ಆಂಬೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಂಬೂರು
ಮುನ್ಸಿಪಾಲಿಟಿ
ಅಂಬೂರು ಟ್ರೇಡ್ ಸೆಂಟರ್
ಅಂಬೂರು ಟ್ರೇಡ್ ಸೆಂಟರ್
Nickname(s): 
Leather City
ದೇಶ ಭಾರತ
ರಾಜ್ಯತಮಿಳು ನಾಡು
ಜಿಲ್ಲೆವೆಲ್ಲೂರು
ಕ್ಷೇತ್ರಫಲ
 • ಒಟ್ಟು೧೭.೯೭ km (೬.೯೪ sq mi)
Elevation
೩೧೬ m (೧,೦೩೭ ft)
ಜನಸಂಖ್ಯೆ
 (2011)
 • ಒಟ್ಟು೧,೬೨,೫೨೧
 • ಸಾಂದ್ರತೆ೯,೦೦೦/km (೨೩,೦೦೦/sq mi)
Languages
 • OfficialTamil
ಸಮಯ ವಲಯಯುಟಿಸಿ+5:30 (IST)
PIN
635 802
Telephone code91 - 4174
ವಾಹನ ನೋಂದಣಿTN 23, TN 73
Sex ratio1031 /

ಅಂಬೂರು ಇದು ತಮಿಳುನಾಡು ರಾಜ್ಯದ ವೆಲ್ಲೂರು ಜಿಲ್ಲೆಯಲ್ಲಿರುವ ಒಂದು ಪಟ್ಟಣ.ಪಾಲಾರ್ ನದಿಯ ದಡದಲ್ಲಿರುವ ಈ ಊರು ಬೆಂಗಳೂರು ಚೆನ್ನೈ ಹೆದ್ದಾರಿಯಲ್ಲಿದೆ.

ಇತಿಹಾಸ[ಬದಲಾಯಿಸಿ]

ಐತಿಹಾಸಿಕವಾಗಿ ಈ ಊರು ಪ್ರಾಮುಖ್ಯತೆಯನ್ನು ಹೊಂದಿದೆ.೧೫ ಮತ್ತು ೧೬ನೆಯ ಶತಮಾನದಲ್ಲಿ ಈ ಪ್ರದೇಶ ವಿಜಯನಗರ ಅರಸ ಅಧೀನದಲ್ಲಿತ್ತು.ಕ್ರಿ.ಶ.೧೬೮೭ರಲ್ಲಿ ಈ ಊರು ಕರ್ನಾಟಕದ ನವಾಬರ ಆಳ್ವಿಕೆಗೆ ಒಳಪಟ್ಟಿತು.೧೭೪೦ರಲ್ಲಿ ಮರಾಠರಿಗೆ ಮತ್ತು ಕರ್ನಾಟಕದ ನವಾಬರಿಗೆ ಇಲ್ಲಿ ಯುದ್ಧ ನಡೆದು, ಮರಾಠರು ವಿಜಯಿಗಳಾದರು. ಅಗಸ್ಟ್, ೧೭೪೯ರಂದು ಎರಡನೆಯ ಕರ್ನಾಟಕ ಯುದ್ಧವೆಂದು ಪ್ರಸಿದ್ಧವಾದ ಕದನದಲ್ಲಿ ಇಂಗ್ಲೀಷರ ಮತ್ತು ಫ್ರೆಂಚರ ಮಧ್ಯಪ್ರವೇಶದಿಂದ ಇಡೀ ದಕ್ಷಿಣ ಭಾರತದಲ್ಲಿ ಮೊಗಲರ ಪ್ರಭಾವ ಕುಗ್ಗಿ ಯುರೋಪಿಯನರ ಪ್ರಭಾವ ಹೆಚ್ಚಾಯಿತು.೧೭೬೭ರಲ್ಲಿ ಮೈಸೂರು ಮತ್ತು ಹೈದರಾಬಾದ್‍ನ ಸಂಯುಕ್ತ ಪಡೆಗಳು ಹೈದರಾಲಿಯ ನೇತೃತ್ವದಲ್ಲಿ ಈ ಪಟ್ಟಣವನ್ನು ಮುತ್ತಿದವು. ಆದರೆ ಸಣ್ನ ಪ್ರಮಾಣದಲ್ಲಿದ್ದ ಬ್ರಿಟಿಷರ ಪಡೆ ಸ್ಥಳೀಯರ ನೇತೃತ್ವದಲ್ಲಿ ಹೈದರಾಲಿಯನ್ನು ಹಿಮ್ಮೆಟ್ಟಿಸಿದವು. ಇದರಿಂದ ಮುಂದೆ ಈ ಪಟ್ಟಣವು ಬ್ರಿಟಿಷರ ಸ್ವಾಧೀನದಲ್ಲೇ ಉಳಿಯಿತು.

ಜನಸಂಖ್ಯೆ[ಬದಲಾಯಿಸಿ]

೨೦೧೧ರ ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ ೯೯,೬೨೪. ಇದರಲ್ಲಿ ೪೯,೩೦೩ ಪುರುಷರು ಮತ್ತು ೫೦.೩೨೧ ಮಹಿಳೆಯರು.

ವ್ಯಾಪಾರ[ಬದಲಾಯಿಸಿ]

ಇದು ಬೆಂಗಳೂರು ಮತ್ತು ಚೆನ್ನೈನಿಂದ ಸಮಾನ ದೂರದಲ್ಲಿ (೧೮೦ ಕಿ.ಮೀ) ಇರುವುದರಿಂದ ಉತ್ತಮ ವ್ಯವಹಾರ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಇಲ್ಲಿ ಚರ್ಮೋದ್ಯಮ ಉತ್ತಮವಾಗಿ ಬೆಳೆದಿದೆ.

"https://kn.wikipedia.org/w/index.php?title=ಆಂಬೂರು&oldid=608689" ಇಂದ ಪಡೆಯಲ್ಪಟ್ಟಿದೆ