ವಿಷಯಕ್ಕೆ ಹೋಗು

ಆಂಫಿಬೋಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟ್ರೆಮೊಲೈಟ್

ಆಂಫಿಬೋಲ್ ಪೈರಾಕ್ಸೀನ್ ಖನಿಜವನ್ನು ಬಹುಮಟ್ಟಿಗೆ ಹೋಲುವ ಮತ್ತೊಂದು ಗುಂಪಿನ ಖನಿಜಗಳು. ಇವು ಕಬ್ಬಿಣ, ಮೆಗ್ನೀಸಿಯಂ, ಕ್ಯಾಲ್ಸಿಯಂ ಮತ್ತು ಅಲ್ಯೂಮಿನಿಯಂಗಳಿಂದ ಕೂಡಿದ ಮೆಟಸಿಲಿಕೇಟ್‍ಗಳು. ಹಲವು ಸಂದರ್ಭಗಳಲ್ಲಿ ಸೋಡಿಯಂ ಅಲ್ಪಸ್ವಲ್ಪ ಪ್ರಮಾಣದಲ್ಲಿರಬಹುದು. ಯಾವ ಖನಿಜದಲ್ಲಿ ಸಿಲಿಕಾನ್ ಮತ್ತು ಬೇಸ್‍ಗಳ ಆಕ್ಸಿಜನ್ನಿನ ಪ್ರಮಾಣ 2:1ರಷ್ಟು ಇರುತ್ತದೋ ಅದನ್ನು ಮೆಟಸಿಲಿಕೇಟ್ ಎನ್ನುತ್ತಾರೆ. ಉದಾ: ಆಂಫಿಬೋಲ್ ಗುಂಪಿನ ಟ್ರೆಮೊಲೈಟನಲ್ಲಿ ಹೀಗೆ ಇರುತ್ತದೆ: CaO 3 MgO 4 SiO2 ಆಕ್ಸಿಜನ್ 4 8 1 2

ಆಂಫಿಬೋಲ್ ಸಾಮಾನ್ಯವಾಗಿ ಮಾನೋಕ್ಲಿನಿಕ್ ಹರಳಿನ ವರ್ಗದ ಖನಿಜ. ಕೆಲವು ಆರ್ಥೊರಾಂಬಿಕ್ ಮತ್ತು ಟ್ರೈಕ್ಲಿನಿಕ್ ವರ್ಗಗಳಲ್ಲೂ ರೂಪಗೊಳ್ಳುತ್ತವೆ. ಇದರ ಬಣ್ಣ ಕಪ್ಪು ಅಥವಾ ಹಸುರುಗಪ್ಪು. ಹೊಳಪು ಗಾಜಿನಂಥದು. ಕಾಠಿಣ್ಯ —6 ಇದು ಉದ್ದನೆಯ ಹರಳುಗಳಾಗಿ ಅಥವಾ ನೂಲಿನ ಎಳೆಗಳಂತೆ ಕಾಣಿಸಿಕೊಳ್ಳುತ್ತದೆ. ಇದರಲ್ಲಿನ ಸೀಳುಗಳು 560ಗಳಲ್ಲಿ ಪರಸ್ಪರ ಛೇದಿಸುತ್ತವೆ. ಇದು ಈ ಗುಂಪಿನ ಖನಿಜಗಳ ಬಹುಮುಖ್ಯ ಗುಣ. ಪರಸ್ಪರ 870ಗಳಲ್ಲಿ ಛೇದವಾಗುವಂತೆ ಸೀಳುಗಳುಳ್ಳ ಪೈರಾಕ್ಸೀನ್‍ಗಳಿಂದ ಇವನ್ನು ಬೇರ್ಪಡಿಸಬಹುದು.[][] ಈ ಗುಂಪಿನ ಮುಖ್ಯ ಬಗೆಗಳು ಕಪ್ಪು ಬಣ್ಣದ ಹಾರನ್‍ಬ್ಲೆಂಡ್, ಹಸಿರು ಬಣ್ಣದ ಆಕ್ವಿನೊಲೈಟ್; ಬಿಳುಪಾದ ಟ್ರೆಮೊಲೈಟ್, ತಿಳಿಹಸುರು ಮತ್ತು ಬಿಳಿಯ ಬಣ್ಣದ ಆಸ್‍ಬೆಸ್ಟಾಸ್ (ಕಲ್ನಾರು). ಆಂಫಿಬೋಲ್ ಅನೇಕ ಶಿಲೆಗಳಲ್ಲಿ ಕಂಡುಬರುತ್ತದೆ. ಮುಖ್ಯವಾಗಿ ರೂಪಾಂತರ ಶಿಲೆಗಳಲ್ಲಿ, ಪದರು ಶಿಲೆಗಳಾಗಿ ಕಂಡುಬರುತ್ತದೆ. ಹಲವು ವೇಳೆ ಗ್ರಾನೈಟ್ ಮೊದಲಾದ ಅಗ್ನಿಶಿಲೆಗಳಲ್ಲೂ ಇರುತ್ತದೆ. (ಎಸ್.ಕೆ.ವಿ.)

ಉಲ್ಲೇಖಗಳು

[ಬದಲಾಯಿಸಿ]