ಆಖ್ಯಾಯಿಕೆ
ಆಖ್ಯಾಯಿಕೆಯು ಒಬ್ಬ ನಿರ್ದಿಷ್ಟ ವ್ಯಕ್ತಿ ಅಥವಾ ಘಟನೆಯ ಸಂಕ್ಷಿಪ್ತವಾದ ಮತ್ತು ಮಹತ್ವದ ವರದಿ.[೧] ಸಾಂದರ್ಭಿಕವಾಗಿ ಹಾಸ್ಯಮಯವಿರುವ ಆಖ್ಯಾಯಿಕೆಗಳು ತಮಾಷೆಗಳಿಂದ ಭಿನ್ನವಾಗಿವೆ ಏಕೆಂದರೆ ಅವುಗಳ ಪ್ರಧಾನ ಉದ್ದೇಶ ಕೇವಲ ನಗುವನ್ನು ಪ್ರಚೋದಿಸುವುದಲ್ಲ, ಜೊತೆಗೆ ಸ್ವತಃ ಸಂಕ್ಷಿಪ್ತ ಕಥೆಗಿಂತ ಹೆಚ್ಚು ಸಾಮಾನ್ಯವಾದ ಸತ್ಯವನ್ನು ಬಹಿರಂಗಗೊಳಿಸುವುದಾಗಿದೆ, ಉದಾಹರಣೆಗೆ ಒಂದು ನಿರ್ದಿಷ್ಟ ವೈಚಿತ್ರ್ಯ ಅಥವಾ ಲಕ್ಷಣವನ್ನು ವಿವರಿಸುವ ಮೂಲಕ ಒಬ್ಬ ವ್ಯಕ್ತಿಯ ಲಕ್ಷಣಗಳನ್ನು ನಿರೂಪಿಸುವುದು, ಒಂದು ಸಣ್ಣ ಕಥೆಯ ವಾಸ್ತವಿಕ ವಿವರಗಳ ಮೂಲಕ ಒಬ್ಬ ವ್ಯಕ್ತಿ, ಸ್ಥಳ, ಅಥವಾ ವಸ್ತುವಿನ ಬಗ್ಗೆ ಒಂದು ಅಮೂರ್ತ ವಿಚಾರವನ್ನು ಶ್ರುತಪಡಿಸುವುದು. ಆಖ್ಯಾಯಿಕೆಯು ವಿಶಿಷ್ಟ ಅಂಶವಿರುವ ಕಥೆಯಾಗಿದೆ.
ಆಖ್ಯಾಯಿಕೆಗಳು ವಾಸ್ತವಿಕ ಅಥವಾ ಕಾಲ್ಪನಿಕವಿರಬಹುದು; ಆಖ್ಯಾಯಿಕೆ ರೂಪದ ವಿಷಯಾಂತರವು ಸಾಹಿತ್ಯಿಕ ಕೃತಿಗಳ ಸಾಮಾನ್ಯ ಲಕ್ಷಣವಾಗಿದೆ, ಮತ್ತು ಮೌಖಿಕ ಆಖ್ಯಾಯಿಕೆಗಳು ಕೂಡ ಸಾಮಾನ್ಯವಾಗಿ ಶ್ರೋತೃವನ್ನು ಮನೊರಂಜಿಸಲು ವಿನ್ಯಾಸಗೊಳಿಸಲಾದ ಸೂಕ್ಷ್ಮ ಉತ್ಪ್ರೇಕ್ಷೆ ಮತ್ತು ನಾಟಕೀಯ ಆಕಾರವನ್ನು ಒಳಗೊಳ್ಳುತ್ತವೆ. ಆದರೆ, ಒಂದು ಆಖ್ಯಾಯಿಕೆಯನ್ನು ಯಾವಾಗಲೂ ನೈಜ ಘಟನೆಯ ವರ್ಣನೆಯಾಗಿ ಪ್ರದರ್ಶಿಸಲ್ಪಡುತ್ತದೆ ಮತ್ತು ಸಾಮಾನ್ಯವಾಗಿ ಗುರುತಿಸಬಲ್ಲ ಸ್ಥಳದಲ್ಲಿ ನೈಜ ವ್ಯಕ್ತಿಗಳನ್ನು ಒಳಗೊಳ್ಳುತ್ತದೆ. ಹಾಯ್ನ್‌ನ ಶಬ್ದಗಳಲ್ಲಿ, ಅವು ವಿಶೇಷ ವಾಸ್ತವಿಕತೆ ಮತ್ತು ಸಾಧಿಸಲಾದ ಐತಿಹಾಸಿಕ ಆಯಾಮವನ್ನು ಪ್ರದರ್ಶಿಸುತ್ತವೆ.
ಉಲ್ಲೇಖಗಳು
[ಬದಲಾಯಿಸಿ]