ಆಜಿಬಾಯಿ ಬನಾರಸೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಜಿಬಾಯಿ ಬನಾರಸೆ
ಜನನ
ರಾಧಾಬಾಯಿ ದಾಹಕೆ

೧೯೧೦
ಚೌಂಡಿ, ಯವತ್ಮಾಲ್, ಮಹಾರಾಷ್ಟ್ರ
ಮರಣ೩ ಡಿಸೆಂಬರ್ ೧೯೮೩
ಲಂಡನ್
ಇತರೆ ಹೆಸರುಗಳುಲಂಡನ್‌ಚಾ ಆಜಿಬಾಯಿ, ಆಜಿಬಾಯಿ ಬನಾರಸೆ
ಉದ್ಯೋಗಸಮುದಾಯದ ನಾಯಕಿ, ಉದ್ಯಮಿ

  ಆಜಿಬಾಯಿ ಬನಾರಸೆ (೧೯೧೦ - ೩ ಡಿಸೆಂಬರ್ ೧೯೮೩), ಲಂಡನ್‌ನಲ್ಲಿ ಭಾರತೀಯ ಸಮುದಾಯದ ನಾಯಕರಾಗಿದ್ದರು. ( ಮರಾಠಿ ಸಮುದಾಯದಲ್ಲಿ ಅವಳನ್ನು "ಲಂಡನ್‌ಚಾ ಆಜಿಬಾಯಿ" ಅಥವಾ "ಲಂಡನ್‌ನ ಅಜ್ಜಿ" ಎಂದೂ ಕರೆಯುತ್ತಾರೆ).

ಆರಂಭಿಕ ಜೀವನ[ಬದಲಾಯಿಸಿ]

ರಾಧಾಬಾಯಿ ದಾಹಕೆ ( ಆಜಿಬಾಯಿ ಬನಾರಸೆ) ಅವರು ಮಹಾರಾಷ್ಟ್ರದ ಯವತ್ಮಾಲ್‌ನ ಚೌಂಡಿಯಲ್ಲಿ ಜನಿಸಿದರು. ಅವರು ಚಿಕ್ಕವಯಸ್ಸಿನಲ್ಲಿ ತುಲ್ಶಿಹರ್ ದೇಹೇಂಕರ್ ಅವರನ್ನು ವಿವಾಹವಾಗಿ, ಐದು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಅವರು ೩೩ನೇ ವಯಸ್ಸಿನಲ್ಲಿ ವಿಧವೆಯಾದರು. ಅವರು ೧೯೪೫ರಲ್ಲಿ ಸೀತಾರಾಮಪಂತ್ ಬನಾರಸ್ ಅವರನ್ನು ಮರುವಿವಾಹವಾದರು. [೧]

ಲಂಡನ್‌ನಲ್ಲಿ[ಬದಲಾಯಿಸಿ]

ಬನಾರಸೆ ಅವರು ತನ್ನ ಎರಡನೇ ಪತಿಯೊಂದಿಗೆ ಲಂಡನ್‌ಗೆ ತೆರಳಿ ಅಲ್ಲಿ ಅವರ ಪುತ್ರರ ವಸತಿಗೃಹಗಳಲ್ಲಿ ಕೆಲಸ ಮಾಡಿದರು. ೧೯೫೦ರಲ್ಲಿ ಮತ್ತೆ ವಿಧವೆಯಾದರು. ೧೯೫೩ರರಲ್ಲಿ, ತನ್ನ ಪತಿಯ ಕುಟುಂಬದಿಂದ ತಿರಸ್ಕರಿಸಲ್ಪಟ್ಟ ಬನಾರಸೆ ಸಾಲ ಮಾಡಿ ಲಂಡನ್‌ನ ಹೂಪ್ ಲೇನ್‌ನಲ್ಲಿ ಮನೆಯನ್ನು ಖರೀದಿಸಿದರು ಮತ್ತು ಭಾರತೀಯ ವಿದ್ಯಾರ್ಥಿಗಳಿಗೆ ಕೊಠಡಿಗಳನ್ನು ಬಾಡಿಗೆಗೆ ನೀಡಿದರು. ಅವರು ಅಡುಗೆ ವ್ಯಾಪಾರವನ್ನೂ ಮಾಡುತ್ತಿದ್ದರು. ಆಕೆಯ ಭಾರತೀಯ ಅಡುಗೆಯನ್ನು ಯುವ ಭಾರತೀಯರು ಮೆಚ್ಚಿದರು. [೨] ಕಾಲಾನಂತರದಲ್ಲಿ, ಅವರು ಹನ್ನೆರಡು ಮನೆಗಳು ಮತ್ತು ಕಾರುಗಳ ಸಮೂಹವನ್ನು ಹೊಂದಿದರು ಮತ್ತು ೧೯೬೫ ರ ಹೊತ್ತಿಗೆ ಅವರು ಗೋಲ್ಡರ್ಸ್ ಗ್ರೀನ್‌ನಲ್ಲಿರುವ ತಮ್ಮ ಮನೆಯಲ್ಲಿ ಹಿಂದೂ ದೇವಾಲಯವನ್ನು ತೆರೆದರು. [೩] ಅವರು ತಮ್ಮ ಹುಟ್ಟೂರಾದ ಚೌಂಡಿಯಲ್ಲಿ ಒಂದು ಬಾವಿ ಮತ್ತು ದೇವಸ್ಥಾನಕ್ಕೆ ಧನಸಹಾಯ ಮಾಡಿದರು. [೧]

ಲಂಡನ್‌ನಲ್ಲಿ ಅವರು ಮಹಾರಾಷ್ಟ್ರ ಮಂಡಲ ಲಂಡನ್‌ನ ಅಧ್ಯಕ್ಷರಾಗಿದ್ದರು. [೨] [೪] ಅವರ ಮೊಮ್ಮಗಳು, ಶ್ಯಾಮಲ್ ಪಿತಲೆ, ೨೦೧೯ ರಲ್ಲಿ ಮಹಾರಾಷ್ಟ್ರ ಮಂಡಲದ ಅಧ್ಯಕ್ಷರಾಗಿದ್ದರು [೫]

ವೈಯಕ್ತಿಕ ಜೀವನ[ಬದಲಾಯಿಸಿ]

ಬನಾರಸೆ ಅವರು ೧೯೮೩ ರರಲ್ಲಿ ( ತಮ್ಮ ೭೩ ನೇ ವಯಸ್ಸಿನಲ್ಲಿ, ಲಂಡನ್‌ನಲ್ಲಿ) ನಿಧನರಾದರು. [೬] ಲಂಡನ್‌ನ ಮೇಯರ್ ಆಕೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ೧೯೯೮ರಲ್ಲಿ ಸರೋಜಿನಿ ವೈದ್ಯ ಅವರ, ಕಹಾನಿ ಲಂಡನ್‌ಚಾ ಆಜಿಬೈಂಚಿ, ಒಂದು ಜೀವನಚರಿತ್ರೆ, [೧] ಮರಾಠಿಯಲ್ಲಿ ಪ್ರಕಟವಾಯಿತು. ಜೀವನಚರಿತ್ರೆಯನ್ನು ರಾಜೀವ್ ಜೋಶಿಯವರು ಲಂಡನ್‌ಚಾರ್ಯ ಆಜಿಬಾಯಿ ಎಂಬ ನಾಟಕಕ್ಕೆ ಅಳವಡಿಸಿಕೊಂಡರು. [೭] ಹಿರಿಯ ನಟಿ ಉಷಾ ನಾಡ್‌ಕರ್ಣಿ ಬನಾರಸೆ ಪಾತ್ರವನ್ನು ನಿರ್ವಹಿಸಿದರು. [೮]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ Vaidya, Sarojini, 1933- (1998). Kahāṇī Laṇḍanacyā Ājībāīñcī. Puṇe: Rājahãsa Prakāśana. ISBN 81-7434-075-0. OCLC 277137211.{{cite book}}: CS1 maint: multiple names: authors list (link)
  2. ೨.೦ ೨.೧ "Indian bonding in London". The Times of India (in ಇಂಗ್ಲಿಷ್). 22 December 2000. Retrieved 2020-10-25.
  3. Geaves, Ron (2019-12-12). Prem Rawat and Counterculture: Glastonbury and New Spiritualities (in ಇಂಗ್ಲಿಷ್). Bloomsbury Publishing. p. 50. ISBN 978-1-350-09088-0.
  4. "Success At The Temple". Catholic Herald Archives. 22 September 1972. Retrieved 2020-10-25.[ಶಾಶ್ವತವಾಗಿ ಮಡಿದ ಕೊಂಡಿ]
  5. "Executive Committee 2019". Maharashtra Mandal London (in ಬ್ರಿಟಿಷ್ ಇಂಗ್ಲಿಷ್). Retrieved 2020-10-25.
  6. "Deaths: Banarse". The Guardian. 1983-12-08. p. 26. Retrieved 2020-10-25 – via Newspapers.com.
  7. Vinjamuri, Ragasudha (29 September 2015). "The Rich Marathi Legacy in the UK". Asian Voice (in ಬ್ರಿಟಿಷ್ ಇಂಗ್ಲಿಷ್). Retrieved 2020-10-25.
  8. "Popular actress Usha Nadkarni in and as 'London Chya Aajibai'". Marathi Movie World (MMW) (in ಅಮೆರಿಕನ್ ಇಂಗ್ಲಿಷ್). 2015-10-28. Retrieved 2020-10-25.

ಬಾಹ್ಯ ಕೊಂಡಿಗಳು[ಬದಲಾಯಿಸಿ]

  • "ಲಂಡನ್‌ನ ಅಜ್ಜಿ" (2015), ಆಜಿಬಾಯಿ ಬನಾರಸೆ ಕುರಿತ ವಿದ್ಯಾರ್ಥಿ ಚಲನಚಿತ್ರ, ಇಂಗ್ಲಿಷ್‌ನಲ್ಲಿ, ಯೂಟ್ಯೂಬ್‌ನಲ್ಲಿ.