ಆಡಮ್ ಜಂಪಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಡಮ್ ಜಂಪಾ, ಓರ್ವ ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ. ಆಸ್ಟ್ರೇಲಿಯಾದ ಬಲಗೈ ಲೆಗ್ ಬ್ರೇಕ್ ಬೌಲರ್ ಹಾಗೂ ಕೆಳ ಕ್ರಮಾಂಕದ ಬಲಗೈ ಬ್ಯಾಟ್ಸ್ಮನ್. ದೇಶೀಯ ಕ್ರಿಕೆಟ್ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಹಾಗೂ ನ್ಯೂ ಸೌತ್ ವೇಲ್ಸ್ ತಂಡಗಳಿಗೆ ಆಡುತ್ತಾರೆ. ೨೦೧೬ ಹಾಗೂ ೨೦೧೭ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರೈಸಿಂಗ್ ಪೂಣೆ ಸೂಪರ್ ಜೈಯಂತ್ಸ್ ತಂಡಕ್ಕೆ ಆಡಿದ್ದರು.[೧][೨][೩]

ಆರಂಭಿಕ ಜೀವನ[ಬದಲಾಯಿಸಿ]

ಜಂಪಾ ರವರು ಮಾರ್ಚ್ ೩೧, ೧೯೯೨ರಲ್ಲಿ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ನ ಶೆಲ್ಲಹಾರ್ಬೊರ್ನಲ್ಲಿ ಜನಿಸಿದರು. ಬಾಲ್ಯದಲ್ಲಿ ಜಂಪಾರವರು ಮಧ್ಯಮ ವೇಗದ ಬೌಲರ್ ಆಗಿದ್ದರು, ಅದರೆ ಆಸ್ಟ್ರೇಲಿಯಾದ ೧೪ರ ವಯ್ಯೋಮಿತಿ ತಂಡದಲ್ಲಿ ವೇಗದ ಬೌಲರ್‌‌‍ಗಳ ಮಿತಿ ಇದ್ದ ಕಾರಣ ಇವರು ಲೆಗ್ ಸ್ಪಿನ್ ಬೌಲಿಂಗ್ ಮಾಡಲು ಪ್ರಾರಂಭಿಸಿದರು.ಆಸ್ಟ್ರೇಲಿಯಾದ ಮಾಜಿ ಲೆಗ್ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ರವರನ್ನು ಸ್ಪೋರ್ತಿಯಗಿಸಿಕೊಂಡಿದ್ದರು. [೪]೨೦೦೯ರಲ್ಲಿ ಆಸ್ಟ್ರೇಲಿಯಾದ ೧೯ರ ವಯ್ಯೋಮಿತಿ ತಂಡದಲ್ಲಿ ಸ್ಥಾನವನ್ನು ಪಡೆದರು.[೫]

ವೃತ್ತಿ ಜೀವನ[ಬದಲಾಯಿಸಿ]

ಜಂಪಾ ರವರು ನವಂಬರ್ ೨೭, ೨೦೧೨ರಂದು ಕ್ಯಾನ್ಬೆರ್ರಾನಲ್ಲಿ ನ್ಯೂ ಸೌತ್ ವೇಲ್ಸ್ ಹಾಗು ಕ್ವೀನ್ಸ್‌‌‍ಲ್ಯಾಂಡ್ ನಡುವೆ ನಡೆದ ಪಂದ್ಯದ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌‌ಗೆ ಪಾದಾರ್ಪಣೆ ಮಾಡಿದರು.[೬]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಫೆಬ್ರವರಿ ೦೬, ೨೦೧೬ರಲ್ಲಿ ವೆಲ್ಲಿಂಗ್‌ಟನ್‌ಲ್ಲಿ ನ್ಯೂಜಿಲ್ಯಾಂಡ್ ವಿರುಧ್ಧ ನಡೆದ ಎರಡನೇ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೭] ಮಾರ್ಚ್ ೦೪, ೨೦೧೬ರಂದು ದರ್ಬನ್‌‍ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲನೇ ಟಿ-೨೦ ಪಂದ್ಯದಿಂದ ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್‌‌‌‌‌‌‌‌‌‌‌ಗೆ ಪಾದಾರ್ಪನೆ ಮಾಡಿದರು.[೮]

ಪಂದ್ಯಗಳು[ಬದಲಾಯಿಸಿ]

 • ಏಕದಿನ ಕ್ರಿಕೆಟ್ : ೪೮ ಪಂದ್ಯಗಳು[೯]
 • ಟಿ-೨೦ ಕ್ರಿಕೆಟ್ : ೨೨ ಪಂದ್ಯಗಳು

ವಿಕೇಟಗಳು[ಬದಲಾಯಿಸಿ]

 1. ಏಕದಿನ ಪಂದ್ಯಗಳಲ್ಲಿ : ೬೫
 2. ಟಿ-೨೦ ಪಂದ್ಯಗಳಲ್ಲಿ  : ೨೩

ಉಲ್ಲೇಖಗಳು[ಬದಲಾಯಿಸಿ]

 1. https://www.cricbuzz.com/profiles/8642/adam-zampa
 2. https://www.cricbuzz.com/live-cricket-scorecard/18180/rising-pune-supergiant-vs-mumbai-indians-final-indian-premier-league-2017
 3. http://www.espncricinfo.com/indian-premier-league-2016/content/squad/969891.html
 4. https://www.smh.com.au/sport/cricket/zampa-shines-through-thunders-gloom-as-future-spin-star-20130107-2cctc.html
 5. https://www.cricket.com.au/players/adam-zampa/3N_Nf5NCRUWGwS5iPGG2Ag
 6. https://www.espncricinfo.com/series/8043/scorecard/576098/new-south-wales-vs-queensland-17th-match-sheffield-shield-2012-13
 7. https://www.espncricinfo.com/series/8418/scorecard/914233/new-zealand-vs-australia-2nd-odi-australia-tour-of-new-zealand-2015-16
 8. https://www.espncricinfo.com/series/8468/scorecard/884347/south-africa-vs-australia-1st-t20i-australia-tour-of-south-africa-2015-16
 9. http://www.espncricinfo.com/australia/content/player/379504.html