ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ಆಂಟೆರಿಯೊ

ನಿರ್ದೇಶಾಂಕಗಳು: 38°59′18″N 105°53′44″W / 38.98833°N 105.89556°W / 38.98833; -105.89556
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Antero Reservoir
The reservoir from Highway 285.
ಸ್ಥಳPark County, Colorado
ನಿರ್ದೇಶಾಂಕಗಳು38°59′18″N 105°53′44″W / 38.98833°N 105.89556°W / 38.98833; -105.89556
reservoir
Basin countriesUnited States
2,500 acres (1,000 ha)
ನೀರಿನ ಪ್ರಮಾಣ20,000 acre⋅ft (25,000,000 m3)
ಮೇಲ್ಮೈ ಎತ್ತರ8,942 ft (2,726 m)

ಆಂಟೆರಿಯೊ ಸಿಹಿ ನೀರಿನ ಸರೋವರ. ಉತ್ತರ ಅಮೆರಿಕ ಖಂಡದಲ್ಲಿದೆ. ಮೊದಲು ಕಂಡವ ಎಟಿನೆ ಬ್ರೂಲ್ (೧೯೧೫). ಪಂಚಮಹಾ ಸರೋವರಗಳಲ್ಲೊಂದು. ಅತ್ಯಂತ ಚಿಕ್ಕದಾದರೂ ಆಳದಲ್ಲಿ ೩ ನೆಯ ಸ್ಥಾನ ಪಡೆದಿದೆ. ೧೯೩ ಮೈಲಿ ಉದ್ದ ಮತ್ತು ೫೩ ಮೈಲಿ ಅಗಲವಾಗಿದೆ. ವಿಸ್ತೀರ್ಣ ೮೫೨೦ ಚ.ಮೈ. ಸಮುದ್ರಮಟ್ಟದಿಂದ ೨೪೬' ಅಡಿ ಎತ್ತರದಲ್ಲಿದೆ. ಅತ್ಯಂತ ಆಳವಾದ ಭಾಗ ೭೭೮' ಅಂದರೆ ಸಮುದ್ರಮಟ್ಟಕ್ಕಿಂತ ೫೩೨' ಆಳ. ಜಲಾನಯನ ಕ್ಷೇತ್ರ ಸುಮಾರು ೩೪,೮೦೦ ಚ.ಮೈ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರಾಸರಿ ೩೦' ಮಳೆಯಾಗುವುದು.

ಆಂಟೆರಿಯೊ ಸರೋವರದ ನ್ಯೂಯಾರ್ಕ್ ಮತ್ತು ಆಂಟೆರಿಯೊ ಪ್ರಾಂತ್ಯಗಳ ಮಧ್ಯೆ ಇದೆ. ಉತ್ತರಕ್ಕೆ ಹೋದಂತೆಲ್ಲ ಎತ್ತರ ಹೆಚ್ಚಾಗಿ ಮೈದಾನ ವಿಶಾಲವಾಗುತ್ತದೆ. ದಕ್ಷಿಣದಲ್ಲಿ ಸುಮಾರು ೮ ಮೈಲಿ ದೂರದಲ್ಲಿ ನಯಾಗರ ಗುಡ್ಡವಿದೆ. ಈ ಮಧ್ಯ ಭಾಗದಲ್ಲಿ ವಿಶೇಷವಾಗಿ ಹಣ್ಣು ಬೆಳೆಯುತ್ತಾರೆ. ಈ ಸರೋವರಕ್ಕೆ ನಯಾಗರ, ಜಿನಿಸೀ, ಆಸ್‍ವಿಗೊ, ಬ್ಲಾಕ್ ಮತ್ತು ಟ್ರೆಂಟ್ ಎಂಬ ನದಿಗಳು ಬಂದು ಸೇರುತ್ತವೆ. ಈರಿ ಮತ್ತು ಆಂಟೆರಿಯೊ ಸರೋವರಗಳನ್ನು ೨೭ ಮೈ. ಉದ್ದವಿರುವ ವೆಲ್‍ಲ್ಯಾಂಡ್ ಕಾಲುವೆ ಸೇರಿಸಿದೆ. ಸರೋವರಕ್ಕೂ ಸೇಂಟ್ ಲಾರೆನ್ಸ್ ನದಿಗೂ ಸಂಪರ್ಕವಿರುವುದರಿಂದ ಹೆಚ್ಚಾಗಿ ಬಂದ ನೀರು ಆ ನದಿಯ ಮೂಲಕ ಹಾದು ಅಟ್ಲಾಂಟಿಕ್ ಸಾಗರವನ್ನು ಸೇರುತ್ತದೆ.

ಈ ಸರೋವರದಲ್ಲಿ ದ್ವೀಪಗಳಿಲ್ಲ. ಸರೋವರದ ನೀರು ಚಳಿಗಾಲದಲ್ಲಿ ಹೆಪ್ಪುಗಟ್ಟುವುದಿಲ್ಲವಾದರೂ ದಡದಲ್ಲಿರುವ ರೇವುಪಟ್ಟಣಗಳಲ್ಲಿ ಹೆಪ್ಪುಗಟ್ಟುತ್ತದೆ. ಇದರ ದಡದಲ್ಲಿರುವ ಮುಖ್ಯವಾದ ರೇವುಪಟ್ಟಣಗಳು : ಕಿಂಗಸ್ಟನ್, ಟೊರಾಂಟೊ, ಹ್ಯಾಮಿಲ್‍ಟನ್. ಜಲಮಾರ್ಗದಿಂದ ವಸ್ತುಸಾಗಾಣಿಕೆ ಅಷ್ಟು ಹೆಚ್ಚಾಗಿಲ್ಲ. ಕಲ್ಲಿದ್ದಲನ್ನು ಹೆಚ್ಚಾಗಿ ಸಾಗಿಸುವರು. (ಎಸ್.ಎನ್.)

ಆಂಟೆರಿಯೋ ಕೆನಡದದ ಒಂದು ಮುಖ್ಯ ಪ್ರಾಂತ್ಯ. ವಿಸ್ತೀರ್ಣದಲ್ಲಿ ಎರಡನೆಯದು. ೪೨೦ -೫೭೦ ಉತ್ತರ ಅಕ್ಷಾಂಶ ೭೦೦ ೩೦' ಯಿಂದ ೯೫೦ ಪಶ್ಚಿಮ ರೇಖಾಂಶ ವಿಸ್ತೀರ್ಣ ೪೧೨,೫೮೨ ಚ.ಮೈ. ದಕ್ಷಿಣೋತ್ತರದ ಉದ್ದ ಸುಮಾರು ೧೦೫೦ ಮೈ. ಪೂರ್ವ ಪಶ್ಚಿಮದ ಅಗಲ ಸುಮಾರು ೧೦೦೦ ಮೈ. ಪೂರ್ವದಲ್ಲಿ ಕ್ವಿಬೆಕ್, ಪಶ್ಚಿಮದಲ್ಲಿ ಮೆನಿಟೊಬಾ, ದಕ್ಷಿಣದಲ್ಲಿ ನ್ಯೂಯಾರ್ಕ್ ಓಹಿಯೋ ಮತ್ತು ಮಿಚಿಗನ್, ಉತ್ತರದಲ್ಲಿ ಹಡ್‍ಸನ್ ಮತ್ತು ಜೇಮ್ಸ್ ಕೊಲ್ಲಿಗಳಿವೆ. ಸ್ವಾಭಾವಿಕ ಸಸ್ಯವರ್ಗ ಚೆನ್ನಾಗಿದ್ದು ವನ್ಯ ಸಂಪತ್ತು ಹೇರಳವಾಗಿದೆ. ವ್ಯವಸಾಯ ತುಂಬ ಪ್ರಗತಿಯನ್ನು ಹೊಂದಿದೆ.

ಚಿನ್ನ, ನಿಕ್ಕಲ್, ತಾಮ್ರ, ಕಬ್ಬಿಣ, ಕೊಬಾಲ್ಟ್, ಯುರೇನಿಯಂ, ಬೆಳ್ಳಿ, ಪೆಟ್ರೋಲಿಯಂ, ಗಂಧಕ ಮುಂತಾದ ಖನಿಜಗಳು ಹೇರಳವಾಗಿ ದೊರೆಯುವುದರಿಂದ ಈ ಪ್ರಾಂತ್ಯ ಕೈಗಾರಿಕೆಯಲ್ಲಿ ತುಂಬ ಪ್ರಗತಿಯನ್ನು ಹೊಂದಿದೆ. ಇಲ್ಲಿನ ಸಂಚಾರ ಮಾರ್ಗದ ವ್ಯವಸ್ಥೆ ಉತ್ತಮವಾಗಿದೆದ.

ಉಲ್ಲೇಖನಗಳು

[ಬದಲಾಯಿಸಿ]

http://www.denverwater.org/Recreation/Antero/ Archived 2013-01-14 ವೇಬ್ಯಾಕ್ ಮೆಷಿನ್ ನಲ್ಲಿ.