ಆಟ್ಟಾವಾ
ಆಟ್ಟಾವಾ | |
---|---|
ನಗರ | |
City of Ottawa Ville d'Ottawa | |
![]() ಪಾರ್ಲಿಮೆಂಟ್ ಹಿಲ್ಸ್ಸ್ ನ ನೋಟ, the ರಾಷ್ಟ್ರೀಯ ಸಮರ ಸ್ಮರಣೆ in downtown Ottawa, the ಕೆನಡಾದ ರಾಷ್ಟ್ರೀಯ ಚಿತ್ರಶಾಲೆ, and the ರಿಡ್ಯೂ ಕಾಲುವೆ and Château Laurier. | |
Nickname(s): | |
Motto(s): "Advance-Ottawa-En Avant" Written in the two official languages. | |
![]() Location of the City of Ottawa in the Province of Ontario, Canada | |
ಪ್ರದೇಶ | ರಾಷ್ಟ್ರ ರಾಜಧಾನಿ ವಲಯ |
Established | 1826 as Bytown[೧] |
Incorporated | 1855 as City of Ottawa |
Amalgamated | January 1, 2001 |
ಸರ್ಕಾರ | |
• ಮೇಯರ್ | Jim Watson |
• ನಗರ ಸಭೆ | ಒಟ್ಟಾವ ನಗರ ಸಭೆ |
• ಸಂಸದರು | List of MPs |
• MPPs | List of MPPs |
ಕ್ಷೇತ್ರಫಲ | |
• ನಗರ | ೨,೭೭೮.೧೩ km೨ (೧,೦೭೨.೯ sq mi) |
• ನಾಗರಿಕ | ೫೧೨.೨೯ km೨ (೧೯೭.೮೦ sq mi) |
• Metro | ೫,೭೧೬.೦೦ km೨ (೨,೨೦೬.೯೬ sq mi) |
Elevation | ೭೦ m (೨೩೦ ft) |
ಜನಸಂಖ್ಯೆ (2011) | |
• ನಗರ | ೮೮೩,೩೯೧ (೪th) |
• ಸಾಂದ್ರತೆ | ೩೧೬.೬/km೨ (೮೨೦/sq mi) |
• Metro | ೧,೨೩೬,೩೨೪ (೪th) |
• Metro density | ೧೯೬.೬/km೨ (೫೦೯/sq mi) |
• Demonym[೨] | Ottawan |
ಸಮಯ ವಲಯ | ಯುಟಿಸಿ−5 (Eastern (EST)) |
• Summer (DST) | ಯುಟಿಸಿ-4 (EDT) |
Postal code span | K0A, K1A-K4C |
Area code(s) | 613, 343, 819 |
ಜಾಲತಾಣ | ottawa.ca |
ಆಟ್ಟಾವಾ, ಕೆನಡಾ ದೇಶದ ರಾಜಧಾನಿ. ಇದು ಪ್ರವಾಸೋದ್ಯಮ ಕೇಂದ್ರಗಳಲ್ಲೊಂದು, ಸಾಂಸ್ಕೃತಿಕ ರಾಜಧಾನಿ, ವಾಣಿಜ್ಯಕೇಂದ್ರ, ಆರ್ಥಿಕ ಚಟುವಟಿಕೆಗಳ ಆಗರವಾಗಿದೆ. ಆಧುನೀಕತೆಯ ಸೊಗಡು, ಪುರಾತನ ಚಾರಿತ್ರಿಕ ಸಂಗತಿಗಳ ಪ್ರಾಕೃತಿಕ ಸಂದರ್ಯಕ್ಕೆ ಮನೆಮಾತಾಗಿದೆ. 'ಆಟ್ಟಾವಾ' ಎಂಬ ಹೆಸರಿನ ನದಿಯ ದಂಡೆಯಮೇಲೆ ವಿರಾಜಮಾನವಾಗಿರುವ ಈ ಭವ್ಯನಗರಕ್ಕೆ ನಗರಕ್ಕೆ ಆಟ್ಟಾವಾನದಿಯ ನಾಮಕರಣ ಮಾಡಲಾಗಿದೆ. ಮೊದಲನೆ ವಿಶ್ವಯುದ್ಧದ ಸಮಯದಲ್ಲಿ ಮುಂಜಾಗರೂಕತೆಯ ಅಭಾವದಿಂದಾಗಿ ಆಟ್ಟಾವಾ ಪಟ್ಟಣದ ಅಪೂರ್ವ ವಾಸ್ತುಶಿಲ್ಪಗಳು ನಿರ್ಣಾಮವಾದವು. ಅವುಗಳಲ್ಲಿ ಕೆಲವು ಅನುಪಮ ಕೃತಿಗಳು ಮರದ ಕೆತ್ತನೆಯವು. ಸನ್ ೧೯೧೬, ರ,ಫೆಬ್ರವರಿ, ೩ ರಂದು ಪಾರ್ಲಿಮೆಂಟ್ ಭವನಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅದೂ ನಾಶವಾಯಿತು. ರಾಷ್ಟ್ರದ ಪರಂಪರೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಕಾರ್ಯಗಳು ಜರುಗಿದ್ದು, ಪಾರ್ಲಿಮೆಂಟ್ ಭವನದ ಪುನರ್ಸ್ಥಾಪಿಸಲಾಯಿತು.
ಪ್ರವಾಸೋದ್ಯಮ[ಬದಲಾಯಿಸಿ]
ರಿಡ್ಯೂ ಕೆನಾಲ್, ಯುನೆಸ್ಕೋ ವಿಶ್ವಪರಂಪರೆಯ ಪಟ್ಟಿಯಲ್ಲಿ ದಾಖಲಾಗಿರುವ ಸುಪ್ರಸಿದ್ಧ ತಾಣವೆಂದು ಹೆಸರಾಗಿದೆ. ಚಳಿಗಾಲದ ಸಮಯದಲ್ಲಿ ಈ ಭಾಗ ಹಿಮದಿಂದ ಮುಚ್ಚಿಹೋಗಿ ಅದರ ಮೇಲ್ಭಾಗದಮೇಲೆ ಸ್ಕೇಟಿಂಗ್ ಆಟವನ್ನು ಆಯೋಜಿಸಲಾಗುತ್ತದೆ. ಮನಮೋಹಕ, ಪಾರ್ಲಿಮೆಂಟ್ ಭವನ ಪ್ರವಾಸಿಗಳ ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತದೆ. ಉದ್ಯಾನವನಗಳು, ಗ್ಯಾಟಿನ್ಯೂ ಉದ್ಯಾನವನ, ವಸ್ತುಸಂಗ್ರಹಾಲಯಗಳು, ಸೈಕ್ಲಿಂ ಮಾಡುವವರಿಗೆ ಸ್ವರ್ಗ. ವಿಶಿಷ್ಟ ವಸ್ತುಗಳ ಶಾಪಿಂಗ್ ಗೆ ಹೇಳಿಮಾಡಿಸಿದ ತಾಣ, ಬೈವಾರ್ಡ್ ಮಾಲ್ ಇಲ್ಲಿನ ಮಳಿಗೆಗಳು ಬಾಟಿಕ್ ಮತ್ತು ಹೇಣ್ಣುಮಕ್ಕಳ ಸಾಮಾನುಗಳಿಗೆ ಅತ್ಯಂತ ಹೆಸರಾದವು. ಕೆಫೆ, ರೆಸ್ಟಾರೆಂಟ್ ಗಳು ನೂರಾರು ಸಂಖ್ಯೆಯಲ್ಲಿದ್ದು ಎಲ್ಲಾವರ್ಗದ ಜನರ ಆದ್ಯತೆಗಳನ್ನು ಪೂರೈಸಲು ಹಗಲು ರಾತ್ರಿ ಶ್ರಮಿಸುತ್ತಿವೆ. ರಾತ್ರಿಯ ಕಣ್ಣುಕೋರೈಸುವ ನಿಯಾನ್ ದೀಪಗಳ ಝಗಝಗಿಸುವ ಬೆಳಕಿನಲ್ಲಿ ಯುವಜನ ತಮ್ಮ ಮೋಜುಮಸ್ತಿಯಾಟದಲ್ಲಿ ಮೈಮರೆಯುತ್ತಾರೆ.
ಇಂದಿನ ಆಟ್ಟಾವಾನಗರ[ಬದಲಾಯಿಸಿ]
೧೯೭೦ ರ ವರೆಗೆ ಅಟ್ಟಾವಾ ನಗರದ ಚಟುವಟಿಕೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಣಿಸುತ್ತಿರಲಿಲ್ಲ. ಆಗ ಅದು ಆಕರ್ಷಕ ಪ್ರವಾಸೋದ್ಯಮವನ್ನು ಹೊಂದಿರಲಿಲ್ಲ. ಆದರೆ ಈಗಿನ ಸರ್ಕಾರ ಒಳ್ಳೆಯ ಆಡಳಿತ,ಹಾಗೂ ಪ್ರವಾಸೋದ್ಯಮಕ್ಕೆ ನಿರಂತರವಾಗಿ ಆದ್ಯತೆಕೊಟ್ಟು ಅದರ ಉಗಮಕ್ಕೆ ಬಹಳವಾಗಿ ಶ್ರಮಿಸುತ್ತಿದೆ. ಇಂದಿನ ಆಟ್ಟಾವಾನಗರ, ಬಹುಮುಖ ವ್ಯಕ್ತಿತ್ವದ ಹಲವಾರು ಆಕರ್ಷಕ, ಉದ್ಯಮಗಳ ತಾಣವಾಗಿ ಸಂಭ್ರಮಿಸುತ್ತಿದೆ.
ಉಲ್ಲೇಖಗಳು[ಬದಲಾಯಿಸಿ]
- Pages using duplicate arguments in template calls
- Pages with non-numeric formatnum arguments
- Pages using infobox settlement with possible motto list
- Pages using infobox settlement with possible area code list
- Pages using infobox settlement with unknown parameters
- Pages using infobox settlement with missing country
- ಕೆನಡಾದ ಪ್ರಮುಖ ನಗರಗಳು