್ಕೃತಿ
[ಬದಲಾಯಿಸಿ]ಸಂಶೋಧನಾ ತಂಡಗಳು
[ಬದಲಾಯಿಸಿ]೨೦೧೫ರಲ್ಲಿ ವಿಲಿಯಂ ಸಿ. ಕ್ಯಾಂಪ್‌ಬೆಲ್ ಮತ್ತು ಸಟೋಶಿ ಅಮುರಾರವರು ಶರೀರಶಾಸ್ತ್ರ ವಿಷಯಕ್ಕೆ ಸಂಬಂಧಿಸಿದ ಅವರ್ಮೆಕ್ಟಿನ್ ಎಂಬ ಔಷಧವನ್ನು ಸಂಶೋಧನೆ ಮಾಡಿದ ಕಾರಣ ನೊಬಲ್ ಪ್ರಶಸ್ತಿಯನ್ನು ಪಡೆದರು.
ರೋಗ ನಿರ್ಮೂಲನೆ
[ಬದಲಾಯಿಸಿ]ಮಾನವರಲ್ಲಿ ಆನೆಕಾಲು ಕಾಯಿಲೆಯು ವರ್ಮಿಸೈಡಲ್ ಚಿಕಿತ್ಸೆಯ ಮೂಲಕ ನಿರ್ಮೂಲನೆ ಮಾಡಬಹುದಾಗಿದೆ. ಒಮ್ಮೆ ಸೋಂಕು ಹರಡುವುದು ನಿಂತರೆ, ರೋಗವು ನಾಶವಾಗುತ್ತದೆ.ಪ್ರಾಯೋಗಿಕವಾಗಿ ಇದು ಅಷ್ಟು ಸುಲಭವಲ್ಲ, ಕೆಲವು ಪ್ರದೇಶಗಳಲ್ಲಿ ಅನೇಕ ಪ್ರಭೇದಗಳು ಅತಿಕ್ರಮಿಸುತ್ತವೆ ಮತ್ತು ಸಾಮಾನ್ಯವಾಗಿ ಹೆಚ್ಚು ಸೋಂಕುಗಳು ಕಂಡುಬರುತ್ತವೆ.[೨]
ಇತರ ಪ್ರಾಣಿಗಳ ಮೇಲೆ
[ಬದಲಾಯಿಸಿ]ಆನೆ ಕಾಲು ರೋಗವು ಪ್ರಾಣಿಗಳಲ್ಲೂ ಕಂಡುಬರುತ್ತದೆ. ಹೆಚ್ಚಾಗಿ ಜಾನುವಾರು, ಕುದುರೆ ಮತ್ತು ನಾಯಿಗಳಲ್ಲಿ ಕಂಡುಬರುತ್ತದೆ.
ಜಾನುವಾರು
[ಬದಲಾಯಿಸಿ]- ಪ್ಯಾರಾಫಿಲೇರಿಯಾ ಬೊವಿಕೋಲಾದಿಂದಾಗಿ ಜಾನುವಾರುಗಳಲ್ಲಿ ವರ್ಮಿನಸ್ ಹೆಮರಾಜಿಕ್ ಡರ್ಮಟೈಟಿಸ್ ಎಂಬ ರೋಗವು ಬರುತ್ತದೆ. ಇದು ಗೋವುಗಳಲ್ಲಿ ಕಂಡುಬರುವ ಆನೆ ಕಾಲು ರೋಗವಾಗಿದೆ.
- ಜಾನುವಾರುಗಳ ಇಂಟ್ರಾಡರ್ಮಲ್ ಒಂಕೊಸೆರ್ಸಿಯಾಸಿಸ್‌ನಿಂದಾಗಿ ಚರ್ಮವು ಕಡಿಮೆಯಾಗುತ್ತದೆ.
ಕುದುರೆ
[ಬದಲಾಯಿಸಿ]ಪ್ಯಾರಾಫಿಲೇರಿಯಾ ಮಲ್ಟಿಪಿಲ್ಲೊಸಾದಿಂದಾಗಿ ಬೇಸಿಗೆಯಲ್ಲಿ ರಕ್ತಸಾವ್ರವು ಉಂಟಾಗುತ್ತದೆ. ಈ ರಕ್ತಸಾವ್ರವು ಕುದುರೆಗಳಲ್ಲಿ ಕಂಡುಬರುತ್ತದೆ.
ನಾಯಿ
[ಬದಲಾಯಿಸಿ]ಹಾರ್ಟ್ ಫಿಲೇರಿಯಾಸಿಸ್ ರೋಗವು ಅಂದರೆ, ಹೃದಯಕ್ಕೆ ಸಂಬಂಧಿಸಿದ ಆನೆಆಲು ರೋಗವು ಡಿರೋಫಿಲೇರಿಯಾ ಇಮಿಟಿಸ್ ನಿಂದ ಉಂಟಾಗುತ್ತದೆ .
ಉಲ್ಲೇಖಗಳು
[ಬದಲಾಯಿಸಿ]