ಆಗರ್ ಪರಿಣಾಮ

ಆಗರ್ ಪರಿಣಾಮ ಅಧಿಕ ಕ್ಷೋಭೆಗೊಂಡ ಪರಮಾಣುವಿನಿಂದ ಅದನ್ನು ಪರಿಭ್ರಮಿಸುತ್ತಿರುವ ಎಲೆಕ್ಟ್ರಾನ್ ಒಂದರ ವಿಸರ್ಜನೆ (ಆಗರ್ ಇಫೆಕ್ಟ್). ಧಾತುವಿನ ಪರಮಾಣು ಶಕ್ತಿಯುತ ಎಕ್ಸ್-ಕಿರಣ ಅಥವಾ ಗಾಮ ಕಿರಣಗಳ ಭಾಗಗಳನ್ನು ಹೀರಿಕೊಂಡಾಗ ಅದು ಅತ್ಯಂತ ಒಳಗಿನ ಕಕ್ಷೆಯಲ್ಲಿರುವ ಎಲೆಕ್ಟ್ರಾನ್ ಒಂದನ್ನು ಹೊರಹಾಕುತ್ತದೆ. ಆಗ ಸಹಜವಾಗಿ ಉಂಟಾಗುವ ಎಲೆಕ್ಟ್ರಾನ್‍ಗಳ ಮಾರ್ಪಾಡಿನಿಂದ ಸಾಮಾನ್ಯವಾಗಿ ವಿಶಿಷ್ಟ ಎಕ್ಸ್ ಕಿರಣಗಳು ಉತ್ಪತ್ತಿಯಾಗುವ ಬದಲು ಎರಡು ಅಥವಾ ಅದಕ್ಕಿಂತ ಹೆಚ್ಚಿನ ಎಲೆಕ್ಟ್ರಾನ್‍ಗಳು ವಿಸರ್ಜನೆ ಹೊಂದುತ್ತವೆ. ಇದನ್ನು ಮೊದಲಿಗೆ ಸಿ.ಟಿ.ಆರ್. ವಿಲ್ಸನ್ ಅವಲೋಕಿಸಿದ(1923). ಆಂತರಿಕ ಎಲೆಕ್ಟ್ರಾನ್‍ನ ಉಚ್ಛಾಟನೆಯಿಂದ ಅಯಾನೀಕೃತವಾದ ಪರಮಾಣುವಿನ ಒಳ ಚಿಪ್ಪಿನಲ್ಲಿ ತಲೆದೋರುವ ತೆರಪನ್ನು ಭರ್ತಿಮಾಡಲು ಅಲ್ಲಿಗೆ ಒಂದು ಬಾಹ್ಯ ಎಲೆಕ್ಟ್ರಾನ್ ಸಂಕ್ರಮಿಸುತ್ತವೆ. ಆಗ ಪರಮಾಣುವಿನಿಂದ ಒಂದು ಎಕ್ಸ್-ಕಿರಣ ಫೋಟಾನ್ ಉತ್ಸರ್ಜನೆಗೊಂಡು ಇಲ್ಲವೇ ಒಂದು ಬಾಹ್ಯ ಎಲೆಕ್ಟ್ರಾನ್ ಉಚ್ಛಾಟನೆಗೊಂಡು ಶಕ್ತಿ ನಷ್ಟ ಸಂಭವಿಸುತ್ತದೆ. ಇದೇ ಆಗರ್ ಪರಿಣಾಮ.[೧]
ಪರಿಶೋಧನೆ[ಬದಲಾಯಿಸಿ]
ಇದನ್ನು ಮೊದಲಬಾರಿಗೆ 1923ರಲ್ಲಿ ಪಿಯರೆ ಆಗರ್ ಎಂಬುವರು ಶೋಧಿಸುವುದರಿಂದ ಇದಕ್ಕೆ ಈ ಹೆಸರು[೨] . ಆಗರ್ ಪರಿವರ್ತನೆಗಳಲ್ಲಿ ಬರುವ ಶಕ್ತಿ ಮತ್ತು ತೀಕ್ಷ್ಣತೆ ಜ್ಞಾನ ನ್ಯೂಕ್ಲಿಯರ್ ಕ್ರಿಯೆಗಳ ಮೇಲೆ ಹೆಚ್ಚು ಬೆಳಕನ್ನು ಬೀರಬಲ್ಲದು.
ಉಲ್ಲೇಖಗಳು[ಬದಲಾಯಿಸಿ]
- ↑ GoldBookRef|title=Auger effect|url=http://goldbook.iupac.org/A00520.html
- ↑ P. Auger: Sur les rayons β secondaires produits dans un gaz par des rayons X, C.R.A.S. 177 (1923) 169-171.