ಆಕ್ರೋಷ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಕ್ರೋಷ್ ೨೦೧೦ರ ಚಲನಚಿತ್ರ
Theatrical release poster
ನಿರ್ದೇಶನಪ್ರಿಯದರ್ಶನ್
ನಿರ್ಮಾಪಕಕುಮಾರ್ ಮಂಗತ್ ಪಾಠಕ್
ಲೇಖಕರೋಬಿನ್ ಭಟ್
ಆದಿತ್ಯ ಧರ್
ಆಕಾಶ್ ಖುರಾನ
ಪಾತ್ರವರ್ಗಅಜಯ್ ದೇವಗನ್
ಅಕ್ಷಯ್ ಖನ್ನಾ
ಬಿಪಾಷಾ ಬಸು
ಪರೇಶ್ ರಾವಲ್
ರೀಮಾ ಸೇನ್
ಸಂಗೀತSongs:
ಪ್ರೀತಂ
Background Score:
ಔಸೆಪಚ್ಚನ್
ಛಾಯಾಗ್ರಹಣತಿರ್ರು
ಸಂಕಲನಅರುಣ್ ಕುಮಾರ್ ಅರವಿಂದ್
ಸ್ಟುಡಿಯೋಬಿಗ್ ಸ್ಕ್ರೀನ್ ಎಂಟರ್ ಟೈನ್ಮೆಂಟ್
ಝೀ ಮೋಷನ್ ಪಿಕ್ಚರ್ಸ್
ವಿತರಕರುಝೀ ಮೋಷನ್ ಪಿಕ್ಚರ್ಸ್ (ಭಾರತದಲ್ಲಿ)
ಎರೋಸ್ ಇಂಟರ್ನ್ಯಾಷನಲ್ (ವಿದೇಶಗಳಲ್ಲಿ)
ಬಿಡುಗಡೆಯಾಗಿದ್ದು
  • 15 ಅಕ್ಟೋಬರ್ 2010 (2010-10-15)
ಅವಧಿ146 minutes[೧]
ದೇಶಭಾರತ
ಭಾಷೆಹಿಂದಿ
ಬಂಡವಾಳ380 million[೨]
ಬಾಕ್ಸ್ ಆಫೀಸ್194 million[೩]

ಆಕ್ರೋಷ್ ೨೦೧೦ರಲ್ಲಿ ತೆರೆಕಂಡ ಹಿಂದಿ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದೆ. ಇದನ್ನು ಪ್ರಿಯದರ್ಶನ್ ನಿರ್ದೇಶಿಸಿದ್ದಾರೆ ಮತ್ತು ಬಿಗ್ ಸ್ಕ್ರೀನ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕುಮಾರ್ ಮಂಗತ್ ಪಾಠಕ್ ನಿರ್ಮಿಸಿದ್ದಾರೆ.[೪][೫][೬] ಇದರಲ್ಲಿ ಅಜಯ್ ದೇವಗನ್, ಅಕ್ಷಯ್ ಖನ್ನಾ ಮತ್ತು ಬಿಪಾಶಾ ಬಸು ನಟಿಸಿದ್ದಾರೆ . ಪರೇಶ್ ರಾವಲ್ , ರೀಮಾ ಸೇನ್ ಮತ್ತು ಸರ್ಫರಾಜ್ ಖಾನ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಇರ್ಷಾದ್ ಕಾಮಿಲ್ ಸಾಹಿತ್ಯದೊಂದಿಗೆ ಪ್ರೀತಮ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರಕ್ಕೆ ತಿರು ಅವರ ಛಾಯಾಗ್ರಹಣ, ಸಾಬು ಸಿರಿಲ್ ಅವರ ನಿರ್ಮಾಣ ವಿನ್ಯಾಸ ಮತ್ತು ಅರುಣ್ ಕುಮಾರ್ ಅವರ ಸಂಕಲನವಿದೆ. ತ್ಯಾಗ್ ರಾಜನ್ ಮತ್ತು ಆರ್. ಪಿ. ಯಾದವ್ ಚಿತ್ರದ ಸಾಹಸ ದೃಶ್ಯಗಳನ್ನು ವ್ಯವಸ್ಥೆಗೊಳಿಸಿ ನೃತ್ಯ ಸಂಯೋಜನೆ ಮಾಡಿದ್ದಾರೆ .ಈ ಚಲನಚಿತ್ರವು ಭಾರತದಲ್ಲಿ ನಡೆದ ಮರ್ಯಾದಾ ಹತ್ಯೆ ಕೊಲೆಪ್ರಕರಣಗಳ ಸುದ್ದಿಗಳನ್ನು ಆಧರಿಸಿತ್ತು. ಇದನ್ನು ೧೯೯೯೮ರ ಅಮೇರಿಕನ್ ಚಲನಚಿತ್ರ ಮಿಸ್ಸಿಸ್ಸಿಪ್ಪಿ ಬರ್ನಿಂಗ್ನ ರಿಮೇಕ್ ಎಂದೂ ವಿವರಿಸಲಾಗಿದೆ.[೭][೮][೯]

ಕಥಾವಸ್ತು[ಬದಲಾಯಿಸಿ]

ದೆಹಲಿಯ ಮೂವರು ವೈದ್ಯಕೀಯ ಸ್ನೇಹಿತರು ಸಣ್ಣ ಹಳ್ಳಿಯಾದ ಝಂಜರ್ನಲ್ಲಿ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿಯೊಂದಿಗೆ ಚಲನಚಿತ್ರ ಪ್ರಾರಂಭವಾಗುತ್ತದೆ. ಎರಡು ತಿಂಗಳು ಕಳೆದರೂ ಅವರ ಕಣ್ಮರೆಯ ಬಗ್ಗೆ ಯಾವುದೇ ಸುಳಿವು ಸಿಗುವುದಿಲ್ಲ . ಮಾಧ್ಯಮಗಳು ಮತ್ತು ವಿದ್ಯಾರ್ಥಿಗಳ ಚಳುವಳಿಯು ಅಧಿಕಾರಿಗಳಿಂದ ಈ ಪ್ರಕ್ರಣದ ಬಗ್ಗೆ ಕ್ರಮಕ್ಕೆ ಒತ್ತಾಯಿಸುತ್ತದೆ. ಸರ್ಕಾರವು ಪ್ರಕರಣವನ್ನು ಪರಿಹರಿಸಲು ಸಿಬಿಐ ಅಧಿಕಾರಿಗಳಾದ ಸಿದ್ಧಾಂತ್ ಚತುರ್ವೇದಿ ಮತ್ತು ಪ್ರತಾಪ್ ಕುಮಾರ್ ಅವರೊಂದಿಗೆ ಕೇಂದ್ರೀಯ ತನಿಖಾ ದಳದ ತನಿಖೆಗೆ ಆದೇಶಿಸುತ್ತದೆ. ಸ್ಥಳೀಯ ಪೊಲೀಸರು ಮತ್ತು ಇತರ ಅಧಿಕಾರಿಗಳು ಗೃಹ ಸಚಿವರ ಬೆಂಬಲವಿರುವ ಮತ್ತು ಅಕ್ರಮ ಚಟುವಟಿಕೆಗಳಿಗೆ ಕಾರಣವಾಗಿರುವ ಶೂಲ್ ಸೇನೆಯ ಭಾಗವಾಗಿರುವುದರಿಂದ ಪ್ರಕರಣವನ್ನು ಪರಿಹರಿಸಲು ಅವರಿಗೆ ಕಷ್ಟವಾಗುತ್ತದೆ. ಸಿದ್ಧಾಂತ್ ಮತ್ತು ಪ್ರತಾಪ್ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ನಿರ್ದಯ ಪೊಲೀಸ್ ಅಧಿಕಾರಿಯಾದ ಪೊಲೀಸ್ ವರಿಷ್ಠಾಧಿಕಾರಿಯಾದ ಅಜಾತಶತ್ರು ಸಿಂಗ್ ಐಪಿಎಸ್ ಅವರನ್ನು ಎದುರಿಸುತ್ತಾರೆ. ಅಷ್ಟೇ ಅಲ್ಲ, ಸ್ಥಳೀಯರು ಸಹ ತನಿಖೆಯನ್ನು ಬೆಂಬಲಿಸುವುದಿಲ್ಲ.

ಗ್ರಾಮದ ಮುಖ್ಯಸ್ಥನ ಮಗಳು ಮತ್ತು ಅತ್ಯಂತ ಶ್ರೀಮಂತಳಾದ ರೋಶ್ನಿ ಮತ್ತು ಅಜಾತಶತ್ರು ಅವರ ಪತ್ನಿ ಮತ್ತು ಪ್ರತಾಪ್ ಅವರ ಮಾಜಿ ಪ್ರೇಮಿ ಗೀತಾ ಅವರ ಸಹಾಯದಿಂದ ತನಿಖೆಯು ಮುಂದುವರಿಯುತ್ತದೆ.

ಕಾಣೆಯಾದ ಮೂವರು ಸ್ನೇಹಿತರ ಹಿಂದಿನ ಸತ್ಯವನ್ನು ಗೀತಾ ಬಹಿರಂಗಪಡಿಸುತ್ತಾಳೆ. ಆಕೆ ತನ್ನ ಪತಿಯ ಸಹಾಯದಿಂದ ಸ್ಥಳೀಯ ರಾಜಕಾರಣಿಯಿಂದ ಈ ಹುಡುಗರ ಹತ್ಯೆಗೊಳಗಾಗುತ್ತಿರುವಾಗ ಸಾಕ್ಷಿಯಾಗಿರುತ್ತಾಳೆ.

ಈ ತನಿಖೆಯು ಅಜಾತಶತ್ರು ಮತ್ತು ಅವರ ಸಹೋದ್ಯೋಗಿಗಳು ಸೃಷ್ಟಿಸಿದ ಅನೇಕ ಬಲೆಗಳು ಮತ್ತು ರೋಮಾಂಚನಗಳಿಂದ ತುಂಬಿದೆ. ಅವರು ಸಿಬಿಐ ಹೆಸರನ್ನು ಹಲವು ರೀತಿಯಲ್ಲಿ ನಾಶಪಡಿಸಲು ಪ್ರಯತ್ನಿಸುತ್ತಾರೆ.


ಆದರೆ ಸಿಬಿಐ ಅಧಿಕಾರಿಗಳಾದ ಪ್ರತಾಪ್ ಮತ್ತು ಸಿದ್ದಾಂತ್ ಜೋಡಿ ಅಪರಾಧಿಗಳಲ್ಲಿ ಒಬ್ಬನನ್ನು ಶೂಲ್ ಸೇನೆಯು ಆತನು ಗೂಢಾಚಾರಿ ಎಂದು ಭಾವಿಸಿ ಅವನನ್ನು ಕೊಲ್ಲಲು ಪ್ರಯತ್ನಿಸುತ್ತಿದೆ ಎಂದು ನಂಬುವಂತೆ ಮಾಡುತ್ತದೆ. ಮತ್ತು ಆತ ತಮ್ಮ ಪ್ರಕರಣಕ್ಕೆ ಸರ್ಕಾರಿ ಸಾಕ್ಷಿಯಾಗುವುದು ಉತ್ತಮ ಎಂದು ನಂಬುವಂತೆ ಮಾಡುತ್ತದೆ. ಈತ ಬೆದರಿಕೆ ಹಾಕಿದ ಅಪರಾಧಿ ದೇಹಗಳನ್ನು ಹೂಳುವ ತಪ್ಪಿತಸ್ಥನಾಗಿದ್ದನು. ತನ್ನ ಪತ್ನಿ ಗೀತಾ ಸಿಬಿಐಗೆ ಸಹಾಯ ಮಾಡುತ್ತಿರುವ ಬಗ್ಗೆ ಅಜಾತಶತ್ರು ತಿಳಿದಾಗ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಅವನು ಗೀತಾಳನ್ನು ಮುಚ್ಚಿದ ಬಾಗಿಲಿನ ಹಿಂದೆ ತನ್ನ ಬೆಲ್ಟ್ನಿಂದ ಕ್ರೂರವಾಗಿ ಹೊಡೆಯುತ್ತಾನೆ ಮತ್ತು ಆಕೆಯನ್ನು ಆಸ್ಪತ್ರೆಗೆ ಸೇರಿಸುತ್ತಾನೆ. ಇದರಿಂದ ವಿಪರೀತ ಕೋಪಗೊಂಡ ಪ್ರತಾಪ್ ಪ್ರತಿಯೊಬ್ಬ ಅಪರಾಧಿಗಳನ್ನು ಅವರವರ ಫೋನ್ಗಳ ಡ್ಯಾಟಾಬೇಸನ್ನು ಹ್ಯಾಕ್ ಮಾಡುವ ಮೂಲಕ ಮತ್ತು ಅವರ ಅಕ್ರಮ ಚಟುವಟಿಕೆಗಳನ್ನು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಹಿಡಿಯುವ ಮೂಲಕ ಬಲೆಗೆ ಬೀಳಿಸುತ್ತಾನೆ.


ಅಜಾತಶತ್ರು ಅವರ ಸರದಿ ಬಂದಾಗ ಪ್ರತಾಪ್ ಅವನನ್ನು ರೇಜರ್ನಿಂದ ಕತ್ತರಿಸಿ ಮುಚ್ಚಿದ ಬಾಗಿಲುಗಳ ಹಿಂದೆ ಸಲೂನ್ನಲ್ಲಿ ಕ್ರೂರವಾಗಿ ಮತ್ತು ನಿರ್ದಯವಾಗಿ ಹೊಡೆಯುತ್ತಾನೆ. ಕೊನೆಯಲ್ಲಿ ಎಲ್ಲಾ ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆದಾಗ್ಯೂ, ಅತೀ ಕಠಿಣ ಶಿಕ್ಷೆಯನ್ನು ಕೇವಲ ಹತ್ತು ವರ್ಷಗಳ ಕಾಲ ಮತ್ತು ಹಗುರವಾದ ಶಿಕ್ಷೆಯು ಮೂರು ವರ್ಷಗಳ ಕಾಲ ಮಾತ್ರ ವಿಧಿಸಲಾಗುತ್ತದೆ . ೩೦೦ ಗ್ರಾಮಸ್ಥರನ್ನು ಜೀವಂತವಾಗಿ ಸುಟ್ಟುಹಾಕಿದ, ಪತ್ನಿಯನ್ನು ಕ್ರೂರವಾಗಿ ಥಳಿಸಿದಕ್ಕೆ, ಜಮುನಿಯಾಳ ಅಪಹರಣ, ನಿಂದನೆ ಮತ್ತು ನಾಲಿಗೆಯನ್ನು ಕತ್ತರಿಸಿದ ಯಾವುದೇ ಶಿಕ್ಷೆಗೆ ಸೂಕ್ತ ಸಾಕ್ಷಿ ಸಿಗದ ಕಾರಣ ಅಪರಾಧಿಗಳಿಗೆ ಸೂಕ್ತ ಶಿಕ್ಷೆ ವಿಧಿಸಲು ನ್ಯಾಯಾಂಗ ವಿಫಲವಾಗುತ್ತದೆ.

ಆದರೆ ಕಥೆ ಅಲ್ಲಿಗೆ ಮುಗಿಯುವುದಿಲ್ಲ. ಎಲ್ಲರೂ ನ್ಯಾಯಾಲಯದಿಂದ ಹೊರಬರುತ್ತಿದ್ದಂತೆ ಸಿದ್ಧಾಂತನು ಇವರಿಂದ ನಾಲಿಗೆ ಕತ್ತರಿಸಲ್ಪಟ್ಟಿದ್ದ ಹಳ್ಳಿಯ ಮಹಿಳೆ ಜಮುನಿಯಾಳ ಕೈಗಳಿಗೆ ರಿವಾಲ್ವರ್ ಎಸೆಯುತ್ತಾನೆ. ಅದರಿಂದ ಅವಳು ಎಲ್ಲಾ ಅಪರಾಧಿಗಳನ್ನು ಕೊಲ್ಲುವಲ್ಲಿ ಯಶಸ್ವಿಯಾಗುತ್ತಾಳೆ.

ಸಿದ್ಧಾಂತ್ ಮತ್ತು ಪ್ರತಾಪ್ ರೈಲ್ವೆ ನಿಲ್ದಾಣದಲ್ಲಿ ವಿದಾಯ ಹೇಳುವುದರೊಂದಿಗೆ ಚಿತ್ರವು ಕೊನೆಗೊಳ್ಳುತ್ತದೆ. ಗೀತಾ ಪ್ರತಾಪ್ ಹೊರಡಲು ರೈಲು ಹತ್ತುವಾಗ ಅವನ ಹಿಂದೆ ಓಡುತ್ತಾಳೆ. ಸಿದ್ಧಾಂತ್ ನೋಡುತ್ತಾ ಇರುವಲ್ಲಿಗೆ ಚಿತ್ರ ಕೊನೆಯಾಗುತ್ತದೆ.

ಪಾತ್ರವರ್ಗ[ಬದಲಾಯಿಸಿ]

  • ಏಜೆಂಟ್ ಪ್ರತಾಪ್ ಕುಮಾರ್ ಪಾತ್ರದಲ್ಲಿ ಅಜಯ್ ದೇವಗನ್
  • ಏಜೆಂಟ್ ಸಿದ್ಧಾಂತ್ ಚತುರ್ವೇದಿ ಪಾತ್ರದಲ್ಲಿ ಅಕ್ಷಯ್ ಖನ್ನಾ
  • ಗೀತಾ ಸಿಂಗ್ ಪಾತ್ರದಲ್ಲಿ ಬಿಪಾಶಾ ಬಸು
  • ಜಮುನಿಯಾ ಪಾತ್ರದಲ್ಲಿ ರೀಮಾ ಸೇನ್
  • ಇನ್ಸ್ ಪೆಕ್ಟರ್ ಆಜಾದ್ ಶತ್ರು ಸಿಂಗ್ ಪಾತ್ರದಲ್ಲಿ ಪರೇಶ್ ರಾವಲ್, ಗೀತಾಳ ಗಂಡ
  • ಪಪ್ಪು ತಿವಾರಿ ಪಾತ್ರದಲ್ಲಿ ಜೈದೀಪ್ ಅಹ್ಲಾವತ್
  • ಕಿಶೋರ್ ಪಾತ್ರದಲ್ಲಿ ಪಂಕಜ್ ತ್ರಿಪಾಠಿ
  • ಹುಕುಂ ಲಾಲ್ ಪಾತ್ರದಲ್ಲಿ ಅಶ್ರಫುಲ್ ಹಕ್
  • "ಇಸಾಕ್ ಸೆ ಮೀಠಾ ಕುಚ್ ಭಿ" ಹಾಡಿನಲ್ಲಿ ಸಮೀರಾ ರೆಡ್ಡಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಂಗೀತ[ಬದಲಾಯಿಸಿ]

  ಚಿತ್ರದಲ್ಲಿ ಕಾಣಿಸಿಕೊಂಡಿರುವ ಹಾಡುಗಳಿಗೆ ಪ್ರೀತಮ್ ಚಕ್ರವರ್ತಿ ಸಂಗೀತ ಸಂಯೋಜಿಸಿದ್ದಾರೆ. ಹಿನ್ನೆಲೆ ಸಂಗೀತ ಹಿರಿಯ ಮಲಯಾಳಂ ಸಂಯೋಜಕ ಔಸೆಪ್ಪಚನ್ ಸಂಯೋಜಿಸಿದ್ದಾರೆ. [೧೦]  

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು[ಬದಲಾಯಿಸಿ]

2011 ಝೀ ಸಿನಿ ಅವಾರ್ಡ್ಸ್

ನಾಮನಿರ್ದೇಶನ [೧೧]

  • ಅತ್ಯುತ್ತಮ ನಟ-ಪರೇಶ್ ರಾವಲ್

ಉಲ್ಲೇಖಗಳು[ಬದಲಾಯಿಸಿ]

  1. "Aakrosh". British Board of Film Classification.
  2. "'Ramayana', 'Aakrosh' 'Knock(ed) Out' at box office". Deccan Herald. 18 October 2010.
  3. BoX office India
  4. "Action Packed". The Indian Express. 22 October 2010. Retrieved 22 October 2010. I would call Aakrosh an action thriller. The last action thriller that I did was Qayamat,which was a big hit.
  5. "Will Aakrosh meet the same fate as Crook and Lamhaa?". Moneylife. Archived from the original on 17 ನವೆಂಬರ್ 2022. Retrieved 15 October 2010. It's basically an action thriller. We are expecting revenue of Rs 40crore plus from all-over-the-world collections.
  6. "Aakrosh, Knock-out hit theatres today". Hindustan Times. 15 October 2010. Retrieved 15 October 2010.
  7. "Aakrosh – The burning of Jhanjhad". 15 October 2010.
  8. "Aakrosh Burning?".
  9. "Aakrosh – Movie – Box Office India". boxofficeindia.com. Retrieved 22 May 2020.
  10. "Aakrosh (Original Motion Picture Soundtrack)". iTunes. Retrieved 25 November 2014.
  11. "Nominations for Zee Cine Awards 2011". Bollywood Hungama. Archived from the original on 15 April 2011. Retrieved 7 January 2011.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಟೆಂಪ್ಲೇಟು:Priyadarshan